ಯಾವುದೇ ರಾಶಿಯಾದರೂ ಕೂಡ ನೂರಕ್ಕೆ ನೂರರಷ್ಟು ನಿಖರವಾಗಿ ಹೀಗೆ ಎಂದು ಭವಿಷ್ಯ ಹೇಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ರಾಶಿಯಲ್ಲಿ ಆಗುವ ಗ್ರಹ ಸಂಚಾರಗಳು, ಸ್ಥಾನ ಬದಲಾವಣೆಗಳು ಮತ್ತು ಇನ್ನಿತರ ಜಾತಕದಲ್ಲಿನ ಸಂಗತಿಗಳು ಎಲ್ಲರ ಜೀವನದಲ್ಲೂ ಕೂಡ ಒಂದೇ ರೀತಿಯ ಪರಿಣಾಮ ಬೀರುವುದಿಲ್ಲ ಆದರೆ ಕೆಲವು ಸಾಮ್ಯತೆಗಳಂತೂ ಖಂಡಿತ ಇರುತ್ತದೆ.
ಕೆಲವೊಂದು ಗುಣಲಕ್ಷಣಗಳು ತಪ್ಪುವುದಿಲ್ಲ ಮತ್ತು ಅವರ ಭವಿಷ್ಯ ತಿಳಿದು ಕೆಲ ತಿದ್ದುಪಡಿ ಮಾಡಿಕೊಳ್ಳುವುದರಿಂದ ಬದುಕು ಸರಾಗವಾಗುತ್ತದೆ. ಹಾಗಾಗಿ ಮಕರ ರಾಶಿಯ ಕುರಿತಾದ ಕೆಲವು ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮಕರ ರಾಶಿಯ ರಾಶಿ ಅಧಿಪತಿ ಶನಿ. ಕಾಲಪುರುಷನ ಕುಂಡಲಿಯಲ್ಲಿ ಹತ್ತರ ಭಾವದ ಮನೆ ಈ ಹತ್ತರ ಮನೆಯು ಹೆಸರು, ಕೀರ್ತಿ, ಸರ್ಕಾರ, ಸರ್ಕಾರದ ಕೆಲಸಗಳು ಪ್ರತಿಷ್ಠೆಯ ಸೂಚಕವಾಗಿದೆ ಮತ್ತು ನಮ್ಮ ಕರ್ಮಸ್ಥಾನವು ಆಗಿದೆ.
ಉತ್ತರಾಷಾಡ, ಶ್ರವಣ ಹಾಗೂ ಧನಿಷ್ಠ ನಕ್ಷತ್ರದಲ್ಲಿ ಜನಿಸಿದವರು ಮಕರ ರಾಶಿಗೆ ಬರುತ್ತಾರೆ. ಮಕರ ರಾಶಿಯ ಸ್ವಭಾವದ ಬಗ್ಗೆ ಹೇಳುವುದರ ಮೇಲ್ನೋಟಕ್ಕೆ ಇವರು ಬಹಳ ಸೌಮ್ಯ ಸ್ವಭಾವದವರಾಗಿರುತ್ತಾರೆ ಮತ್ತು ಬಹಳ ಮುಗ್ಧರಂತೆ ಕಾಣುತ್ತಾರೆ ಆದರೆ ಆಳದಲ್ಲಿ ಇವರು ಬಹಳ ತಿಳಿದುಕೊಂಡಿರುತ್ತಾರೆ ಆದರೆ ಯಾವುದನ್ನು ಕೂಡ ಗೊತ್ತು ಎಂದು ತೋರಿಸಿಕೊಳ್ಳುವುದಿಲ್ಲ, ಇವರು ಬಹಳ ಬುದ್ಧಿವಂತರಾಗಿರುತ್ತಾರೆ.
ಈ ಸುದ್ದಿ ಓದಿ:- ಫ್ರಿಜ್ ನಲ್ಲಿ ಇಟ್ಟ ಈ ಆಹಾರ ಪದಾರ್ಥಗಳು ವಿಷವಾಗುತ್ತವೆ, ಅಪ್ಪಿತಪ್ಪಿಯು ಹೀಗೆ ಮಾಡಬೇಡಿ.!
ಆದರೂ ಅನೇಕ ಬಾರಿ ಅವಕಾಶಗಳಿಂದ ವಂಚಿತರಾಗುತ್ತಾರೆ. ಹಾಗೆ ಇವರು ಬಹಳ ಮಂದಗತಿಯಲ್ಲಿ ಸಾಗುತ್ತಿರುತ್ತಾರೆ, ಚುರುಕುತನದ ಕೊರತೆಯಿಂದಾಗಿ ತಮ್ಮ ಇಷ್ಟದ ಎಷ್ಟೋ ವಿಷಯಗಳನ್ನು ಕಳೆದುಕೊಂಡಿರುತ್ತಾರೆ. ಇವರು ಕೆಲವೊಮ್ಮೆ ಸುಳ್ಳು ಹೇಳುವ ಅಥವಾ ಕೊಟ್ಟ ಮಾತಿಗೆ ತಪ್ಪುವ ರೀತಿ ನಡೆದುಕೊಳ್ಳುತ್ತಾರೆ. ಹಾಗಾಗಿ ಮಾತಿನ ಬಗ್ಗೆ ನಿಗಾ ಇರಲಿ ಇದೊಂದು ಸಮಸ್ಯೆ ಸರಿಪಡಿಸಿಕೊಳ್ಳಲೇಬೇಕು.
ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಮಕರ ರಾಶಿ ಮಹಿಳೆಯರ ಹೃದಯವು ಮಾತೃ ಹೃದಯವಾಗಿರುತ್ತದೆ. ಅವರು ಬಹಳ ಬೇಗ ಎಲ್ಲರಿಗೂ ಕಲಿಕರ ತೋರಿ ಬಿಡುತ್ತಾರೆ ಮತ್ತು ಕ್ಷಮೆ ನೀಡುತ್ತಾರೆ. ಮಕರ ರಾಶಿಯ ಪುರುಷರು ತಮ್ಮ ತಾಯಿಗೆ ಮೊದಲ ಸ್ಥಾನ ನೀಡುತ್ತಾರೆ ಆದರೆ ಬಹುತೇಕ ಮಕರ ರಾಶಿಯ ಎಲ್ಲಾ ಪುರುಷ ವ್ಯಕ್ತಿಗಳು ಕೂಡ 75%ರಷ್ಟು ತಂದೆಯ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಿಲ್ಲ.
ಮನಸ್ತಾಪಗಳಿರುತ್ತವೆ ಅಥವಾ ಪೂರ್ತಿಯಾಗಿ ಯಾವುದೋ ವಿಚಾರಕ್ಕಾಗಿ ಎದುರು ಹಾಕಿಕೊಂಡಿರುತ್ತಾರೆ. ಆದರೆ ಇಂಥಹ ಸಂದರ್ಭ ಬಂದಾಗ ನೀವೇ ಸೋತು ನೋಡುವುದು ಬಹಳ ಒಳ್ಳೆಯದು ಪಿತೃ ಶಾಪ ಒಳ್ಳೆಯದಲ್ಲ ಯಾವುದೇ ವಿಷಯ ತೆಗೆದುಕೊಂಡು ಅದನ್ನು ಪೂರ್ತಿ ಮಾಡುವ ತನಕ ಇವರು ಬಿಡುವುದಿಲ್ಲ. ಎಷ್ಟೇ ಕ’ಷ್ಟ ಬೇಕಾದರೂ ಕೊಡುತ್ತಾರೆ, ಎಷ್ಟು ಸಮಯ ಬೇಕಾದರೂ ಕಾಯುತ್ತಾರೆ.
ಈ ಸುದ್ದಿ ಓದಿ:-ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!
ಇವರಿಗೆ ಕೋ’ಪ ಸಾಮಾನ್ಯವಾಗಿ ಬರುವುದಿಲ್ಲ ಆದರೆ ಒಮ್ಮೆ ಕೋ’ಪ ಬಂದರೆ ಮಾತ್ರ ಇದನ್ನು ತಡೆಯಲು ಯಾರಿಗೂ ಆಗುವುದಿಲ್ಲ. ವಿದೇಶಗಳಲ್ಲಿ ಉದ್ಯೋಗ ಮಾಡಲು ಬಯಸುತ್ತಾರೆ ಅಥವಾ ಸರ್ಕಾರಿ ಉದ್ಯೋಗದ ಕಾರಣದಿಂದಾಗಿ ಸ್ವಸ್ಥಾನಕ್ಕಿಂತ ಬೇರೆ ಸ್ಥಳದಲ್ಲಿ ಇರುತ್ತಾರೆ, ಈ ರೀತಿ ಮಕರ ರಾಶಿಯವರು ತಮ್ಮಸ್ಥಳದಿಂದ ಬೇರೆ ಸ್ಥಳದಲ್ಲಿ ಇದ್ದು ವ್ಯಾಪಾರ ವ್ಯವಹಾರ ಅಥವಾ ಉದ್ಯೋಗ ಮಾಡುವುದರಿಂದ ಜೀವನದಲ್ಲಿ ಇನ್ನೂ ಉತ್ತಮ ಸ್ಥಾನಕ್ಕೆ ಹೋಗುತ್ತಾರೆ.
ಗುರು ಹಿರಿಯರ ಬಗ್ಗೆ ಈ ರಾಶಿಯವರು ಎಂದಿಗೂ ಅಸಡ್ಡೆ ಮಾಡಬಾರದು. ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯುವುದರಿಂದ ಇನ್ನೂ ಉತ್ತಮ ರೀತಿಯಲ್ಲಿ ಬದುಕುತ್ತಾರೆ ಸಾಧ್ಯವಾದರೆ ಮಕರ ರಾಶಿಯವರು ತಪ್ಪದೆ ಪ್ರತಿ ಗುರುವಾರ ರಾಯರ ಅಥವಾ ಯಾವುದೇ ಗುರುಗಳ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವುದು ಒಳ್ಳೆಯದು. ಪ್ರತಿದಿನವೂ ತಪ್ಪದೇ ಅಷ್ಟಗಂಧವನ್ನು ಹಣೆಗೆ ಇಟ್ಟುಕೊಳ್ಳಿ ಇದರಿಂದ ನಿಮ್ಮ ಜ್ಞಾನ ಅಭಿವೃದ್ಧಿ ಆಗುತ್ತದೆ ಮತ್ತು ನೀವು ಸನ್ಮಾರ್ಗದಲ್ಲಿ ನಡೆದು ಯಶಸ್ವಿಯಾಗುತ್ತೀರಿ.