ವಾಸ್ತು ಶಾಸ್ತ್ರವನ್ನು ಭಾರತೀಯರು ಅಪಾರವಾಗಿ ನಂಬುತ್ತೇವೆ. ಹಲವು ವರ್ಷಗಳಿಂದ ವಾಸ್ತು ಶಾಸ್ತ್ರವು ಜೀವಂತವಾಗಿದ್ದು ಇಂದಿಗೂ ಕೂಡ ತನ್ನ ಕಡೆಗೆ ಜನರನ್ನು ಆಕರ್ಷಿಸುತ್ತಿದೆ ಎಂದರೆ ಇದಕ್ಕಿರುವ ಶಕ್ತಿ ಎಂತಹದ್ದು ಎಂದು ಮನವರಿಕೆ ಆಗುತ್ತದೆ. ವಾಸ್ತು ತಪ್ಪಿದಾಗ ಆಗುವ ಅ’ನಾ’ಹು’ತಗಳು ಹಾಗೆ ಅದನ್ನು ಸರಿಪಡಿಸಿಕೊಂಡಾಗ ಸಿಗುವ ಫಲಿತಾಂಶಗಳು ವಾಸ್ತು ನಂಬುವುದಕ್ಕೆ ಹೆಚ್ಚು ಪುಷ್ಟಿಕೊಡುತ್ತವೆ.
ವಿಜ್ಞಾನದಲ್ಲಿ ನಾವು ಬಹಳ ಮುಂದುವರೆದು ಚಂದ್ರಲೋಕ ತಲುಪಿ ಬಂದಿದ್ದರು ಕೂಡ ವಾಸ್ತುವಿನ ವಿಷಯದಲ್ಲಿ ನಿರ್ಲಕ್ಷ ತೋರುವಂತಿಲ್ಲ ಇದರ ಹಿಂದೆಯೂ ಕೂಡ ಹಲವು ವೈಜ್ಞಾನಿಕ ಕಾರಣಗಳಿದ್ದು ಇದನ್ನೆಲ್ಲ ಲೆಕ್ಕಾಚಾರ ಹಾಕಿ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ.
ಅದರಲ್ಲಿ ಮಲಗುವ ದಿಕ್ಕು ಕೂಡ ಅತಿ ಮುಖ್ಯ ವಿಷಯ, ತಪ್ಪಾದ ದಿಕ್ಕಿನಲ್ಲಿ ಮಲಗಿದರೆ ಏನೆಲ್ಲಾ ಸಮಸ್ಯೆಗಳಾಗಬಹುದು ಎನ್ನುವುದರಿಂದ ಹಿಡಿದು ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎನ್ನುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
1. ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಗಂಡ ಹೆಂಡತಿ ಯಾವಾಗಲೂ ದಕ್ಷಿಣ ದಿಕ್ಕಿನ ಕಡೆಗೆ ತಲೆ ಇಟ್ಟು ಮಲಗಬೇಕು. ಕಾಂತೀಯ ಶಕ್ತಿಯು ದಕ್ಷಿಣ ದಿಕ್ಕಿನಿಂದ ಹರಿಯುವುದರಿಂದ ಇದು ದೇಹ ಹಾಗೂ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದಾಗ ಅವರಿಗಿದ್ದ ಎಷ್ಟು ಆರೋಗ್ಯ ಸಮಸ್ಯೆಗಳು ಗುಣವಾಗಲು ಆರಂಭವಾಗುತ್ತದೆ ಮತ್ತು ಮನೆಯ ಪರಿಸ್ಥಿತಿಯು ಕೂಡ ಸುಧಾರಿಸಿ ಸುಖ ಶಾಂತಿ ನೆಮ್ಮದಿ ದೊರೆತು ಹಣಕಾಸಿನ ಸಮಸ್ಯೆಗಳು ಪರಿಹಾರವಾಗಿ ಅವರ ಬದುಕು ಒಳ್ಳೆಯ ರೀತಿಯಲ್ಲಿ ಬದಲಾಗುತ್ತದೆ.
ಹೀಗಾಗಿ ಗೊತ್ತಿಲ್ಲದೆ ಇಷ್ಟು ದಿನ ಈ ತಪ್ಪು ಮಾಡಿದ್ದರೂ ಕೂಡ ಇಂದಿನಿಂದಲೇ ಇದನ್ನು ಸರಿಪಡಿಸಿಕೊಳ್ಳಿ. ಮನೆಯಲ್ಲಿ ಮಕ್ಕಳಿರಲಿ ಅಥವಾ ವೃದ್ಧರಿರಲಿ ಯಾವುದೇ ವಯೋಮಾನದವರು ಆಗಿದ್ದರು ಕೂಡ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಡಿ.
2. ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನ ಕಡೆಗೆ ತಲೆ ಇಟ್ಟು ಮಲಗುವುದು ಅಷ್ಟೊಂದು ಒಳ್ಳೆಯದಲ್ಲ. ಈ ದಿಕ್ಕಿನಲ್ಲಿ ಮಲಗುವ ಅಭ್ಯಾಸ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರಲು ಆರಂಭಿಸಿ ನಿಮಗೆ ಜೀವನ ಬಹಳ ಬೇಸರ ತರಿಸಿ ನೋ’ವು ಕೊಡುತ್ತದೆ.
ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ನಿಮ್ಮ ದೇಹವು ಜಡ ಆಗುತ್ತದೆ, ನೀವು ಸೋಂಬೇರಿಗಳಾಗುತ್ತಿರಿ ನಿಮಗೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಇದೇ ನಿಮ್ಮ ಕುಟುಂಬ ಕ’ಲ’ಹ’ಕ್ಕೆ ಕಾರಣವಾಗುತ್ತದೆ. ವೈವಾಹಿಕ ಜೀವನದ ಮೇಲೂ ಕೆ’ಟ್ಟ ಪರಿಣಾಮ ಬೀರುತ್ತದೆ. ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಬೀಳುತ್ತದೆ.
ಕೈಕೊಂಡ ಕೆಲಸ ಕಾರ್ಯಗಳು ಕೈಗೂಡುವುದಿಲ್ಲ, ಪ್ರತಿಯೊಂದರಲ್ಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೊಂದು ವಿಚಾರ ಏನೆಂದರೆ ಇದು ಸೂರ್ಯ ಉದಯಿಸುವ ವಿರುದ್ಧ ದಿಕ್ಕು ಆಗಿರುವುದರಿಂದ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದಾಗ ಸೂರ್ಯನ ಕಡೆಗೆ ಕಾಲು ಬರುತ್ತದೆ. ಬೆಳಗ್ಗೆ ಸೂರ್ಯ ಬಂದಾಗ ಆತನಿಗೆ ಅಗೌರವ ತೋರಿದ ರೀತಿ ಆಗುತ್ತದೆ ಹಾಗಾಗಿ ಈ ರೀತಿ ಮಲಗುವುದು ಬಹಳ ತಪ್ಪು ಎಂದು ನಮ್ಮ ಹಿರಿಯರು ಈ ದಿಕ್ಕಿನಲ್ಲಿ ಮಲಗುತ್ತಿರಲಿಲ್ಲ.
ಹಾಗೆ ಸೂರ್ಯನ ಕಿರಣಗಳು ಮೊದಲು ನಮ್ಮ ತಲೆಯನ್ನು ಸ್ಪರ್ಶಿಸಿದಾಗ ಮೆದುಳನ ಮೂಲಕ ದೇಹದ ಎಲ್ಲಾ ನರನಾಡಿಗಳಿಗೂ ಚೈತನ್ಯ ಸಂಚಾರವಾಗಿ ನಮಗೆ ಬಾಡಿ ಆಕ್ಟಿವೇಟ್ ಆಗುತ್ತದೆ. ಅದಕ್ಕೆ ನಾವು ರೆಸ್ಪಾನ್ಸ್ ಮಾಡಿ ಜಾಗ್ರತೆಗೊಂಡಾಗ ನಮ್ಮ ದಿನವೂ ಕೂಡ ಚೆನ್ನಾಗಿ ಆಗಿ ಎಲ್ಲದರಲ್ಲೂ ನಮಗೆ ಯಶಸ್ಸು ಲಭಿಸುತ್ತದೆ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ಬದುಕಿನಲ್ಲೂ ಕೂಡ ಎಲ್ಲವೂ ನಮ್ಮ ನಿರೀಕ್ಷೆಗೆ ವಿರುದ್ಧ ನಡೆದು ಸೋ’ಲಾಗುತ್ತದೆ. ಅದ್ದರಿಂದ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತೇ ಸರಿ ಮಾಡಿಕೊಳ್ಳಿ.