ನಮ್ಮ ಶಾಸ್ತ್ರದಲ್ಲಿ ಕೆಲವೊಂದು ನಿಯಮಗಳನ್ನು ಹಿರಿಯರು ಮಾಡಿದ್ದಾರೆ ನಾವು ಅದಕ್ಕೆ ಎಷ್ಟು ನಿಷ್ಠೆಯಿಂದ ನಡೆದುಕೊಳ್ಳುತ್ತೇವೆ ಅಷ್ಟು ನಮ್ಮ ಕುಟುಂಬಕ್ಕೆ ಒಳ್ಳೆಯದು ಒಂದು ವೇಳೆ ನಾವು ಇವುಗಳನ್ನು ಮೀರಿದಾಗ ನಾವು ಮಾತಾಡಬೇಡ ನಮ್ಮ ಕುಟುಂಬದ ಸದಸ್ಯರು ಕೂಡ ಕಷ್ಟಗಳಿಗೆ ಸಿಲ್ಕುತ್ತಾರೆ.
ಹಾಗಾಗಿ ಹಿರಿಯರು ಕಟ್ಟುನಿಟ್ಟಾಗಿ ಹೇಳಿರುವ ಕೆಲ ಮಾತುಗಳನ್ನು ಪಾಲಿಸುವುದು ಬಹಳ ಒಳ್ಳೆಯದು ಅದೇ ರೀತಿ ಶಾಸ್ತ್ರದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಕ್ಕೆ ಬಹಳ ಪ್ರಶಸ್ತವಿದೆ ಈ ದಿನಗಳು ಭಗವಂತನ ಆರಾಧನೆಗೆ ಮೀಸಲಾಗಿವೆ. ಅದರಲ್ಲೂ ತಾಯಿ ಮಹಾಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮತ್ತು ಹಣಕಾಸಿನ ಒಳಿತಿಗಾಗಿ ಪ್ರಾರ್ಥಿಸಲು ಈ ದಿನಗಳು ಶುಭ ದಿನಗಳವಾಗಿವೆ.
ಇಂತಹ ದಿನಗಳಲ್ಲಿ ನಾವು ತಿಳಿದ ತಿಳಿಯದ ಮಾಡುವ ಕೆಲವು ತಪ್ಪುಗಳಿಂದ ಎಂಟು ವರ್ಷಗಳ ಕಾಲ ಕಷ್ಟಪಡಬೇಕಾಗುತ್ತದೆ. ಈ ದಿನಗಳಂದು ಯಾವುದೇ ಕಾರಣಕ್ಕೂ ಮನೆಯಿಂದ ಕೆಲ ವಸ್ತುಗಳನ್ನು ಹೊರಗೆ ಕೊಡಬಾರದು. ಹೇಗೆ ಮಂಗಳವಾರ ಹಾಗೂ ಶುಕ್ರವಾರದಂದು ಕೆಲವು ವಸ್ತುಗಳನ್ನು ಕೊಡುವುದಿಲ್ಲವೋ ಅದಕ್ಕಿಂತಲೂ ಹೆಚ್ಚು ಎಚ್ಚರವಾಗಿ ಅಮಾವಾಸ್ಯೆ ಹಾಗೂ ನಿಮ್ಮ ದಿನಗಳಂದು ಇರಬೇಕು.
ಯಾಕೆಂದರೆ ಈ ದಿನಗಳಂದು ಕೆಲವರು ಬೇಕೆಂದೆ ನಿಮ್ಮ ಬಳಿ ಇವುಗಳನ್ನು ಪಡೆಯಲು ಬರುತ್ತಾರೆ, ಇನ್ನು ಕೆಲವರು ಅವರಿಗೂ ಸಹ ಗೊತ್ತಿಲ್ಲದೇ ಅವರುಮ ಬಳಿ ಇಲ್ಲದ ಕಾರಣಕ್ಕಾಗಿ ಅವರ ಅವಸರಕ್ಕಾಗಿ ನಿಮ್ಮನ್ನು ಕೇಳುತ್ತಾರೆ. ನೀವು ಕೂಡ ತಿಳುವಳಿಕೆ ಇಲ್ಲದೆ ಇಂತಹ ವಸ್ತುಗಳನ್ನು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನಗಳನ್ನು ಕೊಟ್ಟರೆ ನಿಮಗೆ ಎಂಟು ವರ್ಷಗಳ ಕಾಲ ಪಡಬಾರದ ಕ’ಷ್ಟವನ್ನು ಪಡುವ ಸಂದರ್ಭ ಬರುತ್ತದೆ, ಹಾಗಾಗಿ ಇವುಗಳನ್ನು ತಿಳಿದುಕೊಂಡು ಎಚ್ಚರಿಕೆಯಿಂದ ಇರಿ.
* ಮೊದಲನೇದಾಗಿ ಯಾವುದೇ ಕಾರಣಕ್ಕೂ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಯಾರಿಗೂ ಹಣವನ್ನು ಸಾಲ ಕೊಡಬಾರದು. ಕೆಲವರು ಮಂಗಳವಾರ ಹಾಗೂ ಶುಕ್ರವಾರದಂದು ಕೂಡ ಸಾಲ ಕೊಡುವುದಿಲ್ಲ ಇದು ಕೂಡ ಒಳ್ಳೆಯ ಅಭ್ಯಾಸ ಮತ್ತು ಇದಕ್ಕಿಂತ ಹೆಚ್ಚಾಗಿ ಅವರು ಕೋಟಿ ವಾಪಸ್ ಕೊಡುತ್ತೇನೆ ಎಂದರು ಕೂಡ.
ಮಂಗಳವಾರ ಹಾಗೂ ಶುಕ್ರವಾರ ಜೊತೆಗೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ನಿಮ್ಮ ಮನೆಯಿಂದ ಒಂದು ರೂಪಾಯಿ ನಾಣ್ಯವನ್ನು ಕೂಡ ನೀವು ಸಾಲವಾಗಿ ಆಚೆ ಕೊಡಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಬಹಳ ಹೀ’ನಾ’ಯ ಸ್ಥಿತಿಗೆ ಬರುತ್ತದೆ. ನೀವು ನಿಮ್ಮ ಅವಶ್ಯಕತೆಗಳಿಗೆ ಅಂದು ಖರ್ಚು ಮಾಡಬಹುದು ಆದರೆ ಸಾಲ ಎಂದು ಮಾತ್ರ ಯಾರಿಗೂ ಕೊಡಬಾರದು.
* ಮನೆಯಲ್ಲಿರುವ ಒಡವೆಗಳು ಕೂಡ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ. ಎಲ್ಲರಿಗೂ ಕೂಡ ಒಡವೆ ಹಾಕಿಕೊಳ್ಳುವ ಯೋಗ ಇರುವುದಿಲ್ಲ. ಹೆಣ್ಣು, ಹೊನ್ನು, ಮಣ್ಣು ಋಣ ಇದ್ದರೆ ಮಾತ್ರ ಎನ್ನುವ ಗಾದೆಯನ್ನು ಕೂಡ ನೀವು ಕೇಳಿರಬಹುದು. ಹಾಗಾಗಿ ನಿಮ್ಮ ಪಾಲಿನ ಒಡವೆಯನ್ನು ಮತ್ತೊಬ್ಬರು ಕೇಳಿದರು ಎಂದು ಕೊಡುವುದು ತಪ್ಪು.
ಅದರಲ್ಲೂ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ನಿಮ್ಮ ಬೆಲೆಬಾಳುವ ಒಡವೆಗಳನ್ನು ಬೇರೆಯವರಿಗೆ ನೀವು ಕೊಟ್ಟರೆ ನಿಮ್ಮ ಬದುಕಿನಲ್ಲಿ ನೀವು ಮತ್ತೆ ಆ ವಸ್ತುಗಳನ್ನು ಪಡೆಯಲಾಗದ ಅಥವಾ ಮತ್ತೆ ಅದಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸಲಾಗದ ಸ್ಥಿತಿಗೆ ತಲುಪಬಹುದು. ಆದ ಕಾರಣಕ್ಕಾಗಿ ತಾಯಿ ಮಹಾಲಕ್ಷ್ಮಿ ಅನುಗ್ರಹವಾಗಿರುವ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಅಮವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಮನೆಯಿಂದ ಹೊರಗೆ ಕಳುಹಿಸಬೇಡಿ.
* ಅದೇ ರೀತಿಯಾಗಿ ಹಾಲು, ಅರಿಶಿಣ, ಉಪ್ಪು ಇವುಗಳು ಕೂಡ ತಾಯಿಯ ಮಹಾಲಕ್ಷ್ಮಿಯ ರೂಪವೆಂದು ಹೇಳಲಾಗುತ್ತದೆ. ಈ ವಸ್ತುಗಳನ್ನು ಕೂಡ ನೀವು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಯಾರಿಗೂ ಕೊಡಬಾರದು. ಮನೆಗೆ ಮುತ್ತೈದೆಯರು ಬಂದರೆ ಅರಿಶಿನ ಕುಂಕುಮ ಕೊಡುವುದು ಬೇರೆ ಆದರೆ ಅವರ ಮನೆಯಲ್ಲಿ ಖಾಲಿ ಆಗಿದೆ ಎಂದು ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಮನೆಯಲ್ಲಿ ಇರುವುದನ್ನು ಅವರು ಬಳಸುವುದಕ್ಕೆಂದು ಕೇಳಿದರೆ ಕೊಡಲೇ ಬಾರದು, ಇವುಗಳನ್ನು ತಿಳಿದುಕೊಂಡು ಇನ್ನು ಮುಂದೆ ಪಾಲಿಸಿ.