ಪತಿಯು ಪತ್ನಿಗೆ ಆಕೆಯ ತಂದೆ ತಾಯಿಯ ಸ್ಥಾನವನ್ನು ತುಂಬಬೇಕು. ಪತ್ನಿಯ ಪ್ರತೀ ಕಷ್ಟದಲ್ಲೂ ನಾನಿದ್ದೇನೆ ಎನ್ನುವಂತೆ ಬಾಳಬೇಕು. ಪತಿ ಯು ಪತ್ನಿಯ ಮನೆಯವರ ಜೊತೆ ಭಾವನಾತ್ಮಕ ಸಂಬಂಧ ಹೊಂದಿರ ಬೇಕು. ಪತಿಗೆ ಸ್ವಾಭಿಮಾನ ಸ್ವಂತ ಬುದ್ಧಿ ಜವಾಬ್ದಾರಿ ಇರಬೇಕು ಪರರ ಸ್ವತ್ತಿಗೆ ಆಸೆಪಡದೆ ಪ್ರಾಮಾಣಿಕವಾಗಿ ದುಡಿದು ಬದುಕಬೇಕು
ಪತ್ನಿಗೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬಬೇಕು ಹಾಗೂ ಮುಂದಿನ ಭವಿಷ್ಯದ ಬಗ್ಗೆ ಅವಳಲ್ಲಿ ಭರವಸೆಯನ್ನು ಮೂಡಿಸಬೇಕು ಪತಿ ಪತ್ನಿಯರ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು ಅನುಮಾನಕ್ಕೆ ಜಾಗವೇ ಇರಬಾರದು. ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕುಂಟಾದಾಗ ಆಪ್ತ ಸಮಾಲೋಚನೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳ ಬೇಕೇ ಹೊರತು ಸಂಬಂಧ ಕೊನೆಗಾಣಿಸುವುದು ಬೇಡ.
* ತನ್ನ ಕೆಲಸದಲ್ಲಿ ಆದಷ್ಟು ಬಿಡುವು ಮಾಡಿಕೊಂಡು ಪತ್ನಿಯ ಜೊತೆ ಕೆಲವೊಂದಷ್ಟು ಸಮಯ ಇರುವಂತೆ ಅವಳನ್ನು ನೋಡಿಕೊಳ್ಳಬೇಕು. ಅಂದರೆ ಆಕೆಗೆ ಸಮಯ ನೀಡಬೇಕು.
* ಪತ್ನಿ ಮಾಡುವ ಕೆಲಸ ಅಥವಾ ಅಡುಗೆಯಲ್ಲಿ ಮೆಚ್ಚುಗೆ ಸೂಸಬೇಕು. ಉತ್ತಮ ಸ್ನೇಹಿತನಾಗಿ ಆಕೆಯ ಅಂತರಾಳದ ಭಾವನೆಗಳಿಗೆ ಸ್ಪಂದಿಸ ಬೇಕು.
ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!
* ಪತ್ನಿಯ ಆರೋಗ್ಯ ಹದಗೆಟ್ಟಾಗ ಆಕೆಯ ಕೆಲಸದ ಹೊರೆ ಕಡಿಮೆ ಮಾಡಿ ಆಕೆಯ ಆರೋಗ್ಯದ ಕಡೆ ಗಮನಹರಿಸಬೇಕು.
* ಒಂದು ವೇಳೆ ಪತ್ನಿಯು ಭಾವನೆಗಳ ಮೀರಿ ಮಾತು ಬಳಸಿದಾಗ ಆಕೆಯನ್ನು ಶಾಂತಗೊಳಿಸಿ ಬದುಕಿನ ಬಗ್ಗೆ ತಿಳಿ ಹೇಳಬೇಕು.
* ಪತಿಯು ಪತ್ನಿಗೆ ನಿಷ್ಟನಾಗಿ ಪ್ರಾಮಾಣಿಕವಾಗಿ ಸತ್ಯವಂತನಾಗಿರ ಬೇಕು. ಪತ್ನಿಗೆ ಅಂಬಲಿ ನೀಡಿದರೂ ಸರಿಯೇ ಸ್ವಂತ ದುಡಿಮೆಯದ್ದಾ ಗಿರಬೇಕು.
* ಪತ್ನಿಯು ತನ್ನ ಪತಿ ಸಮಾಜದಲ್ಲಿ ಜವಾಬ್ದಾರಿಯುತ ಗೌರವ ಸ್ಥಾನ ಹೊಂದಲೆಂದು ಆಸೆ ಪಡುತ್ತಾಳೆ. ಅದನ್ನು ಸಾಧಿಸಲು ಪ್ರಯತ್ನಿಸಬೇಕು. * ಪತಿಯು ಚಟಕ್ಕೆ ಬೀಳದೆ ಸಾಲಕ್ಕೆ ಶರಣಾಗದೆ ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಸಿರಬೇಕು. ಎಂತದ್ದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಉತ್ತಮವಾಗಿ ಬದುಕಿ ಇತರರಿಗೆ ಮಾದರಿಯಾಗಬೇಕು.
* ತನ್ನ ಮಕ್ಕಳು ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶಿಯಾಗಿ ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ನಿಭಾಯಿಸಬೇಕು.
* ಜಗಳ ಹತಾಶೆ ಕೋಪ ಮತ್ತಿತರ ಸಮಸ್ಯೆ ಬಂದಾಗ ತಾಳ್ಮೆ ಕಳೆದು ಕೊಳ್ಳದೆ ಶಾಂತವಾಗಿ ವರ್ತಿಸಿ ಆ ಸಮಸ್ಯೆಯಿಂದ ಹೊರಗೆ ಬನ್ನಿ.
* ಗಂಡ ಹೆಂಡತಿ ಸಂಬಂಧ ಮೀನು ಮತ್ತು ನೀರಿನಂತೆ ಇರಬೇಕು ಒಂದನ್ನು ಬಿಟ್ಟು ಒಂದು ಇರಲಾರದಂತೆ. ಕಷ್ಟ ಬಂದಾಗ ಕುಗ್ಗದೆ ಸಂತೋಷ ಬಂದಾಗ ಹಿಗ್ಗದೆ ಸಮಚಿತ್ತ ಉಳ್ಳವರಾಗಿ ಬರದುಕಬೇಕು.
ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ ಕಾಣುತ್ತದೆ.!
* ಪತಿ ಪತ್ನಿಯರ ನಡುವೆ ಕಠಿಣ ಸಮಸ್ಯೆ ಎದುರಾದಾಗ ಮೌನವಾಗಿದ್ದು ಸಮಸ್ಯೆಗೆ ಪರಿಹಾರ ಹುಡುಕಬೇಕು ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಪ್ರತಿಯೊಂದು ಸನ್ನಿವೇಶದ ಲ್ಲಿಯೂ ಕೂಡ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಕೊಡಬಾರದು ಅವಳನ್ನು ತನ್ನ ಸರ್ವಸ್ವದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನೀವು ಉತ್ತಮ ಪತಿಯಾಗಿರುವುದಕ್ಕೆ ಸಾಧ್ಯವಾಗುತ್ತದೆ.
ಕೆಲವೊಂದಷ್ಟು ಜನ ಕೆಲವೊಂದು ಸಂದರ್ಭದಲ್ಲಿ ತಮ್ಮ ಹೆಂಡತಿಗೆ ಬಹಳ ಅವಮಾನ ಅಪವಾದಗಳನ್ನು ಮಾಡುತ್ತಿರುತ್ತಾರೆ ಇನ್ನೂ ಕೆಲವೊಂದಷ್ಟು ಜನ ತನ್ನ ಪತ್ನಿಗೆ ಹೊಡೆಯುತ್ತಾರೆ ಆದರೆ ಈ ರೀತಿ ಮಾಡುವುವವರ ಮನೆಯಲ್ಲಿ ಯಾವುದೇ ಕಾರಣಕ್ಕೂ ನೆಮ್ಮದಿ ಇರುವುದಿಲ್ಲ.
ಅವರ ಮನೆಯಲ್ಲಿ ಸದಾ ಕಾಲ ಜಗಳ ಮನಸ್ತಾಪ ಹತಾಶೆ ಇಂತಹ ವಾತಾವರಣವೇ ಇರುತ್ತದೆ. ಆ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದರಲ್ಲಿಯೂ ಏಳಿಗೆ ಎನ್ನುವುದು ಇರುವುದಿಲ್ಲ. ಒಟ್ಟಾರೆಯಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಪತ್ನಿಗೆ ಹೆಚ್ಚಿನ ಗೌರವ ಬೆಲೆಯನ್ನು ಕೊಡುವುದು ಬಹಳ ಮುಖ್ಯವಾಗಿರುತ್ತದೆ.
https://youtu.be/2q-vuTdx0SM?si=TKBaG0pQNVRsERU6