ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಬೇಕು ಎನ್ನುವ ಭಾವನೆ ಆಶಯ ಇದ್ದೇ ಇರುತ್ತದೆ. ನಮ್ಮದು ಅಂತ ಸ್ವಂತ ಮನೆ ಇದ್ದರೆ ಅದು ಎಷ್ಟೇ ಚಿಕ್ಕದಾದರೂ ಅದು ನಮಗೆ ಭದ್ರತೆಯ ಭಾವನೆಯನ್ನು ನೀಡುತ್ತದೆ ಹಾಗೆಯೇ ತುಂಬಾ ಜನ ಕಷ್ಟಪಟ್ಟು ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಇದರ ಹೊರತಾಗಿ ಮನೆ ಎನ್ನುವುದು ಜೀವನದ ಮೇಲೆ ಪರಿಣಾಮ ಬೀರುವಂತಹ ಮುಖ್ಯ ಅಂಶವಾಗುತ್ತದೆ.
ಮನೆಯ ರಚನೆ ಮನೆಯಲ್ಲಿ ಜೋಡಿಸಲಾದ ವಸ್ತುಗಳ ಸ್ಥಳ ಇವೆಲ್ಲವೂ ಕೂಡ ಪ್ರಮುಖವಾಗುತ್ತದೆ. ಇನ್ನು ಮನೆ ನಿರ್ಮಾಣದಲ್ಲಿ ಏನಾದರೂ ದೋಷ ಇದೆ ಎನ್ನುವಂತಹ ಭಾವನೆ ಉದ್ಭವವಾದಾಗ ಮನೆ ಮಂದಿ ಜ್ಯೋತಿಷಿಗಳು ಹಾಗೂ ವಾಸ್ತು ತಜ್ಞರನ್ನು ಸಂಪರ್ಕಿಸುತ್ತಾರೆ. ಯಾಕೆಂದರೆ ಮನೆ ಕಟ್ಟುವಂತಹ ಸಮಯದಲ್ಲಿ ವಾಸ್ತು ಶಾಸ್ತ್ರದ ಅಂಶಗಳನ್ನು ಗಮನಿಸಬೇಕು ಇದು ನಮ್ಮ ಸಂತೋಷ ಸಮೃದ್ಧಿ ಸಂಪತ್ತು ಅದೃಷ್ಟಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ.
ಹಾಗಾಗಿ ಮನೆ ನಿರ್ಮಾಣಕ್ಕೆ ವಿಶೇಷ ಗಮನವನ್ನು ವಹಿಸಬೇಕು. ಇನ್ನು ಮನೆ ನಿರ್ಮಾಣದ ನಂತರ ಫ್ರಿಡ್ಜ್, ಸೋಫಾ, ಬೆಡ್ ಇತ್ಯಾದಿಗಳನ್ನು ಎಲ್ಲಿ ಇಟ್ಟರೆ ಒಳ್ಳೆಯದು ಎನ್ನುವುದನ್ನು ಸಹ ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾಗಿ ಇಂತಹ ವಸ್ತುಗಳನ್ನು ಇಡುವಂತಹ ಸ್ಥಳದ ಮಹತ್ವ ಏನು ಎನ್ನುವುದನ್ನು ಈಗ ನಾವು ತಿಳಿದುಕೊಳ್ಳೋಣ.
ಇಂದಿನ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ನಮ್ಮ ದೈನಂದಿನ ಜೀವನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಟಿವಿ, ಫ್ರಿಡ್ಜ್ ನಾವು ನಿತ್ಯ ಬಳಸುವಂತಹ ವಸ್ತುಗಳು ಇವುಗಳನ್ನು ಇಡುವಂತಹ ದಿಕ್ಕುಗಳು ಕೂಡ ವಿದ್ಯುತ್ ಅನ್ನು ಉಳಿಸುವುದರ ಜೊತೆಗೆ ಮನೆಯ ಸಮೃದ್ಧಿಯನ್ನು ಸಹ ಕಾಪಾಡುತ್ತವೆ ಎನ್ನುವ ವಿಷಯ ನಿಮಗೆ ತಿಳಿದಿರಲಿ.
ಈ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ದೀರ್ಘಕಾಲ ಬಾಳಿಕೆಯು ಬರುತ್ತದೆ ಜೊತೆಗೆ ಸಂತೋಷವೂ ಹಾಗೂ ಮನೆ ಮಂದಿಯ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ. ಹಾಗಾದರೆ ನಿಮ್ಮ ಮನೆಯ ವಾಸ್ತುವಿನ ಅನುಗುಣ ವಾಗಿ ರೆಫ್ರಿಜರೇಟರ್ ಹಾಗೂ ಟಿವಿಯನ್ನು ಯಾವ ದಿಕ್ಕಲಿ ಹಾಗೂ ಯಾವ ಸ್ಥಳದಲ್ಲಿ ಇಡಬೇಕು ಹಾಗೂ ಇದರಿಂದ ಆಗುವ ಪ್ರಯೋಜನ ಏನು ಎನ್ನುವುದನ್ನು ನೋಡೋಣ.
* ವಾಸ್ತು ಶಾಸ್ತ್ರದ ಪ್ರಕಾರ ಟಿವಿ ಮತ್ತು ಫ್ರಿಡ್ಜ್ ಯಾವಾಗಲೂ ಆಗ್ನೇಯ ವಾಗಿರಬೇಕು. ಈ ದಿಕ್ಕನ್ನು ಆಗ್ನೇಯ ದಿಕ್ಕು ಎಂದು ಪರಿಗಣಿಸಲಾಗು ತ್ತದೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಬೇಗ ಹಾಳಾಗುವುದಿಲ್ಲ ಹಾಗೂ ಆ ಮನೆಯಲ್ಲಿ ಸಂತೋಷ ಸಮೃದ್ಧಿಯು ಸದಾ ಕಾಲ ನೆಲೆಸುತ್ತದೆ.
* ವಾಸ್ತುವಿನ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಟಿವಿ ಮತ್ತು ಫ್ರಿಡ್ಜ್ ಅನ್ನು ಇಡುವುದಕ್ಕೆ ಜಾಗ ಇಲ್ಲದಿದ್ದರೆ ಉತ್ತರ ದಿಕ್ಕಿನಲ್ಲಿಯೂ ಸಹ ಇಡ ಬಹುದು. ಆದರೆ ಈಗ ನಾವು ಹೇಳುವಂತಹ ವಸ್ತುಗಳನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಹಾಗೇನಾದರೂ ಇಟ್ಟರೆ ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ.
* ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ ರೆಫ್ರಿಜರೇಟರ್ ನ ಬಾಗಿಲು ಯಾವಾಗಲೂ ಪೂರ್ವದ ಕಡೆಗೆ ತೆಗೆಯುವಂತೆ ಇರಬೇಕು. ಇದಕ್ಕೆ ಕಾರಣ ಸೂರ್ಯನ ದಿಕ್ಕು ಪೂರ್ವ ದಿಕ್ಕು. ಹೀಗಾಗಿ ಸೂರ್ಯನಿಂದ ಬಿಡುಗಡೆಯಾಗುವಂತಹ ಸಕಾರಾತ್ಮಕ ಶಕ್ತಿ ರೆಫ್ರಿಜರೇಟರ್ ನಲ್ಲಿ ಇರುವಂತಹ ಆಹಾರವನ್ನು ಪ್ರವೇಶಿಸುವ ಮೂಲಕ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದೇ ರೀತಿ ವಾಸ್ತುವಿನಲ್ಲಿ ಹೇಳುವ ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಫ್ರಿಡ್ಜ್ ಅನ್ನು ಇಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.