ಬಾಯಿ ಹುಣ್ಣಿನ (mouth ulser) ಸಮಸ್ಯೆಯನ್ನು ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರೂ ಕೂಡ ಅನುಭವಿಸಿರುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಇದು ಹೆಚ್ಚಾಗಿ ಬರುತ್ತದೆ. ಇದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂದರೆ ಇದು ಟೆನ್ಶನ್ ಇಂದ ಬರುವುದು. ಇದರಿಂದ ಯಾವುದೇ ಹೆಚ್ಚಿನ ಸಮಸ್ಯೆ ಇರುವುದಿಲ್ಲ ಇದು ತಾನಾಗಿಯೇ ಸರಿ ಹೋಗುತ್ತದೆ.
ಆದರೆ ಹೆಚ್ಚಿನವರು ಬಿ ಕಾಂಪ್ಲೆಕ್ಸ್ (B Complex) ಕೊರತೆಯಿಂದ ಬಂದಿದೆ ಎಂದು ಭಾವಿಸುತ್ತಾರೆ. ಇದೊಂದು ಡಿ ಸೈಕಲ್ (decycle) ಎಂದು ಹೇಳಬಹುದು ಯಾಕೆಂದರೆ ಬಾಯಿ ಹುಣ್ಣು ಆದ ಸಮಯದಲ್ಲಿ ಆಹಾರ ಸೇವನೆ ಮಾಡಲು ಸಾಧ್ಯವಾಗುವುದಿಲ್ಲ, ಇದರಿಂದ ದೇಹಕ್ಕೆ ಪೋಷಕಾಂಶಗಳ ಹಾಗೂ ವಿಟಮಿನ್ ಗಳ ಕೊರತೆ ಉಂಟಾಗುತ್ತದೆ. ಆ ಕೊರತೆಯಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.
ಆದ್ದರಿಂದಲೇ ವಿಟಮಿನ್ ಗಳ ಕೊರತೆಯಿಂದಾಗಿ ಸಮಸ್ಯೆ ಬಂದಿದೆ ಎಂದು ಹಲವರು ಭಾವಿಸುತ್ತಾರೆ. ಈ ರೀತಿ ಸಮಸ್ಯೆ ಆದಾಗ ಅನೇಕ ಮನೆ ಮದ್ದುಗಳಿದೆ ಅವುಗಳನ್ನು ಪಾಲಿಸಿ, ಶೀಘ್ರವಾಗಿ ಕಡಿಮೆ ಮಾಡಿಕೊಳ್ಳಬಹುದು. ಅಥವಾ ಆಸ್ಪತ್ರೆಗಳಿಗೆ ಹೋದರೆ ವೈದ್ಯರು ಪರೀಕ್ಷಿಸಿ ಇದಕ್ಕೆ ಜೆಲ್ ಗಳು ಇನ್ನಿತರ ಆಯ್ಟ್ಮೆಂಟ್ ಅಥವಾ ಮಲ್ಟಿ ವಿಟಮಿನ್ ಮೆಡಿಸಿನ್ ಕೊಡುತ್ತಾರೆ.
ಅದನ್ನು ಪಾಲಿಸುವ ಮೂಲಕ ಗುಣಪಡಿಸಿಕೊಳ್ಳಬಹುದು. ಆದರೆ ಮಧ್ಯಪಾನ, ಧೂಮಪಾನ ಮಾಡುವವರು, ತಂಬಾಕು ಸೇವನೆ ಮಾಡುವವರು (smoking and drinking habits leads to cancer) ಮತ್ತೊಂದು ರೀತಿಯ ಗುಳ್ಳೆಗಳನ್ನು ಬಾಯಲ್ಲಿ ಹೊಂದಿರುತ್ತಾರೆ ಅವುಗಳ ಬಗ್ಗೆ ಎಚ್ಚರಿಕೆ ಇರಬೇಕು. ಬಾಯಿಯನ್ನು ಓಪನ್ ಮಾಡಿ ನೋಡಿದಾಗ ಎಡ ಕೆನ್ನೆ ಹಾಗೂ ಬಲಕೆನ್ನೆಯ ಒಳಭಾಗದಲ್ಲಿ ಕೆಂಪು ಅಥವಾ ಬಿಳಿಯ ಮಚ್ಚೆಗಳು (Red and white scars and toungue bubble) ಇದೆಯೇ ಎಂದು ಗಮನಿಸಬೇಕು.
ಒಂದು ವೇಳೆ ಅದನ್ನು ಮುಟ್ಟಿ ನೋಡಿದಾಗ ಅದು ದವಡೆಯ ಗೋಡೆಗಳಿಗೆ ಅಂಟಿಕೊಂಡಿರುವಂತೆ ಉದುರದ ರೀತಿ ಇದ್ದರೆ ತಕ್ಷಣವೇ ಆಸ್ಪತ್ರೆಗೆ ಹೋಗಬೇಕು. ಇದು ಕ್ಯಾನ್ಸರ್ ಬರುವ ಲಕ್ಷಣ (Cancer symptom) ಆಗಿರುತ್ತದೆ. ಇನ್ನು ಕೆಲವರಿಗೆ ನಾಲಿಗೆಯಲ್ಲಿ, ಬಾಯಿಯ ಒಳಗೆ ಗುಳ್ಳೆಗಳು ಆಗಿರುತ್ತದೆ.
ಆ ಗುಳ್ಳೆಗಳನ್ನು ವೈದ್ಯರು ಮುಟ್ಟಿ ಪರೀಕ್ಷಿಸಿದಾಗ ಅದು ಗಟ್ಟಿಯಾಗಿದ್ದು ರಕ್ತ ಬರುವ ರೀತಿ ಇದ್ದರೆ ಕ್ಯಾನ್ಸರ್ ಗುಳ್ಳೆಗಳೇ ಎಂದು ಪರೀಕ್ಷಿಸಲು ಬಯೋಪ್ಸಿಗೆ (Biopsy test) ಕಳುಹಿಸುತ್ತಾರೆ. ದೃಢಪಟ್ಟರೆ ಅದಕ್ಕೆ ಸರ್ಜರಿ (surgery) ಮಾಡದೆ ಬೇರೆ ಪರಿಹಾರ ಇರುವುದೇ ಇರುವುದಿಲ್ಲ. ಅರ್ಧ ನಾಲಿಗೆ ಅಥವಾ ಅರ್ಧ ಕಪಾಲ ಈ ರೀತಿ ಸರ್ಜರಿ ಮಾಡಿ ಮತ್ತೆ ಅದನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ.
SBI ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ.!
ಆದರೆ ಒಂದು ವೇಳೆ ಹಂತಗಳು ದಾಟಿ ಹೋದರೆ ಕ್ಯಾನ್ಸರ್ ಎಲ್ಲೆಡೆ ಹರಡುವ ಗುಣ ಹೊಂದಿರುವುದರಿಂದ ಅವುಗಳು ಗಂಟಲು ಶ್ವಾಸಕೋಶ ಈ ರೀತಿ ದೇಹದ ಅಂಗಾಂಗವೆಲ್ಲ ಸ್ಪ್ರೆಡ್ ಆಗಿ ವ್ಯಕ್ತಿಯನ್ನು ಸಾ’ಯು’ವ ಹಂತಕ್ಕೆ ಕೊಂಡೊಯ್ಯುತ್ತದೆ. ಇದು ಮಾತ್ರ ಅಲ್ಲದೇ ಓರಲ್ ಕ್ಯಾನ್ಸರ್ (Oral cancer) ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರೆ ಶಾರ್ಪ್ ಟೀತ್ ಗಳು ಅಥವಾ ಅರ್ಧ ಹುಳುಕಾದ ಹಲ್ಲುಗಳು (Sharp teeths and Cavity) ಈ ರೀತಿ ಹಲ್ಲುಗಳು ಬಾಯಿಯಲ್ಲಿ ಇದ್ದರೆ.
ತಕ್ಷಣವೇ ದಂತ ವೈದ್ಯರ ತೆರಳಿ ಅವುಗಳನ್ನು ಪರೀಕ್ಷಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಟ್ರೀಟ್ಮೆಂಟ್ ತೆಗೆದುಕೊಂಡು ಗುಣಪಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಪದೇ ಪದೇ ಇಂಥವುಗಳಿಂದ ಡಿಸ್ಟರ್ಬ್ ಆಗುತ್ತಿದ್ದರೆ ಲೂಕೋಪ್ಲೇಕಿಯಾವಾಗಿ (Lucoplakia) ಮುಂದೆ ಕ್ಯಾನ್ಸರ್ ಆಗುತ್ತದೆ. ಕ್ಯಾನ್ಸರ್ ಇಂದ ದೇಹವನ್ನು ರಕ್ಷಿಸಿಕೊಳ್ಳಬೇಕು ಎಂದರೆ ಸ್ಮೋಕಿಂಗ್, ಡ್ರಿಂಕಿಂಗ್, ಗುಟ್ಕಾ ಸೇವನೆ ದುರಭ್ಯಾಸಗಳನ್ನು ಬಿಟ್ಟು ಶಾರ್ಪ್ ಟೀತ್ ಇಂತಹ ಲಕ್ಷಣಗಳ ಜಾಗರೂಕರಾಗಿರಬೇಕು.