ನಮ್ಮ ಹಿಂದೂ ಸಂಪ್ರದಾಯದಲ್ಲಿ ವೃಕ್ಷಗಳಿಗೂ ಕೂಡ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಇವುಗಳನ್ನು ದೈವಾಂಶ ಸಂಭೂತ ಮರಗಳು ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಅದೇ ರೀತಿಯಾಗಿ ವೃಕ್ಷಗಳು ಕೂಡ ಮನುಷ್ಯನ ದಿನನಿತ್ಯದ ಅನುಕೂಲತೆಗೆ ಬಳಕೆ ಆಗುವುದರ ಜೊತೆಗೆ ದೈವಸ್ವರೂಪವಾಗಿ ನಿಂತು ಆಶೀರ್ವಾದ ನೀಡುತ್ತಿದೆ. ಆಯುರ್ವೇದ, ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹೀಗೆ ಪ್ರತಿಯೊಂದರಲ್ಲೂ ಕೂಡ ಮರಗಿಡಗಳ ಉಲ್ಲೇಖ ಇದೆ.
ಅದರಲ್ಲೂ ಅರಳಿಮರ, ಕಲ್ಪವೃಕ್ಷ, ಔದಂಬರ, ತುಳಸಿ, ಬೇವಿನ ಮರ, ಬಿದಿರು ಎಕ್ಕ, ಬಿಲ್ವಪತ್ರೆ, ಗರಿಕೆ ಇನ್ನು ಮುಂತಾದ ಮರಗಳಿಗೆ ಇರುವ ಬೆಲೆಯೇ ಬೇರೆ. ಇವುಗಳನ್ನು ಪೂಜೆ ಮಾಡಿ ಆರಾಧಿಸಲಾಗುತ್ತದೆ ಇದೇ ಕಾರಣಕ್ಕಾಗಿ ಮನೆಯ ಬಳಿ ನೆಡುತ್ತಾರೆ ಕೂಡ ಆದರೆ ಹೀಗೆ ಮನೆ ಮುಂದೆ ಮರಗಳನ್ನು ನೆಡುವ ಮುನ್ನ ನಿಮಗೆ ಒಂದು ವಿಷಯ ಗೊತ್ತಿರಲಿ.
ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!
ಎಲ್ಲ ಮರಗಳನ್ನು ಕೂಡ ಈ ರೀತಿ ಮನೆ ಹತ್ತಿರ ನೆಟ್ಟು ಪೂಜಿಸುವಂತಿಲ್ಲ, ಮನೆ ಒಳಗೆ ಇಡುವಂತಿಲ್ಲ. ಈಗಿನ ಕಾಲದಲ್ಲಿ ಮನೆ ಪಕ್ಕ ಮನೆ ಹೊರಗೆ ಹಿತ್ತಲಲ್ಲಿ ಮಾತ್ರವಲ್ಲದೆ ಮನೆ ಒಳಗೂ ಕೂಡ ಕೆಲವು ಪ್ಲಾಂಟ್ ಗಳನ್ನು ಇಡಲಾಗುತ್ತದೆ. ಕೆಲವೊಂದನ್ನು ಅಲಂಕಾರಿಕ ಉದ್ದೇಶದಿಂದ ಇಟ್ಟರೆ ಕೆಲವೊಂದು ವಾಸ್ತು ಸಸ್ಯಗಳಾಗಿರುತ್ತವೆ.
ಇನ್ನು ಮನೆ ಅಕ್ಕ ಪಕ್ಕದಲ್ಲೂ ಕೆಲವರು ಪೂಜೆ ಮಾಡುವ ಉದ್ದೇಶದಿಂದ ವೃಕ್ಷಗಳನ್ನು ನೆಡುತ್ತಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಪೂಜೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂಬುದು ಹಲವರ ಅಭಿಪ್ರಾಯ ನೀವು ಕೂಡ ಈ ರೀತಿ ಯೋಚನೆ ಮಾಡುತ್ತಿದ್ದರೆ ಒಂದು ಬಾರಿ ಈ ಸಂಗತಿಯನ್ನು ಪೂರ್ತಿಯಾಗಿ ನೋಡಿ.
ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!
ಇದರಿಂದ ಮುಂದೆ ನಿಮಗೆ ಬರಬಹುದಾದ ಒಂದು ದೊಡ್ಡ ಅನಾಹುತ ತಪ್ಪುತ್ತದೆ ಯಾಕೆಂದರೆ ಶಾಸ್ತ್ರಗಳಲ್ಲಿ ಅರಳಿ ವೃಕ್ಷವನ್ನು ಮನೆ ಹತ್ತಿರ ನೆಡಬಾರದು ಎಂದು ಹೇಳಲಾಗಿದೆ. ಅರಳಿ ಮರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಬ್ರಹ್ಮಾದಿ ಸಮೇತವಾಗಿ ಮುಕ್ಕೋಟಿ ದೇವತೆಗಳು ಇದರಲ್ಲಿ ನೆಲೆಸಿದ್ದಾರೆ.
ಅರಳಿ ಮರವನ್ನು ಪೂಜೆ ಮಾಡುವುದರೆ ತ್ರಿಮೂರ್ತಿ ಗಳನ್ನು ಪೂಜೆ ಮಾಡಿದಂತೆ ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅರಳಿಮರದ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿ ಆಗುವುದು ಮತ್ತು ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ ಆಗೋದು ಶತಸಿದ್ಧ. ಅರಳಿಮರ ಹಾಗೂ ಬೇವಿನ ಮರವನ್ನು ಒಟ್ಟಿಗೆ ನೆಡುವುದರಿಂದ ವಾತಾವರಣ ಶುದ್ಧಿ ಆಗುತ್ತದೆ ಅವುಗಳನ್ನು ಆರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬಗೆಹರಿಸುತ್ತವೆ.
ಈ ಸುದ್ದಿ ಓದಿ:- ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!
ಹಣಕಾಸಿನ ಸಮಸ್ಯೆಗಳಿಗೂ ಕೂಡ ಮತ್ತು ಮನುಷ್ಯ ಸಹಜವಾದ ಎಷ್ಟೋ ಕ’ಷ್ಟಗಳಿಗೆ ಇವು ಸ್ಪಂದಿಸುತ್ತವೆ ಎನ್ನುವುದನ್ನು ನಂಬಿ ಪೂಜಿಸಲಾಗುತ್ತಿದೆ. ಆದರೆ ಇವುಗಳನ್ನು ದೇವಸ್ಥಾನದ ಪಕ್ಕದಲ್ಲಿ ಇದ್ದರೆ ಪೂಜಿಸಬಹುದು ಅಥವಾ ಊರಿಂದ ಆಚೆ ಇದಕ್ಕಾಗಿ ಒಂದು ಕಟ್ಟೆ ಕಟ್ಟಿರಲಾಗುತ್ತದೆ ಅಲ್ಲಿ ನೆಡೆಯಬಹುದು.
ಯಾವುದೇ ಕಾರಣಕ್ಕೂ ಮನೆ ಅಕ್ಕ ಪಕ್ಕ ಬೇಕೆಂದು ಇವುಗಳನ್ನು ನೆಡುವಂತಿಲ್ಲ ಒಂದು ವೇಳೆ ಅದರ ಬೇರು ನಿಮಗೆ ಗೊತ್ತಿಲ್ಲದಂತೆ ಬಂದು ಬೆಳೆದು ಗಿಡವಾಗುತ್ತಿದ್ದರೆ ವಿಧಿ ವಿಧಾನದ ಮೂಲಕ ಪೂಜೆ ಮಾಡಿ ಅದನ್ನು ತೆಗೆದು ಬೇರೆ ಕಡೆ ನೆಡಬಹುದು ಹೊರತು ಯಾವುದೇ ಕಾರಣಕ್ಕೂ ಮನೆ ಹತ್ತಿರ ಇದನ್ನು ನೆಡುವಂತಿಲ್ಲ ಒಂದು ವೇಳೆ ಗೊತ್ತಿಲ್ಲದೆ ನೀವು ನೆಟ್ಟು ಬೆಳೆಸಿದರೆ ಅದರ ದೋಷ ನಿಮ್ಮ ಮೇಲೆ ಉಂಟಾಗುತ್ತದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!
ಮರ ಬೆಳೆಯುತ್ತಾ ಹೋದಂತೆ ನಿಮ್ಮ ಮನೆಯಲ್ಲಿ ಜಗಳ ಬೆಳೆಯುತ್ತಾ ಹೋಗುತ್ತದೆ ಇದರಿಂದ ಬಹಳ ಅಶುಭ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ವಿಚಾರದ ಬಗ್ಗೆ ಎಚ್ಚರ ವಹಿಸಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.