Sunday, May 28, 2023
HomeEntertainmentಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ...

ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?

 

ಹಿರಿಯ ನಟಿ ಲೀಲಾವತಿಯವರ ವೈಯಕ್ತಿಕ ಜೀವನದ ವಿಚಾರವಾಗಿ ಊಹಾಪೋಹಗಳು, ಕಥೆಗಳು ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಲೀಲಾವತಿ ಹಾಗೂ ಆಕೆಯ ಕುಟುಂಬದವರು ಬದುಕಿನ ಸತ್ಯಾಸತ್ಯತೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳದೇ ಇರುವುದು. ಲೀಲಾವತಿಯವರ ವೈವಾಹಿಕ ಜೀವನದ ಹತ್ತಾರು ವಿಷಯಗಳು ಇಂದಿಗೂ ನಿಗೂಢತೆ ಕಾಯ್ದುಕೊಂಡಿದೆ. ಗೌಪ್ಯತೆಗಳೇ ವಿವಾದಗಳಿಗೆ ಎಡೆ ಮಾಡಿಕೊಟ್ಟಿವೆ ಎಂದರೆ ತಪ್ಪಾಗಲಾರದು.

ಇದೀಗ ಹಳೆಯ ವಿಚಾರಗಳು ಮತ್ತೊಮ್ಮೆ ಕೆದಕಿ ಚರ್ಚೆಗೆ ಬರಲು ಕಾರಣವೆಂದರೆ, ಪ್ರಕಾಶ್ ರಾಜ್ ಮೆಹೂ ಎಂಬುವವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್. ಹೌದು. ಪ್ರಕಾಶ್ ರಾಜ್ ಅವರು ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕರು. ಇವರು ಪೋಸ್ಟ್ ಒಂದನ್ನು ಬರೆದು ಹಂಚಿಕೊಂಡಿದ್ದರು. ಅದರಲ್ಲಿ ತಾನು ಲೀಲಾವತಿ ಕುಟುಂಬದ ಬಗ್ಗೆ ಎರಡು ರಹಸ್ಯದ ಸತ್ಯವನ್ನು ಬಹಿರಂಗಪಡಿಸಲಿದ್ದೇನೆ ಎಂದಿದ್ದರು.

ಒಂದನೆಯದು ಲೀಲಾವತಿಯವರ ಪತಿಯ ಹೆಸರು ಮಹಾಲಿಂಗ ಭಾಗವತ್ ಎಂಬುದು, ಎರಡನೆಯ ಸತ್ಯವೆಂದರೆ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅವರಿಗೆ ವಿವಾಹವಾಗಿದೆ ಎಂಬುದು… ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ, ಲೀಲಾವತಿಯವರ ಗಂಡ ಮಹಾಲಿಂಗ ಭಾಗವತ್ ಎಂದು ಉಲ್ಲೇಖವಾಗಿರುವ ತಮಿಳುನಾಡಿನ ಆಸ್ತಿ ಪತ್ರ ಒಂದನ್ನು ಪ್ರಕಟಿಸಿದ್ದರು. ವಿನೋದ್ ರಾಜ್ ಅವರಿಗೆ ವಿವಾಹವಾಗಿದೆ ಎಂಬುದನ್ನು ಬಹಿರಂಗಪಡಿಸಲು ಸಾಕ್ಷಿಯಾಗಿ ಯುವರಾಜ್ ಎಂಬ ಹುಡುಗನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಪ್ರಕಟಿಸಿದ್ದರು.

ಅಲ್ಲದೆ ವಿನೋದ್ ರಾಜ್ ಅವರು ಯುವರಾಜ್ ಎಂಬ ಹುಡುಗನ ಮತ್ತು ಆತನ ತಾಯಿಯೊಂದಿಗೆ ಕುಳಿತು ತೆಗೆಸಿಕೊಂಡಿರುವ ಫೋಟೋವನ್ನು ಪ್ರಕಟಿಸಿ ಫೋಟೋದಲ್ಲಿ ಕಾಣುವ ಯುವತಿ ಲೀಲಾವತಿ ಮನೆಯ ಕೆಲಸದಾಕೆಯಲ್ಲ; ವಿನೋದ್ ರಾಜ್ ಅವರ ಮಡದಿ ಎಂದು ಹೇಳಿದ್ದರು. ಇಷ್ಟೆಲ್ಲಾ ಆದ ನಂತರ ಲೀಲಾವತಿಯವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನವನ್ನು ನೀಡಿದ್ದು ಅದರಲ್ಲಿ ತನ್ನ ಮಗನಿಗೆ ವಿವಾಹವಾಗಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದರು.

ಅದನ್ನು ಗೌಪ್ಯವಾಗಿ ಇಟ್ಟಿರಲು ಕಾರಣವನ್ನು ಸಹ ಹೇಳಿಕೊಂಡಿದ್ದರು. ” ನನ್ನ ಮಗನಿಗೆ ಮದುವೆ ಮಾಡಿದ್ದೇನೆ… ಆದರೆ ಯಾಕೆ ಹೇಳಿಲ್ಲ ಅಂದರೆ ನಟ ನಟಿಯರು ತಮ್ಮ ಮಕ್ಕಳ ಮದುವೆಯನ್ನು ಎಂತೆಂತಹದೋ ಸ್ಥಳಗಳಲ್ಲಿ ಮಾಡುತ್ತಾರೆ. ಪ್ಯಾಲೆಸ್ ಗಳಲ್ಲಿ ಮಾಡಿದ್ದಾರೆ. ಆದರೆ ನನಗೆ ಆ ಚೈತನ್ಯವಿರಲಿಲ್ಲ. ಅದಕ್ಕಾಗಿ ಮದುವೆಯ ವಿಚಾರವನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು ಎನಿಸಿತು” ಎಂದಿದ್ದಾರೆ. ಅಷ್ಟೇ ಅಲ್ಲದೆ, “ನನ್ನ ವಯಕ್ತಿಕ ವಿಚಾರವನ್ನು ಕೆದಕಿದರೆ ನರಕಕ್ಕೆ ಹೋಗುತ್ತೀರಾ” ಎಂದಿದ್ದರು.

ಇದಕ್ಕೆ ತಿರುಗುಬಾಣವೆಂಬಂತೆ ಪ್ರಕಾಶ್ ರಾಜ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ; ” ಒಂದು ಸತ್ಯವನ್ನು ಒಪ್ಪಿಕೊಂಡಿರುವುದಕ್ಕೆ ಅಮ್ಮ ಮಗನಿಗೆ ಧನ್ಯವಾದಗಳು. ಹೀಗೆ ಇನ್ನೊಂದು ಸತ್ಯವನ್ನು ಒಪ್ಪಿಕೊಂಡು ಬಿಡಿ. ಬಳಿಕ ಧರ್ಮರಾಯನಂತೆ ಸ್ವರ್ಗಕ್ಕೆ ನೇರವಾಗಿ ನಡೆದುಕೊಂಡೆ ಹೊರಟುಬಿಡಿ. ಆ ಮಹಾಲಿಂಗ ಭಾಗವತರ್ ಅವರ ಆತ್ಮಕ್ಕೆ ಶಾಂತಿಯಾದರೂ ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆ ಇಲ್ಲ… ‘ಯುವರಾಜ್’ಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಬರೆದು ಹಂಚಿಕೊಂಡಿದ್ದಾರೆ.

ಇದರಿಂದಾಗಿ ಲೀಲಾವತಿಯವರ ವೈಯಕ್ತಿಕ ಜೀವನದ ವಿಚಾರವೂ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಪ್ರಕಾಶ್ ರಾಜ್ ಅವರು ಲೀಲಾವತಿಯವರಿಗೆ, ಮಗನಿಗೆ ವಿವಾಹವಾದ ಸತ್ಯವನ್ನು ಒಪ್ಪಿಕೊಂಡಂತೆ ನಿಮ್ಮ ಗಂಡ ಮಹಾಲಿಂಗ ಭಾಗವತರ್ ಎಂಬ ಸತ್ಯವನ್ನು ಕೂಡ ಒಪ್ಪಿಕೊಂಡು ಬಿಡಿ ಎಂದು ಟಾಂಗ್ ನೀಡಿದ್ದಾರೆ. ನೆಟ್ಟಿಗರು ಇವೆಲ್ಲವನ್ನು ಓದಿ ಮುಂದೆ ಯಾವ ರೀತಿಯ ಹೇಳಿಕೆಗಳು ಬರಲಿವೆ ಎಂಬುದನ್ನು ಕಾಯುತ್ತಾ ಕುಳಿತಿದ್ದಾರಂತೆ.