ಮನುಷ್ಯ ಕೂಡ ಈ ಪ್ರಕೃತಿಯ ಒಂದು ಭಾಗ. ಈ ಪ್ರಕೃತಿಯಲ್ಲಿ ಉಂಟಾಗುವ ವೈಪರೀತ್ಯಗಳಿಗೆ ಪ್ರಕೃತಿಯಲ್ಲಿಯೇ ಚಿಕಿತ್ಸೆ ಕೂಡ ಇದೆ. ಹಾಗೆ ಮನುಷ್ಯನಿಗೆ ಕೂಡ ಆತನ ಆರೋಗ್ಯದ ಅಥವಾ ಹಣಕಾಸಿನ ಅಥವಾ ಮನಸ್ಸಿಗೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿ ಸಮಸ್ಯೆ ಬಂದರೂ ಕೂಡ ಈ ಪ್ರಕೃತಿಯ ಸಹಾಯದಿಂದ ಅವನು ಅದನ್ನು ಪರಿಹರಿಸಿಕೊಳ್ಳಬಹುದು.
ಆಯುರ್ವೇದ, ತಂತ್ರ ವಿದ್ಯೆ, ಜ್ಯೋತಿಷ್ಯ ಶಾಸ್ತ್ರ ಎಲ್ಲವೂ ಕೂಡ ಪ್ರಕೃತಿಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ಮನುಷ್ಯನಿಗೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪರಿಹಾರ ಮಾರ್ಗ ಸೂಚಿಸುತ್ತದೆ. ಈ ಪ್ರಕೃತಿಯಲ್ಲಿ ನಿಗೂಢ ಶಕ್ತಿ ಹೊಂದಿರುವ ಒಂದು ಅಪರೂಪದ ವಸ್ತುವಿನ ಬಗ್ಗೆ ಇಂದು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ವಸ್ತುವನ್ನು ನೀವು ಕಂಡು ಹಿಡಿದು ಮನೆಯಲ್ಲಿ ತಂದು ಪೂಜಿಸಿದರೆ ನಿಮ್ಮ ಬದುಕಿನಲ್ಲಿ ನೀವು ಗೆದ್ದಂತೆಯೇ ತುಳಸಿ, ಎಕ್ಕ, ತುಂಬೆ, ಅರಳಿ, ಬೇವು, ಬನ್ನಿ ಈ ವೃಕ್ಷಗಳಲ್ಲಿ ಒಂದು ಸಕಾರಾತ್ಮಕವಾದ ಶಕ್ತಿ ಇದೆ. ಇವುಗಳ ಬೇರಿಗೂ ಮತ್ತು ಈ ವೃಕ್ಷಗಳ ಪ್ರತಿಯೊಂದು ವಸ್ತುವಿಗೂ ಆ ಶಕ್ತಿ ಇದೆ ಹಾಗಾಗಿ ಪೂಜ್ಯನೀಯ ಸ್ಥಾನ ಪಡೆದಿವೆ.
ಈ ಸುದ್ದಿ ಓದಿ:- ಈ ತಂತ್ರ ಮಾಡಿ ಶೀಘ್ರದಲ್ಲಿ ಮದುವೆ ಹಾಗೂ ಲಕ್ಷ್ಮಿನಾ ಸಿದ್ಧಿ ಮಾಡಿಕೊಳ್ಳಿ.!
ಅದೇ ರೀತಿಯಾಗಿ ಬಲಮುರಿ ಎಂದು ಹೇಳಲಾಗುವ ಬೇರಿಗೂ ಕೂಡ ಈ ರೀತಿಯ ಶಕ್ತಿ ಇದೆ, ಮತ್ತು ಇದಕ್ಕೆ ಸ್ವಲ್ಪ ವಿಭಿನ್ನವಾದ ಸಾಮರ್ಥ್ಯವು ಇದೆ ಎಂದು ಹೇಳಬಹುದು. ಯಾಕೆಂದರೆ ಹಿತ ಶತ್ರುಗಳ ಕಾಟವನ್ನು, ನರ ದೃಷ್ಟಿಗೆ ದೋಷವನ್ನು ಕಳೆದು ನಿಮ್ಮ ಮೇಲೆ ಉಂಟಾಗುವ ಯಾವುದೇ ನಕಾರಾತ್ಮಕ ಪ್ರಭಾವಗಳು ನಿಮಗೆ ತಟ್ಟದಂತೆ ನಿಮ್ಮನ್ನು ಕಾಪಾಡುವಂತಹ ಬೇರು ಇದು.
ಈಗಿನ ಕಾಲದಲ್ಲಿ ಹಿತ ಶತ್ರುಗಳ ಕಾಟ ಇದ್ದೇ ಇದೆ. ನಾವು ಆರ್ಥಿಕವಾಗಿ ಸ್ವಲ್ಪ ಅಭಿವೃದ್ಧಿ ಹೊಂದಿದರೆ, ನಮ್ಮ ಮನೆ ಒಳ್ಳೆಯ ಸಂಬಂಧಗಳು ಸಿಕ್ಕಿ ಮಕ್ಕಳಿಗೆ ಮದುವೆ ಗೊತ್ತಾದರೆ ಅಥವಾ ಕೆಲಸ ಕಾರ್ಯಗಳಲ್ಲಿ ಏಳಿಗೆಯಾದರೆ ಹಿತ ಶತ್ರುಗಳಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಈ ರೀತಿ ನಮಗೆ ಹಿತಶತ್ರುಗಳು ಇದ್ದಾರೆ ಎಂದು ಗೊತ್ತಾದಾಗ ನಮ್ಮ ಪರಿಸ್ಥಿತಿ ಸ್ವಲ್ಲ ಹದಗೆಟ್ಟರೂ ಮೊದಲಿಗೆ ಅವರ ಮೇಲೆಯೇ ಅನುಮಾನ ಬರುತ್ತದೆ.
ಅವರು ನಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡಿಸಿರಬಹುದು ನಮ್ಮ ಮೇಲೆ ತೊಂದರೆ ಆಗುವಂತೆ ಮಾಡಿದ್ದಾರೆ ಎನ್ನುವ ಅನುಮಾನ ಬರುತ್ತದೆ. ಈ ರೀತಿ ಆಗಬಾರದು ಎಂದರೆ ನೀವು ಮುನ್ನೆಚ್ಚರಿಕೆಯಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಬಲಮುರಿ ಬೇರು ತಂದು ಇಟ್ಟು ಪೂಜಿಸಿ.
ಈ ಸುದ್ದಿ ಓದಿ:-ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ನೋಡಿ.!
ನೀವು ದೇವರ ಕೋಣೆಯಲ್ಲಿ ಬರಮುರಿ ಬೇರು ಇಟ್ಟು ಪ್ರತಿದಿನವೂ ಕೂಡ ಇದಕ್ಕೆ ಪೂಜೆ ಮಾಡಬಹುದು ಅಥವಾ ಮನೆ ಮುಂದೆ ಮುಂಬಾಗಿಲಿಗೆ ಇದನ್ನು ಕಟ್ಟಿ ಪೂಜೆ ಮಾಡಬಹುದು. ಇದು ನಿಮ್ಮ ಮನೆ ಒಳಗೆ ಇದ್ದರೆ ಯಾವುದೇ ನಕರಾತ್ಮಕ ಶಕ್ತಿಯು ನಿಮ್ಮ ಮನೆ ಪ್ರವೇಶ ಮಾಡುವುದಿಲ್ಲ, ಮನೆಯ ವಾತಾವರಣ ಸಕಾರಾತ್ಮಕವಾಗಿರುತ್ತದೆ. ನಿಮಗೆ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಜಯ ಸಿಗುತ್ತದೆ.
ಇದರ ಪ್ರಭಾವ ಎಷ್ಟಿದೆ ಎಂದರೆ 48 ದಿನಗಳ ಕಾಲ ಪ್ರತಿದಿನವೂ ಕೂಡ ಇದನ್ನು ನೀರಿನಲ್ಲಿ ಇಟ್ಟು ಆ ನೀರನ್ನು ಪ್ರೋಕ್ಷಣೆ ಮಾಡಿದರೆ ಮದುವೆ ಆಗದೆ ಇದ್ದವರಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಹಲವರಿಗೆ ಇದನ್ನು ಗುರುತಿಸಲು ಆಗುವುದಿಲ್ಲ ನೀವು ಸರಿಯಾಗಿ ಈ ಬಲಮುರಿ ಬೇರನ್ನು ಗುರುತಿಸಿ ತಂದು ಪೂಜೆ ಮಾಡಿಸಿದರೆ ಮಾತ್ರ ನಿಮಗೆ ಇದರ ಫಲಗಳು ಸಿಗುವುದು.