ಕಿಚ್ಚ ಸುದೀಪ್ ಅವರು ಅಭಿನಯ ಚಕ್ರವರ್ತಿ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಪಡೆದಿರುವ ಇವರು ತಮ್ಮ ಅಭಿನಯದ ಚಾತುರ್ಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಸುದೀಪ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು ಇದಕ್ಕೆ ಕಾರಣ ಸುದೀಪ್ ಅವರು ತಮಿಳು ತೆಲುಗು ಹಾಗು ಹಿಂದಿ ಭಾಷೆಯಲ್ಲೂ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಇದರಿಂದ ಸುದೀಪ್ ಅವರು ಭಾರತದ ಬಹುತೇಕ ಜನರಿಗೆ ಪರಿಚಿತರು. ಸುದೀಪ್ ಅವರು ಸ್ನೇಹಜೀವಿ ಸಿನಿಮಾ ಇಂಡಸ್ಟ್ರಿಯ ಸ್ನೇಹಿತರಿಗೆ ಆಗಲಿ ಹೊರಗಡೆ ಸ್ನೇಹಿತರ ಜೊತೆ ಆಗಲಿ ಬಹಳ ಆತ್ಮೀಯತೆಯಿಂದ ಬೆರೆತುಕೊಳ್ಳುತ್ತಾರೆ ಹಾಗೂ ಒಮ್ಮೆ ಸ್ನೇಹಿತರು ಎಂದು ಗುಂಪು ಸೇರಿದ ಮೇಲೆ ಕಡೆತನಕ ಅವರ ಜೊತೆಗೆ ನಿಲ್ಲುತ್ತಾರೆ. ಇವರ ಈ ವ್ಯಕ್ತಿತ್ವ ದಿಂದ ಭಾರತದ ಹಲವು ಸೆಲೆಬ್ರಿಟಿಗಳು ಸುದೀಪ್ ಅವರಿಗೆ ಆಪ್ತರಾಗಿದ್ದಾರೆ.
ಸುದೀಪ್ ಅವರಿಗೆ ಸಿನಿಮಾದ ಬಗ್ಗೆ ಎಷ್ಟು ಆಸಕ್ತಿ ಇದೆಯೋ ಕ್ರಿಕೆಟ್ ಬಗ್ಗೆ ಕೂಡ ಅಷ್ಟೇ ಆಸಕ್ತಿ ಇದೆ. ಅವರ ಕೆಲವು ಇಂಟರ್ವ್ಯೂಗಳಲ್ಲಿ ಹೇಳಿಕೊಂಡ ಪ್ರಕಾರ ಒಂದು ಪಕ್ಷ ಅವರು ಸಿನಿಮಾ ಹೀರೋ ಆಗದೆ ಇದ್ದರೆ ಖಂಡಿತ ಒಬ್ಬ ಕ್ರಿಕೆಟ್ ಆಗಿರುತ್ತಿದ್ದರಂತೆ. ಅಲ್ಲದೆ ಕರ್ನಾಟಕದ ಸಿಸಿಎಲ್ ತಂಡದ ಕ್ಯಾಪ್ಟನ್ ಕೂಡ ಆಗಿರುವ ಸುದೀಪ್ ಅವರು ಬಹಳ ಒಳ್ಳೆಯ ಕ್ರಿಕೆಟರ್ ಆಗಿದ್ದಾರೆ. ಸುದೀಪ್ ಅವರು ಬಹುಮುಖ ಪ್ರತಿಭೆ ಎಂದು ಹೇಳಬಹುದು ಯಾಕೆಂದರೆ ಇವರು ಸಿನಿಮಾದಲ್ಲಿ ಎಂತಹ ಪಾತ್ರ ಕೊಟ್ಟರು ಆಶ್ಚರ್ಯ ಪಡುವ ಹಾಗೆ ಅಭಿನಯ ಮಾಡುತ್ತಾರೆ.
ಇದಕ್ಕೆ ಸಾಕ್ಷಿ ಅವರ ಸ್ವಾತಿಮುತ್ತು ಸಿನಿಮಾ ಹಾಗೂ ಹುಚ್ಚ ಸಿನಿಮಾ ಎಂದು ಹೇಳಬಹುದು. ಇತ್ತೀಚೆಗೆ ಬೇರೆ ಭಾಷೆ ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇವರು ಅಲ್ಲೂ ಕೂಡ ಭೇಷ್ ಎನಿಸಿಕೊಂಡು ಬಂದಿದ್ದಾರೆ. ತೆಲುಗಿನ ರಾಜ ಮೌಳಿ ಅವರ ನಿರ್ದೇಶನದ ಈಗ ಸಿನಿಮಾ ಸುದೀಪ್ ಅವರ ಟ್ಯಾಲೆಂಟ್ ಗೆ ಹಿಡಿದ ಕೈಗನ್ನಡಿ. ಬಹುಶಃ ಅಂತಹ ಒಂದು ಪಾತ್ರವನ್ನು ಸುದೀಪ್ ಅವರು ಬಿಟ್ಟರೆ ಭಾರತದ ಯಾವೊಬ್ಬ ನಟನೂ ಕೂಡ ಅಷ್ಟು ಸುಂದರವಾಗಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ.
ಇನ್ನು ಅಭಿನಯ ಮಾತ್ರವಲ್ಲದೆ ಇವರು ಸಿನಿಮಾಗಳ ನಿರ್ದೇಶನ ಹಾಗೂ ನಿರ್ಮಾಣ ಮಾಡುವುದರಲ್ಲೂ ಕೂಡ ಆಸಕ್ತಿ ತೋರುತ್ತಿದ್ದಾರೆ. ಕಿರುತೆರೆ ಕೆಲವು ಧಾರಾವಾಹಿಗಳನ್ನು ಸುದೀಪ್ ಅವರು ನಿರ್ಮಾಣ ಮಾಡಿದ್ದಾರೆ. ವಾರಸ್ದಾರ ಎನ್ನುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯು ಸುದೀಪ್ ಅವರ ನಿರ್ಮಾಣವಾಗಿತ್ತು ಮತ್ತು ಮೈ ಆಟೋಗ್ರಾಫ್ ಎನ್ನುವ ಕನ್ನಡದ ಅದ್ಭುತ ಸಿನಿಮಾವನ್ನು ಸುದೀಪ್ ಅವರು ನಿರ್ದೇಶನ ಮಾಡಿದ್ದರು. ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವ ಸುದೀಪ್ ಅವರು ನಿರೂಪಣೆಯಲ್ಲಿ ತಮ್ಮನ್ನು ನಿರೂಪಿಸಿಕೊಂಡಿದ್ದಾರೆ.
ಇದೆಲ್ಲದ ಜೊತೆ ಅವರ ಮತ್ತೊಂದು ಫೇವರೆಟ್ ಹಾಬಿ ಅಡುಗೆ ಮಾಡುವುದು. ಸುದೀಪ್ ಅವರ ತಂದೆ ಹೋಟೆಲ್ ಬಿಸಿನೆಸ್ ಮಾಡುತ್ತಿದ್ದಾರೆ. ಹೀಗಾಗಿ ರಕ್ತದಿಂದಲೇ ಸುದೀಪ್ ಅವರಿಗೆ ಅಡುಗೆ ಕಲೆ ಬಂದಿದೆ ಎಂದು ಹೇಳಬಹುದು. ಈಗಾಗಲೇ ಬಿಗ್ ಬಾಸ್ನ ಕೆಲವು ಸೀಸನ್ ಗಳಲ್ಲಿ ಸುದೀಪ್ ಅವರು ಅಡುಗೆ ಮಾಡಿ ಮನೆ ಮಂದಿಗೆ ಕಳುಹಿಸಿ ಕೊಟ್ಟಿದ್ದಾರೆ. ಈಗ ಅವರ ಮನೆಯಲ್ಲಿ ಸುದೀಪ್ ಅಡುಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅಕ್ಕಂದಿರ ಜೊತೆ ಸೇರಿ ಸುದೀಪ್ ಅವರು ವಿಶೇಷ ರೆಸಿಪಿ ಮಾಡಿದ್ದಾರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಇದನ್ನು ನೋಡಿದ ನೆಟ್ಟಿಗರು ಸುದೀಪ್ ಅವರನ್ನು ಸಕಲಕಲಾವಲ್ಲಭ ಎನ್ನುತ್ತಿದ್ದಾರೆ.