ಸಿಂಹ ರಾಶಿಯವರಿಗೆ 2023ನೇ ವರ್ಷವೂ ಬಹಳ ಅನುಕೂಲಕರವಾಗಿತ್ತು, 2023ರ ವರ್ಷದಲ್ಲಿ ಸಿಂಹ ರಾಶಿಯವರ ಅನೇಕ ಕನಸುಗಳು ನನಸಾಗಿ ನಿರೀಕ್ಷೆಗೆ ತಕ್ಕ ಫಲ ಕೂಡ ದೊರಕಿದೆ. ಹಾಗೆ ಕೆಲವರು ಹೊಸ ವಿಷಯಗಳ ಆರಂಭಕ್ಕೆ 2023ರಲ್ಲಿ ಪ್ರಯುಕ್ತ ಪಟ್ಟಿದ್ದಾರೆ ಈ ಎಲ್ಲಾ ಭಾಗ್ಯವೂ ಕೂಡ 2024ರ ವರ್ಷದಲ್ಲೂ ಕೂಡ ಮುಂದುವರೆದಿದೆ ಎಂದೇ ಹೇಳಬಹುದು.
2024ರ ವರ್ಷವೂ ಕೂಡ ಸಿಂಹ ರಾಶಿಯವರಿಗೆ ಬಹಳ ಅದೃಷ್ಟ ತರುವ ವರ್ಷವಾಗಿದ್ದು ಹಿಂದಿನ ವರ್ಷ ಬಹಳ ಆಸಕ್ತಿ ವಹಿಸಿ ಶ್ರಮಪಟ್ಟು ಮಾಡಿದ ಎಲ್ಲಾ ಪ್ರಯತ್ನಗಳಿಗೂ ಕೂಡ ಹೆಚ್ಚಿನ ಫಲ ದೊರೆಯುತ್ತಿದೆ. ಹೊಸ ವರ್ಷ 2024 ರಲ್ಲಿ ಇನ್ನು ಯಾವೆಲ್ಲ ಸಂಗತಿಗಳಲ್ಲಿ ಯಶಸ್ಸು ಕಾಣಬಹುದು? ಏನೆಲ್ಲಾ ಲಾಭಗಳು ಸಿಗಬಹುದು ಮತ್ತು 2024 ರ ಭವಿಷ್ಯ ಏನಿದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!
2024ರ ವರ್ಷದಲ್ಲಿ ಸಿಂಹ ರಾಶಿಯವರಿಗೆ ರವಿ ದಶೆ, ಗುರು ದೆಶೆ ಹಾಗೂ ಶುಕ್ರ ದೆಶೆ ನಡೆಯುತ್ತಿದ್ದರೆ ಅಥವಾ ಈ ಸಂಬಂಧಿತ ಭುಕ್ತಿಗಳು ನಡೆಯುತ್ತಿದ್ದರು ಕೂಡ ಇನ್ನು ಹೆಚ್ಚಿನ ಲಾಭವನ್ನು ಕಾಣುತ್ತಾರೆ. ಸಿಂಹ ರಾಶಿಯವರಿಗೆ ಯಶಸ್ಸು ಪ್ರೀತಿ ಗೌರವ ಗೆಲವು ಎಲ್ಲವೂ ಕೂಡ ಲಭಿಸುತ್ತಿದೆ.
ಸಿಂಹ ರಾಶಿಯ ಶುಭಫಲಗಳು ಬಹಳ ಉತ್ತಮವಾಗಿದ್ದು ಒಂದರ ಹಿಂದೆ ಒಂದರ ಸಾಲಿನಂತೆ ಸಾಲು ಸಾಲು ಸಂತೋಷ ಇವರನ್ನು ಹರಸಿ ಬರುತ್ತದೆ. ಒಂದು ಹಂತದಲ್ಲಿ ಇವರು ಸುತ್ತಲೂ ಯಶಸ್ಸು ಹಾಗೂ ಸಂತೋಷವನ್ನು ಕಾಣುವುದರಿಂದ ಅಹಂಕಾರಿಗಳು ಕೂಡ ಆಗಬಹುದು ಇಂತಹ ಮನಸ್ಥಿತಿಗೆ ಹೋಗುವಷ್ಟು ಆನಂದವನ್ನು ಪಡೆಯದಿದ್ದಾರೆ ಆದರೆ ಈ ಬಗ್ಗೆ ಬಹಳ ಎಚ್ಚರದಿಂದ ವರ್ತಿಸಿ, ವಿಜಯಶಾಲಿಗಳಾಗಿ ಆದರೆ ವಿನಯದಿಂದ ನೆಮ್ಮದಿಯಾಗಿ ಬದುಕಿರಿ.
ಉದ್ಯೋಗದ ವಿಷಯವಾಗಿ ವ್ಯಾಪಾರ ವ್ಯವಹಾರದ ಕೆಲಸಗಳಲ್ಲಿ ಎಲ್ಲದರಲ್ಲೂ ಕೂಡ ಯಶಸ್ಸನ್ನು ಇವರದ್ದೇ ಆಗಿರುತ್ತದೆ. ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಪರಿಹಾರ ದೊರೆಯಲಿದೆ ಅಥವಾ ಕೊಂಡುಕೊಳ್ಳುವ ಯೋಜನೆ ಏನಾದರೂ ಇದ್ದರೆ ಅದಕ್ಕೆ ಸಕಾರಾತ್ಮಕವಾದ ಸೂಚನೆಗಳು ಸಹ ಸಿಗಲಿದೆ.
ಈ ಸುದ್ದಿ ಓದಿ:- ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾ ಒಳ್ಳೆಯದು, ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ನೋಡಿ.!
ನಿಮ್ಮ ಶತ್ರುಗಳು ಕೂಡ ಮಿತ್ರಗಳಾಗುವಂತಹ ನಿಮ್ಮನ್ನು ವಿರೋಧಿಸುತ್ತಿದ್ದವರು ಕೂಡ ಬೆಂಬಲಿಸುವಂತಹ ವರ್ಷವೂ 2024 ಆಗಿರುತ್ತದೆ ಇದೆಲ್ಲ ಆಗುತ್ತದೆ ಎಂದು ನೀವು ಕೂಡ ಯೋಚಿಸದಂತಹ ಸನ್ನಿವೇಶಗಳು ನಿಮ್ಮ ಬದುಕಿನಲ್ಲಿ ನಡೆದು ನಿಮಗೆ ಅಚ್ಚರಿಯನ್ನು ಕೂಡ ತರುತ್ತದೆ.
ಹಣಕಾಸಿನ ವಿಚಾರದಲ್ಲಿ ಜೂನ್ ತಿಂಗಳ ನಂತರದ ದಿನಗಳು ಇನ್ನು ಉತ್ತಮವಾಗಿದ್ದು ಅರ್ಧ ವರ್ಷದ ನಂತರ ನೀವು ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಂಡರೆ ಸೂಕ್ತ ಮತ್ತು ಕಲಿಕೆಗೆ ಕೂಡ ಈ ಸಮಯವು ಉತ್ತಮವಾಗಿದ್ದು, ನೀವು ನಿಮ್ಮ ಅಗತ್ಯತೆಗೆ ಅಥವಾ ಭವಿಷ್ಯಕ್ಕಾಗಿ ಹೊಸದಾಗಿ ಬೇರೆ ಏನನ್ನಾದರು ಕಲಿಯಲು ಬಯಸಿದರೆ ಈ ಸಮಯದಲ್ಲಿ ಆರಂಭಿಸಿ ಅದು ನಿಮಗೆ ಖಂಡಿತವಾಗಿಯೂ ಕೈಹಿಡಿಯಲಿದೆ, ಈ ಸಮಯದಲ್ಲಿ ಕಳೆದ ವಿದ್ಯೆಯಿಂದ ನೀನು ಬಹಳ ವರ್ಷದವರೆಗೆ ಅನುಕೂಲತೆಯನ್ನು ಹೊಂದಲಿದ್ದೀರಿ.
ವಿವಾಹ ಹಾಗೂ ಸಂತಾನ ಪ್ರಾಪ್ತಿಗೆ ಸಂಬಂಧಪಟ್ಟ ದೋಷಗಳು ನಿವಾರಣೆಯಾಗಿ ಸಂತೋಷಕರವಾದ ಸುದ್ದಿಗಳನ್ನು ಖಂಡಿತವಾಗಿಯೂ ಈ ವರ್ಷ ಕೇಳುತ್ತೀರಿ. ಹಾಗಾಗಿ ಯಾವುದೇ ಒಳ್ಳೆ ಕಾರ್ಯಗಳನ್ನು ಆರಂಭಿಸಲು ಮತ್ತು ಮುಂದುವರೆಸಲು ಈ ವರ್ಷ ಆರಂಭಿಸುವುದಕ್ಕೆ ಬಹಳ ಒಳ್ಳೆಯದು.
ಈ ಸುದ್ದಿ ಓದಿ:- ಭಾರತ್, ಇಂಡಿಯನ್, HP ಯಾವುದೇ ಗ್ಯಾಸ್ ಆದರೂ ವಾಟ್ಸಾಪ್ ನಲ್ಲಿಯೇ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ವರ್ಷದ ಕೊನೆಯಲ್ಲಿ ತೀರ್ಥ ಯಾತ್ರೆಗಳನ್ನು ಕೈಗೊಳ್ಳಿ ಮತ್ತು ಸತತವಾಗಿ ಕೆಲವು ವರ್ಷಗಳಿಂದ ನಿಮ್ಮ ಪಾಲಿಗೆ ಭಗವಂತನ ಕೃಪಾಕಟಾಕ್ಷ ದೊರೆತಿರುವುದರಿಂದ ಧನ್ಯವಾದಗಳನ್ನು ಅರ್ಪಿಸಿ ಮತ್ತು ಈ ಭಾಗ್ಯ ಪಡೆದಿರುವ ನೀವು ನಿಮ್ಮ ಕಣ್ಣೆದುರಿಗಿರುವ ಅಸಹಾಯಕರಿಗೆ ಸಹಾಯ ಮಾಡಿ ದೇವರ ಋಣ ತೀರಿಸಿ. ಒಟ್ಟಾರೆಯಾಗಿ ಸಿಂಹ ರಾಶಿಯವರಿಗೆ ಎಲ್ಲಾ ವಿಷಯದಲ್ಲೂ ಕೂಡ ಈ ವರ್ಷ ಒಳ್ಳೆಯದಾಗಲಿದೆ.