KSRTC ಬಸ್ ಬಸ್ ನಿಲ್ಲಸಲಿಲ್ಲ ಅಂತ ಕಲ್ಲು ಹೊಡೆದ ಮಹಿಳೆ.! ಶಕ್ತಿ ಯೋಜನೆ ಎಫೆಕ್ಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.!

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ​ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ (Shakti Yojana) ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಸಹಸ್ರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಬಸ್​ಗಳು ತುಂಬಿತುಳುಕುತ್ತಿವೆ. ಇನ್ನು ಕೆಲವೆಡೆ ಪ್ರಯಾಣಿಕರು ಹಾಗೂ ಬಸ್​ ಚಾಲಕ-ನಿರ್ವಹಕರ ನಡುವೆ ಗಲಾಟೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಇದರ ನಡುವೆ ಇಲ್ಲೋರ್ವ ಮಹಿಳಾ ಪ್ರಯಾಣಿರೊಬ್ಬರು ಬಸ್​ಗೆ ಕಲ್ಲೆಸಿದಿದ್ದಾಳೆ. ತನ್ನ ಊರಿಗೆ ತೆರಳಲು ಯಾವುದೊಂದು ಬಸ್​ ನಿಲ್ಲಿಸದ ಕಾರಣ, ಕೊಪ್ಪಳದಿಂದ – ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಮಹಿಳೆಯೊಬ್ಬರು ಕಲ್ಲೆಸೆದ ಘಟನೆ ಕೊಪ್ಪಳದಲ್ಲಿ ಜರುಗಿದೆ. ಕೊಪ್ಪಳದ ಹೊಸಲಿಂಗಾಪುರ ಬಳಿ ಈ ಘಟನೆ ನಡೆದಿದೆ. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು.

ಹುಲಿಗೆಮ್ಮನ ದರ್ಶನ ಪಡೆದು ಲಿಂಗಾಪುರ ಬಳಿ ಬಸ್​ಗಾಗಿ ಮಳೆಯಲ್ಲಿ ಕಾದು ಕುಳಿತಿದ್ದ ಲಕ್ಷ್ಮಿಗೆ ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್​ಗೆ ಕಲ್ಲೆಸೆದಿದ್ದಾರೆ. ಪರಿಣಾಮ ಬಸ್​ನ ಕಿಟಕಿ ಕೆಳಗಿನ ಗಾಜು ಒಡೆದಿದೆ.‌ 5000 ರೂ. ದಂಡ ಕಟ್ಟಿದ ಮಹಿಳೆ: ಕೊಪ್ಪಳ ಘಟಕದ KA-35, F-252 ಬಸ್​ನ ಗ್ಲಾಸ್ ಡ್ಯಾಮೇಜ್ ಆದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್​ ನಿರ್ವಾಹಕರು ಬಸ್​ ಅನ್ನು ಪ್ಯಾಸೆಂಜರ್ ಸಮೇತ ಬಸ್ ನಿಲ್ಲಿಸಿ ದೂರು ನೀಡಲು ಮುಂದಾಗಿದ್ದರು.

ಆದರೆ ಡಿಪೋ ಮ್ಯಾನೇಜರ್ 5000ರೂ, ದಂಡ ಕೇಳಿದ್ದಾರೆ. ಇಲ್ಲವಾದಲ್ಲಿ ಎಫ್ ಐ ಆರ್ ಮಾಡುವುದಾಗಿ ಲಕ್ಷ್ಮಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಳಿಕ ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ಕೊನೆಗೆ 5000 ದಂಡ ಕಟ್ಟಿ ಅದೇ ಬಸ್​ಲ್ಲಿ ಲಕ್ಷ್ಮಿ ತೆರಳಿದ್ದಾರೆ.

ನಾರಿ ‘ಶಕ್ತಿ’ ಎಫೆಕ್ಟ್​
ನೂತನ ಕಾಂಗ್ರೆಸ್​ ಸರ್ಕಾರ ತನ್ನ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಅವಕಾಶ ಒದಗಿಸಿದೆ. ಪರಿಣಾಮ ರಾಜ್ಯದಲ್ಲಿ ಮಹಿಳೆಯ ಬಸ್​ ಓಡಾಟ ಹೆಚ್ಚಾಗಿದೆ. ಎಲ್ಲ ಸರ್ಕಾರಿ ಬಸ್​ನಲ್ಲಿ ನಾರಿಮಣಿಯರೇ ತುಂಬಿ ತುಳುಕಿ ಕಂಡೆಕ್ಟರ್​ಗೇ ಬಸ್​ನಲ್ಲಿ ನಿಲ್ಲಲು ಜಾಗವ ಇಲ್ಲದಂತಾಗಿದೆ.

ಇನ್ನು ಹಾವೇರಿ ನಿಲ್ದಾಣದಲ್ಲಿ ಡ್ರೈವರ್​ ಸೀಟ್​ನ ಡೋರ್​ನ ಮೂಲಕವೇ ಪುರುಷರು ಬಸ್​ ಏರಿದ ಘಟನೆ ನಡೆದಿದೆ. ಬಸ್ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರು ಬಸ್​ನಲ್ಲಿ ಆಸನಕ್ಕಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಇದೆ. ಬಸ್​ನ ಬಾಗಿಲ ಬಳಿಯೂ ಮಹಿಳೆಯರೇ ತುಂಬಿದ್ದರಿಂದ ತಾಳ್ಮೆ ಕಳೆದುಕೊಂಡ ಪುರುಷರು ಬಸ್​ ಒಳಗೆ ಹೋಗಲು ಬಸ್​ನ ಡ್ರೈವರ್​ ಸೀಟ್​ನಿಂದ ಬಸ್​ ಹತ್ತಿದ್ದಾರೆ.

ಇನ್ನೊಂದು ಕಡೆ ಚಾಮರಾಜನಗರದ ಕೊಳ್ಳೇಗಾಲದಲ್ಲಂತೂ ಮಹಿಳೆಯರ ಕಿತ್ತಾಟಕ್ಕೆ ಸರ್ಕಾರಿ ಬಸ್​ನ ಬಾಗಿಲೇ ಕಿತ್ತು ಬಂದಿತ್ತು. ಆ ಪೋಟೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿದ್ದು, ಈ ಘಟನೆಗೆ ‘ವುಮೆನ್​ ಪವರ್​’ ಅಂತ ನೆಟ್ಟಿಗರು ಕಾಮೆಂಟ್​ ಮಾಡಿದ್ದರು. ಇನ್ನು ಮಹಿಳೆಯರೇ ಬಸ್​ನಲ್ಲಿದ್ದರಿಂದ ಬಸ್​ ಏರಲು ನಿರಾಕರಿಸಿ ಕಣ್ಣೀರಿಟ್ಟ ಗದಗದ ಬಾಲಕನ ವಿಡಿಯೋವಂತೂ ಎಲ್ಲೆಡೆ ಸದ್ದು ಮಾಡಿತ್ತು.

https://telegram.me/bigdeals4sale

ಬಾಲಕ ತನ್ನ ತಾಯಿ ಜತೆಗೆ ದಾವಲ್ ಮಲ್ಲಿಕ್ ದರ್ಗಾ ನೋಡಲು ಬಂದಿದ್ದ. ವೀಕೆಂಡ್ ಹಾಗೂ ಅಮಾವಾಸ್ಯೆ ಹಿನ್ನೆಲೆ ಬಸ್‌ಗಳೆಲ್ಲ ಮಹಿಳೆಯರಿಂದ ಭರ್ತಿ ಆಗಿ ಬರುತ್ತಿದ್ದವು. ಇದರಿಂದ ಸುಸ್ತಾದ ಬಾಲಕ ಎಲ್ಲ ಬಸ್​ಗಳು ಭರ್ತಿಯಾಗಿ ಹೋಗುತ್ತಿರುವುದನ್ನು ನೋಡಿ ಕಣ್ಣೀರು ಹಾಕತೊಡಗಿದ. ಅಲ್ಲದೇ ಈ ನೂಕು ನುಗ್ಗಲಿನಲ್ಲಿ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಡಬೇಕಾದ ಸನ್ನಿವೇಶ ಉಂಟಾಗಿತ್ತು.

Leave a Comment