ನಟ ಅವಿನಾಶ್ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಇವರು ವಿಶ್ವ ವಿದ್ಯಾಲಯದಲ್ಲಿ ಆಂಗ್ಲ ಭಾಷೆಯಲ್ಲಿ ಎಮ್.ಎ ಪದವಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಇವರ ಅಭಿನಯಿಸಿರುವ ಇವರು ಮೊದಲಿಗೆ ಮಾಯಾಮೃಗ ಧಾರಾವಾಹಿಯ ಮೂಲಕ ಬಣ್ಣವನ್ನು ಹಚ್ಚಿದ್ದಾರೆ. ನಂತರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿರುವಂತಹ ಅವಿನಾಶ್ ಅವರು ಸಾಕಷ್ಟು ಮಟ್ಟದ ಕೀರ್ತಿಯನ್ನು ಗಳಿಸಿಕೊಂಡಿದ್ದಾರೆ. ಹಾಗೆಯೇ ಮಾಳವಿಕಾ ಅವರು ಜನಿಸಿದ್ದು ತಮಿಳುನಾಡಿನಲ್ಲಿ ತಂದೆ ಎನ್ ಗಣೇಶ್ ಹಾಗು ತಾಯಿ ಸಾವಿತ್ರಿ, ಬಾಲ್ಯ ಹಾಗು ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮಿಳುನಾಡಿನಲ್ಲಿಯೇ ಮುಗಿಸಿದರು ನಂತರ ಬೆಂಗಳೂರಿನಲ್ಲಿ ಲಾ ಪದವಿಯನ್ನು ಪಡೆದುಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಡ್ಯಾನ್ಸರ್ ಆಗಿದ್ದ ಅವರು ಭರತನಾಟ್ಯವನ್ನು ಕಲಿತಿದ್ದರು ಮಾಳವಿಕಾ ಅವರು ಅವಿನಾಶ್ ರವರ ಜೊತೆ ಸಿನಿಮಾ ಮಾಡುತ್ತಿದ್ದ ವೇಳೆ ಇಬ್ಬರಿಗೂ ಪ್ರೀತಿಯಾಗಿ ಮದುವೆ ಕೂಡ ಆದರು.
ಪದವಿ ಶಿಕ್ಷಣವನ್ನು ಪಡೆದ ನಂತರ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಹಲವು ಅವಕಾಶಗಳು ಇವರಿಗೆ ಹುಡುಕಿಕೊಂಡು ಬಂದವು ಕಿರುತೆರೆಯ ಮೂಲಕ ಮಾಳವಿಕಾ ಅವರು ಕನ್ನಡದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವುದರ ಮೂಲಕ ಸಾಕಷ್ಟು ಹೆಸರನ್ನು ಗಳಿಸಿಕೊಂಡಿದ್ದಾರೆ. ಸದ್ಯಕ್ಕೆ ರಾಜಕೀಯವಾಗಿ ಬಿಜೆಪಿ ಪಾರ್ಟಿಯಲ್ಲಿ ಸಕ್ರಿಯವಾಗಿದ್ದಾರೆ ಮಾಳವಿಕ ಹಾಗೂ ನಟ ಅವಿನಾಶ್ ದಂಪತಿಗಳಿಗೆ ಒಂದು ಮಗು ಇದೆ ದುರಾದೃಷ್ಟವಶಾತ್ ಆ ಮಗು ಬುದ್ಧಿಹೀನ ಮಗುವಾಗಿ ಹುಟ್ಟಿದೆ, ಬುದ್ಧಿ ಶಕ್ತಿ ಕಡಿಮೆ ಇರುವಂತಹ ಮಗುವನ್ನು ನೋಡಿ ಈ ದಂಪತಿಗಳು ಬೇಸರ ಮಾಡಿಕೊಳ್ಳದೆ ಆ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಮಗು ಹುಟ್ಟಿದಾಗ ಮಾಳವಿಕಾ ಹಾಗೂ ಅವಿನಾಶ್ ಅವರು ಹಲವು ಜನರಿಂದ ಅನೇಕ ನಿಂದನೆಗಳನ್ನು ಅನುಭವಿಸಿದ್ದಾರೆ. ಅವಿನಾಶ್ ಹಾಗೂ ಮಾಳವಿಕಾ ಅವರಿಗೆ 14 ವರ್ಷಗಳ ವಯಸ್ಸಿನ ಅಂತರ ಇದ್ದಿದ್ದರಿಂದ ಈ ರೀತಿ ಆದಂತಹ ಮಗು ಜನಿಸಿದೆ ಎಂದು ಚುಚ್ಚು ಮಾತುಗಳು ಸಹ ಕೇಳಿ ಬಂದಿದೆಯಂತೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಮಾಳವಿಕಾ ಹಾಗೂ ಅವಿನಾಶ್ ಆ ಮಗುವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ಆದರೆ ನಾವು ಬದುಕಿರುವ ತನಕ ನಾವು ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಆದರೆ ಮುಂದೆ ಯಾರು ನೋಡಿಕೊಳ್ಳುತ್ತಾರೆ ಎನ್ನುವಂತಹ ಚಿಂತೆಯು ಸಹ ಇವರಿಗೆ ಕಾಡಿದೆಯಂತೆ, ಯಾಕೆಂದರೆ ವೈದ್ಯರು ಹೇಳುವ ಪ್ರಕಾರ ಆ ಮಗುವಿಗೆ ಬುದ್ಧಿಶಕ್ತಿ ಬರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ಕಿರಿತೆರೆ ಮತ್ತು ಬೆಳ್ಳಿ ತೆರೆ ಮೇಲೆ ನಮ್ಮಲ್ಲೆಲ್ಲಾ ರಂಜಿಸುವ, ನಗಿಸುವ ಕಲಾವಿದರು ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋ.ವು, ದುಃ.ಖ ಅನುಭವಿಸುತ್ತಾ ಇರುತ್ತಾರೆ ಎನ್ನುವುದಕ್ಕೆ ಮಾಳವಿ ಮತ್ತು ಅಭಿನಾಶ್ ಅವರ ಜೀವನವೇ ಸಾಕ್ಷಿ. ಬಣ್ಣ ಹಚ್ಚಿ ನಟನೆಯನ್ನು ಮಾಡುವಂತಹ ಕಲಾವಿದರ ಜೀವನ ಎಲ್ಲವೂ ಸಹ ಚೆನ್ನಾಗಿ ಇರುವುದಿಲ್ಲ, ಅವರಿಗೆ ಅವರದ್ದೇ ಆದಂತಹ ಒಂದಷ್ಟು ನೋ.ವುಗಳು ಹಾಗೆ ಅವರ ವೈಯಕ್ತಿಕ ಜೀವನದಲ್ಲಿ ಕೆಲವೊಂದು ಮರೆಯಲಾಗದ ಕಹಿ ಘಟನೆಗಳು ಸಹ ಇರುತ್ತದೆ ಆದರೆ ಅದನ್ನೆಲ್ಲವನ್ನು ಮರೆತು ಜನರನ್ನು ರಂಜಿಸುವಂತಹ ಕಾರ್ಯದಲ್ಲಿ ಅವರು ತೊಡಗಿಕೊಂಡಿರುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ