ಇತ್ತೀಚಿನ ದಿನಗಳಲ್ಲಿ ಗರ್ಭಕೋಶದಲ್ಲಿ ಗಡ್ಡೆ (Uterine Fibroids) ಎನ್ನುವುದು ಸರ್ವೇಸಾಮಾನ್ಯ ಸಮಸ್ಯೆ ಎನ್ನುವಂತಾಗಿ ಬಿಟ್ಟಿದೆ. ಬೇರೆ ಯಾವುದು ಆರೋಗ್ಯ ಸಮಸ್ಯೆಗೆ ಸ್ಕ್ಯಾನಿಂಗ್ ಮಾಡಿಸಲು ಹೋದಾಗ ಈ ರೀತಿ ಗರ್ಭಕೋಶದಲ್ಲಿ ಗಡ್ಡೆಯಾಗಿರುವುದು ಕೂಡ ಗೊತ್ತಾಯಿತು ಎಂದು ಹೇಳುವ ಮಹಿಳೆಯರಿದ್ದಾರೆ.
ಇನ್ನು ಕೆಲವರು ತಮಗೆ ಆಗುತ್ತಿರುವ ಆರೋಗ್ಯ ವ್ಯತ್ಯಾಸಗಳನ್ನು ಗುರುತಿಸಿ ವೈದ್ಯರ ಬಳಿ ಹೇಳಿಕೊಂಡಾಗ ಅವರು ಸ್ಕ್ಯಾನಿಂಗ್ ಮಾಡಲು ಸೂಚಿಸಿ ನಂತರ ಗೊತ್ತಾಗಿರುವುದು ಇದೆ. ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಈ ರೀತಿ ಆಗುತ್ತದೆ ಎನ್ನುವ ಭಾವನೆ ಇತ್ತು ಹಾಗಾಗಿ 40 ರಿಂದ 45 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ರೀತಿ ಗರ್ಭಕೋಶದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು.
ಆದರೆ ಈಗ 30 – 35ನೇ ವಯಸ್ಸಿನಲ್ಲಿಯೇ ಫೈಬ್ರಾಯ್ಡ್ಸ್ ಕಾಣಿಸಿಕೊಳ್ಳುತ್ತಿದೆ ಗರ್ಭಕೋಶದ ಸುತ್ತಲೂ ಹಾಗೂ ಒಳಗಿನ ಪದರದಲ್ಲಿ ಆಗುವ ಗಡ್ಡೆಗಳನ್ನು ಫೈಬ್ರಾಯ್ಡ್ಸ್ ಎಂದು ಕರೆಯುತ್ತಾರೆ. ಯಾವ ಭಾಗದಲ್ಲಿ ಗಡ್ಡೆ ಆಗುತ್ತದೆ ಎನ್ನುವುದರ ಆಧಾರದ ಮೇಲೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
ಈ ಸುದ್ದಿ ಓದಿ:- ಇದರ ಬೆಲೆ ಕೇವಲ 2 ರೂಪಾಯಿ ಆದರೆ ಕೋಟಿ ಸಾಲ ಇದ್ದರೂ ಕೂಡ ತೀರಿಸುತ್ತದೆ.!
ಯಾವ ಕಾರಣದಿಂದಾಗಿ ಈ ರೀತಿ ಗರ್ಭಕೋಶದಲ್ಲಿ ಗಡ್ಡೆ ಆಗುತ್ತದೆ ಎಂದರೆ ಇದೇ ಕಾರಣ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ ಆದರೆ ಕೆಲವು ಸಾದ್ಯತೆಗಳನ್ನು ಊಹಿಸಬಹುದು.
* ಇದಕ್ಕೆ ಕಾರಣವಾಗುವ ಅಂಶಗಳಲ್ಲಿ ಹಾರ್ಮೋನ್ಸ್ ವೇರಿಯೇಷನ್ ಕೂಡ ಒಂದು, ಅದರಲ್ಲೂ ಮಹಿಳೆಯರ ದೇಹದಲ್ಲಿ ಉತ್ಪತ್ತಿ ಆಗುವ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಈ ರೀತಿ ಫೈಬ್ರಾಯ್ಡ್ಸ್ ಆಗುತ್ತದೆ.
* ವಂಶ ಪಾರಂಪರ್ಯವಾಗಿ ಅಂದರೆ ತಾಯಿ ಅಜ್ಜಿ ಈ ರೀತಿ ತಾಯಿಯ ಸಂಬಂಧಿಕರಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಮಕ್ಕಳು ಮೊಮ್ಮಕ್ಕಳಿಗೂ ಗಡ್ಡೆಗಳಾಗುವ ಸಾಧ್ಯತೆಗಳು ಇರುತ್ತದೆ.
* ಅತಿಯಾದ ಜಂಕ್ ಫುಡ್ ಸೇವನೆಯಿಂದ ಒಬೆಸಿಟಿ ಉಂಟಾಗಿ ಮೆಟಾಬಲಿಸಂ ಸಮಸ್ಯೆಯಾಗಿ ಅದು ನಂತರ ಈ ರೀತಿಯ ಸಮಸ್ಯೆ ಕೊಡಬಹುದು.
* ಆರೋಗ್ಯಕರ ಜೀವನಶೈಲಿಗೆ ವಿರುದ್ಧವಾಗಿರುವ ದುಷ್ಚಟಗಳಾದ ಧೂಮಪಾನ ಮದ್ಯಪಾನ ಇವುಗಳಿಂದ ಕೂಡ ಫೈಬ್ರಾಯ್ಡ್ಸ್ ಆಗುತ್ತದೆ.
* ವ್ಯಾಯಾಮ ಇಲ್ಲದೆ ಇರುವುದು, ಕುಳಿತಲ್ಲಿಯೇ ಕೆಲಸ ಮಾಡುವುದು, ಸರಿಯಾದ ನಿದ್ರೆ ಇಲ್ಲದೆ ಇರುವುದು ಇದು ಮಹಿಳೆಯರಿಗೆ ಹಾರ್ಮೋನ್ಸ್ ವೇರಿಯೇಷನ್ ಉಂಟುಮಾಡುತ್ತದೆ ಇದರಿಂದಲೂ ಕೂಡ ಗರ್ಭಕೋಶದಲ್ಲಿ ಗೆಡ್ಡೆಗಳಾಗುತ್ತವೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?
ಫೈಬ್ರಾಯ್ಡ್ಸ್ ಬಗ್ಗೆ 3 ಮುಖ್ಯ ಸಂಗತಿಗಳು:-
* ಈ ರೀತಿ ಗರ್ಭಕೋಶದಲ್ಲಿ ಗೆಡ್ಡೆಗಳಾದರೆ ಅದನ್ನು ಆಪರೇಷನ್ ಮಾಡಲೇಬೇಕಾ ಎಂದು ಅನೇಕರು ಭಯ ಬೀಳುತ್ತಾರೆ, ಈ ಬಗ್ಗೆ ಧೈರ್ಯವಾಗಿದೆ. ಎಲ್ಲಾ ಫೈಬ್ರಾಯ್ಡ್ಸ್ ಗೂ ಶಸ್ತ್ರಚಿಕಿತ್ಸೆ ಬೇಕಾಗಿರುವುದಿಲ್ಲ, ಬದಲಿ ಪರಿಹಾರವೂ ಇದೆ.
* ಗರ್ಭಕೋಶದೊಳಗೆ ಉಂಟಾಗುವ ಈ ಗಡ್ಡೆಗಳು ನಂತರ ಕ್ಯಾನ್ಸರ್ ತರುತ್ತವೆಯಾ ಎನ್ನುವುದು ಎಲ್ಲಾ ಮಹಿಳೆಯರ ಆತಂಕ,ನಿರಾಳವಾಗಿರಿ ಇವು ಬಿನೈನ್ ಗೆಡ್ಡೆಗಳಾಗಿರುವುದರಿಂದ ಕ್ಯಾನ್ಸರ್ ಕಣಗಳಾಗದಿರುವ ಮ್ಯಾಲಿಗ್ನೆಂಟ್ ಗೆಡ್ಡೆಗಳು. ಇದರಿಂದ ಖಂಡಿತವಾಗಿಯೂ ಕ್ಯಾನ್ಸರ್ ಆಗುವುದಿಲ್ಲ ಹಾಗಾಗಿ ಮಾರಣಾಂತಿಕ ಕಾಯಿಲೆ ಎಂದು ಹೆದರುವ ಅವಶ್ಯಕತೆ ಇಲ್ಲ ಹಾಗೆಂದು ಇದು ಕೂಡ ಒಂದು ಆರೋಗ್ಯ ಸಮಸ್ಯೆ ಆಗಿರುವುದರಿಂದ ನಿರ್ಲಕ್ಷ ಮಾಡುವಂತೆಯೂ ಇಲ್ಲ.
ಈ ಸುದ್ದಿ ಓದಿ:- ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!
* ಗರ್ಭಕೋಶದಲ್ಲಿ ಗಡ್ಡೆಗಳಿದ್ದರೆ ಆ ಮಹಿಳೆಯರಿಗೆ ಮಕ್ಕಳಾಗುವುದಿಲ್ಲವೇ ಎನ್ನುವುದು ಇನ್ನಷ್ಟು ಮಹಿಳೆಯರ ಆತಂಕಕ್ಕೆ ಕಾರಣ ಯಾವ ಭಾಗದಲ್ಲಿ ಗೆಡ್ಡೆಗಳಾಗಿದೆ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ಗರ್ಭಕೋಶದ ಒಳಪದರದಲ್ಲಿ ಪೈಬ್ರಾಯ್ಡ್ಸ್ ಇದ್ದರೆ ಗರ್ಭ ಅಟ್ಯಾಚ್ ಆಗುವ ತೊಂದರೆಯಾಗುವುದರಿಂದ ಆ ಜಾಗದಲ್ಲಿ ಗಡ್ಡೆ ಇದ್ದವರಿಗೆ ಮಾತ್ರ ಮಕ್ಕಳಾಗುವುದು ತಡ ಆಗಬಹುದು.
ಪರಿಹಾರ:- ನೀವು ಯಾವ ಕಾರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದೀರಾ? ಮಹಿಳೆಯ ವಯಸ್ಸು ಎಷ್ಟು? ಫೈಬ್ರಾಯ್ಡ್ಸ್ ಸೈಫ್ ಎಷ್ಟು? ಇದರ ಲಕ್ಷಣಗಳು ಏನೇನಿದೆ? ಎನ್ನುವುದರ ಆಧಾರದ ಮೇಲೆ ಟ್ರೀಟ್ಮೆಂಟ್ ನಿರ್ಧಾರವಾಗುತ್ತದೆ.