ನಿಮ್ಮ ಮನೆಯ ಪ್ರವೇಶ ದ್ವಾರ ದಕ್ಷಿಣ ದಿಕ್ಕಿನತ್ತ ಇದೆಯಾ ಇದನ್ನು ನೋಡಿದವರು ನಿಮ್ಮ ಬದುಕೆ ನುಚ್ಚುನೂರಾಗಲಿದೆ ಎಂದು ಭವಿಷ್ಯ ಹೇಳಿದ್ದಾರಾ ಅಥವಾ ನೀವು ಉದ್ಧಾರವೇ ಆಗುವುದಿಲ್ಲ ಎಂದು ಅಪಶಕುನ ನುಡಿದಿದ್ದಾರ? ಅದು ಇರಲಿ ಇದೇ ದಕ್ಷಿಣ ದ್ವಾರದಿಂದಲೇ ನಿಮ್ಮ ಕೇಡುಗಾಲ ಪ್ರವೇಶವಾಗಲಿದೆ ಅಂತ ಹೇಳಿ ನಿಮ್ಮನ್ನು ಚಿಂತೆ ಗೀಡು ಮಾಡಿದ್ದಾರಾ.
ಹಾಗಾದರೆ ಇಂಥವರು ಪ್ರತಿಯೊಬ್ಬರು ಕೂಡ ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಸಾಂಪ್ರದಾಯಿಕ ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರ ಯಾವ ದಿಕ್ಕಿನಲ್ಲಿ ಇದ್ದರೆ ತುಂಬಾ ಉತ್ತಮ ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಆದರೆ ಕಾಲ ಬದಲಾದಂತೆ ಜನ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ವಾಸ್ತುಶಾಸ್ತ್ರದಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ.
ವಾಸ್ತು ಶಾಸ್ತ್ರದ ಪ್ರಕಾರ ಒಂದಲ್ಲ ಎರಡಲ್ಲ ಸುಮಾರು 32 ಪ್ರವೇಶ ದ್ವಾರಗಳು ಇದೆ. ಮೊದಲಿಗೆ ಮುಖ್ಯ ನಾಲ್ಕು ದ್ವಾರಗಳನ್ನು ಗುರುತಿಸಿ ಕೊಂಡು ಅದೇ ನಾಲ್ಕು ದಿಕ್ಕಲ್ಲಿ 8 8 ಭಾಗವನ್ನು ಮಾಡಿಕೊಳ್ಳಬೇಕು. ಅಲ್ಲಿಗೆ 4 × 8 = 32 ಪ್ರವೇಶ ದ್ವಾರಗಳು ಸಿಗುತ್ತದೆ. ಅದರಲ್ಲಿ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಎರಡು ಮುಖ್ಯ ಭಾಗಗಳಲ್ಲಿ ಮಾತ್ರ ಮನೆಯ ಮುಖ್ಯ ಪ್ರವೇಶ ದ್ವಾರಕ್ಕೆ ಅತ್ಯುತ್ತಮವಾಗಿರುತ್ತದೆ.
ಈ ಸುದ್ದಿ ಓದಿ:- ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!
ಅದನ್ನೇ ವಾಸ್ತು ಶಾಸ್ತ್ರದವರು ಸೂಚಿಸುತ್ತಾರೆ. ಆದರೆ ಕೆಲವೊಮ್ಮೆ ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ನೋಡಿ ಜನ ಮನೆಯ ಪ್ರವೇಶ ದ್ವಾರವನ್ನು ಎಲ್ಲಿ ಅನುಕೂಲವಾಗುತ್ತದೆಯೋ ಅಲ್ಲಿ ಮಾಡಿಬಿಡುತ್ತಾರೆ. ಅದು ದಕ್ಷಿಣ ದಿಕ್ಕಾದರೂ ಅದೇ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರವನ್ನು ಕಟ್ಟಿ ಬಿಡುತ್ತಾರೆ. ಅಲ್ಲೇ ನೋಡಿ ದೊಡ್ಡ ಎಡವಟ್ಟು ಆಗುವುದು.
ಅಸಲಿಗೆ ದಕ್ಷಿಣ ದಿಕ್ಕಿನ ಅಧಿಪತಿ ಕುಜ ಗ್ರಹ ಹಾಗೂ ದಿಕ್ಪಾಲಕ ಯಮರಾಜ ಆಗಿದ್ದಾನೆ. ಕುಜ ಗ್ರಹವು ಧೈರ್ಯಕ್ಕೆ ಭ್ರಾತೃವಿಗೆ ಕಾರಕನು. ಮುಂಗೋಪ ಮನೆಯ ಯಜಮಾನನಿಗೆ ಧೈರ್ಯ ಸಾಹಸಗಳನ್ನು ತುಂಬುತ್ತಾನೆ. ಇದು ದಕ್ಷಿಣ ದಿಕ್ಕು ಮನೆಯ ಹೆಣ್ಣು ಮಕ್ಕಳ ಮೇಲೂ ಕೂಡ ಪರಿಣಾಮ ಬೀರುತ್ತದೆ ಹಾಗೂ ಅವರಲ್ಲಿರುವಂತಹ ಸಾಹಸ ಹಾಗೂ ಉತ್ಸಾಹಗಳಿಗೆ ಬೆಂಬಲಿಸುತ್ತಾನೆ.
ಈ ಸುದ್ದಿ ಓದಿ:- ಬಾತ್ ರೂಮ್ ಕ್ಲೀನ್ ಮಾಡುವ ಸುಲಭ ವಿಧಾನ.! 100% ಹೊಸದರಂತೆ ಕಾಣುತ್ತದೆ.!
ಇದರ ಹೊರತಾಗಿ ದಕ್ಷಿಣ ದಿಕ್ಕು ಎತ್ತರವಾಗಿದ್ದರೆ ಆ ಮನೆಯಲ್ಲಿ ಇರುವವರು ಆರೋಗ್ಯವಂತರು ಹಣಬಲ ಉಳ್ಳವರು ಕೂಡ ಆಗಿರುತ್ತಾರೆ. ಆದ್ದರಿಂದ ದಕ್ಷಿಣ ಭಾಗದಲ್ಲಿ ಮನೆಯನ್ನು ಕಟ್ಟುವವರು ಇದ್ದರೆ ಬಹಳ ಎತ್ತರವಾಗಿ ಮನೆಯನ್ನು ನಿರ್ಮಾಣ ಮಾಡಿ. ಇದರಿಂದ ಅವರಿಗೆ ನಿರಂತರವಾಗಿ ಧನ ಲಾಭ ವಾಗುತ್ತದೆ.
ಈ ದಿಕ್ಕನ್ನು ವಸ್ತುಗಳಿಂದ ತುಂಬಿ ಇಟ್ಟರೆ ತುಂಬಾ ಉತ್ತಮ ಯಾವುದೇ ಕಾರಣಕ್ಕೂ ಶೌಚಾಲಯವನ್ನು ಈ ದಿಕ್ಕಿನಲ್ಲಿ ಕಟ್ಟಬೇಡಿ ನಾವು ಮೊದಲೇ ಹೇಳಿದಂತೆ ಈ ದಿಕ್ಕಿನ ದಿಕ್ಪಾಲಕ ಯಮ ಆದ್ದರಿಂದ ವಾಸ್ತುವಿನಲ್ಲಿ ಲೋಪ ಆಗಿದ್ದೆ ಆದಲ್ಲಿ ಆ ಮನೆಯ ಯಜಮಾನ ಅಥವಾ ಯಜಮಾನಿ ಅಕಾಲಿಕ ಮರಣಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಆರ್ಥಿಕ ನಷ್ಟದ ಜೊತೆಗೆ ಮನೆಯಲ್ಲಿ ಕಳ್ಳತನ ವಾಗುವ ಸಾಧ್ಯತೆ ಕೂಡ ಇರುತ್ತದೆ.
ಈ ಸುದ್ದಿ ಓದಿ:- ಬಿಳಿ ಬಟ್ಟೆ ಮೇಲಿನ ಎಲ್ಲಾ ಕಲೆಗಳನ್ನು ಸುಲಭವಾಗಿ ತೆಗೆದುಹಾಕುವ ವಿಧಾನ ಇಲ್ಲಿದೆ ನೋಡಿ.!
ಹಾಗಂತ ಮನೆಯ ಮುಖ್ಯವಾಗಿ ಇದನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಲೇಬಾರದು ಎಂಬ ಅರ್ಥ ಇದಲ್ಲ ಕೆಲವೊಂದಷ್ಟು ಜನರಿಗೆ ಈ ದಕ್ಷಿಣ ದಿಕ್ಕು ಶಾಪದಂತಾಗಿ ಇದ್ದರೆ ಇನ್ನು ಕೆಲವೊಂದಷ್ಟು ಜನರಿಗೆ ಈ ದಕ್ಷಿಣ ದಿಕ್ಕು ಅದೃಷ್ಟವನ್ನೇ ಕುಲಾಯಿಸು ವಂತಹ ದಿಕ್ಕಾಗಿರುತ್ತದೆ. ಇದು ವಾಸ್ತುಶಾಸ್ತ್ರದ ಪ್ರಕಾರದಲ್ಲಿ ದಕ್ಷಿಣ ದಿಕ್ಕಲ್ಲಿ ಪ್ರವೇಶ ದ್ವಾರ ಇದ್ದರೆ ಏನಾಗುತ್ತದೆ ಇಂದು ನಾವು ಮೇಲೆ ತಿಳಿದೆವು ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
ಸೂರ್ಯನು ದಕ್ಷಿಣ ದಿಕ್ಕಿನ ಕಡೆಗೆ ಬರುವಾಗ ಹೆಚ್ಚು ಪ್ರಖರತೆಯನ್ನು ಹೊಂದಿರುತ್ತಾನೆ. ಹಾಗಾಗಿ ದಕ್ಷಿಣ ದಿಕ್ಕನ್ನು ಶಿಖರ ಸ್ಥಾನ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.