ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!

 

ಪವಿತ್ರ ಗೌಡ ಅವರು ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಇವರು ಸಿನಿಮಾ ನಾಯಕಿ ಆಗಿ ಹೆಸರು ಮಾಡಿದ್ದಕ್ಕಿಂತ ದರ್ಶನ್ ಅವರ ವಿವಾದಗಳಲ್ಲಿ ಹೆಸರಾಗಿದ್ದೇ ಹೆಚ್ಚು. ದರ್ಶನ್ ಜೊತೆ ಪವಿತ್ರ ಗೌಡ ಹೆಸರು ಸದಾ ತಳುಕು ಹಾಕಿಕೊಂಡಿರುತ್ತದೆ. ದರ್ಶನ್ ಅವರ ಸುದ್ದಿಯಿಂದಲೇ ಪವಿತ್ರ ಗೌಡ ಅವರ ಹೆಸರು ಜನರಿಗೆ ಗೊತ್ತಾಗಿರುವುದು ಎಂದೇ ಹೇಳಬಹುದು. ಹಾಗಾಗಿ ಇವರಿಬ್ಬರ ಸಂಬಂಧ ಮತ್ತು ಪರಿಚಯದ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಸಹ ಕುತೂಹಲ ಇದ್ದೇ ಇದೆ.

ದರ್ಶನ್ ಅವರಿಗೆ ಜನಸಾಮಾನ್ಯರಂತೆ ಸೆಲೆಬ್ರೆಟಿಗಳು ಕೂಡ ಅಭಿಮಾನಿಗಳಾಗಿದ್ದಾರೆ. ಈ ರೀತಿ ಅಭಿಮಾನಿ ಎಂದು 2016ರಲ್ಲಿ ಪವಿತ್ರ ಗೌಡ ಅವರಿಗೆ ದರ್ಶನ್ ಅವರ ಪರಿಚಯ ಆಗುತ್ತದೆ. ಆ ಪರಿಚಯ ಸ್ನೇಹವಾಗಿ ತಿರುಗಿ ಪದೇ ಪದೇ ಆಕೆ ದರ್ಶನ್ ಅವರ ಫಾರಂ ಹೌಸ್ ಗೆ ಭೇಟಿ ಕೊಡಲು ಶುರು ಮಾಡುತ್ತಾರೆ. ಅವರು ಫಾರಂ ಹೌಸ್ ಅಲ್ಲಿ ದರ್ಶನ್ ಅವರ ಕುದುರೆಗಳ ಜೊತೆ ತೆಗೆಸಿಕೊಂಡ ಫೋಟೋ ಮತ್ತು ದರ್ಶನ್ ಅವರ ಹಿಂದೆ ಬೈಕಿನಲ್ಲಿ ಕುಳಿತುಕೊಂಡಿದ್ದ ಫೋಟೋ ಅಪ್ಲೋಡ್ ಮಾಡುವವರೆಗೂ ಇವರಿಬ್ಬರ ವೈಯಕ್ತಿಕ ವಿಚಾರದ ಬಗ್ಗೆ ಯಾರಿಗೂ ಸುಳಿವೇ ಇರಲಿಲ್ಲ.

ಒಮ್ಮೆ ಈಕೆ ಫೇಸ್ಬುಕ್ ಅಕೌಂಟ್ ನಲ್ಲಿ ಈ ಫೋಟೋಗಳನ್ನು ಶೇರ್ ಮಾಡಿದ ಬಳಿಕ ಎಲ್ಲೆಡೆ ಇವರಿಬ್ಬರ ಸಂಬಂಧದ ಬಗ್ಗೆ ಗುಸು-ಗುಸು ಶುರುವಾಗುತ್ತದೆ. ನಂತರ ಕೆಲ ದಿನಗಳ ಬಳಿಕ ಆ ಫೋಟೋಗಳು ಡಿಲೀಟ್ ಆಗುತ್ತದೆ ಆಗ ಎಲ್ಲರೂ ಇಬ್ಬರ ನಡುವೆ ಸಂಬಂಧ ಮುರಿದಿರಬೇಕು ಎಂದೇ ಭಾವಿಸಿಕೊಂಡಿರುತ್ತಾರೆ. ಮತ್ತೆ ಈಕೆ ಕಾಣಿಸಿಕೊಂಡಿದ್ದು ಕುರುಕ್ಷೇತ್ರ ಶೂಟಿಂಗ್ ವೇಳೆ ಆ ಸೆಟ್ ಗೆ ಈಕೆ ಹೋಗಿದ್ದ ಫೋಟೋಗಳು ಕೂಡ ವೈರಲ್ ಆಗುತ್ತವೆ.

ದರ್ಶನ್ ಅವರ ತಾಯಿ ಮತ್ತು ದರ್ಶನ್ ಅವರ ಅಕ್ಕನ ಜೊತೆ ಕೂಡ ಪವಿತ್ರ ಗೌಡ ಅವರು ಬಹಳ ಆತ್ಮೀಯವಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಕುಟುಂಬದ ಯಾವುದೋ ಶುಭ ಕಾರ್ಯದಲ್ಲಿ ತೆಗೆದುಕೊಂಡಿರುವ ಫೋಟೋ ರೀತಿ ಇವುಗಳು ಇವೆ ಆದರೆ ಆ ದಿನ ದರ್ಶನ್ ಅವರ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ಮಾತ್ರ ಆಕೆ ಅಪ್ಲೋಡ್ ಮಾಡಿಲ್ಲ. ಹಾಗಾಗಿ ಇವರಿಬ್ಬರ ಸಂಬಂಧ ನಿಂತು ಹೋಗಿರಬೇಕು ಎಂದೇ ಎಲ್ಲರೂ ಅಂದುಕೊಂಡಿದ್ದರು, ಅದು ಕೂಡ ಸುಳ್ಳಾಯಿತು.

ಯಾಕೆಂದರೆ ದರ್ಶನ್ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ವಿವಾದ ಮಾಡಿಕೊಂಡು ಅದು ಹಲವು ದಿನಗಳವರೆಗೆ ಮಾಧ್ಯಮದಲ್ಲಿ ಸುದ್ದಿಯಾಗಿ ನಂತರ ಒಂದಕ್ಕೊಂದು ವಿಷಯ ತಾರಕಕ್ಕೇರಿ ಮಾಧ್ಯಮಗಳು ದರ್ಶನ್ ಅವರನ್ನು ಬ್ಯಾನ್ ಮಾಡುವ ಹಂತಕ್ಕೂ ಬೆಳೆಯುತ್ತದೆ. ಇಷ್ಟೆಲ್ಲಕ್ಕೂ ಕಾರಣವಾದ ಆ ಘಟನೆ ನಡೆದ ದಿನ ಕೂಡ ಪವಿತ್ರ ಗೌಡ ಅವರು ಅಲ್ಲಿದ್ದರೂ ಎನ್ನುವುದು ಸ್ಪಷ್ಟ ಆಗಿದೆ. ಈ ವರ್ಷದ ದರ್ಶನ್ ಅವರ ಹುಟ್ಟು ಹಬ್ಬದ ದಿನದಂದು ಖಾಸಗಿ ಪಾರ್ಟಿ ಅರೆಂಜ್ ಮಾಡಿ ಮೇಘ ಶೆಟ್ಟಿ ಅವರು ದರ್ಶನ್ ಅವರ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿದ್ದರು.

ಮೇಘ ಶೆಟ್ಟಿ ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ಅಲ್ಲಿ ಪವಿತ್ರ ಗೌಡ, ದರ್ಶನ್ ಮತ್ತು ಮೇಘ ಶೆಟ್ಟಿ ಕಾಣಿಸಿಕೊಂಡಿದ್ದರು. ಪವಿತ್ರ ಗೌಡ ಕೂಡ ಅಂದು ಕೇಕ್ ತಂದಿದ್ದರೂ ಅದರ ಮೇಲೆ ಸುಬ್ಬ ಎಂದು ಬರೆದಿತ್ತು ಎನ್ನಲಾದ ಫೋಟೋಗಳು ಕೂಡ ವೈರಲ್ ಆಗಿವೆ. ಇದು ಅವರಿಬ್ಬರ ಆತ್ಮೀಯತೆ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ ಆದರೆ ಇದರ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪೋಸ್ಟ್ ಹಾಕಿ ಕಿಡಿ ಕಾರಿದ್ದರು. ತಕ್ಷಣವೇ ಮೇಘ ಶೆಟ್ಟಿ ಅವರು ಕೂಡ ಫೋಟೋ ಡಿಲೀಟ್ ಕೂಡ ಮಾಡಿದ್ದರು. ಇಷ್ಟೆಲ್ಲ ಆದರೂ ಕೂಡ ದರ್ಶನ್ ಅವರು ಪವಿತ್ರ ಗೌಡ ಅವರನ್ನು ಪದೇಪದೇ ಭೇಟಿ ಆಗುತ್ತಲೇ ಇರುವುದರಿಂದ ಇದಕ್ಕೆಲ್ಲಾ ಯಾವ ಅರ್ಥವನ್ನು ಕೊಡಬೇಕು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

Leave a Comment