ನಮ್ಮ ಮನೆಯಲ್ಲಿ ಹಲವಾರು ರೀತಿಯ ವಸ್ತುಗಳು ಇರುತ್ತವೆ. ಕೆಲವು ಅಲಂಕಾರಿಕ ವಸ್ತುಗಳಾದರೆ, ಕೆಲವನ್ನು ನಾವು ವಾಸ್ತು ಸಂಬಂಧಿತ ವಸ್ತುಗಳಾಗಿ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಇನ್ನು ಕೆಲವು ವಸ್ತುಗಳು ದೈವಾಂಶ ಸಂಭೂತ ವಸ್ತುವಾಗಿರುವುದರಿಂದ ನಮ್ಮ ಮನೆಯಲ್ಲಿ ಸ್ಥಾನ ಪಡೆದುಕೊಂಡಿರುತ್ತದೆ.
ಈ ರೀತಿ ನಮ್ಮ ಅಗತ್ಯ ವಸ್ತುಗಳು ಜೊತೆ ಇನ್ನಷ್ಟು ವಸ್ತುಗಳಿಗೆ ನಮ್ಮ ಮನೆಯಲ್ಲಿ ಜಾಗ ಕೊಟ್ಟಿರುವುದಕ್ಕೂ ಸಾಕಷ್ಟು ಕಾರಣಗಳು ಇವೆ. ಈ ರೀತಿ ವಸ್ತುಗಳಲ್ಲಿ ಎಲ್ಲರ ಮನೆಯಲ್ಲೂ ಕೂಡ ಇರುವ ಒಂದು ವಿಶೇಷ ವಸ್ತು ಬಗ್ಗೆ ತಿಳಿಸುತ್ತಿದ್ದೇವೆ. ಏಳು ಕುದುರೆಗಳು ಓಡುತ್ತಿರುವ ಚಿತ್ರ, ನವಿಲುಗರಿ, ಶಂಖ ಇಂತಹ ವಸ್ತುಗಳು ಎಲ್ಲರ ಮನೆಯಲ್ಲೂ ಕೂಡ ಇರುತ್ತವೆ.
ಅವುಗಳಲ್ಲಿ ನವಿಲು ಗರಿಯನ್ನುಯಾವ ಕಾರಣಕ್ಕಾಗಿ ಈ ರೀತಿ ಮನೆಗಳಲ್ಲಿ ಇಡುತ್ತಾರೆ ನವಿಲು ಗರಿಯನ್ನು ಹೇಗೆ ಇಟ್ಟರೆ ಏನು ಫಲ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನವಿಲುಗರಿ ಎಂದ ತಕ್ಷಣ ನಮಗೆ ನೆನಪಾಗುವುದು ವಾಸುದೇವ ಕೃಷ್ಣ, ರಾಧೆ ಹಾಗೂ ಕೃಷ್ಣರ ಪ್ರೀತಿ ಶ್ರೀ ಕೃಷ್ಣರಿಗೆ ಮಾತ್ರವಲ್ಲದೆ ಭಗವಾನ್ ಶ್ರೀ ವಿಷ್ಣು, ಶ್ರೀ ಗಣೇಶ ಇವರೆಲ್ಲರೂ ಕೂಡ ನವಿಲುಗರಿಯನ್ನು ಧರಿಸಿದ್ದಾರೆ.
ಈ ಸುದ್ದಿ ಓದಿ:- ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!
ತಾಯಿ ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿಗೂ ಕೂಡ ನವಿಲುಗರಿ ಎಂದರೆ ಬಹಳ ಇಷ್ಟ. ನವಿಲುಗರಿಯನ್ನು ಜ್ಞಾನದ ಸಂಕೇತ, ಪವಿತ್ರತೆಯ ಸಂಕೇತ, ಪ್ರೀತಿಯ ಸಂಕೇತ, ಸಕಾರಾತ್ಮಕತೆಯ ಸಂಕೇತ ಎಂದು ನಂಬುತ್ತೇವೆ. ನವಿಲು ಗರಿಯು ದೈವಿಕ ಕಳೆಯನ್ನು ಹೊಂದಿದ್ದು ಅನೇಕ ವಾಸ್ತುದೋಷಗಳನ್ನು ಕೂಡ ಪರಿಹಾರ ಮಾಡುತ್ತದೆ ಮತ್ತು ಅಲಂಕಾರಿಕ ವಸ್ತುವಾಗಿ ಕೂಡ ಮನೆಯ ಅಂಧವನ್ನು ಹೆಚ್ಚಿಸುತ್ತದೆ. ನವಿಲುಗರಿಯನ್ನು ಈ ರೀತಿ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಸಿಗುವ ಇನ್ನಷ್ಟು ಲಾಭದ ವಿವರ ಹೀಗಿದೆ ನೋಡಿ.
* ನವಿಲುಗರಿಯನ್ನು ಬಾಗಿಲ ಬಳಿ ಅಥವಾ ಮುಖ್ಯ ದ್ವಾರಕ್ಕೆ ನೇರವಾದ ಗೋಡೆಯಲ್ಲಿ ಇಟ್ಟು ಮನೆಗೆ ಬರುವವರಿಗೆ ಕಾಣುವಂತೆ ಇಟ್ಟರೆ ಯಾವುದೇ ನಕರಾತ್ಮಕ ಶಕ್ತಿಯು ಮನೆ ಬಳಿಗೆ ಸುಳಿಯುವುದಿಲ್ಲ ಮತ್ತು ದೃಷ್ಟಿ ದೋಷಗಳು ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ
* ಮನೆಯಲ್ಲಿ ಕುಟುಂಬದ ಸದಸ್ಯರ ನಡುವೆ ಮನಸ್ತಾಪ ವಿನಾಕಾರಣ ಕೋ’ಪ, ಜ’ಗ’ಳ ಮನೆಯ ವಾತಾವರಣ ಚೆನ್ನಾಗಿಲ್ಲ ಇಂತಹ ಸಮಸ್ಯೆಗಳು ಆಗುತ್ತಿದ್ದರೆ ಲಿವಿಂಗ್ ರೂಮ್ ನಲ್ಲಿ ನವಿಲು ಗರಿ ಇಡಬೇಕು.
ಈ ಸುದ್ದಿ ಓದಿ:- ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!
* ದಂಪತಿಗಳ ನಡುವೆ ಹೊಂದಾಣಿಕೆ ಸಮಸ್ಯೆ ಇದ್ದರೆ ಮಲಗುವ ಕೋಣೆಯಲ್ಲಿ ಗೋಡೆಗೆ ಅಥವಾ ದಿಂಬುಗಳ ಕೆಳಗೆ ಜೋಡಿ ನವಿಲು ಗರಿಯನ್ನು ಇಡಬೇಕು
* ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇಲ್ಲ ಏಕಾಗ್ರತೆ ಇಲ್ಲ ಎನ್ನುವುದಾದರೆ ಮಕ್ಕಳು ಓದುವ ಕೋಣೆಯಲ್ಲಿ ನವಿಲು ಗರಿ ತೂಗು ಹಾಕಬೇಕು ಮತ್ತು ಮಕ್ಕಳ ಪುಸ್ತಕದಲ್ಲಿ ಕೂಡ ನವಿಲುಗರಿ ಇಡಬೇಕು
* ರಾಹು ಕೇತು ದೋಷ ಕಾಳ ಸರ್ಪ ದೋಷ ಇವುಗಳ ನಿವಾರಣೆಗೂ ಕೂಡ ನವಿಲುಗರಿಯನ್ನು ಮನೆಯಲ್ಲಿ ಇಡಲು ಹೇಳುತ್ತಾರೆ
* ನಿಮ್ಮ ಶತ್ರುಗಳನ್ನು ಮಿತ್ರನಾಗಿ ಮಾಡಿಕೊಳ್ಳಲು ಬಯಸಿದರೆ ಶನಿವಾರದಂದು ದೇವರ ಪೂಜೆ ಮಾಡಿ ಸಿಂಧೂರದಿಂದ ನವಿಲುಗರಿಯಲ್ಲಿ ಅವರ ಹೆಸರು ಬರೆದು ಯಾರಿಗೂ ಕಾಣದ ರೀತಿ ಹಾಗೆ ಹರಿವ ನೀರಿನಲ್ಲಿ ಬಿಟ್ಟು ಬರಬೇಕು ಹೀಗೆ ಮಾಡುವುದರಿಂದ ಶತ್ರುಗಳು ಮಿತ್ರರಾಗುತ್ತಾರೆ
* ಮಾನಸಿಕ ಖಿನ್ನತೆಗೆ ಒಳಗಾಗಿರುವವರು ಅಥವಾ ಜೀವನದಲ್ಲಿ ಬಹಳ ಬೇಸರದಿಂದ ನೊಂದುಕೊಂಡಿರುವವರು ಇದರಿಂದ ಹೊರಬರಬೇಕು ಎಂದು ಬಯಸಿದರೆ ನವಿಲು ಗರಿಯನ್ನು ನೋಡಬೇಕು, ನವಿಲು ಗರಿಯ ಸ್ಪರ್ಶ ಮಾಡಬೇಕು.
* ದೇವರ ಕೋಣೆಯಲ್ಲಿ ಕೂಡ ಜೋಡಿ ನವಿಲುಗರಿ ಇಟ್ಟು ಪೂಜೆ ಮಾಡುವುದರಿಂದ ಎಲ್ಲ ದೇವತೆಗಳ ಆಶೀರ್ವಾದವು ದೊರೆಯುತ್ತದೆ
* ಮನೆಯಲ್ಲಿ ಹಣಕಾಸು ಇರುವ ಜಾಗದಲ್ಲಿ ಜೋಡಿ ನವಿಲುಗರಿ ಇಟ್ಟು ಪೂಜೆ ಮಾಡಿದರೆ ಲಕ್ಷ್ಮಿ ನಾರಾಯಣನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ.