ಸಿನಿ ಬದುಕು ಎಂಬುವುದು ಒಂದು ಬಣ್ಣದ ಬದುಕು ಅಂತಾನೇ ಹೇಳಬಹುದು ಈ ಒಂದು ಚಿತ್ರರಂಗಕ್ಕೆ ಕಾಲಿಡುವುದು ಸುಲಭವಾದ ಮಾತಲ್ಲ ಇನ್ನು ಕೆಲವರು ಅದೃಷ್ಟದಿಂದಲೋ ಅಥವಾ ಕೆಲವರ ಇನ್ಫ್ಲುಯೆನ್ಸ್ ಇಂದರೋ ಕಾಲಿಡುತ್ತಾರೆ. ಆದರೆ ಕಾಲಿಟ್ಟವರು ಸದಾ ಕಾಲ ಅಲ್ಲೇ ಉಳಿಯುವುದಕ್ಕೆ ಸಾಧ್ಯವಿಲ್ಲ ಸ್ವಂತ ಪರಿಶ್ರಮ ಯಶಸ್ಸು ಮತ್ತು ಅಭಿಮಾನಿಗಳನ್ನು ಪಡೆದಿರುವಂತವರು ಮಾತ್ರ ಕೊನೆಯವರೆಗೂ ಕೂಡ ಸಿನಿಮಾ ರಂಗದಲ್ಲಿ ಉಳಿಯುವುದಕ್ಕೆ ಸಾಧ್ಯ. ಇನ್ನೂ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಎಲ್ಲರಿಗೂ ಕೂಡ ಒಂದೇ ರೀತಿಯಾದಂತಹ ಗೌರವ ಸ್ಥಾನ ಮಾನ ಎಂಬುದು ದೊರೆಯುವುದಿಲ್ಲ ಕೆಲವು ನಟರಿಗೆ ಗೌರವ ಸ್ಥಾನಮಾನ ದೊರೆತರೆ ಇನ್ನೂ ಕೆಲವು ನಟರಿಗೆ ಇದು ಯಾವುದು ಕೂಡ ದೊರೆಯುವುದಿಲ್ಲ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮಲ್ಲಿ ಸಾಕಷ್ಟು ರಸ್ತೆಗಳಿಗೆ ನಟರ ಹೆಸರನ್ನು ಸೂಚಿಸುವುದನ್ನು ನಾವು ನೋಡಬಹುದು ಇದಕ್ಕೆ ಮುಖ್ಯ ಕಾರಣ ಕೆಲವು ನಟರು ನಮ್ಮನ್ನು ಬಿಟ್ಟು ಶಾರೀರಿಕವಾಗಿ ದೂರ ಆಗಿರುತ್ತಾರೆ. ಅವರು ಮಾಡಿರುವಂತಹ ಸಾಧನೆ ಮತ್ತು ಅವರು ಚಿತ್ರರಂಗಕ್ಕೆ ನೀಡಿರುವಂತಹ ಕೊಡುಗೆಯನ್ನು ಸ್ಮರಣೆ ಮಾಡುವುದಕ್ಕಾಗಿ ಕೆಲವು ನಟರ ಹೆಸರನ್ನು ರಸ್ತೆಗಳಿಗೆ ಇಡುವುದನ್ನು ನಾವು ಕಾಣಬಹುದಾಗಿದೆ. ಈಗಾಗಲೇ ಹಲವಾರು ರಸ್ತೆಗಳಿಗೆ ಡಾಕ್ಟರ್ ರಾಜಕುಮಾರ್ ಡಾಕ್ಟರ್, ವಿಷ್ಣುವರ್ಧನ್ ರಸ್ತೆ ಡಾಕ್ಟರ್, ಪುನೀತ್ ರಾಜಕುಮಾರ್ ರಸ್ತೆ ತೂಗುದೀಪ ಶ್ರೀನಿವಾಸ ರಸ್ತೆ , ಶಂಕರ್ ನಾಗ್ ರಸ್ತೆ ಹೀಗೆ ಹಲವಾರು ನಾಯಕ ನಟರ ಹೆಸರನ್ನು ರಸ್ತೆಗೆ ಸೂಚಿಸಲಾಗಿದೆ. ಹಾಗಾಗಿ ಈ ಎಲ್ಲಾ ನಾಯಕ ನಟರ ಪೈಕಿ ಅತಿ ಹೆಚ್ಚು ಉದ್ದದ ರಸ್ತೆಯನ್ನು ಹೊಂದಿರುವಂತಹ ಏಕೈಕ ನಟ ಯಾರು ಎಂಬುದನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ.
ಮೊದಲನೆಯದಾಗಿ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಉದ್ದದ ರಸ್ತೆ ಇದೆ ಈ ಮೈಸೂರು ರಸ್ತೆ ನಾಯಂಡಳ್ಳಿ ಜಂಕ್ಷನ್ ನಿಂದ ಹಿಡಿದು ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಎಂದು ಹೆಸರು ಇಡಲಾಗಿದೆ. ಇನ್ನು 12 ಕಿಲೋಮೀಟರ್ ಇರುವ ರಸ್ತೆ ಇದಾಗಿದ್ದು ನಿಜಕ್ಕೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಅದೇ ರೀತಿ ಇದು ಕನ್ನಡ ನಟನ ಹೆಸರಿನಲ್ಲಿರುವ ಉದ್ದದ ರಸ್ತೆ ಇದಾಗಿದೆ. ಎರಡನೆಯದಾಗಿ ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಹೆಸರನ್ನು ಸಾಕಷ್ಟು ರಸ್ತೆಗಳಿಗೆ ಇಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸಾಕಷ್ಟು ರಸ್ತೆಗಳು ರಾಜಕುಮಾರ್ ಅವರ ಹೆಸರಿನಲ್ಲಿದೆ, ಅದರಲ್ಲಿ ಬಹಳ ಮುಖ್ಯವಾಗಿ ರಾಜಾಜಿನಗರದ ಡಾಕ್ಟರ್ ರಾಜಕುಮಾರ್ ಜನಪ್ರಿಯವಾಗಿದೆ ಅದರ ಜೊತೆಗೆ ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲೂ ಕೂಡ ಹಲವಾರು ರಸ್ತೆಗಳಿವೆ.
ಅವರ ಹೆಸರನ್ನು ಕೂಡ ಅನೇಕ ರಸ್ತೆಗಳಿಗೆ ಇಡಲಾಗಿದೆ. ಅದಲ್ಲದೆ, ಸಿನಿಮಾರಂಗಕ್ಕೆ ಅವರು ನೀಡಿದ ಕೊಡುಗೆ ನೀಡಿದ್ದಾರೆ ಪಾರ್ವತಮ್ಮ ರಾಜ್ ಕುಮಾರ್ ಹೀಗಾಗಿ ದೊಡ್ಮನೆ ಕುಟುಂಬದ ಸೊಸೆಯ ಹೆಸರನ್ನು ರಸ್ತೆಗಳಿಗೆ ಇಡಲಾಗಿರುವುದು ವಿಶೇಷ. ಇನ್ನು ಡಾಕ್ಟರ್ ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ದೊಡ್ಡ ದಾಖಲೆಯ ರಸ್ತೆಯಾಗಿದೆ. ಅಂದಹಾಗೆ, ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ಬಹಳ ಉದ್ದದ ರಸ್ತೆ ಆಗಿದೆ. ಆ ರಸ್ತೆಯೂ 14.5 ಕಿಲೋಮೀಟರ್ ಉದ್ದ ಇರುವ ಬನಶಂಕರಿಯಿಂದ ಹಿಡಿದು ಕೆಂಗೇರಿವರೆಗೂ ಇರುವ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಇದು ಕನ್ನಡ ನಟನಾ ಹೆಸರಿನಲ್ಲಿರುವ ಅತಿ ಉದ್ದದ ರಸ್ತೆ ಎಂದು ಖ್ಯಾತಿ ಗಳಿಸಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಕ್ಟರ್ ವಿಷ್ಣುವರ್ಧನ್ ಅವರು ತುಂಬಾ ಸರಳ ವ್ಯಕ್ತಿ ಅಷ್ಟೇ ಅಲ್ಲದೆ ಮೃದು ಸ್ವಭಾವದವರು ಸಹಜ ವ್ಯಕ್ತಿತ್ವವನ್ನು ಹೊಂದಿರುವವರು ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.