Home Devotional 9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

0
9 ತೆಂಗಿನ ಕಾಯಿ ಕಟ್ಟಿದರೆ ಸಾಕು 9 ವಾರದಲ್ಲಿ ನೀವು ಅಂದುಕೊಂಡ ಕೆಲಸ ಆಗುತ್ತೆ.!

 

ಎಲ್ಲರಿಗೂ ತಿಳಿದಿರುವಂತೆ ನಮ್ಮ ಸುತ್ತಮುತ್ತ ಹಲವಾರು ದೇವಾನು ದೇವತೆಗಳ ದೇವಸ್ಥಾನ ಇದ್ದು ಆ ದೇವಸ್ಥಾನಗಳಿಗೆ ಹೋಗಿ ಬರುವುದರ ಮೂಲಕ ಪ್ರತಿಯೊಬ್ಬರೂ ಕೂಡ ತಮ್ಮ ಕಷ್ಟಗಳೆಲ್ಲವನ್ನು ಸಹ ದೂರ ಮಾಡಿಕೊಳ್ಳುತ್ತಾರೆ ಅದೇ ರೀತಿಯಾಗಿ ಕೆಲವೊಂದು ಶಕ್ತಿ ಪೀಠಗಳಲ್ಲಿ ಕೆಲವೊಂದು ಪೂಜಾ ವಿಧಾನ ಇದ್ದು ಅದನ್ನು ಅನುಸರಿಸುವುದರ ಮೂಲಕ ಕೆಲವೊಂದಷ್ಟು ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿ ಕೊಳ್ಳುತ್ತಿರುವಂತಹ ಹಲವಾರು ಉದಾಹರಣೆಗಳನ್ನು ಕೂಡ ನಾವು ಕಾಣುತ್ತೇವೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಶಕ್ತಿಪೀಠ ಬಹಳ ಶಕ್ತಿಶಾಲಿಯಾಗಿರುವಂತಹ ದೇವಸ್ಥಾನವಾಗಿದ್ದು ಈ ದೇವಸ್ಥಾನಕ್ಕೆ ಹೋಗಿ ಬರುವುದರಿಂದ ನಿಮ್ಮ ಕಷ್ಟಗಳೆಲ್ಲವೂ ಕೂಡ ಕೆಲವೇ ದಿನಗಳಲ್ಲಿ ದೂರವಾಗುತ್ತದೆ ಎಂದೇ ಇಲ್ಲಿಯ ಭಕ್ತರು ನಂಬಿದ್ದಾರೆ.

ಈ ಸುದ್ದಿ ಓದಿ ;- ಕೊಟ್ಟಿರುವ ದುಡ್ಡು ವಾಪಸ್ ಬರಬೇಕು ಅಂದ್ರೆ ಆ ಒಂದು ನಂಬರ್ ಅನ್ನು ಕೈ ಮೇಲೆ ಹಸಿರು ಬಣ್ಣದಲ್ಲಿ ಬರೆದುಕೊಳ್ಳಿ ಸಾಕು ನಂತರ ನೆಡೆಯುವ ಚಮತ್ಕಾರ ನೋಡಿ.!

ಹೌದು ಅಷ್ಟೊಂದು ಪ್ರಸಿದ್ಧಿಯನ್ನು ಈ ಒಂದು ಶಕ್ತಿ ಪೀಠ ಪಡೆದು ಕೊಂಡಿದೆ. ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ, ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಆ ದೇವರು ಯಾರು ಯಾರು ಯಾವ ಕಷ್ಟವೆಂದು ಹೋದರು ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ನೀವು ಆ ಶಕ್ತಿ ಪೀಠದಲ್ಲಿ ಯಾವ ಕೆಲಸವನ್ನು ಮಾಡಬೇಕು.

ಈ ದೇವಸ್ಥಾನದಲ್ಲಿ ಯಾವ ದಿನ ಯಾವ ಯಾವ ವಿಶೇಷವಾದಂತಹ ಪೂಜೆ ಹೋಮ ಹವನಗಳು ನಡೆಯುತ್ತದೆ ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಯಾರು ಏನೇ ಕಷ್ಟ ಎಂದು ಹೋದರು ಕೂಡ ಆ ಎಲ್ಲಾ ಕಷ್ಟಗಳನ್ನು ಸಹ ದೂರ ಮಾಡುತ್ತಾಳೆ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ತಾಯಿ.

ಫೆಬ್ರವರಿ 2024ರ ಕರ್ಕಾಟಕ ರಾಶಿಯವರ ಸಂಪೂರ್ಣ ಮಾಸ ಭವಿಷ್ಯ.!

ಹೌದು ಮನೆಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದ್ದರೆ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗುತ್ತಿದ್ದರೆ, ನಿಮ್ಮ ಮೇಲೆ ಮಾಟ ಮಂತ್ರ ವಾಮಾಚಾರ ದೃಷ್ಟಿ ದೋಷ ಈ ರೀತಿಯಾದಂತಹ ಯಾವುದೇ ಸಮಸ್ಯೆ ಇದ್ದರೂ ಗಂಡ ಹೆಂಡತಿ ನಡುವೆ ಪರಸ್ಪರ ಮನ ಸ್ತಾಪ ಉಂಟಾಗಿದ್ದರೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುತ್ತಿದ್ದರೆ, ಹೀಗೆ ಇಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಸಹ ನೀವು ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ದೂರ ಮಾಡಿಕೊಳ್ಳ ಬಹುದು.

ಅಷ್ಟಕ್ಕೂ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವಿ ಯಾರು ಎಂದು ನೋಡುವುದಾದರೆ. ” ಶ್ರೀ ಅಮ್ಮ ಶಕ್ತಿ ಪೀಠ ಕಾಟೇರಮ್ಮ ದೇವಸ್ಥಾನ ” ದೇವಸ್ಥಾನದ ವಿಳಾಸ :- ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು, ಸೂಲಿಬೆಲೆ ಹೋಬಳಿ, ಕಂಬಳಿಪುರ ಗ್ರಾಮದಲ್ಲಿ ಇದೆ.

ಈ ಸುದ್ದಿ ಓದಿ ;- ಪದೇ ಪದೇ ಫೋಟೋದಿಂದ ಹೂ ಬಿದ್ದರೆ ಏನು ಅರ್ಥ.? ತಪ್ಪದೆ ತಿಳಿದುಕೊಳ್ಳಿ.!

ಬೆಂಗಳೂರಿನಿಂದ ಸರಿ ಸುಮಾರು 40 ಕಿಲೋಮೀಟರ್ ಸಮೀಪ ದಲ್ಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಇಲ್ಲಿಗೆ ಬರುತ್ತದೆ. ಈ ದೇವಸ್ಥಾನಕ್ಕೆ ಯಾರು ಯಾವ ಕಷ್ಟ ಎಂದು ಬರುತ್ತಾರೆ ಅವರು 9 ವಾರ 9 ಕಾಯಿಯನ್ನು ಕಟ್ಟಬೇಕು.

ಹಾಗೂ ಯಾರು ಯಾವ ಕಷ್ಟಕ್ಕೆ ಎಂದು ಹೋಗಿರುತ್ತಾರೋ ಅವರ ಕಷ್ಟವನ್ನು ಆ ತಾಯಿಯ ಬಳಿ ಹೇಳಿಕೊಂಡು ಅಲ್ಲಿ ಅವರು ಹೇಳುವಂತಹ ಒಂದು ಮಂತ್ರವನ್ನು ಪಠಣೆ ಮಾಡುತ್ತಾ ಅವರು ಹೇಳುವಷ್ಟು ಸುತ್ತನ್ನು ದೇವಸ್ಥಾನದ ಸುತ್ತ ಸುತ್ತಬೇಕು. ಆನಂತರ ಆ ಕಾಯಿಯನ್ನು ಕಟ್ಟಬೇಕು ಹೀಗೆ ಕಡ್ಡಾಯವಾಗಿ 9 ವಾರಗಳ ಕಾಲ ಮಾಡಲೇಬೇಕು.

ಈ ಸುದ್ದಿ ಓದಿ ;- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!

ಆಗ ಮಾತ್ರ ನಿಮಗೆ ಈ ಒಂದು ತಾಯಿಯ ಮಹತ್ವ ನೀವು ಅಂದುಕೊಂಡoತಹ ಕೆಲಸ ಗಳನ್ನು ಸರಾಗವಾಗಿ ನೆರವೇರುತ್ತದೆ. ಪ್ರತಿಯೊಬ್ಬರೂ ಕೂಡ ಇಲ್ಲಿಗೆ ಬರುವವರು ತಾಯಿಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟು ನಮ್ಮ ಕೆಲಸ ಕಡ್ಡಾಯವಾಗಿ ಆಗೇ ಆಗುತ್ತದೆ ಎನ್ನುವಂತಹ ನಂಬಿಕೆಯಿಂದ ಬಂದರೆ ಅವರ ಕೆಲಸ ಸಂಪೂರ್ಣವಾಗಿ ನೆರವೇರುತ್ತದೆ.

LEAVE A REPLY

Please enter your comment!
Please enter your name here