ಪ್ರತಿಯೊಬ್ಬರ ಮನೆಯಲ್ಲಿಯೇ ಕೂಡ ಹಲ್ಲಿಗಳು ಇರುವುದು ಸರ್ವೇ ಸಾಮಾನ್ಯ. ಆದರೆ ಹಲ್ಲಿಗಳು ಮನೆಯಲ್ಲಿ ಓಡಾಡುವುದು ಒಳ್ಳೆಯದ ಕೆಟ್ಟದ್ದ ಎಂದು ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಬದಲಿಗೆ ಕೆಲವೊಂದಷ್ಟು ಜನ ಅದರ ಪಾಡಿಗೆ ಅದು ಇರುತ್ತದೆ ಎಂದು ಸುಮ್ಮನೆ ಇರುತ್ತಾರೆ. ಆದರೆ ಕೆಲವೊಂದಷ್ಟು ಜನ ಅವುಗಳು ಇದ್ದರೆ ಅವುಗಳು ಏನಾದರೂ ನಾವು ಸೇವನೆ ಮಾಡುವಂತಹ ಆಹಾರದಲ್ಲಿ ಬೀಳಬಹುದು ಎನ್ನುವ ಉದ್ದೇಶದಿಂದ ಅವುಗಳನ್ನು ಹೆಚ್ಚಿನ ಜನ ಆಚೆ ಹಾಕುತ್ತಿರುತ್ತಾರೆ.
ಹಾಗೂ ಇನ್ನೂ ಕೆಲವೊಂದಷ್ಟು ಜನ ಅವುಗಳನ್ನು ಸಾಯಿಸಿ ಬಿಡುತ್ತಾರೆ. ಆದರೆ ಅವುಗಳನ್ನು ಸಾಯಿಸುವುದರಿಂದ ಅಥವಾ ಆಚೆ ಹಾಕುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಎನ್ನುವ ಆಲೋಚನೆಯೂ ಸಹ ಕೆಲವೊಂದಷ್ಟು ಜನರಿಗೆ ತಿಳಿದಿಲ್ಲ. ಹಾಗಾದರೆ ಈ ದಿನ ಹಲ್ಲಿಗಳನ್ನು ಸಾಯಿಸುವುದರಿಂದ ಯಾವುದೆಲ್ಲ ರೀತಿಯ ತೊಂದರೆಗಳು ಉಂಟಾಗುತ್ತದೆ.
ಹಾಗೂ ಅದರಿಂದ ಏನಾದರೂ ಮನೆಯಲ್ಲಿ ಸಮಸ್ಯೆಗಳು ಉಂಟಾಗು ತ್ತದೆಯ ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಲ್ಲಿ ಪ್ರತಿ ಮನೆಯ ಗೋಡೆಗಳ ಮೇಲೆ ಮೌನವಾಗಿ ಕುಳಿತು ಕೀಟಗಳನ್ನು ಹಿಡಿದು ತಿನ್ನುತ್ತದೆ ಹಲ್ಲಿ ಮನೆಯ ಒಳಗೆ ಬಂದ ತಕ್ಷಣ ಅದನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ಮಾಡುತ್ತಾರೆ ಆದರೆ ಗ್ರಂಥಗಳಲ್ಲಿ ಶ್ರೀಮಂತಿಕೆಯ ದೃಷ್ಟಿಯಿಂದ ಹಲ್ಲಿಯನ್ನು ಮಂಗಳಕರ ವೆಂದು ಪರಿಗಣಿಸಲಾಗುತ್ತದೆ.
ಹಲ್ಲಿ ಅಂದರೆ ಸಾಕು, ಬಹಳಷ್ಟು ಜನರು ಹೆದರುತ್ತಾರೆ ಅಥವ ಅಸಹ್ಯ ಪಟ್ಟುಕೊಳ್ಳುತ್ತಾರೆ. ಆದರೆ ಹಲ್ಲಿ ಸಂಪತ್ತು ಮತ್ತು ತಾಯಿ ಲಕ್ಷ್ಮಿಯೊಂದಿಗೆ ಸಂಭಂದ ಹೊಂದಿದೆ ಇದೇ ಕಾರಣಕ್ಕೆ ಹೊಸ ಮನೆಗೆ ವಾಸ್ತು ಪೋಜೆಯಲ್ಲಿ ಬೆಳ್ಳಿ ಹಲ್ಲಿಗಳನ್ನು ಬಳಸುತ್ತಾರೆ. ಮನೆಯಲ್ಲಿ ಹಲ್ಲಿ ಇದ್ದರೆ ಸುಖ ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.
ಶಕುನ ಮತ್ತು ವಾಸ್ತುಶಾಸ್ತ್ರದ ಪ್ರಕಾರ ಪೂಜೆಯ ಮನೆಯ ಸುತ್ತಲೂ ಹಲ್ಲಿ ಕಂಡು ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸ ಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಹಣವನ್ನು ಪಡೆಯುವುದನ್ನು ಸೂಚಿಸುತ್ತದೆ. ದೀಪಾವಳಿಯ ರಾತ್ರಿ ಮನೆಯಲ್ಲಿ ಹಲ್ಲಿ ಕಾಣಿಸಿ ಕೊಂಡರೆ, ಲಕ್ಷ್ಮಿ ದೇವಿಯು ವರ್ಷವಿಡೀ ನಿಮ್ಮ ಮೇಲೆ ಅಪಾರ ಆಶೀರ್ವಾದವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ
ಇದು ಸಂತೋಷ ಮತ್ತು ಸಂಪತ್ತಿನ ಸಂಕೇತವಾಗಿದೆ ಮನೆಯಲ್ಲಿ 3 ಹಲ್ಲಿಗಳನ್ನು ಒಟ್ಟಿಗೆ ನೋಡುವುದು ಕೂಡ ತುಂಬಾ ಶುಭ ಇದು ಒಳ್ಳೆಯ ಸುದ್ದಿಯ ಸಂಕೇತ ವಾಗಿದೆ. ನೀವು ಹೊಸ ಮನೆಗೆ ಪ್ರವೇಶಿಸುತ್ತಿದ್ದರೆ ಮತ್ತು ಅದೇ ಸಮಯ ದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರವಾಗಿದೆ
ಇದರರ್ಥ ನೀವು ಪೂರ್ವಜರಿಂದ ಆಶೀರ್ವದಿಸಲ್ಪಟ್ಟಿದ್ದೀರಿ ಮತ್ತು ಲಕ್ಷ್ಮಿ ದೇವಿ ನಿಮ್ಮನ್ನು ಆಶೀರ್ವದಿಸಿದ್ದಾಳೆ ಎಂದರ್ಥ. ಆದ್ದರಿಂದ ಯಾರೂ ಕೂಡ ಮನೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದನ್ನು ಆಚೆ ಹಾಕುವುದಾ ಗಲಿ ಅಥವಾ ಅವುಗಳನ್ನು ಸಾಯಿಸಿ ಆಚೆ ಹಾಕುವುದಾಗಲಿ ಮಾಡ ಬೇಡಿ. ಒಂದಲ್ಲ ಒಂದು ರೀತಿಯಾಗಿ ನಿಮಗೆ ಹಲ್ಲಿಯೂ ಶುಭ ಸುದ್ದಿ ಗಳನ್ನು ತಂದುಕೊಡುತ್ತದೆ ಅದರಲ್ಲೂ ಹಣಕಾಸಿನ ವಿಚಾರದಲ್ಲಂತೂ ನಿಮಗೆ ಅತಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎನ್ನುವಂತಹ ಸೂಚನೆಯನ್ನು ಅದು ಸೂಚಿಸುತ್ತದೆ.
ಹಾಗೇನಾದರೂ ನೀವು ಅದನ್ನು ಆಚೆ ಹಾಕಿದರೆ ನಿಮ್ಮ ಮನೆಯಿಂದ ತಾಯಿ ಲಕ್ಷ್ಮಿ ದೇವಿಯನ್ನು ನೀವೇ ಹೊರ ಹಾಕಿದಂತಾಗುತ್ತದೆ ಅಂದಿನಿಂದ ನಿಮಗೆ ಹಣಕಾಸಿನ ಸಮಸ್ಯೆ ಗಳು ಕೂಡ ಉಂಟಾಗುತ್ತದೆ ಆದ್ದರಿಂದ ಯಾರೂ ಕೂಡ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.