ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

ಸುಖನಿದ್ದೆಯಲ್ಲಿದ್ದಾಗ ನಾವು ಕಾಣುವ ಕನಸಿಗೂ, ಆ ಕನಸಿನಲ್ಲಿ ಕಾಣುವ ಸನ್ನಿವೇಶಗಳಿಗೂ ನಿಜ ಜೀವನದಲ್ಲಿ ಏನಾದರೂ ಸಂಬಂಧ ಇದೆಯಾ ಎನ್ನುವ ಅನುಮಾನ ಎಲ್ಲರಿಗೂ ಮೂಡುತ್ತದೆ. ಯಾಕೆಂದರೆ ಸ್ವಪ್ನ ಫಲದಲ್ಲಿ ಈ ರೀತಿ ಅಂಶಗಳನ್ನು ತಿಳಿಸಲಾಗಿದೆ. ನಮ್ಮ ಪೂರ್ವಿಕರು ತಮ್ಮ ಗ್ರಂಥಗಳಲ್ಲಿ ಇದರ ಉಲ್ಲೇಖ ಮಾಡಿ ಹೋಗಿದ್ದಾರೆ. ಕೆಲವು ಕನಸುಗಳು ನಮಗೆ ಮುಂದೆ ಉಂಟಾಗುವ ಶುಭ ಹಾಗೂ ಅಶುಭ ಸೂಚನೆಗಳನ್ನು ಕೊಡುತ್ತವೆ ಎನ್ನುವುದನ್ನು ಅವರು ತಿಳಿಸಿದ್ದಾರೆ.

ನಮ್ಮ ಜೀವನದಲ್ಲಿ ಕೂಡ ನಾವು ಇದನ್ನು ಪರೀಕ್ಷೆ ಮಾಡಿ ನೋಡಬಹುದು. ನಮ್ಮ ಕುಟುಂಬದವರೇ ಅನೇಕರು ಇದರ ಬಗ್ಗೆ ಮಾತನಾಡಿದ ಉದಾಹರಣೆಯನ್ನು ಕೂಡ ಕೇಳಿದ್ದೇವೆ. ಈ ರೀತಿ ನಮಗೆ ಬೀಳುವ ಕನಸಿನಲ್ಲಿ ಲಕ್ಷ್ಮಿದೇವಿ ಆಗಮನ ಆಗುವ ಸೂಚನೆಯೂ ಕೂಡ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಕೆಲವು ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.

ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

● ಬಗೆಬಗೆಯ ಹೂಗಳು:- ನಿಮ್ಮ ಕನಸಿನಲ್ಲಿ ಅರಳಿ ನಿಂತಿರುವ ಹೂಗಳನ್ನು ಕಂಡರೆ ಅದರಲ್ಲೂ ಹಳದಿ ಕೆಂಪು ಹೂವುಗಳನ್ನು ಕಂಡರೆ ಆಕಾಶದ ಕೆಳಗೆ ಹಾಸಿಗೆಯಂತೆ ಅರಳಿ ನಗುತ್ತಿರುವ ಹೂಗಳನ್ನು ಕಂಡರೆ ಅದು ಅದೃಷ್ಟದ ಸೂಚನೆ ಎಂದು ಹೇಳಲಾಗುತ್ತದೆ. ಅದರಲ್ಲೂ ಅದು ನಿಮಗೆ ಶೀಘ್ರದಲ್ಲೇ ಧನಾಗಮನಾಗುವ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

● ಭಾರಿ ಮಳೆ:- ಮಳೆ ಎನ್ನುವುದು ತನು ಹಾಗೂ ಮನಗಳನ್ನು ತಣಿಸುವ ಒಂದು ವಿಶೇಷವಾದ ಅನುಭವ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂಡ ಮಳೆ ಎಂದರೆ ಬಹಳ ಇಷ್ಟ. ಮಳೆ ಕೂಡ ಸಮೃದ್ಧಿಯ ಸಂಕೇತ. ಇಂತಹ ಮಳೆಯನ್ನು ಕನಸಿನಲ್ಲಿ ಕಂಡರೆ ಅದು ಕೂಡ ಶುಭ ಸೂಚಕ ಎಂದು ಹೇಳಲಾಗುತ್ತದೆ. ಇದು ಧನಾತ್ಮಕ ಹಾಗೂ ಸಂತೋಷದ ಭಾವನೆಗಳನ್ನು ಸೂಚಿಸುತ್ತದೆ. ನೀವು ನಿಮ್ಮ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಾ ಅಥವಾ ವ್ಯಾಪಾರ ವ್ಯವಹಾರಗಳು ಕೈಗೂಡುತ್ತವೆ. ಈ ರೀತಿ ನಿಮಗೆ ಆರ್ಥಿಕ ಲಾಭಗಳಾಗುತ್ತವೆ ಎನ್ನುವುದರ ಸೂಚನೆಯನ್ನು ಅದು ಕೊಡುತ್ತದೆ ಹೀಗಾಗಿ ಇದನ್ನು ಕೂಡ ಲಕ್ಷ್ಮಿ ಆಗಮನದ ಸೂಚನೆ ಎನ್ನಲಾಗುತ್ತದೆ.

ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!

● ಕೆಂಪು ಸೀರೆ:- ನಾವು ಲಕ್ಷ್ಮಿ ದೇವಿಯನ್ನು ಎಲ್ಲಾ ಫೋಟೋಗಳಲ್ಲಿ ಹಾಗೂ ವಿಗ್ರಹಗಳಲ್ಲೂ ಕೂಡ ಕೆಂಪು ಬಣ್ಣದ ಸೀರೆಯಲ್ಲಿ ನೋಡುತ್ತೇವೆ. ಕೆಂಪು ಬಣ್ಣವೂ ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾದ ಬಣ್ಣ, ದೇವಿಗೆ ನಾವು ಸೀರೆ ಅರ್ಪಿಸುವಾಗಲು ಇದೇ ಬಣ್ಣದಲ್ಲಿ ಅರ್ಪಿಸಿದರೆ ಶುಭ. ಈ ರೀತಿ ಕೆಂಪು ಸೀರೆಯನ್ನು ಹುಟ್ಟಿರುವ ಯಾವುದಾದರೂ ಸ್ತ್ರೀಯನ್ನು ಕನಸಿನಲ್ಲಿ ಕಂಡರೆ ಅಥವಾ ನೀವೇ ಕೆಂಪು ಸೀರೆ ಹುಟ್ಟಿರುವಂತೆ ಕಂಡರೆ ಅಥವಾ ಕೆಂಪು ಬಣ್ಣದ ಸೀರೆಯನ್ನು ಮಾತ್ರ ಕಂಡರೂ ಕೂಡ ಅದು ನಿಮ್ಮ ಜೀವನದಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಉಂಟಾಗುವುದರ ಸೂಚನೆ ಎಂದು ಹೇಳಲಾಗುತ್ತದೆ.

● ದೇವಸ್ಥಾನಗಳನ್ನು ನೋಡುವುದು:- ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ನಮ್ಮಲ್ಲಿ ಒಂದು ಬಗೆಯ ಸಕಾರಾತ್ಮಕತೆ ತುಂಬುತ್ತದೆ. ಮನಸ್ಸು ಬಹಳ ನಿರಾಳ ಆಗುತ್ತದೆ. ಹಾಗಾಗಿ ದೇವಸ್ಥಾನ ಎನ್ನುವುದು ಒಂದು ವಿಶೇಷವಾದ ವಿಷಯ. ಕನಸಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕಾಣುವುದು ಅಥವಾ ನಾವೇ ದೇವಸ್ಥಾನಕ್ಕೆ ಹೋದಂತೆ ಕನಸು ಕಂಡರೂ ಕೂಡ ಅದು ಜೀವನದಲ್ಲಿ ಮುಂದೆ ಉಂಟಾಗುವ ಶುಭ ಸೂಚನೆ. ಅದರಲ್ಲೂ ತಾಯಿ ಲಕ್ಷ್ಮಿ ದೇವಿ ಅನುಗ್ರಹದ ಕುರಿತು ಆಗುವ ಸೂಚನೆ ಎಂದು ಹೇಳಲಾಗುತ್ತದೆ.

ಪೂಜೆಯಲ್ಲಿ ಪಾಲಿಸಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳು.!

● ಉಳಿತಾಯ:- ಈ ವಿಷಯವೇ ಹಣಕ್ಕೆ ಸಂಬಂಧಿಸಿದಾಗಿದೆ. ನೀವು ಕನಸಿನಲ್ಲಿ ಕೂಡ ಇದೇ ರೀತಿ ಕಾಣುತ್ತಿದ್ದರೆ ನೀವು ಎಲ್ಲಾದರೂ ಹಣ ಉಳಿತಾಯ ಮಾಡುತ್ತಿರುವ ರೀತಿ ಕನಸು ಬಿದ್ದರೆ ಅದು ಕೂಡ ಲಕ್ಷ್ಮಿ ದೇವಿಯ ಆಗಮನದ ಬಗ್ಗೆ ನಿಮಗೆ ನೀಡುತ್ತಿರುವ ಶುಭ ಸೂಚನೆ ಎಂದು ಹೇಳಲಾಗುತ್ತದೆ.

Leave a Comment