ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವ ಲೋಕೋಕ್ತಿ ಇಡೀ ಜಗತ್ತಿಗೆ ತಿಳಿದಿದೆ. ಹಾಗೆಯೇ ಒಂದು ಕುಟುಂಬದ ಏಳಿಗೆಯು ಆ ಮನೆಯ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಹೇಗೆ ನಡೆದುಕೊಳ್ಳುತ್ತಾರೆ ಮನೆಯ ಇತರ ಸದಸ್ಯರು ಕೂಡ ಅದೇ ರೀತಿ ವರ್ತಿಸುತ್ತಾರೆ.
ಹಾಗಾಗಿ ನಮ್ಮ ಪುರಾಣ ಕಾಲದಿಂದ ಹಿಡಿದು ಇತಿಹಾಸದವರೆಗೂ ಹೆಣ್ಣು ಮಕ್ಕಳಿಗೆ ಅತ್ಯಂತ ಮಹತ್ವದ ಸ್ಥಾನ ಕೊಡಲಾಗಿದೆ. ಮನೆಯೊಂದರ ಏಳಿಗೆ, ಅಭಿವೃದ್ಧಿ, ಕ’ಷ್ಟ, ದ’ರಿ’ದ್ರ ಎಲ್ಲದಕ್ಕೂ ಕೂಡ ಆ ಮನೆಯ ಹೆಣ್ಣು ಮಕ್ಕಳ ವರ್ತನೆ ಕಾರಣವಾಗಿರುತ್ತದೆ. ಹೆಣ್ಣು ಮಕ್ಕಳು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ಆ ಮನೆಯ ಅದೃಷ್ಟವೇ ಹಾಳಾಗುತ್ತದೆ.
ತಾಯಿ ಮಹಾಲಕ್ಷ್ಮಿ ಕೃಪೆ ಹೆಣ್ಣು ಮಕ್ಕಳ ಮೇಲೆ ಮತ್ತು ಮನೆಯ ಮೇಲೆ ಇದ್ದರೆ ಸಕಲೈಶ್ವರ್ಯಗಳು ಆ ಕುಟುಂಬಕ್ಕೆ ದೊರಕುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಯಾವ ಅಭ್ಯಾಸ ರೂಢಿಸಿಕೊಳ್ಳಬೇಕು ಮತ್ತು ಯಾವ ತಪ್ಪುಗಳನ್ನು ಮಾಡಲೇಬಾರದು ಎನ್ನುವುದರಲ್ಲಿ ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.
1. ಪೊರಕೆಯನ್ನು ಲಕ್ಷ್ಮಿ ದೇವಿಯ ವಾಸಸ್ಥಳ ಎಂದು ಹೇಳಲಾಗುತ್ತದೆ. ಪೊರಕೆಯನ್ನು ಕಾಲಿನಿಂದ ಒದೆಯುವುದು, ತುಳಿಯುವುದು ಮಾಡಿದರೆ ಪೊರಕೆಗೆ ಅವಮಾನ ಮಾಡಿದಂತೆ ಇದರಿಂದ ತಾಯಿ ಲಕ್ಷ್ಮಿ ದೇವಿಗೆ ಕೋ’ಪ ಬರುತ್ತದೆ, ಅಂತಹ ಮನೆಯಲ್ಲಿ ಆಕೆಯು ವಾಸಿಸಲಾರರು ಹಾಗಾಗಿ ಈ ತಪ್ಪನ್ನು ಹೆಣ್ಣು ಮಕ್ಕಳು ಮಾಡಬೇಡಿ.
2. ರಾತ್ರಿ ಊಟ ಆದಮೇಲೆ ಒಲೆಯ ಮೇಲೆ ಯಾವುದೇ ಪಾತ್ರೆಯನ್ನು ಇಡಬಾರದು ಅದು ಆಹಾರ ಉಳಿದಿರುವ ಪಾತ್ರೆಯಾಗಿದ್ದರೂ ಕೂಡ ಅದನ್ನು ಇಡಬಾರದು. ರಾತ್ರಿ ಊಟ ಆದಮೇಲೆ ಅನೇಕ ಮಹಿಳೆಯರು ಬೆಳಗಿನಿಂದ ಸುಸ್ತಾಗಿರುವುದರಿಂದ ಅಡುಗೆ ಮನೆಯನ್ನು ಹಾಗೆ ಬಿಟ್ಟು ಬೆಳಿಗ್ಗೆ ಕೆಲಸ ಮಾಡಿಕೊಳ್ಳೋಣ ಎಂದು ಮಲಗುತ್ತಾರೆ.
ಈ ತಪ್ಪುಗಳನ್ನು ಮಾಡಬೇಡಿ ರಾತ್ರಿ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಇಡಿ ಹಾಗೆ ಅಡುಗೆ ಮಾಡಿದ ಒಲೆಯನ್ನು ಶುದ್ಧಗೊಳಿಸಿ. ಅಡುಗೆ ಮನೆಯನ್ನು ಕ್ಲೀನ್ ಮಾಡಿ ಒಲೆಯಿಂದ ಪಾತ್ರೆಗಳನ್ನು ಕೆಳಗಿಳಿಸಿ ಮಲಗಿ, ಇಲ್ಲವಾದಲ್ಲಿ ಅಡುಗೆ ಮನೆ ಗಲೀಜಾಗಿದ್ದರೆ ತಾಯಿ ಲಕ್ಷ್ಮಿ ದೇವಿಗೆ ಕೋ’ಪ ಬರುತ್ತದೆ ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಸಂಚಾರ ಮಾಡುವ ಲಕ್ಷ್ಮಿ ದೇವಿಯ ಅಡುಗೆ ಮನೆಯನ್ನು ನೋಡುತ್ತಾರೆ ಎನ್ನುವ ನಂಬಿಕೆಯೂ ಇದೆ ಹಾಗಾಗಿ ಈ ಬಗ್ಗೆ ಗಮನವಿರಲಿ.
ಸಾಧ್ಯವಾದರೆ ವಾರಕ್ಕೊಮ್ಮೆ ಸಮುದ್ರದ ಉಪ್ಪಿನಿಂದ ಅಥವಾ ಕಲ್ಲುಪ್ಪಿನಿಂದ ಮನೆಯ ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಿ ಇದರಿಂದ ಮನೆಯಲ್ಲಿ ಧನಧಾನ್ಯದ ಕೊರತೆ ಉಂಟಾಗುವುದಿಲ್ಲ. ತಾಯಿ ಅನ್ನಪೂರ್ಣೇಶ್ವರಿ ಹಾಗೂ ಮಹಾಲಕ್ಷ್ಮಿ ಆಶೀರ್ವಾದ ಆ ಮನೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.
3. ಮನೆಯ ಹೊಸ್ತಿಲಲ್ಲಿ ಮಾತೆ ಮಹಾಲಕ್ಷ್ಮಿಯು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಹಿಂದುಗಳು ಹೊಸ್ತಿಲನ್ನು ಪ್ರತಿನಿತ್ಯವೂ ಶುಚಿಗೊಳಿಸಿ, ರಂಗೋಲಿ ಇಟ್ಟು ಅರಿಶಿನ ಕುಂಕುಮ ಹೂವು ಅಕ್ಷತೆ ಹಾಕಿ ಪೂಜೆ ಮಾಡುತ್ತಾರೆ. ಇಷ್ಟು ಪವಿತ್ರವಾದ ಈ ಸ್ಥಳವನ್ನು ತುಳಿಯುವುದು, ಹೊಸ್ತಿಲ ಮೇಲೆ ನಿಲ್ಲುವುದು ಮತ್ತು ಹೊಸ್ತಿಲು ಪೂಜೆ ಮಾಡದೇ ಇರುವುದು.
ಮುಸ್ಸಂಜೆ ಸಮಯದಲ್ಲಿ ಬಾಗಿಲನ್ನು ಹಾಕುವುದು ಈ ರೀತಿ ಮಾಡಿದರು ಕೂಡ ತಾಯಿ ಮಹಾಲಕ್ಷ್ಮಿಗೆ ಕೋ’ಪ ಬಂದು ಅಲ್ಲಿಂದ ಹೊರಟು ಬಿಡುತ್ತಾರೆ. ಹಾಗಾಗಿ ಯಾರ ಮನೆಯಲ್ಲಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ. ಕೆಲವು ಮಹಿಳೆಯರಂತೂ ಹೊಸ್ತಿಲ ಮೇಲೆ ಕುಳಿತು ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡುವುದು, ಹೊಸ್ತಿಲ ಮೇಲೆ ಕುಳಿತು ಹೊರಗೆ ನೋಡಿಕೊಂಡು ಊಟ ಮಾಡುವುದು ಇಂತಹ ಕೆ’ಟ್ಟ ಅಭ್ಯಾಸ ರೂಢಿಸಿಕೊಂಡಿರುತ್ತಾರೆ, ಮೊದಲು ಈ ಅಭ್ಯಾಸವನ್ನು ನಿಲ್ಲಿಸಿ, ಇದು ನಿಮ್ಮ ಮೇಲೆ ಮಾತ್ರವಲ್ಲದೆ ಕುಟುಂಬದ ಸದಸ್ಯರೆಲ್ಲರ ಮೇಲೆ ಕೆ’ಟ್ಟ ಪರಿಣಾಮ ಬೀರುತ್ತದೆ.
4. ಹೆಣ್ಣು ಮಕ್ಕಳು ಸೂರ್ಯೋದಯವಾದ ನಂತರವೂ ಮಲಗಿರುವುದು ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಆ ಮನೆಗೆ ಶ್ರೇಯಸ್ಕರವಲ್ಲ. ಯಾವ ಮನೆ ಹೆಣ್ಣು ಮಕ್ಕಳು ಸೂರ್ಯೋದಯಕ್ಕೂ ಮುಂಚೆ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಪೂಜೆ ಮಾಡುತ್ತಾರೆ ಅಂತ ಮನೆಗೆ ತಾಯಿ ಮಹಾಲಕ್ಷ್ಮಿ ಆಗಮನವಾಗಿ ಆಕೆ ಶಾಶ್ವತವಾಗಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ, ಇದು ಆರೋಗ್ಯದ ದೃಷ್ಟಿಯಿಂದಲೂ ಕೂಡ ಬಹಳ ಒಳ್ಳೆಯದು.
* ಈ ಎಲ್ಲಾ ನಿಯಮಗಳು ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ ಗಂಡು ಮಕ್ಕಳಿಗೂ ಅನ್ವಯವಾಗುತ್ತದೆ ಗಂಡು ಮಕ್ಕಳು ಕೂಡ ಇವುಗಳನ್ನು ಪಾಲಿಸಿ