ಮೊದಲ ದಿನದ ಕಲೆಕ್ಷನ್ ನಲ್ಲೇ ಕ್ರಾಂತಿಯನ್ನೇ ಮೀರಿಸಿದ ನಟಭಯಂಕರ ವೈರಲ್ ಆಗುತ್ತಿರುವ ಪೋಸ್ಟರ್ ಬಗ್ಗೆ ಪ್ರಥಮ್ ಕೊಟ್ಟ ಸ್ಪಷ್ಟತೆ ಏನು ಗೊತ್ತಾ.? ನೆನ್ನೆ ಅಷ್ಟೇ ಒಳ್ಳೆ ಹುಡುಗ ಪ್ರಥಮ್ (Olle hudga Pratham) ಅವರ ನಟಭಯಂಕರ (Nata bayankara) ಸಿನಿಮಾ ತೆರೆಕಂಡಿತ್ತು. ಕ್ರಾಂತಿ (Kranthi) ಸಿನಿಮಾದ ಅಬ್ಬರದ ನಡುವೆ ಈ ಹಾವಳಿ ಸ್ಟಾರ್ ತಮ್ಮ ಸಿನಿಮಾ ರಿಲೀಸ್ ಮಾಡುವ ಧೈರ್ಯ ತೋರಿ ರಿಲೀಸ್ ಮಾಡಿಯೇ ಬಿಟ್ಟರು. ಈಗ ಮೊದಲ ದಿನದ ಕಲೆಕ್ಷನ್ ಅಲ್ಲಿ ಡಿ ಬಾಸ್ (DBoss) ಅನ್ನು ಸೋಲಿಸುವ ಮೂಲಕ ಪಿ ಬಾಸ್ (PBoss) ಎನ್ನುವ ಟೈಟಲ್ ಗಿಟ್ಟಿಸಿಕೊಂಡಿದ್ದಾರೆ.
ಅಷ್ಟಕ್ಕೂ ಇದರ ಸತ್ಯಾನುಸತ್ಯತೆ ಏನು ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎರಡು ವರ್ಷದ ಗ್ಯಾಪ್ ನಂತರ ಬಿಡುಗಡೆ ಆದ ಸಿನಿಮಾ ಕ್ರಾಂತಿ. ಮೊದಲ ದಿನ 12.85 ಕೋಟಿ ಗಳಿಕೆ ಮಾಡಿತ್ತು. ಆದರೆ ಅಭಿಮಾನಿಗಳು ನಮ್ಮ ಬಾಸ್ ಸಿನಿಮಾ ಮೊದಲ ದಿನ 35.3 ಕೋಟಿ ಗಳಿಕೆ ಮಾಡಿದೆ ಎಂದು ಪೋಸ್ಟರ್ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲು ಶುರು ಮಾಡಿದ್ದರು.
ಕೆಲ ಟ್ರೋಲ್ ಪೇಜ್ ಗಳು ಈ ವಿಷಯವನ್ನು ಇಟ್ಟುಕೊಂಡು ನೆಗೆಟಿವ್ ವಿಮರ್ಶೆ ಮಾಡಿ ಹಾಗೂ ಆ ಪೋಸ್ಟರ್ ಅನ್ನು ಟ್ರೋಲ್ ಮಾಡಲು ಶುರು ಮಾಡಿದ್ದವು. ಯಾವುದೇ ಕಾರಣಕ್ಕೂ ಕ್ರಾಂತಿ ಇಷ್ಟು ಗಳಿಕೆ ಮಾಡಿಲ್ಲ ಎನ್ನುವುದು ಅವರ ವಾದ. ನಂತರ ಎಂಟು ದಿನಗಳ ಬಳಿಕ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ ಸಿನಿಮಾ ಥಿಯೇಟರ್ ಕಲೆಕ್ಷನ್ ಜೊತೆಗೆ ವಿವಿಧ ರೈಟ್ಸ್ಗಳಿಂದ ಆದ ಎಲ್ಲಾ ಕಲೆಕ್ಷನ್ ಸೇರಿ 100 ಕೋಟಿ ದಾಟಿದೆ ಎನ್ನುವ ಸ್ಪಷ್ಟತೆಯನ್ನು ನಿರ್ಮಾಪಕರು ಕೊಟ್ಟು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮ ಹಂಚಿಕೊಂಡರು.
ಇನ್ನು ಅದ್ಯಾಕೋ ಕೆಲ ಮಂದಿ ಅದನ್ನು ನಂಬುತ್ತಲೇ ಇಲ್ಲ. ಇದರ ನಡುವೆ ಇದಕ್ಕೆ ಟಾಂಗ್ ಕೊಡುವ ಸಲುವಾಗಿ ಪ್ರಥಮ್ ಅವರ ನಟಭಯಂಕರ ಸಿನಿಮಾ ಮೊದಲ ದಿನವೇ 35.5 ಕೋಟಿ ಕಲೆಕ್ಷನ್ ಕಳಿಸಿದೆ ಎನ್ನುವ ಪೋಸ್ಟರ್ ಅನ್ನು ದರ್ಶನ್ ಅವರ ಫೇಕ್ ಕಲೆಕ್ಷನ್ ಫೋಟೋ ಜೊತೆ ಹಾಕಿ ಇವರೇ ಮುಂದಿನ ಬಾಕ್ಸ್ ಆಫೀಸ್ ಸುಲ್ತಾನ ಎಂದು ಬರೆದು ವೈರಲ್ ಮಾಡುತ್ತಿದ್ದಾರೆ.
ಇದು ಪ್ರಥಮ್ ತನಕ ತಲುಪಿದ್ದು ನಾನು ಪೂಜೆ ಮಾಡುವ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ನನ್ನ ಸಿನಿಮಾ ಇಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಅವರು ಎಂಥಹ ಸ್ಟಾರ್ ಎಂದು ಎಲ್ಲರಿಗೂ ಗೊತ್ತು ಅವರ ಜೊತೆ ನನ್ನ ಹೋಲಿಕೆ ಬೇಡ. ಈಶ್ವರನ ಸಾಕ್ಷಿಯಾಗಿಯೂ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಸಿನಿಮಾ ಚೆನ್ನಾಗಿ ಆಗುತ್ತಿದೆ ಆಗಲೇ ಬಿಡಿ ಎಂದು ಟ್ವೀಟ್ ಮಾಡಿ ಇವರೇ ತಮ್ಮ ಸಿನಿಮಾ ಕಲೆಕ್ಷನ್ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.
ಸ್ಟಾರ್ ಹೀರೋಗಳ ಸಿನಿಮಾ ಎಂದ ಮೇಲೆ ಅಭಿಮಾನಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಕಲೆಕ್ಷನ್ ವಿಚಾರದ ಕುರಿತು ಕುತೂಹಲ ಇದ್ದೇ ಇರುತ್ತದೆ. ಆದರೆ ಚಿತ್ರತಂಡ ಸ್ಪಷ್ಟತೆ ಕೊಡದ ಸಮಯದಲ್ಲಿ ಈ ರೀತಿ ಅಭಿಮಾನಿಗಳು ಹಾಗೂ ವಿರೋಧಿಗಳ ನಡುವೆ ಆಗುವ ಚರ್ಚೆಗಳು ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಬೇಕಾಗುತ್ತದೆ.
ಕ್ರಾಂತಿ ಸಿನಿಮಾ ಸಾಕಷ್ಟು ಅಡೆತಡೆಗಳನ್ನು ಮೀರಿ ಗೆದ್ದಿರುವ ಸಿನಿಮಾ ಆದರೆ ಕೆಲ ನೆಗೆಟಿವ್ ವಿಮರ್ಶೆಗಳು ಮತ್ತು ಪೈಠಾಣ್ (Pytan) ಸಿನಿಮಾದ ಫೈಟ್ ಇಂದ ಮೊದಲ ದಿನಕ್ಕಿಂತ ನಂತರ ದಿನಗಳಲ್ಲಿ ಕಲೆಕ್ಷನ್ ಕಡಿಮೆ ಇದೆ ಎನ್ನುವ ಸುದ್ದಿಯು ಸಹ ಇದೆ.ಸಿನಿಮಾ ನಿರ್ಮಾಪಕರು ಅಂಕಿ ಅಂಶಗಳ ಸಮೇತ ಕಲೆಕ್ಷನ್ ವಿಚಾರವನ್ನು ಎಲ್ಲರ ಎದುರಿಟ್ಟರೆ ಇಂತಹ ಸಮಸ್ಯೆಗಳು ಎದುರಾಗುವುದೇ ಇಲ್ಲ ಎನ್ನುವುದು ಹಲವರ ಅಭಿಪ್ರಾಯ.