ರಾಜೇಂದ್ರ ಸಿಂಗ್ ಬಾಬು ಕನ್ನಡಕ್ಕೆ ಮುತ್ತಿನ ಹಾರ, ಬಂಧನ, ಹಿಮಪಾತ, ಅಂತ, ನಾಗರಹೊಳೆ ಇನ್ನು ಮುಂತಾದ ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು. ನಿರ್ದೇಶಕನಾಗಿ ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡದಲ್ಲಿ ಮಾಡುವ ಪ್ರಯೋಗಗಳನ್ನು ಮತ್ತೊಬ್ಬರು ಮಾಡುತ್ತಾರೆ ಎಂದು ಊಹಿಸುವುದು ಸಾಧ್ಯ. ಯಾಕೆಂದರೆ ಅಷ್ಟೊಂದು ಪ್ರಯೋಗಾತ್ಮಕ ಪ್ರಯತ್ನಗಳನ್ನು ಕನ್ನಡಕ್ಕೆ ಮಾಡಿದ ಇವರ ನಿರ್ದೇಶನದ ಮೂಲ ಏನಿತ್ತು ಎನ್ನುವುದರ ಬಗ್ಗೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದಾರೆ.
ಈಗೀಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳುತ್ತಿದ್ದಾರೆ ನಮ್ಮ ನಾಗರಹೊಳೆ ಸಿನಿಮಾ 80ರ ದಶಕದಲ್ಲಿಯೇ 12 ಸಿನಿಮಾಗಳಿಗೆ ಡಬ್ಬ ಆಗಿತ್ತು. ರಷ್ಯಾ, ಪ್ಯಾರಿಸ್ ಅವರೆಲ್ಲ ಬಂದು ಇವರೆಲ್ಲ ಬಂದು ಸಿನಿಮಾ ತೆಗೆದುಕೊಂಡು ಹೋಗಿದ್ದರು. ಯಾವಾಗಲೂ ಕಥೆ ಪಾನ್ ಇಂಡಿಯಾ ಆಗಬೇಕು ಕನ್ನಡದಲ್ಲಿ ಮಾಡುತ್ತೇವೆ ಎಂದರೆ ಇಲ್ಲಿನ ಆಚಾರ ವಿಚಾರ, ಜನಜೀವನ, ಪಾತ್ರ ಎಲ್ಲರಿಗೂ ಮುಟ್ಟಿ ಅವರನ್ನು ಇಲ್ಲಿಗೆ ಎಳೆತರಬೇಕು.
ಅದನ್ನು ಬಿಟ್ಟು ಸಿನಿಮಾ ಪ್ಯಾನ್ ಇಂಡಿಯಾ ಮುಟ್ಟಿಸುವ ಸಲುವಾಗಿ ಯಾರದ್ದೋ ಸ್ಟೋರಿ ಮಾಡಿದರೆ ಅಷ್ಟು ಸಮಂಜಸವಲ್ಲ ಎಂದಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಒಳ್ಳೆ ಕಥೆಗಳು ಬರುತ್ತಿಲ್ಲಾ ಮೊದಲಿನಂತ ಸ್ಟೋರಿ ಸಿನಿಮಾಗಳು ಇಲ್ಲ ಎಂದು ಕೆಲವೇ ಪ್ರೇಕ್ಷಕ ವರ್ಗ ಹೇಳುವುದನ್ನು ಕೇಳಿದ್ದೇವೆ ನಮ್ಮ ಚಿತ್ರಗಳ ಯಶಸ್ಸಿನ ಗುಟ್ಟು ಕೂಡ ಕಥೆ ಆಗಿರುತ್ತಿತ್ತು, ಕಥೆ ಬರೆದವರನ್ನು ನಾವು ಕೇಳಿದರೆ ನಿರ್ದೇಶಕರ ತಲೆಯಲ್ಲಿ ಈಗಾಗಲೇ ಒಂದು ಏನೋ ಇರುತ್ತದೆ ನೀವು ಒಂದೆಳೆಯನ್ನು ಹೇಳಿ ಆಮೇಲೆ ಅದಕ್ಕೆ ತಕ್ಕ ಹಾಗೆ ಬೇಕಾದ್ರೆ ಕಥೆ ಬರೆಯೋಣ ಎನ್ನುತ್ತಿದ್ದರು.
ಕಥೆಯೇ ಸಿನಿಮಾಗಬೇಕು ಎಂದಿಲ್ಲ ಅದರಲ್ಲಿರುವ ಒಂದು ಪ್ಯಾರಾ ಅಥವಾ ಒಂದು ಎಳೆ ಅಥವಾ ಒಂದು ಹಾಡು ಕೂಡ ಕಥೆಗೆ ಸ್ಪೂರ್ತಿ ಆಗಬಹುದು ಅಲ್ಲಿಂದ ಕಥೆ ಸೃಷ್ಟಿಯಾಗಬಹುದು. ನಾಗರಹೊಳೆ ಎನ್ನುವ ಸಿನಿಮಾ ಮಾಡಿದಾಗ ಮೈಸೂರಿನಲ್ಲಿ ನಾನು ಒಂದು ಪುಸ್ತಕ ಓದಿದೆ. ಮಕ್ಕಳ ಕಥೆ ಬರೆಯುತ್ತಿದ್ದ ಅನಿದ್ ಬ್ಲೈಟನ್ ಸಿನಿಮಾದ ಒಂದು ಪ್ಯಾರಾ ಅದಕ್ಕೆ ಸ್ಪೂರ್ತಿಯಾಗಿತ್ತು. ಮೊದಲಿಗೆ ಐದು ಮಕ್ಕಳನ್ನು ಕಾಡಿನಲ್ಲಿ ಬಿಡುವ ಬಗ್ಗೆ ಯೋಚನೆ ಮಾಡೋಣ ಮುಂದಿನದು ಆಮೇಲೆ ಸೃಷ್ಟಿ ಮಾಡೋಣ ಅಂದುಕೊಂಡು ಶುರು ಮಾಡಿದವು ಅದು ಎಂತ ಹಿಟ್ಟಾಯ್ತು ಎಲ್ಲರಿಗೂ ಗೊತ್ತೇ ಇದೆ.
ಹೊಂಬಿಸಿಲು, ಎಡಕಲ್ಲು ಗುಡ್ಡದ ಮೇಲೆ ಇದೆಲ್ಲ ಸುಧಾ ಪತ್ರಿಕೆಯಲ್ಲಿ ಬರುತ್ತಿದ್ದ ಕಥೆಗಳು, ಅನೇಕ ಸಿನಿಮಾಗಳು ಸುಧಾಪತ್ರಿಕೆಯಿಂದಲೇ. ಮೊದಲಿಗೆ ಈಗಿನ ನಿರ್ದೇಶಕರುಗಳು ವಾರಕ್ಕೆರಡು ಪುಸ್ತಕ ಓದುವುದನ್ನು ರೂಢಿ ಮಾಡಿಕೊಂಡರೆ ಇದೆಲ್ಲಾ ಸಾಧ್ಯವಾಗುತ್ತದೆ ಎಂದರು. ಅಂತ ಸಿನಿಮಾ ಮಾಡಿದಾಗ ಅದನ್ನು ನಿರ್ಮಾಪಕರಾದ ದೊರೈ ಭಗವಾನ್ ಅವರು ಅಣ್ಣಾವ್ರಿಗೆ ಎಂದು ಕೇಳಿದ್ದರು. ಆಗಲೇ ವಿಷ್ಣುವರ್ಧನ್ ನನಗೆ ಬಹಳ ಆತ್ಮೀಯ ಸ್ನೇಹಿತನಾಗಿದ್ದ, ನಾನು ವಿಷ್ಣುಗೂ ಕೂಡ ಅಂತ ಸಿನಿಮಾ ಬೇಡ ಎಂದು ಹೇಳಿದ್ದೆ.
ಜೊತೆಗೆ ಅಣ್ಣಾವ್ರನ್ನು ಭೇಟಿಯಾಗಿ ಅತ ಮಾಸ್ ಸಿನಿಮಾ ಈಗಾಗಲೇ ಇಷ್ಟು ದೊಡ್ಡ ಹೆಸರು ಮಾಡಿದ್ದೀರಾ, ಈ ಸಿನಿಮಾದಲ್ಲಿ ಬರುವ ಕೆಲ ಸನ್ನಿವೇಶಗಳು ನಿಮಗೆ ಸೂಟ್ ಆಗುವುದಿಲ್ಲ. ಉದಾಹರಣೆಗೆ, ಸಿನಿಮಾದಲ್ಲಿ ಹೀರೋ ಅನ್ನು ಕಟ್ಟಿ ಹಾಕಿ ಅವನೆದುರೆ ಹೆಂಡತಿಗೆ ಹೊಡೆಯುತ್ತಾರೆ. ಜನರೂ ನೋಡುವಾಗ ಹೀರೋ ಎಲ್ಲವನ್ನು ಕಿತ್ತೆಸೆದು ಅವರಿಗಳೆಲ್ಲ ಹೊಡೆಯುತ್ತಾನೆ ಎಂದು ನಿರೀಕ್ಷೆ ಇಟ್ಟು ಕೊಂಡಿರುತ್ತಾರೆ ಹಾಗಾಗಿ ಇದು ನಿಮಗೆ ಸೂಟ್ ಆಗಲ್ಲ ಮುಂದೆ ಯಾವುದಾದರೂ ಕಥೆಯನ್ನು ನಿಮಗಾಗಿಯೇ ಮಾಡಿ ನಿರ್ದೇಶನ ಮಾಡುತ್ತೇನೆ ಎಂದು ಹೇಳಿದ್ದೆ.
ಆ ಸಮಯದಲ್ಲಿ ಅಂಬರೀಷ್ ಗೆ ಇನ್ನು ಯಾವುದೇ ಬ್ಯಾಗ್ರೌಂಡ್ ಇರಲಿಲ್ಲ. ಜನ ಈ ಪಾತ್ರದಲ್ಲಿ ಅಂಬರೀಷ್ ನ ಒಪ್ಪಿಕೊಂಡರು. ಅಂಬಿ ಅಲ್ಲದೇ ಅಂತ ಸಿನಿಮಾವನ್ನು ಬೇರೆ ಯಾರಿಂದಲೂ ಕೂಡ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಉದಾಹರಣೆ ಕೊಡುತ್ತಾ ಕಥೆಗೆ ಹೀರೋ ಮುಖ್ಯ ಅಲ್ಲ ಕಥೆಗೆ ಸೂಟ್ ಆಗುವ ಹೀರೋ ಇರಬೇಕು ಎನ್ನುವ ಅವರ ಅಭಿಪ್ರಾಯವನ್ನು ತಿಳಿಸಿದರು.