ತೆಂಗಿನ ಕಾಯಿಯಲ್ಲಿರುವ ಯಾವ ಪದಾರ್ಥವು ಕೂಡ ವ್ಯರ್ಥವಾಗುವುದಿಲ್ಲ. ಹಾಗೆಯೇ ತೆಂಗಿನ ಮರದಿಂದ ಸಿಗುವ ಪದಾರ್ಥಗಳು ಕೂಡ ಹೀಗೆಯೇ ಒಂಚೂರು ವ್ಯರ್ಥವಾಗುವುದಿಲ್ಲ. ಹಾಗಾಗಿ ಇದಕ್ಕೆ ಕಲ್ಪವೃಕ್ಷ ಎನ್ನುವ ಶ್ರೇಷ್ಠ ಹೆಸರನ್ನು ನೀಡಿರುವುದು. ಹೇಗೆ ತೆಂಗಿನ ಮರದಲ್ಲಿನ ಗರಿ, ಎಳನೀರು, ಕಾಯಿ, ಕೊಬ್ಬರಿ, ಕೊನೆಗೆ ಅದರ ಹೊಂಬಾಳೆ ಕರಟ ಎಲ್ಲವೂ ಬಳಕೆಗೆ ಬರುತ್ತದೆಯೋ.
ಹಾಗೆ ಹೊಡೆದ ತೆಂಗಿನಕಾಯಿಯ ಹೋಳಿನ ಪ್ರತಿಯೊಂದು ಪದಾರ್ಥವು ಕೂಡ ಉಪಯೋಗಕ್ಕೆ ಬರುತ್ತದೆ. ಇದುವರೆಗೂ ನೀವು ಈ ಬಗ್ಗೆ ಯೋಚನೆ ಮಾಡದೇ ಇದ್ದರೆ ಇದು ನಿಮಗೆ ಆಶ್ಚರ್ಯ ಅನ್ನಿಸಬಹುದು. ಈಗಾಗಲೇ ಇದನ್ನು ಸಮರ್ಪಕವಾಗಿ ಬಳಸಿಕೊಂಡವರು ಹೌದೌದು ಎನ್ನುತ್ತಿರಬಹುದು.
ಆದರೂ ಇಂದು ಈ ಲೇಖನದಲ್ಲಿ ತೆಂಗಿನಕಾಯಿಯಲ್ಲಿ ಬಹುತೇಕ ಜನರು ವೇಸ್ಟ್ ಎಂದು ಬಿಸಾಡುವ ಜುಂಗಿನ ಬಗ್ಗೆ ಆ ಮೂಲಕ ನಮ್ಮ ಆರೋಗ್ಯದಲ್ಲಿ ಎಷ್ಟೆಲ್ಲ ಬದಲಾವಣೆ ಆಗುತ್ತದೆ ಎನ್ನುವ ಮಾಹಿತಿಯ ಬಗ್ಗೆ ತಿಳಿಸಿ ಕೊಡುತ್ತಿದ್ದೇನೆ.
ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!
ತೆಂಗಿನಕಾಯಿ ಜುಂಗು ಎಂದರೆ ಕೆಲವರಿಗೆ ಅರ್ಥವಾಗದೇ ಇರಬಹುದು. ತೆಂಗಿನ ಕಾಯಿಯನ್ನು ಸುಲಿದಾಗ ಈ ಜಂಗು ಸಿಗುತ್ತದೆ, ಕೆಲವರು ಇದನ್ನು ನಾರು ಎಂದು ಕೂಡ ಕರೆಯುತ್ತಾರೆ, ಇವುಗಳನ್ನು ತೆಗೆದುಕೊಳ್ಳಿ. ಇವುಗಳನ್ನು ನೀಟಾಗಿ ಜೋಡಿಸಿ ಕೊಂಡು ಸಾಧ್ಯವಾದರೆ ಬಾಚಣಿಕೆಯಿಂದ ಒಮ್ಮೆ ನೀಟಾಗಿ ಬಾಚಿಕೊಳ್ಳಿ.
ಈಗ ಒಂದು ಕಡ್ಡಿಯನ್ನು ತೆಗೆದುಕೊಳ್ಳಿ ಆ ಕಡ್ಡಿಯು ವೈ ಶೇಪ್ ನಲ್ಲಿ ಇರಬೇಕು. ವೈ ಶೇಪ್ ಎಂದರೆ ಒಂದು ಕಡ್ಡಿ ಎರಡು ಕವಲು ಹೊಡೆದು ಕೊಂಡಿರುತ್ತದೆ. ಹಳ್ಳಿಗಳ ಕಡೆ ಸಾಮಾನ್ಯವಾಗಿ ಈ ರೀತಿ ಕಡ್ಡಿಗಳು ಸುಲಭವಾಗಿ ಸಿಗುತ್ತವೆ. ಈಗ ಅದನ್ನು ಒಂದು ಸ್ಪೂನ್ ಉದ್ದದಷ್ಟು ಅಳತೆಗೆ ತೆಗೆದುಕೊಂಡು ವೈ ಶೇಪ್ ಬಂದಿರುವ ಕಡೆ ಇವು ಕವರ್ ಆಗುವ ರೀತಿ ಈ ಕಾಯಿ ನಾರುಗಳನ್ನು ಜೋಡಿಸಿಕೊಳ್ಳಿ.
ಸುಮಾರು ಎರಡರಿಂದ ಮೂರು ಇಂಚು ಉದ್ದದ ಜಂಗುಗಳನ್ನು ಸುತ್ತಲೂ ಜೋಡಿಸಿಕೊಳ್ಳಿ. ಎರಡು ಕಡೆಯಿಂದ ನಾರುಗಳನ್ನು ಜೋಡಿಸಿದ ಮೇಲೆ ಇದೇ ನಾರಿನ ಸಹಾಯದಿಂದ ಕವರ್ ಮಾಡಿ ಗಟ್ಟಿಯಾಗಿ ಕಟ್ಟಿ ಈಗ ಇದು ಏನಕ್ಕೆ ಉಪಯೋಗ ಬರುತ್ತದೆ ಎಂದು ಈಗಾಗಲೇ ಬಹುತೇಕ ಗೃಹಿಣಿಯರಿಗೆ ಫ್ಲಾಶ್ ಆಗಿರುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!
ನಾವು ದೋಸೆ ಚಪಾತಿ ಮಾಡುವಾಗ ಪಾನ್ ಮೇಲೆ ಎಣ್ಣೆ ಸವರಲು ಪ್ಲಾಸ್ಟಿಕ್ ಬ್ರಷ್ ಗಳನ್ನು ದುಡ್ಡು ಕೊಟ್ಟು ತಂದು ಬಳಸುತ್ತಿರುತ್ತೇವೆ. ಇದು ಆರೋಗ್ಯಕ್ಕೆ ಎಷ್ಟು ಮಾರಕ ಎಂದು ಗೊತ್ತಿದ್ದು ಕೂಡ ಈ ತಪ್ಪು ಮಾಡುತ್ತಿರುತ್ತೇವೆ. ಇನ್ನು ಮುಂದೆ ಆ ರೀತಿ ಪ್ಲಾಸ್ಟಿಕ್ ಬ್ರಷ್ ಗಳನ್ನು ಎಣ್ಣೆ ಉಜ್ಜಲು ಬಳಸುವ ಬದಲು ಈ ತೆಂಗಿನ ನಾರನಿಂದ ಮಾಡಿದ ಬ್ರಷ್ ನ್ನೇ ದೋಸೆ, ಚಪಾತಿ, ರೊಟ್ಟಿ ಹಾಕುವ ಮುನ್ನ ತವಕ್ಕೆ ಉಜ್ಜಲು ಬಳಸಿ.
ಒಂದು ವೇಳೆ ಇವು ಬಿಸಿಗೆ ಸುಟ್ಟರು ಆರೋಗ್ಯಕ್ಕೆ ಮಾರಕವಲ್ಲ ಮತ್ತು ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡುವುದಕ್ಕೂ ಕೂಡ ಉಳಿತಾಯವಾಗುತ್ತದೆ. ಹಾಗೆ ನಮ್ಮ ಮನೆ ಅಗತ್ಯಕ್ಕೆ ಬೇಕಾದ ವಸ್ತುವನ್ನು ನಾವೇ ಮಾಡಿಕೊಂಡ ಸಮಾಧಾನ ಕೂಡ ಗೃಹಣಿಗೆ ಸಿಗುತ್ತದೆ. ಹೀಗೆ ಕಸದಿಂದ ರಸ ಬೇಕಾದರೂ ಮಾಡಬಹುದು ಎನ್ನುವ ಸಂತೋಷವು ಆಗುತ್ತದೆ. ಇಂದಿನಿಂದಲೇ ನೀವು ಈ ಟ್ರಿಕ್ ಉಪಯೋಗಿಸಿ ಮತ್ತು ಇಂತಹ ಉಪಯುಕ್ತ ಮಾಹಿತಿ ಬಗ್ಗೆ ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರಿಗೂ ಕೂಡ ತಿಳಿಸಿ ಕೊಡಿ.