ಕಟಕ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಆದರೆ ನಿಮಗೆ ಬಹಳ ಧೈರ್ಯ ಇದೆ ಆದದ್ದು ಆಗಲಿ ಬಂದದ್ದು ಬರಲಿ ಎನ್ನುವ ರೀತಿ ಬಹಳ ಮೊಂಡುತನದಿಂದ ಸಿಡಿದೆದ್ದು ಬದುಕುತ್ತೀರಿ. ಸದ್ಯಕ್ಕೆ ತೃತೀಯ ಭಾವದಲ್ಲಿ ಕೇತು ಇದ್ದಾರೆ ಇದನ್ನು ವಿಕ್ರಮ ಸ್ಥಾನ ಎಂದು ಕೂಡ ಕರೆಯುತ್ತಾರೆ. ಇವರು ನಿಮ್ಮನ್ನು ಹೆಚ್ಚು ಅಲೆದಾಡುವಂತೆ ಹೋರಾಡುವಂತೆ ಕ’ಷ್ಟ ಪಡುವಂತೆ ಮಾಡಿ ನಿಮ್ಮನ್ನು ಚುರುಕುಗೊಳಿಸುತ್ತಾರೆ ಎಂದು ನೇರವಾಗಿ ಹೇಳಬಹುದು.
ಹಾಗೆಯೇ ಸಪ್ತಮದಲ್ಲಿ ಕುಜ ಗ್ರಹ ಇದೆ ಇದು ಕೂಡ ಅಷ್ಟೇನೂ ಉತ್ತಮವಾದ ಪರಿಣಾಮ ಬೀರುತ್ತಿಲ್ಲ. ಕೆಲಸದ ಸ್ಥಳದಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು, ಗೊಂದಲಗಳು ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ಈ ಏಪ್ರಿಲ್ ತಿಂಗಳು ಪೂರ್ತಿ ಇಂತಹ ಹಲವು ಸಂದರ್ಭಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿಮಗೆ ಬರುತ್ತದೆ.
ಏಪ್ರಿಲ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ಇರಲಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಹಾಗೆ ಹಾಗೂ ಹೊಟ್ಟೆ ಭಾಗಕ್ಕೆ ಸಂಬಂಧಿಸಿದ ಹಾಗೆ ಹಲವಾರು ಬಗ್ಗೆ ತೊಂದರೆಗಳು ನಿಮ್ಮನ್ನು ಕಾಡುತ್ತವೆ. ದೈಹಿಕ ಆರೋಗ್ಯ ಮಾತ್ರ ಅಲ್ಲದೆ ಮಾನಸಿಕ ಆರೋಗ್ಯದ ಬಗ್ಗೆಯೂ ಕೂಡ ಎಚ್ಚರದಿಂದ ಇರಲೇ ಬೇಕು.
ಈ ಸುದ್ದಿ ಓದಿ:- ಯುಗಾದಿ 2024 ರಾಶಿ ಭವಿಷ್ಯ, ಮೇಷ ರಾಶಿ 2024 ಈ ತಿಂಗಳಲ್ಲಿ ಊಹಿಸಿರಲಾರದಷ್ಟು ಹಣ ಬರುತ್ತದೆ, ಆದರೆ 2024ರಲ್ಲಿ ಈ ದು’ರ್ಘ’ಟ’ನೆ ನಡೆಯಬಹುದು ಎಚ್ಚರ.!
ಅಷ್ಟಮದಲ್ಲಿ ಈ ತಿಂಗಳಿನಲ್ಲಿ ಶನಿ ಜೊತೆ ರವಿಯು ಕೂಡ ಕೂಡುವುದರಿಂದ ನಿಮ್ಮ ಬದುಕಿನ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದೇ ಹೇಳಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯಾವುದೇ ಮಾತು ಕೊಡುವ ಮುನ್ನ ಸರಿ ತಪ್ಪು ಅರಿತು ಎರಡೆರಡು ಬಾರಿ ಯೋಚಿಸಿ ನಿಮ್ಮ ಹತ್ತಿರದವರ ಆತ್ಮೀಯರ ಹಿರಿಯರ ಮಾರ್ಗದರ್ಶನ ಪಡೆದು ಮುಂದುವರಿಯುವುದು ಉತ್ತಮ.
ಈ ತಿಂಗಳಿನಲ್ಲಿ ಒಟ್ಟಾರೆಯಾಗಿ ಎಲ್ಲ ವಿಷಯದಲ್ಲೂ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡುವುದು ಒಳ್ಳೆಯದು ಎನ್ನುವ ಸಲಹೆಯನ್ನು ಕೊಡಬಹುದು. ಅಷ್ಟಮ ಸ್ಥಾನಕ್ಕೆ ರವಿ ಶನಿ ಜೊತೆ ಮುಂದೆ ಬುಧ ಶುಕ್ರ ಕೂಡ ಕೂಡಿಕೊಳ್ಳುತ್ತಾರೆ ಇದು ಕೂಡ ಕಳತ್ರ ಸ್ಥಾನದಲ್ಲಿ ಭಾರ ಹೆಚ್ಚಾಗುವಂತೆ ಮಾಡಿ ವೈಪರೀತ್ಯ ಉಂಟು ಮಾಡುತ್ತದೆ, ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.
ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
ಕೆಲ ದಿನಗಳು ಕಳೆದು ಕುಜ ಕೂಡ ಇದರ ಜೊತೆ ಸೇರಿ ಇಷ್ಟೆಲ್ಲಾ ಗ್ರಹಗಳು ಒಂದೇ ಭಾವದಲ್ಲಿ ಒಟ್ಟಿಗೆ ಆಗುವುದರಿಂದ ಅದರಲ್ಲೂ ಪಾಪ ಗ್ರಹಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತು ಧನ ಸ್ಥಾನ ಆಗದೆ ಇರುವುದರಿಂದ ಇದು ಯಾವ ರೀತಿ ಫಲ ನೀಡುತ್ತದೆ ಎನ್ನುವುದನ್ನು ಬಹುಶಃ ಈಗಾಗಲೇ ನೀವು ಅರ್ಥ ಮಾಡಿಕೊಂಡಿರುತ್ತೀರಿ.
ಇವುಗಳ ನೀಡುವ ಸಮಸ್ಯೆಗಳು ಕಾರಣವೋ ನಿಮ್ಮ ಉದ್ಯೋಗ ಅಥವಾ ವ್ಯವಹಾರದ ಮೇಲೆ ಪರಿಣಾಮ ಬೀರಿದರೆ ಅದರ ಮೂಲಕ ಆರ್ಥಿಕ ನಷ್ಟ ಕೂಡ ಅನುಭವಿಸಬೇಕಾಗುತ್ತದೆ ಒಂದು ವೇಳೆ ನೀವು ಇದನ್ನೆಲ್ಲ ಮೆಟ್ಟಿ ಧೈರ್ಯವಾಗಿ ನಿಂತು ಈ ಸಮಯವನ್ನು ಎದುರಿಸಿದ್ದೆ ಆದಲ್ಲಿ ಹಣಕಾಸಿನಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸ ಬರಲಾರದು.
ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!
ಆದಷ್ಟು ಪೂರ್ತಿ ಈ ತಿಂಗಳು ಕೆಟ್ಟ ಸಮಯ ಎಂದುಕೊಂಡು ತಾಳ್ಮೆಯಿಂದ ಜಾಣ್ಮೆಯಿಂದ ಏಪ್ರಿಲ್ ತಿಂಗಳನ್ನು ಕಳೆಯಿರಿ. ಮುಂದಿನ ತಿಂಗಳಿನಿಂದ ನಿಮ್ಮ ಅದೃಷ್ಟ ಬೇರೆ ರೀತಿಯಾಗಿ ಬದಲಾಗಿ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಮಾರ್ಗಗಳು ಭಗವಂತನ ಕೃಪೆಯಿಂದ ದೊರೆಯುತ್ತದೆ.
ಅಲ್ಲಿಯವರೆಗೂ ಶಾಂತ ಚಿತ್ತರಾಗಿ ಆರೋಗ್ಯದ ಬಗ್ಗೆ ಗಮನಕೊಟ್ಟುಕೊಂಡು ಆದಷ್ಟು ಸಂಬಂಧಗಳ ಬಗ್ಗೆ ಜಾಗ್ರತೆಯಿಂದ ಇರಿ. ಕೆಲವೇ ದಿನಗಳಲ್ಲಿ ಎಲ್ಲವೂ ಶುಭವಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಕಟಕ ರಾಶಿಯವರು ಪ್ರತಿ ಶನಿವಾರ ಕೂಡ ಶನೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಿ ಮತ್ತು ನವಗ್ರಹಗಳ ಆರಾಧನೆ ಮಾಡಿ ನವಗ್ರಹ ಮಂತ್ರಗಳನ್ನು, ಶನಿ ಸ್ತೋತ್ರ ಹಾಗೂ ಅಷ್ಟೋತ್ತರಗಳನ್ನು ಪಠಿಸಿ.