
ಬಾಕ್ಸ್ ಆಫೀಸ್ ಕಬ್ಜಾ ಮಾಡಲು ಮತ್ತೊಂದು ಸ್ಯಾಂಡಲ್ ವುಡ್ ನ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕನ್ನಡದ ಬಹು ನಿರೀಕ್ಷಿತ ಚಿತ್ರ ಇದ ಕಬ್ಜಾ ಮಾರ್ಚ್ 17 ರಂದು ಬಿಡುಗಡೆ ಅಗಲಿದೆ. ಚಿತ್ರದ ನಿರ್ದೇಶಕರಾಗಿರುವ ಆರ್. ಚಂದ್ರು ಅವರು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗಾಗಿ ಈ ಸಿನಿಮಾ ಅರ್ಪಣೆ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರು ಕನ್ನಡದ ಸೂಪರ್ ಸ್ಟಾರ್ ಗಳ ಕಾಂಬಿನೇಷನಲ್ಲಿ ತಯಾರಾಗುತ್ತಿರುವ ಸಿನಿಮಾ ಆದಕಾರಣ ಚಿತ್ರದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಇನ್ನು ಹೆಚ್ಚಾಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಿದ್ದ ಮುಕುಂದ ಮುರಾರಿ ಸಿನಿಮಾ ಗೆದ್ದು ಸೂಪರ್ ಹಿಟ್ ಆಗಿತ್ತು. ಆದರೆ ಅದೊಂದು ಕೌಟುಂಬಿಕ ಚಿತ್ರ ಅನಿಸಿಕೊಂಡಿತು ಕಾಮಿಡಿ ಜೊತೆಗೆ ಸಮಾಜಮುಖಿಯಾದ ಸಂದೇಶವನ್ನು ದೇವರ ಮತ್ತು ಭಕ್ತಿ ಹಾಗೂ ಭಕ್ತರ ನಡುವಿನ ಸಂಬಂಧವನ್ನು ಮುಕುಂದ ಮುರಾರಿ ಸಿನಿಮಾ ಮೂಲಕ ಸಾರಲಾಗಿತ್ತು.
ರಿಮೇಕ್ ಸಿನಿಮಾ ಆಗಿದ್ದರೂ ಕನ್ನಡದಲ್ಲಿ ಇದು ಬಹಳ ಒಳ್ಳೆ ಸದ್ದು ಮಾಡಿತ್ತು, ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಈಗ ರಿಲೀಸ್ ಗೆ ರೆಡಿಯಾಗಿರುವ ಕಬ್ಜಾ ಸಿನಿಮಾ ಬಹಳ ಹೈ ಬಜೆಟ್ ಸಿನಿಮಾ ಆಗಿದೆ. ಈಗಾಗಲೇ ಬಿಡುಗಡೆ ಆದ ಟೀಸರ್ ಪೋಸ್ಟರ್ ಮತ್ತು ಸಾಂಗ್ ಗಳಿಂದ ಸಿನಿಮಾ ಎಲ್ಲರ ಗಮನ ಸೆಳೆದಿದೆ. 70ರ ದಶಕದ ಗ್ಯಾಂಗ್ ಸ್ಟರ್ ಕಥೆ ಇದು ಎನ್ನಲಾಗುತ್ತಿದೆ. ವರ್ಡ್ ಕ್ಲಾಸ್ ಆಕ್ಷನ್ ಮತ್ತು ಸಿನಿಮಾಟೋಗ್ರಾಫಿ ಕೂಡ ಸಿನಿವಾಗಿದೆ ಎಂದು ಚಿತ್ರತಂಡ ಹೇಳುತ್ತಿದೆ.
ಜೊತೆಗೆ ಈಗಾಗಲೇ ಸಿನಿಮಾ ಶೂಟಿಂಗ್ ವೇಳೆ ಲೈವ್ ಅಲ್ಲಿ ಬಂದು ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದರಿಂದ ಸಿನಿಮಾ ರೋಚಕವಾಗಿರುತ್ತದೆ ಎನ್ನುವ ಸುಳಿವು ಸಿಕ್ಕಿದೆ. ಯಾವುದೇ ಹಾಲಿವುಡ್ ಸಿನಿಮಾಗಳು ಕಡಿಮೆ ಇಲ್ಲದಂತೆ ಕಬ್ಜ ಸಿನಿಮಾ ರೆಡಿ ಆಗಿದೆ ಎಂದು ಹೇಳಬಹುದು. ಇಷ್ಟು ಅದ್ದೂರಿಯಾದ ಈ ಚಿತ್ರಕ್ಕೆ ಖರ್ಚು ಮಾಡಿರುವ ಬಜೆಟ್ ಬಗ್ಗೆ ಕೇಳಿದರೆ ಖಂಡಿತ ಕನ್ನಡಿಗರು ಶಾ-ಕ್ ಆಗಬಹುದು, ಯಾಕೆಂದರೆ ಬರೋಬಕರೆ 120 ಕೋಟಿ ಹಣವನ್ನು ಈ ಸಿನಿಮಾಗಾಗಿ ಖರ್ಚು ಮಾಡಲಾಗಿದೆ.
ಈ ಸಿನಿಮಾಗೆ ಬಂಡವಾಳನವನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕರಾದ ಆನಂದ್ ಪಂಡಿತ್ ಅವರು ಹೂಡಿದ್ದಾರೆ. ಇದರ ಜೊತೆಗೆ ಹಿಂದಿ, ಮರಾಠಿ ಮತ್ತು ತೆಲುಗು ವಿತರಣೆ ಹಕ್ಕನ್ನು ಕೂಡ ಪಡೆದುಕೊಂಡಿದ್ದಾರೆ. ಬಜೆಟ್ ಬಗ್ಗೆ ಅವರಾಡಿದ ಮಾತು ಬಹಳ ವಿಶೇಷ ಎನಿಸುತ್ತದೆ. ನಿರ್ಮಾಪಕರಾದ ಆನಂದ್ ಪಂಡಿತ್ ಅವರ ಬಳಿ ಮಾಧ್ಯಮದವರು ಸಿನಿಮಾಗೆ ಖರ್ಚು ಮಾಡಿರುವ ಬಜೆಟ್ ಬಗ್ಗೆ ಕೇಳಿದಾಗ ಇದು ಸಿನಿಮಾಗಾಗಿ ಖರ್ಚು ಮಾಡಿರುವ ಬಜೆಟ್ ಅಲ್ಲ, ಫ್ಯಾಶನ್ ಗಾಗಿ ಖರ್ಚು ಮಾಡಿರುವುದು ಎಂದು ಹೇಳಿದ್ದಾರೆ. ಈ ಮಾತು ಸಿನಿಪ್ರಕ್ಷಕರ ಆಸಕ್ತಿಯನ್ನು ಇನ್ನಷ್ಟು ಕೆರಳಿಸಿದೆ.
ಸಿನಿಮಾದಲ್ಲಿ ಅತಿ ದೊಡ್ಡ ಕಲಾವಿದ ದಂಡೇ ಇದ್ದು, ನಾಯಕಿಯಾಗಿ ಶ್ರೇಯ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ವರ್ಷದ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಈಗಾಗಲೇ ಕಂಡು ಬಂದಿದ್ದು, ಕಳೆದ ವರ್ಷ ತೆರೆಕಂಡ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಾದ ಚಾರ್ಲಿ777, ಕೆಜಿಎಫ್-2, ಕಾಂತಾರ, ವಿಕ್ರಾಂತ್ ರೋಣ ಈ ಸಿನಿಮಾ ರೀತಿಯೇ ಇದು ಹೆಸರಾಗಲಿದೆ ಎನ್ನುವ ಭರವಸೆ ಎಲ್ಲರಲ್ಲಿದೆ. ಚಿತ್ರ ತಂಡಕ್ಕೆ ಶುಭವಾಗಲಿ ಎಂದು ನಾವು ಸಹ ಹರಸೋಣ.