ನಮ್ಮ ನಾಡಿನಲ್ಲಿ ಅನೇಕ ದೇವಾನು ದೇವತೆಗಳು ನೆನೆಸಿದ್ದಾರೆ. ಆದಿಶಕ್ತಿ ತಾಯಿಯು ಹತ್ತಾರು ಅವತಾರದಲ್ಲಿ ಇಲ್ಲಿ ನೆಲೆಗೊಂಡಿದ್ದಾರೆ. ಅದರಲ್ಲಿ ಒಂದು ರೂಪ ಪ್ರತ್ಯಂಗಿರ ದೇವಿ ರೂಪ ಎನ್ನಬಹುದು. ಪ್ರತ್ಯಂಗಿರಾ ದೇವಿ ಎಂದರೆ ಆಕೆಯ ಶಕ್ತಿ ಬಹಳ ವಿಶೇಷ. ಈಕೆ ಒಲಿದರೆ ಅನ್ನಪೂರ್ಣೇಶ್ವರಿ, ಮುನಿದರೆ ಕೌಮಾರಿ.
ಅಷ್ಟು ಶಕ್ತಿಶಾಲಿಯಾದ ಈ ದೇವತೆಯು ಭದ್ರಕಾಳಮ್ಮನ ಜೊತೆ ಸೇರಿ ನೆಲೆನಿಂತಿರುವ ಒಂದು ವಿಶೇಷವಾದ ಸ್ಥಳ ಕಾಳಪ್ಪನಹಳ್ಳಿ ಗ್ರಾಮ. ಈ ದೇವಸ್ಥಾನ ಇರುವುದು ಬೆಂಗಳೂರಿನಿಂದ ಗ್ರಾಮಾಂತರ ತಾವರೆಕೆರೆ ಪೋಸ್ಟ್ ನಂದಗುಡಿ ಹೋಬಳಿ, ಹೊಸಪೇಟೆ ತಾಲೂಕು ಕಲ್ಲಪ್ಪನಹಳ್ಳಿ ಗ್ರಾಮದಲ್ಲಿ.
ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತಾಯಿ ಸನ್ನಿಧಿಗೆ ಸಿಗುತ್ತದೆ ಇಲ್ಲಿ ನೆಲೆ ನಿಂತಿರುವ ಸ್ಥಳ ಪುರಾಣದ ಹಿನ್ನೆಲೆಯು ಕೂಡ ರೋಮಾಂಚನಕಾರಿಯಾಗಿದೆ. ಗ್ರಾಮಸ್ಥರೊಬ್ಬರ ಕನಸಿನಲ್ಲಿ ಕಾಣಿಸಿಕೊಂಡಿದ್ದ ತಾಯಿ ಶಕ್ತಿ ಸ್ವರೂಪಿಣಿ ಇಲ್ಲಿ ವಿಗ್ರಹ ಸ್ಥಾಪನೆ ಮಾಡಿ ದೇವಸ್ಥಾನ ಕಟ್ಟಬೇಕೆಂದು ಆಜ್ಞೆಮಾಡುತ್ತಾರೆ.
ನಂತರ ಇಲ್ಲಿ ದೇವಸ್ಥಾನ ಕಟ್ಟಿಸಿಕೊಂಡು ಸ್ಥಾಪನೆಯಾದ ಮೇಲೆ ಆ ಭಾಗದ ಲಕ್ಷಾಂತರ ಕುಟುಂಬಕ್ಕೆ ಆರಾಧ್ಯದೈವವಾಗಿ ರಕ್ಷೆಯಾಗಿ ಕಾಪಾಡುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು ಮತ್ತು ತಾಯಿ ಮಹಾತ್ಮೆ ಅರಿತು ರಾಜ್ಯದ ನಾನಾ ಮೂಲೆಗಳಿಂದಲೂ ಕೂಡ ಪ್ರತ್ಯಂಗಿರಾ ದೇವಿಯ ದರ್ಶನಕ್ಕಾಗಿ ಭಕ್ತಾದಿಗಳು ಹೋಗುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ಪತ್ಯಂಗಿರಿ ದೇವಿಗೆ ಅಮಾವಾಸ್ಯೆ ಎಂದು ವಿಶೇಷ ಪೂಜೆ ಮತ್ತು ಪ್ರತ್ಯಂಗಿರಾ ದೇವಿಯ ಹೋಮ ಕೂಡ ಬಹಳ ವಿಶೇಷ. ಅಮವಾಸ್ಯೆ ದಿನದಂದು ನಡೆಯುವ ಈ ಹೋಮದಲ್ಲಿ ಪಾಲ್ಗೊಂಡು ಭಾಗವಹಿಸಲು ಸಾವಿರಾರು ಭಕ್ತರು ಕಾಯುತ್ತಾರೆ.
ಎಲ್ಲಾ ದೇವಾನುದೇವತೆಗಳಿಗೂ ವನಸ್ಪತಿಯ ಮೂಲಕ ಹೋಮ ಏರ್ಪಡಿಸಿದ್ದರೆ ತಾಯಿಗೆ ಮಾತ್ರ ಮೂಟೆ ಮೂಟೆ ಮೆಣಸಿನ ಕಾಯಿಯನ್ನು ಹೋಮಕ್ಕೆ ಸುರಿಯಲಾಗುತ್ತದೆ. ಆದರೆ ಆ ಹೋಮ ನಡೆಯುವ ಸ್ಥಳದಲ್ಲಿ ಪುಟ್ಟ ಮಗು ಕೂಡ ಕುಳಿತಿದ್ದರು ಅದಕ್ಕೆ ಕಿಂಚಿತ್ತೂ ಕೂಡ ಘಾಟಾಗುವುದಿಲ್ಲ ಇದು ತಾಯಿ ಸತ್ಯ ಎಂದು ನಂಬಲಾಗುತ್ತದೆ.
ಇಲ್ಲಿಗೆ ಬರುವ ಭಕ್ತಾದಿಗಳು ಹೋಮಕ್ಕೆ ಪಾಲ್ಗೊಳ್ಳುವುದಾದರೆ ಒಣಮೆಣಸಿಕಾಯಿ, ಮೆಣಸು, ಕರಿ ಎಳ್ಳು ಹಾಗೂ ಉಪ್ಪನ್ನು ಹಾಕುತ್ತಾರೆ. ಒಣಮೆಣಸಿನಕಾಯಿ ಹಾಕುವುದರಿಂದ ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಯಾವುದೇ ಅಡೆತಡೆಗಳಿದ್ದರೂ ಸಿಡಿಯುತ್ತದೆ ಎನ್ನುವುದು ನಂಬಿಕೆ.
ಹಾಗೆ ಆಂಜನೇಯ ಸ್ವರೂಪವಾದ ಒಣ ಮೆಣಸು ಕೂಡ ಧೈರ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ ಮತ್ತು ಕರಿ ಎಳ್ಳು ಎಲ್ಲರಿಗೂ ತಿಳಿದಿರುವಂತೆ ಶನಿ ಮಹಾತ್ಮನ ಪ್ರಭಾವ ಹೊಂದಿದೆ , ನಮ್ಮಲ್ಲಿ ಗ್ರಹಗತಿ ದೋಷಗಳು, ಶನಿ, ದೋಷ ರಾಹು ಕೇತು ದೋಷ ಇನ್ನಿತರ ಯಾವುದೇ ದೋಷಗಳಿದ್ದರೂ ಕೂಡ ಇದನ್ನು ಹೋಮಕ್ಕೆ ಅರ್ಪಿಸುವುದರಿಂದ ಅದು ಕಳೆದು ಹೋಗುತ್ತದೆ ಎಂದು ನಂಬಲಾಗಿದೆ.
ಉಪ್ಪು ನಮಗಾಗಿರುವ ಎಲ್ಲ ರೀತಿಯ ದೃಷ್ಟಿ ದೋಷಗಳಿನ್ನು ನಿವಾರಣೆ ಮಾಡುತ್ತದೆ. ನರ ದೃಷ್ಟಿ ದೋಷ, ಹಿತ ಶತ್ರುಗಳ ಕಾಟ, ಮಾಟ ಮಂತ್ರ ಪ್ರಯೋಗ ಮುಂತಾದ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಸರ್ಪದೋಷ ನಿವಾರಣೆಗೆ, ಸಂತಾನ ಸಮಸ್ಯೆಗೆ, ವಿವಾಹ ವಿಳಂಬವಾದರೆ ಎಲ್ಲದಕ್ಕೂ ಕೂಡ ತಾಯಿಯ ಬಳಿ ಬಂದು ಭಕ್ತಾದಿಗಳು ಕೇಳಿಕೊಳ್ಳುತ್ತಾರೆ.
ಮತ್ತು ಹೋಮಕ್ಕೆ ಈ ಮೇಲೆ ತಿಳಿಸಿದ ವಸ್ತುಗಳನ್ನು ತಂದು ಅರ್ಪಿಸಿ ಮೂರು ಬಾರಿ ಅಂದರೆ ಮೂರು ತಿಂಗಳು ಬಾಗಿಯಾದರೂ ಸಾಕು, ಅವರ ಸಮಸ್ಯೆಗೆ ಸುಲಭ ರೀತಿಯಲ್ಲಿ ಪರಿಹಾರ ಸಿಗಲು ಶುರು ಆಗುತ್ತದೆ. ವ್ಯಾಪಾರ ವಹಿವಾಟು ಅಭಿವೃದ್ಧಿಗಳ ಆಗುತ್ತದೆ ಮತ್ತು ಮನೆ ಕಟ್ಟಬೇಕು ಎನ್ನುವ ಆಸೆ ಇರುವವರು ನೂರಾರು ತೊಡಕುಗಳಿಂದಾಗಿ ನೊಂದಿದ್ದರೆ.
ಮನೆಯಲ್ಲಿ ತಾಯಿಯ ಹೆಸರಲ್ಲಿ ಹರಕೆ ಕಟ್ಟಿಕೊಂಡರೆ ನಿವಾರಣೆ ಆಗುತ್ತದೆ ಮತ್ತು ತಪ್ಪದೆ ನಂತರ ಅವರು ಬಂದು ಇಲ್ಲಿ ಹರಕೆ ಪೂರೈಸಿಕೊಂಡು ಹೋಗಬೇಕು. ಈ ದೇವಸ್ಥಾನದ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಸಂಖ್ಯೆಗಳಿಗೆ ಕರೆ ಮಾಡಿ. 9900823427, 9731613513