ಸಾಲ ಎನ್ನುವುದು ಮನುಷ್ಯನ ಅತಿ ದೊಡ್ಡ ಶತ್ರು. ಸಾಲ ಇದ್ದ ಮನೆಯಲ್ಲಿ ಖಂಡಿತವಾಗಿಯೂ ಕೂಡ ನೆಮ್ಮದಿ ಇರುವುದಿಲ್ಲ. ಮನೆಯ ಯಜಮಾನನು ಸಾಲಕ್ಕೀಡಾದರೆ ಅದರ ಪರಿಣಾಮ ಮನೆಯಲ್ಲಿರುವ ಎಲ್ಲರ ಮೇಲೂ ಕೂಡ ಬೀಳುತ್ತದೆ ಗಂಡ ಚಿಂತೆಯಲ್ಲಿ ಇರುವುದರಿಂದ ಹೆಂಡತಿ ಸಂತೋಷವಾಗಿ ಇರುವುದಿಲ್ಲ.
ಸಾಲ ತೀರಿಸುವುದಕ್ಕೆ ಯಾವುದೇ ಆದಾಯ ಇಲ್ಲದೆ ಅಥವಾ ಯಾವ ಉದ್ದೇಶಕ್ಕಾಗಿ ಸಾಲ ಪಡೆದಿದ್ದರು ಅದು ನೆರವೇರದೆ ಸಾಲ ತೀರಿಸುವ ದಾರಿ ತಿಳಿಯದೆ ಮಾನಸಿಕ ಒತ್ತಡಗಳಾಗಿ ಗಂಡ ಹೆಂಡತಿ ಜಗಳ ಶುರುವಾಗುತ್ತದೆ ನಿಧಾನವಾಗಿ ಮನೆ ವಾತಾವರಣ ಕೆಟ್ಟು ಹೋಗುತ್ತದೆ. ಇಂತಹ ಮನೆಗಳಲ್ಲಿ ಬೆಳೆಯುವ ಮಕ್ಕಳು ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ನರಳುತ್ತಾರೆ.
ಹೀಗಾಗಬಾರದು ಎಂದರೆ ಆದಷ್ಟು ನಾವು ಹಣಕಾಸಿನ ವಿಷಯದಲ್ಲಿ ಜಾಗೃತೆಯಿಂದ ಇರಬೇಕು. ಸಾಲ ಇಲ್ಲದ ಮನೆಯಲ್ಲಿ ಅಂಬಲಿ ಇದ್ದರು ಕೂಡ ಅದನ್ನೇ ಕುಡಿದು ನೆಮ್ಮದಿಯಾಗಿ ಬದುಕಬಹುದು. ಆದರೆ ಸಾಲ ಇದ್ದರೆ ನಮ್ಮ ಸುತ್ತ ರಾಜ ವೈಭೋಗವಿದ್ದರೂ ಮನಸ್ಸಿನೊಳಗಿರುವ ಕೊರೆತ ಮಾತ್ರ ಕಡಿಮೆ ಆಗುವುದಿಲ್ಲ.
ಈ ಸುದ್ದಿ ಓದಿ:- ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?
ಒಂದು ವೇಳೆ ನೀವು ಇದನ್ನು ತಿಳಿಯದೆ ಹೀಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಮತ್ತು ಇದರಿಂದ ಹೊರಬರಲಾಗದೆ ಚಿಂತೆ ಪಡುತ್ತಿದ್ದರೆ ಈಗ ನಾವು ಹೇಳುವ ಈ ಸುಲಭ ಉಪಾಯವನ್ನು ಮಾಡಿ ನೀವು ಎಷ್ಟು ಭಕ್ತಿ ಹಾಗೂ ನಂಬಿಕೆಯಿಂದ ಇದನ್ನು ಶ್ರದ್ಧೆ ಇಟ್ಟು ಮಾಡುತ್ತಿರೋ ಅಷ್ಟು ಬೇಗ ನಿಮಗೆ ಉತ್ತಮವಾದ ರಿಸಲ್ಟ್ ಕಂಡು ಬರುತ್ತದೆ.
ಹಂತ ಹಂತವಾಗಿ ನೀವು ನಿಮ್ಮ ಸಾಲ ತಿಳಿಸುತ್ತೀರಿ ಸಾಲ ತೀರಲು ಬೇಕಾದ ಮಾರ್ಗವು ನಿಮಗೆ ದೊರೆಯುತ್ತದೆ ಅಥವಾ ಅನಿರೀಕ್ಷಿತವಾಗಿ ಭಗವಂತನ ಕೃಪಾಕಟಾಕ್ಷದಿಂದ ನಿಮ್ಮ ಸಾಲದ ಹೊರೆ ಇಳಿಯುತ್ತದೆ. ಈ ಉಪಾಯ ಮಾಡಲು ನೀವು ಲಕ್ಷಾಂತರ ಖರ್ಚು ಮಾಡುವ ಅಗತ್ಯ ಇಲ್ಲ. ಕೇವಲ ಎರಡು ರೂಪಾಯಿಗಳಿಗೆ ನೀವು ಸಾಲ ತಿಳಿಸಲು ಮಾರ್ಗ ಕಂಡುಕೊಳ್ಳಬಹುದು.
ಹಣದ ಒಡತಿ ತಾಯಿ ಮಹಾಲಕ್ಷ್ಮಿ ಮತ್ತು ಆಕೆಯ ಪತಿ ನಾರಾಯಣನ ಕೃಪಾಕಟಾಕ್ಷ ಇದ್ದರೆ ಈ ಸಮಸ್ಯೆ ಬಗ್ಗೆ ಹರಿಯುತ್ತದೆ ಮತ್ತು ಜೀವನದಲ್ಲಿ ಇಂತಹ ಕಷ್ಟ ಬಂದಾಗ ಎದುರಿಸಲು ಧೈರ್ಯ ಬೇಕಾ ಸಾಹಸವಂತ ಆಂಜನೇಯನ ಆಶೀರ್ವಾದ ಬೇಕು ಆಗ ಆತ್ಮಸ್ಥೈರ್ಯದಿಂದ ಯಾವ ಕಷ್ಟವನ್ನು ಬೇಕಾದರೂ ಎದುರಿಸಬಹುದು.
ಈ ಸುದ್ದಿ ಓದಿ:-ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!
ಈಗ ಈ ಮೂರು ಜನರ ಕರುಣೆಗಾಗಿ ಒಂದು ಸರಳ ಉಪಾಯ ಮಾಡಿ ಅದೇನೆಂದರೆ, ಮಂಗಳವಾರದ ದಿನದಂದು ತಾಯಿ ಮಹಾಲಕ್ಷ್ಮಿಗೆ ಇಷ್ಟವಾದ ಐದು ವೀಳ್ಯದೆಲೆ ತೆಗೆದುಕೊಳ್ಳಿ ಆ ಎಲೆಯ ಮೇಲೆ ಜೇನುತುಪ್ಪದಿಂದ ಓಂ ಶ್ರೀ ಓಂ ಎಂದು ಬರೆದು ಅದರ ಕೆಳಗೆ ಓಂ ಶ್ರೀ ರಾಮ ಎಂದು ಬರೆಯಿರಿ
ನೆನಪಿನಲ್ಲಿಡಿ ನೀವು ಈಗಾಗಲೇ ಮನೆಯಲ್ಲಿ ಬಳಸುತ್ತಿರುವ ಜೇನುತುಪ್ಪದಿಂದ ಬರೆಯುವಂತಿಲ್ಲ. ಒಂದು ಡಬ್ಬಿಯಲ್ಲಿ ದೇವರ ಕೋಣೆಯಲ್ಲಿ ಜೇನುತುಪ್ಪವನ್ನು ಯಾವಾಗಲೂ ಇಟ್ಟಿರಬೇಕು ಅಥವಾ ಹೊಸದಾಗಿ ಜೇನುತುಪ್ಪವನ್ನು ತಂದು ಆ ಜೇನು ತುಪ್ಪದಲ್ಲಿ ಬರೆಯಬೇಕು.
ಹೀಗೆ ಬರೆದು ಇದನ್ನು ಆಂಜನೇಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅರ್ಚಕರಕ್ಕೆ ಹೇಳಿ ಆಂಜನೇಯನ ಬಳಿ ಇದನ್ನು ಇಡುವಂತೆ ಕೇಳಿಕೊಳ್ಳಿ. ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಕಷ್ಟವನ್ನು ಮನಸ್ಸಿನಲ್ಲಿ ಮಹಾಲಕ್ಷ್ಮಿ ಮಹಾವಿಷ್ಣು ಆಂಜನೇಯನನ್ನು ನೆನೆದು ನಿಮ್ಮ ಕುಲದೇವರನ್ನು ನೆನೆದು ಹೇಳಿಕೊಳ್ಳಿ ನಂತರ ಮನೆಗೆ ಬನ್ನಿ ಸಾಧ್ಯವಾದರೆ ಪ್ರತಿ ಮಂಗಳವಾರದ ದಿನವೂ ಕೂಡ ಈ ಉಪಾಯ ಮಾಡಿ ಚಮತ್ಕಾರಿ ರೀತಿಯಲ್ಲಿ ನೀವು ಸಮಸ್ಯೆಯಿಂದ ಮುಕ್ತಿ ಕಾಣುತ್ತೀರಿ.