ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಮರಗಳಿಗೆ ದೇವರ ಸ್ಥಾನವನ್ನು ಕೊಟ್ಟಿದ್ದೇವೆ. ಅಂತಹ ಮರಗಳ ಪೈಕಿ ಅರಳಿಮರ ಕೂಡ ಒಂದು ಇದನ್ನು ಅಶ್ವತ್ಥರಳಿ ಮರ ಎಂದು ಕೂಡ ಹೇಳುತ್ತಾರೆ. ಅಶ್ವತ್ಥರಳಿ ಮರದಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎನ್ನುವುದು ಹಿಂದೂ ಧರ್ಮದ ನಂಬಿಕೆ ಆಗಿನ ಕಾಲದಲ್ಲಿ ಋಷಿಮುನಿಗಳು ಜಪತಪ ಮಾಡುವುದಕ್ಕೆ ಅರಳಿ ಮರವನ್ನೇ ಅರಸಿ ಬರುತ್ತಿದ್ದರು.
ಅಶ್ವತ್ಥರಳಿ ಮರದ ಬುಡದಲ್ಲಿ ಕುಳಿತುಕೊಂಡು ತಮ್ಮ ಸಂಕಲ್ಪವನ್ನು ನೆರವೇರಿಸಿಕೊಳ್ಳುತ್ತಿದ್ದರು. ಈ ಮರಕ್ಕೆ ಎಷ್ಟೊಂದು ಶಕ್ತಿ ಇದೆ ಎಂದರೆ ಅದು ನಮ್ಮ ಬದುಕಿನ ಎಲ್ಲ ರೀತಿಯ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಬಲ್ಲದು, ಆರೋಗ್ಯ ಸಮಸ್ಯೆ ಇರುವವರು ಅಥವಾ ಜೀವನದಲ್ಲಿ ಇನ್ಯಾವುದೇ ಮಾನವ ಸಹಜ ಸಮಸ್ಯೆ ಇದ್ದರೂ ಕೂಡ ಅರಳೀ ಮರದ ಆರಾಧನೆ ಅದಕ್ಕೆ ಪರಿಹಾರ ಕೊಡುತ್ತದೆ.
ಪ್ರತಿ ದೇವಸ್ಥಾನದಲ್ಲೂ ಕೂಡ ಅಶ್ವತ್ಥರಳಿ ಮರ ನೆಟ್ಟಿರುತ್ತಾರೆ. ಆಗಿನ ಕಾಲದಲ್ಲಿ ಊರಿನ ಮಧ್ಯಭಾಗದಲ್ಲಿ ಅಥವಾ ಊರಿನ ಹೊರಭಾಗದಲ್ಲಿ ಈ ರೀತಿ ಅಶ್ವತ್ಥರಳೀ ಮರ ನೆಟ್ಟು ಅದಕ್ಕೆ ಕಟ್ಟೆ ಕಟ್ಟುತ್ತಿದ್ದರು ಮತ್ತು ಅಲ್ಲಿ ನಾಗರಕಲ್ಲು ಅಥವಾ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಅಶ್ವತಹಳ್ಳಿ ಮರವನ್ನು ಅತಿ ಹೆಚ್ಚು ಆಕ್ಸಿಜನ್ ಕೊಡುವ ಮರ ಎಂದು ಕೂಡ ಹೇಳಲಾಗುತ್ತದೆ.
ಹಾಗಾಗಿ ಮುಂಜಾನೆ ಎದ್ದು ಯಾರು ಅರಳಿ ಮರದ ಪ್ರದಕ್ಷಿಣೆ ಹಾಕುತ್ತಾರೆ ಅವರಿಗೆ ಆರೋಗ್ಯದ ಸಮಸ್ಯೆಗಳು ಕಾಡುವುದಿಲ್ಲ. ಅಲ್ಲದೆ ಸಂತಾನ ಭಾಗ್ಯಕ್ಕಾಗಿ ಬಯಸುವ ಹೆಣ್ಣುಮಕ್ಕಳು ಕೂಡ ನಿಷ್ಠೆಯಿಂದ ಅಶ್ವತ್ಥರಳಿ ಮರಕ್ಕೆ ಪ್ರತಿದಿನ ಎದ್ದು ನಿಯಮಿತವಾಗಿ ಪ್ರದಕ್ಷಿಣೆ ಹಾಕುವುದರಿಂದ ಅವರ ದೈಹಿಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಮತ್ತು ದೇವರ ಆಶೀರ್ವಾದದಿಂದಾಗಿ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಕೆಲವರು ಈ ಮರಕ್ಕೆ 9, 16, 21 ಈ ರೀತಿ ತಮ್ಮ ಸಂಕಲ್ಪದ ಅನುಸಾರವಾಗಿ ದಾರವನ್ನು ಸುತ್ತಿ ತಮ್ಮದೇ ಆದ ರೀತಿಯಲಿ ಅಥವಾ ತಮಗೆ ತಿಳಿಸಿರುವ ಪದ್ಧತಿಯ ಪ್ರಕಾರವಾಗಿ ಪೂಜೆ ಮಾಡುತ್ತಾರೆ. ಯಾವ ರೀತಿ ಪೂಜೆ ಮಾಡಿದರೆ ಕೂಡ ಈ ರೀತಿ ಅಶ್ವತ್ಥರಳಿ ಮರಕ್ಕೆ ಮಾಡುವ ಪೂಜೆಯು ತಾಯಿ ಮಹಾಲಕ್ಷ್ಮಿ ಸಮೇತವಾಗಿ ಎಲ್ಲ ದೇವಾನುದೇವತೆಗಳಿಗೂ ಕೂಡ ಸಲ್ಲುತ್ತದೆ ಎಂದು ಹೇಳಲಾಗುತ್ತದೆ.
ಅರಳಿ ಮರದ ಕೆಳಗೆ ಶಿವಲಿಂಗ ಪ್ರತಿಷ್ಠಾಪನೆ ಮಾಡುವುದು ಪುಣ್ಯದ ಕಾರ್ಯ ಎಂದು ಹೇಳಲಾಗುತ್ತದೆ ಮತ್ತು ಈ ಮರದ ಆರಾಧನೆ ಮಾಡುವ ಸಮಯದಲ್ಲಿ ಶಿವಪೂಜೆಯನ್ನು ಮಾಡುವುದು ಕೂಡ ಇನ್ನೂ ಹೆಚ್ಚಿನ ಫಲ ಕೊಡುತ್ತದೆ ಎಂದು ಸಹ ಹೇಳಲಾಗುತ್ತದೆ.
ಅರಳಿ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾ ಓದುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ಮೃ’ತ್ಯು ಭ’ಯ ಅಥವಾ ಜೀವನದಲ್ಲಿ ಜಿಗುಪ್ಸೆ ಮುಂತಾದ ಮಾನಸಿಕ ಸಮಸ್ಯೆಗಳಿದ್ದರೆ ಅವುಗಳಿಗೆ ಕೂಡ ಪರಿಹಾರ ಸಿಗುತ್ತದೆ. ಸಾಡೇಸಾತಿ ಶನಿ ದೋಷ ಇದ್ದರೆ ಅದನ್ನು ಕೂಡ ಅಶ್ವತ್ಥರಳಿ ಮರದ ಆರಾಧನೆಯು ನಿವಾರಣೆ ಮಾಡುತ್ತದೆ.
ಈ ರೀತಿ ಯಾವುದೇ ಗ್ರಹದ ದೋಷ ಅನುಭವಿಸುತ್ತಿರುವವರು ಕೂಡ ಭಕ್ತಿಯಿಂದ, ನಂಬಿಕೆಯಿಂದ, ನಿಷ್ಠೆಯಿಂದ ಈ ಮರದ ಆರಾಧನೆ ಮಾಡಬೇಕು. ಮೊದಲು ನೀರನ್ನು ಅರ್ಪಿಸಿ, ಅರಿಶಿನ ಕುಂಕುಮ ಹೂವು ಇಟ್ಟು ಅದರ ಬಳಿ ದೀಪ ಹಚ್ಚಿ ತಮ್ಮ ಶಕ್ತಿ ಅನುಸಾರ ನೆನಸಿದ ಅಕ್ಕಿ ಬೆಲ್ಲ ಇವುಗಳನ್ನು ಇಟ್ಟು ನೈವೇದ್ಯ ಮಾಡಿ ಪ್ರದಕ್ಷಿಣೆ ಹಾಕಬೇಕು. ಈ ರೀತಿ 9 ಅಥವಾ 21 ದಿನ ಅಥವಾ ನಿಯಮಿತವಾಗಿ ಪ್ರತಿನಿತ್ಯ ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಹಾಗೂ ಆಯಸ್ಸು, ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ.