ಪ್ರತಿಯೊಂದು ಮನೆಯಲ್ಲೂ ಕೂಡ ದೇವರಕೋಣೆ ಇರುತ್ತದೆ ಅಥವಾ ದೇವರ ಕೋಣೆ ಇಲ್ಲದಿದ್ದರೂ ದೇವರ ಫೋಟೋ ಅಥವಾ ವಿಗ್ರಹ ಇಟ್ಟು ಪೂಜೆ ಮಾಡಲೆಂದು ಪ್ರತಿಯೊಂದು ಮನೆಗಳಲ್ಲೂ ಕೂಡ ಒಂದು ಜಾಗ ಮೀಸಲಿಟ್ಟಿರುತ್ತಾರೆ. ದೇವರ ಫೋಟೋಗಳಲ್ಲದ ಮನೆಯೇ ಇಲ್ಲ ಎಂದು ಹೇಳಬಹುದು. ಆದರೆ ನಿಮಗೆ ಇಷ್ಟ ದೈವ ಯಾವುದೇ ಇದ್ದರೂ ಕೂಡ ಕೆಲವು ದೇವರ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಹದಗಿಡುತ್ತದೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಅಂಕಣದಲ್ಲಿ ಅದರ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
● ಕಾಲಭೈರವವನ್ನು ಶಿವನ ಅವತಾರ ಎಂದೇ ಹೇಳಲಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ಕಾಲಭೈರವನ ಫೋಟೋ ಅಥವಾ ವಿಗ್ರಹ ಇಟ್ಟುಕೊಂಡು ಮನೆಯಲ್ಲಿ ಪೂಜಿಸಬಾರದು, ಯಾಕೆಂದರೆ ಈ ದೇವರನ್ನು ತಾಂತ್ರಿಕ ಶಕ್ತಿ ಒಲಿಸಿಕೊಳ್ಳುವುದಕ್ಕಾಗಿ ಪೂಜಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪೂಜಿಸಬಾರದು ಎನ್ನುತ್ತದೆ ವಾಸ್ತುಶಾಸ್ತ್ರ.
● ಶಿವನ ಮತ್ತೊಂದು ಅವತಾರವಾದ ನಟರಾಜನ ವಿಗ್ರಹವನ್ನು ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳಲಾಗುತ್ತದೆ. ಯಾಕೆಂದರೆ ಶಿವನ ತಾಂಡವ ರೂಪ ತಾಳಿದ್ದು ನಟರಾಜನಾಗಿ ಹಾಗಾಗಿ ಈ ಫೋಟೋ, ವಿಗ್ರಹ ಇರಬಾರದು. ಇದ್ದರೆ ಮನೆಯಲ್ಲಿ ಶಾಂತಿ ಭಂಗವಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಇದರ ಬದಲು ಶಿವನ ಯಾವುದೇ ಫೋಟೋವನ್ನು ಬೇಕಾದರೂ ಇಟ್ಟುಕೊಂಡು ಪೂಜಿಸಬಹುದು.
● ಗೃಹಶಾಂತಿಗಾಗಿ ಶನಿ ಮಹಾತ್ಮನ ಪೂಜೆ ಮಾಡಿಸುತ್ತಾರೆ, ಹಾಗೂ ಇದಕ್ಕೆ ಸಂಬಂಧಿಸಿದ ಶಾಂತಿಗಳನ್ನು ಮಾಡಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಶನಿ ಮಹಾತ್ಮನ ಫೋಟೋಗಳನ್ನು ಇಟ್ಟುಕೊಳ್ಳುವಂತಿಲ್ಲ.
● ಅದೇ ರೀತಿ ರಾಹು ಮತ್ತು ಕೇತು ಗ್ರಹಗಳನ್ನು ಕೂಡ ಪಾಪಗ್ರಹಗಳು ಎಂದು ಕರೆಯುತ್ತಾರೆ. ರಾಹು-ಕೇತು ವಿಗ್ರಹ ಅಥವಾ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.
ನಿಮ್ಮ ಮನೆಯಲ್ಲಿ ದೈವ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತವೆ.!
● ಶಕ್ತಿ ಸ್ವರೂಪ ದೇವಿಯ ದುರ್ಗಾ ಅವತಾರದ ಫೋಟೋಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ಶಾಸ್ತ್ರ ಹೇಳುತ್ತದೆ
● ಯಾವಾಗಲು ಮನೆಗಳಲ್ಲಿ ಸೌಮ್ಯ ಸ್ವರೂಪದ ದೇವತೆಗಳ ಫೋಟೋಗಳನ್ನು, ವಿಗ್ರಹಗಳನ್ನು ಇಟ್ಟುಕೊಂಡು ಪೂಜೆ ಮಾಡಬೇಕು.
● ಪ್ರತಿ ಮನೆಯಲ್ಲೂ ಕೂಡ ತಪ್ಪದೆ ಗಣೇಶನ ಫೋಟೋವನ್ನು ಇಟ್ಟುಕೊಂಡಿರಬೇಕು. ಆದರೆ ಯಾವುದೇ ಕಾರಣಕ್ಕೂ ಮೂರು ಗಣೇಶ ಫೋಟೋಗಳು ಮನೆಯಲ್ಲಿ ಇರಬಾರದು ಹಾಗಾಗಿ ಈ ವಿಷಯದ ಬಗ್ಗೆ ಎಚ್ಚರಿಕೆ ಇರಲಿ.
● ದೇವರ ಕೋಣೆಯಲ್ಲಿ ಶಂಖಗಳನ್ನು ಇಟ್ಟು ಪೂಜಿಸುತ್ತಿದ್ದರೆ ಯಾವುದೇ ಕಾರಣಕ್ಕೂ ಒಂದು ಮನೆಯಲ್ಲಿ ಎರಡು ಶಂಖಗಳನ್ನು ಇಡಬಾರದು ಎನ್ನುವುದು ಕೂಡ ನಿಮಗೆ ಗೊತ್ತಿರಲಿ. ಎರಡು ಶಂಖಗಳು ಇದ್ದರೆ ಒಂದನ್ನು ತೆಗೆದುಬಿಡಿ ಯಾಕೆಂದರೆ ಇದು ಅಶುಭ.
● ಮನೆಯಲ್ಲಿ ಎತ್ತರವಾದ ವಿಗ್ರಹಗಳನ್ನು ಇಟ್ಟು ಪೂಜಿಸುವಂತಿಲ್ಲ. ಮನೆ ಹಿರಿಯರ ಹೆಬ್ಬೆರಳ ಗಾತ್ರಕ್ಕಿಂತ ಚಿಕ್ಕದಾದ ವಿಗ್ರಹಗಳನ್ನು ಮಾತ್ರ ಇಟ್ಟು ಪೂಜಿಸಬೇಕು ಹಾಗೂ ವಿಗ್ರಹಗಳಿಗೆ ಪೂಜೆ ಮಾಡುವುದಾದರೆ ಪ್ರತಿನಿತ್ಯವೂ ಕೂಡ ತಪ್ಪದೇ ಅವುಗಳಿಗೆ ನೈವೇದ್ಯ ಅರ್ಪಿಸಬೇಕು.
ಗೃಹಿಣಿ ಈ ರೀತಿ ತಪ್ಪು ಮಾಡುವುದರಿಂದಲೇ ಗಂಡ ಹೆಂಡತಿಯರಲ್ಲಿ ಜಗಳ ಬರುವುದು ಮನೆಗೆ ದಾರಿದ್ರ್ಯ ಬರುವುದು.!
● ಮ.ರ.ಣ ಹೊಂದಿದ ವ್ಯಕ್ತಿಯ ಅಥವಾ ಹಿರಿಯರ ಫೋಟೋಗಳನ್ನು ದೇವರ ಕೊನೆಯಲ್ಲಿ ಇಟ್ಟು ಪೂಜಿಸಬಾರದು. ಮರಣ ಹೊಂದಿದ ವ್ಯಕ್ತಿಯ ಫೋಟೋವನ್ನು ಮನೆಯ ದಕ್ಷಿಣ ದ್ವಾರದಲ್ಲಿ ಗೋಡೆಗೆ ಹಾಕಬೇಕು.
● ದೇವರ ಕೋಣೆಯಲ್ಲಿ ಚರ್ಮದಿಂದ ಮಾಡಿದ ವಸ್ತುಗಳನ್ನು ಇಡಬಾರದು. ದೇವರ ಕೋಣೆಯ ಹತ್ತಿರ ಚಪ್ಪಲಿ, ಶೂ ಹಾಕಿಕೊಂಡು ಓಡಾಡುವುದು ಮಾಡಬಾರದು.
● ಪೂಜಾ ಮಂದಿರದ ಕೋಣೆಯ ಮೇಲೆ ಯಾವುದೇ ಭಾರವಾದ ವಸ್ತುಗಳನ್ನು ಕೂಡ ಇರಬಾರದು.
● ಪೂಜೆಗೆ ತರವ ಹೂಗಳನ್ನು ಹಾಗೂ ಫಲಗಳನ್ನು ನೀರಿನಿಂದ ತೊಳೆದು ನಂತರ ಅರ್ಪಿಸಬೇಕು.