ಪ್ರತಿದಿನ ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಗೃಹಿಣಿ ಯರಿಗೆ ಬೇಗ ಕೆಲಸ ಆದರೆ ರಿಲೀಫ್ ಎನಿಸುತ್ತದೆ. ಗೃಹಿಣಿಯರನ್ನು ಬಹುಮುಖ ಪ್ರತಿಭೆಗಳು ಎಂದೇ ಕರೆಯಬಹುದು. ಇಂದಿನ ಜೀವನದಲ್ಲಿ ಅಡುಗೆಮನೆ ಕೆಲಸ ಒಂದು ಸಾಹಸವೇ ಸರಿ ಮನೆಯಲ್ಲಿ ಮಕ್ಕಳಿದ್ದರೆ ಅವರನ್ನು ಸಂಭಾಳಿಸಿ ಅಡುಗೆ ಮನೆ ಕೆಲಸ ಮುಗಿಸುವಷ್ಟರಲ್ಲಿ ಹೆಣ್ಣು ಜೀವ ಪಡುವ ಪಾಡು ಹೇಳ ತೀರದು.
ಹೆಣ್ಣು ಎಷ್ಟೇ ಕಲಿತರೂ ಕೈಯಲ್ಲಿ ಸೌಟು ಹಿಡಿಯುವುದು ತಪ್ಪಲ್ಲ. ಒಂದಲ್ಲ ಒಂದು ಹಂತದಲ್ಲಿ ಅಡುಗೆಮನೆ ಆಕೆಯ ಸಾಮ್ರಾಜ್ಯವೇ. ಇಂದು ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ಇರುವವರೆ ಹೆಚ್ಚು ಕೆಲವು ಅಡುಗೆ ಟಿಪ್ಸ್ ಗಳಿಂದ ನಿಮ್ಮ ಸಮಯ ಹಾಗೂ ಶಕ್ತಿ ಎರಡು ಉಳಿಯಲಿದೆ.
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಏನಾದರೂ ಒಂದು ಕೆಲಸ ಮಾಡುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದು ಕಾಫಿ ಮಾಡುವುದರಿಂದ ಹಿಡಿದು ರಾತ್ರಿ ದಿಂಬಿಗೆ ಒರಗುವವರೆಗೂ ಆಕೆಗೆ ವಿಶ್ರಾಂತಿ ಇರುವುದಿಲ್ಲ. ಇಂದಿನ ಅವಸರದ ಜೀವನದಲ್ಲಿ ಎಲ್ಲವೂ ಗಡಿಬಿಡಿಯೇ. ಅದರಲ್ಲೂ ಕೆಲಸಕ್ಕೆ ತೆರಳುವ ಹೆಣ್ಣು ಮಕ್ಕಳ ಅಡುಗೆ ಮನೆಯ ಗಡಿಬಿಡಿ ಗಜಿ ಬಿಜಿಗೆ ಕೊನೆಯಿಲ್ಲ.
ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!
ಆದರೆ ಅಡುಗೆ ಮನೆಯಲ್ಲಿ ಗಡಿಬಿಡಿ ತಪ್ಪಿಸಿ ಸುಸೂತ್ರ ಅಡುಗೆ ಹಾಗೂ ಸಮಯ ನಿರ್ವಹಣೆ ನಿಮ್ಮದಾಗಬೇಕು ಎಂದರೆ ಈ ಟಿಪ್ಸ್ ಗಳನ್ನು ಪಾಲಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಗೃಹಿಣಿಯರು ಯಾವ ಯಾವ ಕೆಲವು ಅಡಿಗೆ ಮನೆ ಟಿಪ್ಸ್ ಅನುಸರಿಸ ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
* ತರಕಾರಿ ಕಟ್ ಮಾಡುವಾಗ ಚಾಕುವಿಗೆ ಅಂಟು ಹಿಡಿದರೆ ಗ್ಯಾಸ್ ಸ್ಟವ್ ಬೆಂಕಿಗೆ ಒಂದು ನಿಮಿಷ ಹಿಡಿದು ಒಣ ಬಟ್ಟೆಯಲ್ಲಿ ಒರೆಸಿದರೆ ಅಂಟು ಸಂಪೂರ್ಣವಾಗಿ ಹೋಗುತ್ತದೆ.
* ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಮುಚ್ಚಳ ವಾಷರ್ ಸರಿ ಕೂರದೆ ಗಾಳಿ ಲೀಕ್ ಆದರೆ ವಾಷರ್ ಅನ್ನು ಸದಾ ನೀರಿನಲ್ಲಿ ನೆನೆಸಿಡಿ ಇದರಿಂದ ರಬ್ಬರ್ ಗಟ್ಟಿ ಆಗದೆ ಸ್ಮೂತ್ ಆಗಿ ಇರುತ್ತದೆ.
* ಗ್ಯಾಸ್ ಸ್ಟವ್ ಅಥವಾ ಪಾತ್ರೆಗಳನ್ನು ತೊಳೆಯುವ ಐದು ನಿಮಿಷ ಮೊದಲು ನೀರಿನಲ್ಲಿ ನೆನೆಸಿಡಿ ಆನಂತರ ತೊಳೆಯಿರಿ.
* ಗ್ಯಾಸ್ ಸ್ಟವ್ ಮೇಲೆ ಕಪ್ಪಾಗಿ ಕೊಳೆ ಕೂತಿದ್ದರೆ ಸ್ವಲ್ಪ ಬೇಕಿಂಗ್ ಸೋಡಾ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕೊಳೆ ಇರುವ ಜಾಗಕ್ಕೆ 5 ನಿಮಿಷ ಹಚ್ಚಿ ನಂತರ ಸ್ವಚ್ಛವಾಗುತ್ತದೆ.
* ಕಾಫಿ ಅಥವಾ ಚಹಾ ಸೋಸುವ ಜಾಲರಿಯನ್ನು ಎರಡು ನಿಮಿಷ ಬಿಸಿ ನೀರಿನಲ್ಲಿ ಮುಳುಗಿಸಿ ಇಡುವುದರಿಂದ ಸಣ್ಣ ಸಣ್ಣ ರಂದ್ರಗಳಲ್ಲಿರುವ ಚಾ ಅಥವಾ ಕಾಫಿ ಹುಡಿ ಸ್ವಚ್ಛವಾಗುತ್ತದೆ.
ಈ ಸುದ್ದಿ ಓದಿ:- ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!
* ಪಾಯಸ ಮಾಡುವಾಗ ಹಾಲು ದಪ್ಪವಾಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಹಾಲಿನ ಪುಡಿಯನ್ನು ಬಳಸಬಹುದು.
* ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಗಟ್ಟಿಯಾಗುತ್ತದೆ. ಬದಲಾಗಿ ತಂಪಾದ ಶುಷ್ಕ ಸ್ಥಳದಲ್ಲಿ ಇಟ್ಟರೆ ಗಟ್ಟಿಯಾಗುವುದಿಲ್ಲ.
* ಹಾಟ್ ಬಾಕ್ಸ್ ಗಳಲ್ಲಿ ತಿಂಡಿ ಇಟ್ಟ ಬಳಿಕ ಅದನ್ನು ಬಟ್ಟೆಯಿಂದ ಮುಚ್ಚಿ ದರೆ ತೇವಾಂಶ ಉಂಟಾಗುವುದಿಲ್ಲ.
* ಟೊಮ್ಯಾಟೋ ಬಹಳ ದಿನಗಳವರೆಗೆ ಕೆಡದಂತೆ ಇಡಬೇಕಾದರೆ ಟೊಮೆಟೊ ಹಣ್ಣಿನ ಮೇಲ್ಭಾಗಕ್ಕೆ ಪ್ಲಾಸ್ಟರ್ ಹಾಕಿ ಇಡಬೇಕು.
* ಉಪ್ಪಿನ ಡಬ್ಬದಲ್ಲಿ ಎರಡು ಒಣ ಮೆಣಸಿನಕಾಯಿಯನ್ನು ಹಾಕಿಟ್ಟರೆ ಉಪ್ಪು ನೀರು ಬಿಡುವುದಿಲ್ಲ.
* ಬೆಳ್ಳುಳ್ಳಿಯನ್ನು ಹೆಚ್ಚಿದ ನಂತರ ಕೈ ಅದೇ ವಾಸನೆ ಬರುತ್ತಿದ್ದರೆ ಒಂದು ಪ್ಲೇಟ್ ಗೆ ಕೈಯನ್ನು ರಬ್ ಮಾಡಿದರೆ ಬೆಳ್ಳುಳ್ಳಿಯ ಹಸಿ ವಾಸನೆ ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.