ಪ್ರತಿಯೊಂದು ಮನೆಯಲ್ಲೂ ಕೂಡ ಈಗ ಫ್ರಿಡ್ಜ್ ಅವಶ್ಯಕತೆ ಇದೆ ಯಾಕೆಂದರೆ ಸಮಯದ ಕೊರತೆ ಇರುವುದರಿಂದ ಪ್ರತಿನಿತ್ಯವೂ ಹೊರಗೆ ಹೋಗಿ ಹಾಲು, ಮೊಸರು, ತರಕಾರಿ, ಗ್ರೋಸರಿ ತರಲು ಎಲ್ಲರಿಗೂ ಅವಕಾಶ ಆಗದಿರುವೂದರಿಂದ ಅಲ್ಲದೇ ಮನೆ ಹೆಣ್ಣು ಮಕ್ಕಳು ಕೂಡ ಈಗ ದುಡಿಯಲು ಹೋಗಬೇಕಾಗಿರುವುದರಿಂದ ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವ ಹೊತ್ತಿಗೆ ಪತಿ ಕಛೇರಿಗೆ ಹೋಗುವ ಹೊತ್ತಿಗೆ ಅಡಿಗೆ ಮಾಡಿ ಮುಗಿಸಬೇಕು
ಮತ್ತು ಅಂದುಕೊಂಡ ತಕ್ಷಣ ಅಡುಗೆ ಆಗಬೇಕು ಎಂದರೆ ಹಿಂದಿನ ದಿನವೇ ರಾತ್ರಿ ಹೊತ್ತು ತರಕಾರಿ, ಸೊಪ್ಪು ಎಲ್ಲವನ್ನು ಹೆಚ್ಚಿಟ್ಟು ಫಾರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಟ್ಟು ಮಲಗುವುದು ಬೆಳಗಿನ ವೇಳೆ ಎಷ್ಟೋ ಕೆಲಸಗಳನ್ನು ಕಡಿಮೆ ಮಾಡಿರುತ್ತದೆ. ಹೆಚ್ಚಿಗೆ ತಂದ ವಸ್ತುಗಳನ್ನು ಫ್ರೆಶ್ ಆಗಿ ಇಟ್ಟುಕೊಳ್ಳಲು ಹೀಗೆ ಇನ್ನಷ್ಟು ಕಾರಣಗಳಿಂದಾಗಿ ಫ್ರಿಡ್ಜ್ ಬೇಕೇ ಬೇಕು.
ಹೀಗೆ ಪ್ರತಿ ಮನೆಯಲ್ಲೂ ಒಬ್ಬ ಶಾಶ್ವತ ವ್ಯಕ್ತಿಯಾಗಿ ಸ್ಥಾನ ಪಡೆದಿರುವ ಈ ಫ್ರಿಡ್ಜ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳನ್ನು ಇಂದು ನಾವು ಈ ಲೇಖನದಲ್ಲಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಅದೇನೆಂದರೆ ವಾಸ್ತು ಪ್ರಕಾರವಾಗಿ ಫ್ರಿಜ್ ಕೆಲವು ಜಾಗದಲ್ಲಿ ಇರಬಾರದು ಎನ್ನುವ ನಿಯಮಗಳಿದೆ ಅದೇ ರೀತಿಯಾಗಿ ವೈಜ್ಞಾನಿಕ ದೃಷ್ಟಿಕೋನದಿಂದಲೂ ಕೂಡ ಫ್ರಿಡ್ಜ್ ನಲ್ಲಿ ಕೆಲವು ವಸ್ತುಗಳನ್ನು ಇಡಬಾರದು ಮತ್ತು ಫ್ರಿಡ್ಜ್ ಅಕ್ಕಪಕ್ಕ ಕೆಲವು ವಸ್ತುಗಳನ್ನು ಇಡಬಾರದು.
ಈ ಸುದ್ದಿ ಓದಿ:- ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!
ಹೀಗೆ ಮನೆಯಲ್ಲಿ ಫ್ರಿಡ್ಜ್ ಇಡುವ ವಿಚಾರವಾಗಿ ಪ್ರತಿಯೊಬ್ಬರ ತಿಳಿದುಕೊಳ್ಳಲೇ ಬೇಕಾದ ಕೆಲ ಸಾಮಾನ್ಯ ವಿಷಯಗಳು ಹೀಗಿವೆ ನೋಡಿ. ಒಂದು ವೇಳೆ ಗೊತ್ತಿಲ್ಲದೆ ನಿಮ್ಮ ಮನೆಯಲ್ಲಿ ಇದುವರೆಗೂ ಈ ಮಿಸ್ಟೇಕ್ ಮಾಡಿದ್ದರೆ ಇನ್ನು ಮುಂದೆ ಆದರೂ ಸರಿಪಡಿಸಿಕೊಳ್ಳಿ.
ಅನೇಕರು ಫ್ರಿಡ್ಜ್ ನ್ನು ಗೋಡೆಗೆ ತಾಗಿಸಿ ಇಡುತ್ತಾರೆ ಇದರಿಂದಲೂ ಕೂಡ ಅನಾನುಕೂಲತೆಗಳು ಇವೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಗೋಡೆಗೆ ತಾಗಿಸಿದಂತೆಯೇ ರೆಫ್ರಿಜರೇಟರ್ ಇದ್ದರೆ ಅದರ ಹಿಂದೆ ಗಾಳಿ ಆಡುವುದಿಲ್ಲ. ರೆಫ್ರಿಜರೇಟರ್ ನ ಹಿಂಭಾಗದಲ್ಲಿರುವ ಸುರುಳಿಯಿಂದ ಹೊರಬರುವ ಶಾಖವು ಹಿಮ್ಮುಖವಾಗುತ್ತದೆ.
ಇದರಿಂದ ಫ್ರಿಡ್ಜ್ ಒಳಗಿನ ಉಷ್ಣತೆಯ ಹಲವು ಬಾರಿ ವ್ಯತ್ಯಾಸವಾಗುತ್ತದೆ, ಫ್ರಿಡ್ಜ್ ತನ್ನ ಸಾಮರ್ಥ್ಯಕ್ಕಿಂತ ಕಡಿಮೆ ತಂಪು ನೀಡುತ್ತದೆ. ಫ್ರಿಡ್ಜ್ ಒಳಗೆ ಉಷ್ಣಾಂಶ ಹೆಚ್ಚಾದರೆ ಕಂಪ್ರೆಸರ್ ಮೇಲಿನ ಒತ್ತಡವು ಕೂಡ ಹೆಚ್ಚಾಗುತ್ತದೆ. ಇದು ಇಲ್ಲಸಲ್ಲದ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಈ ಸುದ್ದಿ ಓದಿ:- ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!
ಮತ್ತು ಗೋಡೆಗೆ ತಾಗಿಸಿ ಫ್ರಿಡ್ಜ್ ಇಡುವುದರಿಂದ ಅದರಿಂದ ಹೊರಬರುವ ಶಾಖವು ಗೋಡೆಗೂ ಕೂಡ ಹಾನಿ ಉಂಟು ಮಾಡುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪೈಂಟ್ ಬಣ್ಣ ಕಪ್ಪಾದ ಅಥವಾ ಕೊಳಕಾದ ರೀತಿ ಕಂಡಿರುವ ಉದಾಹರಣೆಗಳು ಇವೆ.
ಹಾಗೆ ನಾವು ಸ್ಥಳವಕಾಶವನ್ನು ಇಟ್ಟುಕೊಂಡು ಜೋಡಿಸಿಕೊಳ್ಳುವುದರಿಂದ ಕ್ಲೀನ್ ಮಾಡಲು ಕೂಡ ಬಹಳ ಸುಲಭ ಆಗುತ್ತದೆ, ಇಲ್ಲವಾದಲ್ಲಿ ಅದರ ಕಡೆ ಗಮನಹರಿಸದೆ ಸರಿಯಾಗಿ ಮೇಂಟೆನ್ ಮಾಡದ ಕಾರಣ ಫ್ರಿಡ್ಜ್ ಬೇಗ ಹಾಳಾಗಲೂಬಹುದು. ಹಾಗಾದರೆ ಗೋಡೆ ಮತ್ತು ಫ್ರಿಡ್ಜ್ ಮಧ್ಯೆ ಗ್ಯಾಪ್ ಎಷ್ಟಿರಬೇಕು? ಎನ್ನುವ ಪ್ರಶ್ನೆ ಮೂಡದೇ ಇರದು.
ಟೆಕ್ನಾಲಜಿ ಪ್ರಕಾರವಾಗಿ ಗೋಡೆ ಮತ್ತು ಫ್ರಿಡ್ಜ್ ನಡುವೆ ಕನಿಷ್ಠ 6 ಇಂಚು ಗ್ಯಾಪ್ ಇರಬೇಕು ಇದರಿಂದ ಕಾಯಿಲ್ ತಂಪಾಗಿರಿಸಲು ಬೇಕಾದಷ್ಟು ಗಾಳಿ ಸಿಗುತ್ತದೆ ಇದಕ್ಕಿಂತಲೂ ಹೆಚ್ಚಿಗೆ ಗ್ಯಾಪ್ ಇಟ್ಟುಕೊಳ್ಳುವುದು ಕೂಡ ಉತ್ತಮವೇ ಅದು ಮನೆಯ ಸ್ಥಳಾವಕಾಶದ ಅನುಕೂಲತೆಗೆ ಬಿಟ್ಟಿದ್ದು.