Home Useful Information ಈ ರೀತಿ ಲಕ್ಷಣಗಳಿದ್ರೆ ಎಚ್ಚರ ಥೈರಾಯ್ಡ್ ಬರುತ್ತೆ.!

ಈ ರೀತಿ ಲಕ್ಷಣಗಳಿದ್ರೆ ಎಚ್ಚರ ಥೈರಾಯ್ಡ್ ಬರುತ್ತೆ.!

0
ಈ ರೀತಿ ಲಕ್ಷಣಗಳಿದ್ರೆ ಎಚ್ಚರ ಥೈರಾಯ್ಡ್ ಬರುತ್ತೆ.!

 

ಥೈರಾಯ್ಡ್ ಗ್ರಂಥಿಯು ಚಿಟ್ಟೆಯ ಆಕಾರದ ಗ್ರಂಥಿಯಾಗಿದ್ದು, ಇದು ಕುತ್ತಿಗೆಯಲ್ಲಿ ಇದೆ. ಮಾನವ ದೇಹದ ಚಯಾಪಚಯ ಪ್ರಕ್ರಿಯೆಗಳ ಪ್ರಮುಖ ಭಾಗವಾಗಿದೆ. ಆದ್ದರಿಂದ ಥೈರಾಯ್ಡ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಒಳ್ಳೆಯದು. ಪ್ರತಿಯೊಬ್ಬರೂ ಥೈರಾಯ್ ಗ್ರಂಥಿಯನ್ನು ಹೊಂದಿರುತ್ತಾರೆ.

ಇದು ಸರಿಯಾದ ಮಟ್ಟದಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೆಚ್ಚು ಅಥವಾ ಕಡಿಮೆ ಆದರಷ್ಟೇ ತುಂಬಾ ಕಷ್ಟ. ಹೌದು ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಅವರು ಪ್ರತಿನಿತ್ಯ ಪ್ರತಿಬಾರಿ ಮಾತ್ರೆಗಳನ್ನು ತೆಗೆದುಕೊಳ್ಳುವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ.

ಆದ್ದರಿಂದ ಥೈರಾಯ್ಡ್ ಸಮಸ್ಯೆ ಇರುವಂತಹ ಜನರು ಅವರ ಆರೋಗ್ಯದ ವಿಚಾರವಾಗಿ ಯಾವ ಕೆಲವು ಆಹಾರ ಪದ್ಧತಿಯನ್ನು ಸೇವನೆ ಮಾಡಬೇಕು ಹಾಗೂ ಯಾವ ಆಹಾರ ಪದ್ಧತಿಯನ್ನು ಸೇವನೆ ಮಾಡಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಒಳ್ಳೆಯದು.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ 100 ರಲ್ಲಿ 80 ಜನಕ್ಕೆ ಇರುವುದು ಕಡ್ಡಾಯವಾಗಿದೆ ಎಂದು ಹೇಳಬಹುದು. ಹೌದು ಈ ಸಮಸ್ಯೆಯಿಂದ ಚಿಕ್ಕ ವಯಸ್ಸಿನವರು ಕೂಡ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಸಮಸ್ಯೆ ಉಂಟಾದಂತಹ ವ್ಯಕ್ತಿಗಳು ಕೆಲವೊಂದ ಷ್ಟು ಆಹಾರ ಪದ್ಧತಿಯನ್ನು ಬಿಡುವುದು ಒಳ್ಳೆಯದು ಹಾಗೇನಾದರೂ ಅದನ್ನು ಸೇವನೆ ಮಾಡಿದ್ದೆ ಆದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಹಾಗಾದರೆ ಈ ದಿನ ಥೈರಾಯಿಡ್ ಎನ್ನುವಂತಹ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ.

ಹಾಗೂ ಥೈರಾಯ್ಡ್ ನಲ್ಲಿ ಯಾವ ವಿಧಗಳು ಇದೆ ಹಾಗೂ ಥೈರಾಯ್ಡ್ ಇದ್ದರೆ ಯಾವ ಕೆಲವು ಲಕ್ಷಣಗಳು ನಮಗೆ ತಿಳಿಯುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ತಿಳಿಯೋಣ. ಮೊದಲನೆಯದಾಗಿ ಎಷ್ಟು ವಿಧವಾಗಿ ಥೈರಾಯ್ಡ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹಾಗೂ ಅದರ ಲಕ್ಷಣಗಳು ಯಾವುದು ಎಂದು ಈ ಕೆಳಗೆ ಒಂದೊಂದಾಗಿ ತಿಳಿಯೋಣ.

* ಹೈಪೋಥೈರಾಯ್ಡ್ :- ಹೈಪೋಥೈರಾಯಿಡ್ ಇದ್ದರೆ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದರೆ.
• ಜೀರ್ಣಕ್ರಿಯೆ ನಿಧಾನವಾಗುವುದು
• ಕೂದಲು ಉದುರುವುದು
• ತಲೆ ಸುತ್ತು
• ಇದ್ದಕಿದ್ದ ಹಾಗೆ ದೇಹದ ತೂಕ ಹೆಚ್ಚಾಗುವುದು
• ತಂಪಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ
ಕೆಲವೊಂದಷ್ಟು ಸಮಸ್ಯೆ ಉಂಟಾಗುವುದು.
• ಮಲಬದ್ಧತೆ

• ಚರ್ಮದಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ
ಒಣಗಿರುವ ಅನುಭವ ಉಂಟಾಗುವುದು
• ಆಯಾಸ ಮೈ ಕೈ ನೋವು ಉಂಟಾಗುವುದು
• ನಿದ್ದೆ ಮಾಡಲು ಕಷ್ಟ ಆಗುವುದು ಆದರೆ ನಿದ್ರಾಹೀನತೆಯ ಸಮಸ್ಯೆ
• ಹೃದಯದ ಬಡಿತ ಕಡಿಮೆಯಾಗುವುದು
• ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು
• ಸ್ನಾಯುಗಳು ಬಲಹೀನವಾಗುವುದು
• ಉದ್ವೇಗ
• ಅನಿಯಮಿತ ಋತುಸ್ರಾವ

* ಹೈಪರ್ ಥೈರಾಯ್ಡ್ :- ಹೈಪರ್ ಥೈರಾಯ್ಡ್ ಇದ್ದರೆ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದರೆ.
• ಬೇಗ ಹಸಿವಾಗುವುದು
• ತಲೆ ಸುತ್ತು
• ಮಾನಸಿಕ ಕಿರಿಕಿರಿ ಮತ್ತು ಆಯಾಸ
• ಹೃದಯ ಬಡಿತ ಹೆಚ್ಚಾಗುವುದು
• ಆಗಾಗ ಮಲವಿಸರ್ಜನೆಗೆ ಹೋಗುವುದು
• ಅತಿಯಾಗಿ ಬೆವರುವುದು
• ದೃಷ್ಟಿಯಲ್ಲಿ ಬದಲಾವಣೆ
• ತೂಕ ಇಳಿಕೆ ಆಗುವುದು

• ಕೂದಲು ಉದುರುವುದು
• ನಿದ್ರಾಹೀನತೆಯ ಸಮಸ್ಯೆ
• ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು
• ಖಿನ್ನತೆ ಮತ್ತು ಕೋಪ
• ಮುಟ್ಟಿನ ಸಮಯದಲ್ಲಿ ಅಧಿಕವಾಗಿ ರಕ್ತಸ್ರಾವ ಉಂಟಾಗುವುದು.

ಹೀಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳು ಏನಾದರೂ ಇದ್ದರೆ ತಕ್ಷಣವೇ ನೀವು ಆಸ್ಪತ್ರೆಗಳಿಗೆ ಹೋಗಿ ಥೈರಾಯಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತ ಮ. ಹಾಗೇನಾದರೂ ಅತಿಯಾದ ಸಮಯದಲ್ಲಿ ನೀವು ತೋರಿಸಿದರೆ ಅದರಿಂದ ಹೆಚ್ಚಿನ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮೊದಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.

LEAVE A REPLY

Please enter your comment!
Please enter your name here