ಕನ್ಯಾ ರಾಶಿಯವರಿಗೆ ಮೇ 1ನೇ ತಾರೀಖು 2024 ರಿಂದ ಮೇ 2025 ಮೊದಲ ವಾರದ ತನಕ ಗುರುಬಲ ಇರುವಂತದ್ದು. ಕೃತಿಕಾ ನಕ್ಷತ್ರ ಮೊದಲನೇ ಪಾದ ಮೇ 1ನೇ ತಾರೀಖಿನಿಂದ ಕೃತಿಕಾ ನಕ್ಷತ್ರ ಎರಡನೇ ಪಾದ ವೃಷಭ ರಾಶಿಗೆ ಗುರು ಗ್ರಹ ಸಂಚಾರವಾಗಲಿದೆ. ಹಾಗಾಗಿ ಒಂದು ವರ್ಷಗಳ ತನಕ ಸುಧೀರ್ಘವಾಗಿ ನಿಮ್ಮ ರಾಶಿಯಲ್ಲಿ ಗುರು ಇರುವಂತದ್ದು.
ಹಾಗಾದರೆ ಗುರುಬಲದಿಂದ ಕನ್ಯಾ ರಾಶಿಯವರಿಗೆ ಏನೆಲ್ಲ ಲಾಭ ಉಂಟಾಗಲಿದೆ ಹಾಗೂ ಅದನ್ನು ನಾವು ಪಡೆದುಕೊಳ್ಳುವುದಕ್ಕೆ ಯಾವ ಕೆಲವು ಸುಲಭ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಯಾವ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ ಗುರುಬಲವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಕನ್ಯಾ ರಾಶಿಯವರಿಗೆ ಗುರು ಚತುರ್ಥ ಸಪ್ತಮಾಧಿಪತಿ. ಇದರಿಂದ ಏನೆಲ್ಲ ರೀತಿಯ ಒಳ್ಳೆಯದಾಗುತ್ತದೆ ಕನ್ಯಾ ರಾಶಿಯವರಿಗೆ ಎಂದು ನೋಡುವುದಾದರೆ ಮೊಟ್ಟಮೊದಲನೆಯದಾಗಿ ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಅದರಲ್ಲೂ ನೀವು ಯಾವ ಒಂದು ದೊಡ್ಡ ಕಾಲೇಜ್ ಗಳಿಗೆ ಸೇರಬೇಕು ಎಂದುಕೊಂಡಿರುತ್ತೀರೋ ಆ ಒಂದು ಕಾಲೇಜುಗಳಿಗೆ ಸುಲಭವಾಗಿ ಅನಿರೀಕ್ಷಿತವಾಗಿ ನೀವು ಸೇರಿಕೊಳ್ಳುವ ಬಲವಾದ ಸಾಧ್ಯತೆ ಇರುತ್ತದೆ.
ಈ ಸುದ್ದಿ ಓದಿ:-ಮೊಬೈಲ್‌ನಲ್ಲಿ ದೇವರ ವಾಲ್ ಪೇಪರ್ ಇದ್ರೆ ಹುಷಾರ್.!
ಜೊತೆಗೆ ಕನ್ಯಾ ರಾಶಿಯವರ ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಸಹ ಸರಿಪಡಿಸಬಹುದು ಅಂದರೆ ಗುರುವಿನ ಅನುಗ್ರಹದಿಂದ ನಿಮ್ಮ ತಾಯಿಯ ಆರೋಗ್ಯ ಬಹಳಷ್ಟು ಸುಧಾರಿಸುವ ಸಾಧ್ಯತೆ ಇರುತ್ತದೆ ಜೊತೆಗೆ ನಿಮ್ಮ ತಾಯಿಯ ನಡುವೆ ಏನಾದರೂ ಮಾತಿನ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರ ನಡುವೆ ಸಂಘರ್ಷ ಇದ್ದರೆ ಅದು ಸಹ ದೂರವಾಗುವ ಎಲ್ಲ ಬಲವಾದ ಸಾಧ್ಯತೆ ಇದೆ.
* ಇದರ ಜೊತೆ ಕನ್ಯಾ ರಾಶಿಯ ಸ್ತ್ರೀಯರಿಗೆ ತಮ್ಮ ತವರು ಮನೆಯಿಂದ ತುಂಬಾ ಅನುಕೂಲವಾಗಲಿದೆ. ಅಂದರೆ ಕನ್ಯಾ ರಾಶಿಯ ಸ್ತ್ರೀಯರು ಏನಾದರೂ ಕಷ್ಟದ ಪರಿಸ್ಥಿತಿ ಇದ್ದರೆ ತಮ್ಮ ತವರು ಮನೆಯವರನ್ನು ಹಣಕಾಸು ಕೇಳಿದ್ದರೆ ಅವರು ಈ ಒಂದು ಸಂದರ್ಭದಲ್ಲಿ ನಿಮ್ಮ ಕಷ್ಟಗಳನ್ನು ಸ್ಪಂದಿಸುತ್ತಾರೆ ಅಂದರೆ ಅವರ ಕೈಲಾದಷ್ಟು ಹಣಕಾಸನ್ನು ನಿಮಗೆ ಕೊಡುತ್ತಾರೆ ಇದರಿಂದ ನೀವು ಚೇತರಿಸಿಕೊಳ್ಳಬಹುದು.
* ಜೊತೆಗೆ ಕನ್ಯಾ ರಾಶಿಯ ಸ್ತ್ರೀಯರಾಗಿರಬಹುದು ಅಥವಾ ಪುರುಷ ರಾಗಿರಬಹುದು ಅವಿವಾಹಿತರಾಗಿದ್ದರೆ ಅವರಿಗೆ ಈ ಒಂದು ಸಂದರ್ಭದಲ್ಲಿ ವಿವಾಹ ನಿಶ್ಚಯವಾಗುವ ಬಲವಾದ ಸಾಧ್ಯತೆ ಇರುತ್ತದೆ. ಇದರ ಜೊತೆ ಇದು ನೆರವೇರಬೇಕು ಎಂದರೆ ಗುರುವಿನ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಬಹಳಷ್ಟು ಕಡೆ ನೀವು ಈ ವಿಚಾರವಾಗಿ ಪ್ರಯತ್ನ ಮಾಡುವುದು ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:-ವೃಶ್ಚಿಕ ರಾಶಿಯವರಿಗೆ ಗುರುಬಲ ಆರಂಭ.! ಏನೆಲ್ಲಾ ಯೋಗಗಳಿವೆ ನೋಡಿ.!
ಈಗಾಗಲೇ ಕನ್ಯಾ ರಾಶಿಯವರಿಗೆ ಮದುವೆಯಾಗಿದ್ದು ಇವರ ದಾಂಪತ್ಯದಲ್ಲಿ ಏನಾದರೂ ಸಮಸ್ಯೆ ಇದ್ದು ಇದಕ್ಕಾಗಿ ಕೋರ್ಟ್ ಮೆಟಿಲೇರಿದ್ದರೆ ಈ ಒಂದು ಸಂದರ್ಭದಲ್ಲಿ ನಾವಿಬ್ಬರು ಮತ್ತೆ ಒಂದಾಗುತ್ತೇವೆ ಎಂದು ಪ್ರಯತ್ನಿಸುತ್ತಿದ್ದರೆ ಇಂತಹ ಒಂದು ಸಂದರ್ಭದಲ್ಲೇ ಕನ್ಯಾ ರಾಶಿಯವರು ನಿಮ್ಮ ತಂದೆಯನ್ನು ಮುಂದೆ ಇಟ್ಟುಕೊಂಡು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.
ಇದರಿಂದ ನಿಮ್ಮ ಸಮಸ್ಯೆ ದೂರವಾಗಿ ಮತ್ತೆ ನೀವಿಬ್ಬರು ಒಂದಾಗುವ ಬಲವಾದ ಸಾಧ್ಯತೆ ಇದೆ. ಇದರ ಜೊತೆ ಕನ್ಯಾ ರಾಶಿಯವರು ತಮ್ಮ ತಂದೆಯ ಜೊತೆ ಏನಾದರೂ ಮನಸ್ತಾಪ ಹೊಂದಿದ್ದರೆ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಗುರುವಿನ ಆರಾಧನೆ ಮಾಡುವುದು ಒಳ್ಳೆಯದು.
ಇದರಿಂದ ನಿಮ್ಮ ನಡುವೆ ಇರುವಂತಹ ಮನಸ್ತಾಪಗಳು ದೂರವಾಗುತ್ತದೆ ಮತ್ತೆ ನೀವಿಬ್ಬರು ಮೊದಲಿನಂತೆ ಇರಬಹುದು. ಹಾಗೂ ಕನ್ಯಾ ರಾಶಿಯ ಜನರು ನಿಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಏನಾದರೂ ಗೊಂದಲಗಳಿದ್ದರೆ ಅದನ್ನು ಈ ಒಂದು ವರ್ಷದ ಸಮಯದಲ್ಲಿ ಅದನ್ನು ಬಗೆಹರಿಸಿಕೊಂಡು ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.