ಸಾಮಾನ್ಯವಾಗಿ 40 ರಿಂದ 60 ವರ್ಷದ ವಯೋಮಾನದಲ್ಲಿ ಭುಜದ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಭುಜದ ನೋವು ಬರಲು ಸಾಕಷ್ಟು ಕಾರಣಗಳಿವೆ. ಮುಖ್ಯವಾಗಿ ಎರಡು ರೀತಿಯಾಗಿ ಬರುತ್ತದೆ. ಒಂದು ತನ್ನಿಂದ ತಾನೇ ವಯೋಸಹಜ ಸಮಸ್ಯೆಯಂತೆ ಬಂದು ಹೋಗುತ್ತದೆ, ಅಥವಾ ಮತ್ತೊಂದು ರೀತಿಯಲ್ಲಿ ಯಾವಾಗಲಾದರೂ ಬಿದ್ದು ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾಗ, ಡಯಾಬಿಟಿಕ್ ಆದಾಗ, ಸ್ಟ್ರೋಕ್ ಆದಾಗ ಅಥವಾ ತುಂಬಾ ದಪ್ಪ ಆದ ಕಾರಣದಿಂದಲೂ ಕೂಡ ಬರಬಹುದು.
ತನ್ನಿಂದ ತಾನೇ ಉಂಟಾದ ನೋವು ಸ್ವಲ್ಪ ದಿನ ಆದಮೇಲೆ ಗುಣವಾಗಿ ಹೋಗುತ್ತದೆ ಇಲ್ಲವಾದರೆ ನಾವೇ ಅದಕ್ಕೆ ಫಿಝಿಯೋಥೆರಪಿ ಅಥವಾ ವ್ಯಾಯಾಮ ಮಾಡುವ ಮೂಲಕ ವಾಸಿ ಮಾಡಿಕೊಳ್ಳಬೇಕು. ಸುಲಭವಾಗಿ ಭುಜದ ನೋವನ್ನು ಗುಣಪಡಿಸುವ ಕೆಲವು ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಭುಜದ ನೋವು ಹೇಗೆ ಬರುತ್ತದೆ ಎಂದರೆ ಎರಡು ಜಾಯಿಂಟಾ ಗಳ ಮಧ್ಯೆ ಗಟ್ಟಿಯಾಗಿ ಬಿಡುತ್ತದೆ. ಉರಿಯೂತ ಬರಬಹುದು, ತಲೆಯಿಂದ ಮೇಲೆ ಕೈ ಎತ್ತಲಾಗದಷ್ಟು ನೋವಾಗುವುದು, ಸ್ವಲ್ಪ ಕೆಲಸ ಮಾಡಿದರೂ ಬಹಳ ಕೈ ನೋವಾಗಬಹುದು, ಕೈ ಸೋತು ಹೋಗುವುದು ಇತ್ಯಾದಿಗಳು ಇದನ್ನು ನಿರ್ಲಕ್ಷ ಮಾಡಿದರೆ ಮುಂದೆ ಕೈ ಸ್ವಾಧೀನ ಕಳೆದುಕೊಂಡು ಬಿಡಬಹುದು.
ಇದನ್ನು ಗುಣಪಡಿಸಲು ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೆ ಕೆಲವರಿಗೆ ಕೈ ಮೂವ್ಮೆಂಟ್ ಮಾಡಲಾಗದಷ್ಟು ನೋವಾಗುತ್ತದೆ ಅಂತವರಿಗೆ ಕೆಲವರು ಥೆರಪಿಗಳನ್ನು ಮಾಡಿ ನೋವು ಕಡಿಮೆ ಪಡಿಸಿ ನಂತರ ವ್ಯಾಯಾಮ ಮಾಡಲು ಸೂಚಿಸಲಾಗುತ್ತದೆ. ಭುಜದ ನೋವು ಕಡಿಮೆ ಮಾಡಲು ಕೆಲ ವ್ಯಾಯಾಮಗಳು ಹೀಗಿವೆ ನೋಡಿ
* ನೀವು ನಿಮ್ಮ ಕೈಯನ್ನು ಫ್ರೀ ಬಿಟ್ಟು ಮತ್ತೊಂದು ಕೈಯನ್ನು ಬೆನ್ನ ಹಿಂದೆ ಕಟ್ಟಿಕೊಂಡು ಸ್ವಲ್ಪ ನೆಲದ ಕಡೆ ಬೆಂಡಾಗಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಫ್ರೀಯಾಗಿ ಆಡಿಸಬೇಕು ಮತ್ತು ಮೇಲಿನಿಂದ ಕೆಳಗೆ ಕೆಳಗಿನ ಮೇಲಕ್ಕೆ ಈ ರೀತಿಯಾಗಿ ಕೂಡ ಫ್ರೀಯಾಗಿ ಆಡಿಸಬೇಕು ಇದನ್ನು 10 ಬಾರಿಯಂತೆ ಐದು ಸುತ್ತು ಮಾಡಬೇಕು. * ಪ್ರದಕ್ಷಿಣೀಯ ದಿಕ್ಕಿನಲ್ಲಿ 10 ಬಾರಿ ಅಪ್ರದಕ್ಷಣೀಯ ದಿಕ್ಕಿನಲ್ಲಿ 10 ಬಾರಿ ಫ್ರೀ ಆಗಿ ರೊಟೇಟ್ ಮಾಡಬೇಕು ಮತ್ತು ಇದನ್ನು ಐದು ಸುತ್ತು ಮಾಡಬೇಕು.
* ಯಾವುದಾದರೂ ಕಂಬದ ಬಳಿ ನಿಂತುಕೊಂಡು ನಿಮ್ಮ ಮೊಣಕೈಯನ್ನು ಎಲ್ ಶೇಪ್ ನಲ್ಲಿ 90 ಡಿಗ್ರಿ ಗೆ ಸ್ಟ್ರೈಟ್ ಆಗಿ ಮಾಡಿಕೊಂಡು ಬೆರಳುಗಳನ್ನು ಉದ್ದ ಮಾಡಿ ಹಸ್ತದಿಂದ ಕಂಬವನ್ನು ಪ್ರೆಸ್ ಮಾಡಬೇಕು. ಈಗ ಅದನ್ನೇ ವಿರುದ್ಧ ದಿಕ್ಕಿನಲ್ಲಿ ಅಂದರೆ ಹಸ್ತದ ಹಿಂಭಾಗದಿಂದ ಕಂಬದ ಮೇಲೆ ಪ್ರೆಶರ್ ಹಾಕುವಂತೆ ಒತ್ತಬೇಕು. ಇದನ್ನು ಸಹ 10 ಬಾರಿ ಲೆಕ್ಕ ಹಾಕುತ್ತಾ ಐದು ಸುತ್ತು ಮಾಡಬೇಕು
* ಒಂದು ಕೋಲನ್ನು ತೆಗೆದುಕೊಂಡು ನೆಲದ ಮೇಲೆ ಮಲಗಿ. ಮಂಡಿಗಳನ್ನು ಮಡಚಿ ಮಂಡಿ ನೇರಕ್ಕೆ ಎರಡು ಕೈಗಳಲ್ಲಿ ಕೋಲಿನ ತುದಿಯನ್ನು ಹಿಡಿದುಕೊಳ್ಳಿ. ಕೋಲನ್ನು ಎರಡು ಕೈಗಳಿಂದ ನಿಮ್ಮ ತಲೆಗೆ ತನಕ ನಿಧಾನವಾಗಿ ತೆಗೆದುಕೊಂಡು ಹೋಗಿ ಹಾಗೆ ನಿಧಾನವಾಗಿ ಇಳಿಸಿ. ಇದನ್ನು ಸಹ 10 ಬಾರಿಯಂತೆ 2 ಸ್ವತ್ತು ಮಾಡಿ. ಒಂದು ವೇಳೆ ನಿಮ್ಮ ಕೈ ನೋವು ಬಂದರೆ ಎಲ್ಲಿಯವರೆಗೆ ಸಾಧ್ಯ ಅಲ್ಲಿಯವರೆಗೆ ಮಾತ್ರ ಕೈ ಮೇಲೆ ತೆಗೆದುಕೊಂಡು ಹೋಗಿ. ಅದೇ ರೀತಿ ಕೋಲನ್ನು ರೊಟೇಟ್ ಮಾಡುತ್ತಾ ಕೂಡ 10 ಎಂದು ಕೌಂಟ್ ಮಾಡಿ ಎರಡು ಸುತ್ತು ಮಾಡಿ.
* ಪ್ರತಿದಿನವೂ ಕೂಡ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ ಕೈಗಳನ್ನು ಫ್ರೀ ಬಿಟ್ಟು ಈ ಟೈಮಲ್ಲಿ ವಾಕಿಂಗ್ ಮಾಡುವುದರಿಂದ ನೋವು ಕಡಿಮೆ ಆಗುತ್ತದೆ ಮತ್ತು ನಿಮ್ಮ ದೇಹ ಆಕ್ಟಿವೇಟ್ ಆಗಿರುವುದರಿಂದ ನೀವು ಫ್ರೀ ಆಗಿ ಇರುತ್ತೀರಿ ಡಯಾಬಿಟಿಕ್ ಆಗಿದ್ದರೆ ಕಂಟ್ರೋಲ್ ಗೆ ಬರುತ್ತದೆ ಈ ಎಲ್ಲಾ ವ್ಯಾಯಾಮಗಳು ಸರಳವಾಗಿ ನಿಮಗೆ ಭುಜದ ನೋವು ಕಡಿಮೆ ಆಗುತ್ತದೆ.