ಅಪ್ಪಾಜಿ ಸಿನಿಮಾದ ವಿಷ್ಣುವರ್ಧನ್ ಅವರ ಏನೇ ಕನ್ನಡತಿ ನೀ ಯಾಕೆ ಹಿಂಗಾಡುತಿ.? ಈ ಹಾಡು ಕನ್ನಡದ ಎವರ್ಗೀನ್ ಹಾಡು. ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರಿಗೆ ಜೋಡಿ ಆಗಿ ಕಾಣಿಸಿಕೊಂಡಿರುವ ಈ ಕನ್ನಡತಿ ಹೆಸರು ಆಮನಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಇವರು ಕನ್ನಡ ಸಿನಿಮಗಳಿಗಿಂತ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಆಗಿ ಮಿಂಚಬೇಕು ಎನ್ನುವುದೇ ಇವರ ಬದುಕಿನ ಕನಸಾಗಿತ್ತು. ಆದರೆ ಆ ಹಾದಿ ಇವರಿಗೆ ಅಷ್ಟು ಸುಲಭದ್ದಾಗಿರಲಿಲ್ಲ.
ಸಾಮಾನ್ಯವಾಗಿ ಯಾರಿಗೆ ಆದರೂ ಕೂಡ ಅವರ ಕನಸು ಸುಲಭಕ್ಕೆ ಧಕ್ಕುವುದಿಲ್ಲ, ಅದಕ್ಕಾಗಿ ಬಹಳ ಶ್ರಮ ಪಡಬೇಕಾಗುತ್ತದೆ. ಆದರೆ ಈಕೆಗೆ ಎದುರಾಗಿದ್ದು ಬರೀ ಕಷ್ಟವಲ್ಲ ಅದೊಂದು ತರಹದ ಹಿಂಸೆ ಅಂತಾನೆ ಹೇಳಬಹುದು. ಇದನ್ನು ಅವರೇ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಆಸೆಯಿಂದ ಅವಕಾಶ ಕೇಳಲು ಹೋಗುವವರಿಗೆ ಎದುರಾಗುವ ಮೊದಲ ಸಮಸ್ಯೆಯೇ ಕಾಸ್ಟಿಂಗ್ ಕೌಚ್.
ಇದು ಇಂದು ನೆನ್ನೆಯ ಸಮಸ್ಯೆ ಅಲ್ಲ, ಕಳೆದ ಹಲವು ವರ್ಷಗಳಿಂದ ನಟಿಮಣಿಯರ ಪಾಲಿಗೆ ಇದೊಂದು ಕಂಠಕ ಆಗಿದೆ ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲದೆ ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಇದೇ ಹಣ ಬರಹ. ಇದನ್ನು ಎದುರಿಸಿದ ನಟಿಮಣಿಯರು ನಿಧಾನವಾಗಿ ಇದರ ಬಗ್ಗೆ ಈಗ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಅದಕ್ಕೆ ಮೀಟು ಒಂದು ವೇದಿಕೆ ಆಗಿದೆ ಎಂದೂ ಹೇಳಬಹುದು. ಇದೇ ವಿಷಯದ ಬಗ್ಗೆ ಮಾತನಾಡಲು ಧೈರ್ಯ ಮಾಡಿರುವ ಆಮನಿ ಅವರು ತಾವು ಸಹ ಈ ಸಮಸ್ಯೆ ಎದುರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ.
ನನಗೆ ನಟಿ ಆಗಬೇಕು ಎನ್ನುವ ಆಸೆ ಬಹಳ ಇತ್ತು, ಹಾಗಾಗಿ ನನ್ನ ತಂದೆ ಬೇಡ ಎಂದರು ನಾನು ನಟಿ ಆಗುತ್ತೇನೆ ಎಂದು ಹಠ ಮಾಡಿದೆ ಆರಂಭದಲ್ಲಿ ಹಲವು ಕಂಪನಿಗಳಿಗೆ ಹೋಗಿ ಆಡಿಶನ್ ಕೊಡುತ್ತಿದ್ದೆ ಕೆಲವರು ಓಕೆ ಅನ್ನುತ್ತಿದ್ದರು ಕೆಲವರು ರಿಜೆಕ್ಟ್ ಮಾಡುತ್ತಿದ್ದರು ಈ ಎಲ್ಲಾ ಆಡಿಶನ್ ಗು ನಾನು ನನ್ನ ತಾಯಿಯ ಜೊತೆ ಹೋಗುತ್ತಿದ್ದೆ. ಕೆಲವರು ಅಮ್ಮನ ಜೊತೆ ಬಂದರೆ ಕೆಲಸ ಆಗುವುದಿಲ್ಲ ಎಂದು ನೇರವಾಗಿ ಹೇಳಿ ಬಿಡುತ್ತಿದ್ದರು.
ಮತ್ತೆ ಕೆಲವರು ಹೇಳುತ್ತೇವೆ ಎಂದು ಹೇಳಿ ಕಳುಹಿಸುತ್ತಿದ್ದರು, ನಂತರ ಮನೆಗೆ ಕರೆ ಮಾಡಿ ಮೇಕಪ್ ಟೆಸ್ಟ್ ಇದೆ ನಿರ್ದೇಶಕರು ಬರಲು ಹೇಳುತ್ತಿದ್ದಾರೆ ಇಂತಹ ರೆಸಾರ್ಟ್ ಗೆ ಬಂದುಬಿಡಿ ಎಂದು ಅಡ್ರೆಸ್ ಕೊಡುತ್ತಿದ್ದರು. ಅಮ್ಮನ ಜೊತೆ ಬರಬೇಡಿ ನೀವು ಒಬ್ಬರೇ ಬನ್ನಿ ಎಂದು ಹೇಳುತ್ತಿದ್ದರು ಅವರಿಗೆ ಹೇಳಿದ ತಕ್ಷಣವೇ ನನ್ನ ಅಮ್ಮ ಆ ರೀತಿ ಸಾಧ್ಯವಿಲ್ಲ ಇಬ್ಬರು ಒಟ್ಟಿಗೆ ಬರುತ್ತೇವೆ ಎಂದರೆ ಬೇಡ ಎಂದು ರಿಜೆಕ್ಟ್ ಮಾಡುತ್ತಿದ್ದರು. ಆಗ ಅದೆಲ್ಲ ಯಾಕೆ ಎಂದು ಅರ್ಥ ಆಗಲಿಲ್ಲ, ನಿಧಾನವಾಗಿ ಎಲ್ಲವೂ ಅರ್ಥವಾಗಲು ಶುರು ಆಯ್ತು ಆಮೇಲೆ ತಂದೆ ಯಾಕೆ ಇಂಡಸ್ಟ್ರಿ ಬೇಡ ಎನ್ನುತ್ತಿದ್ದರು ಅದು ಅರ್ಥ ಆಯಿತು.
ಅಡ್ಡ ದಾರಿಯಲ್ಲಿ ಹೀರೋಯಿನ್ ಆಗುವುದು ನನಗೆ ಇಷ್ಟ ಇರಲಿಲ್ಲ, ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ದೆ ಯಾವುದಾದರೂ ಒಂದು ಕೆಲಸ ಮಾಡಿದರೂ ಆಗುತ್ತಿತ್ತು. ಇದರಿಂದ ನಾನು ಇಂಡಸ್ಟ್ರಿಗೆ ಬರಲು ಎರಡು ವರ್ಷಗಳ ಕಾಲ ಸೈಕಲ್ ಹೊಡೆಯಬೇಕಾಯಿತು ಎಂದು ಆ ದಿನಗಳ ಬಗ್ಗೆ ವಿವರಿಸಿದ್ದಾರೆ. ಕನ್ನಡದಲ್ಲಿ ಇವರು ಅಪ್ಪಾಜಿ ಮತ್ತು ಬಾಳಿನ ಜ್ಯೋತಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಸೌಂದರ್ಯ ಅವರಿಗೆ ಬಹಳ ಆತ್ಮೀಯ ಗೆಳತಿಯಾಗಿದ್ದ ಇವರು ತೆಲುಗು ಮತ್ತು ತಮಿಳಿನ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.