ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ ಮಗಳು ಹೇಳಿದ್ದೇನು ಗೊತ್ತಾ.?

 

ಮಂಡ್ಯ ರಮೇಶ್ ಅವರು ಮೂಲತಃ ರಂಗಭೂಮಿ ಕಲಾವಿದರು. ಮೈಸೂರಿನಲ್ಲಿ ನಟನಾ ಎನ್ನುವ ಶಾಲೆಯನ್ನು ಕೂಡ ಆರಂಭಿಸಿ ಇಂದು ಕನ್ನಡ ಚಲನಚಿತ್ರರಂಗಕ್ಕೆ ಅನೇಕ ಕಲಾವಿದರು ಗಳನ್ನು ಕೊಡುಗೆಯಾಗಿ ಕೊಟ್ಟಿರುವ ಮಂಡ್ಯ ರಮೇಶ್ ಅವರು ಸ್ವತಃ ತಾವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮಂಡ್ಯ ರಮೇಶ್ ಅವರು ನಾಗಾಭರಣ ಅವರ ನಿರ್ದೇಶನದ ಹಾರ್ಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜನುಮದ ಜೋಡಿ ಸಿನಿಮಾದಿಂದ ತಮ್ಮ ಆಕ್ಟಿಂಗ್ ಕೆರಿಯರ್ ಶುರು ಮಾಡಿದರು.

ಅಂದಿನಿಂದ ಇಂದಿನವರೆಗೆ ಬಹುತೇಕ ಎಲ್ಲಾ ಕಲಾವಿದರೊಂದಿಗೆ ಸ್ನೇಹಿತನ ಪಾತ್ರ ಮಾಡಿದ್ದಾರೆ, ಹೆಚ್ಚಾಗಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಕಿರುತೆರೆಗಳಲ್ಲಿ ಬಹಳ ಗಂಭೀರವಾದ ಪಾತ್ರದಲ್ಲೂ ಅಭಿನಯಿಸುವುದರ ಜೊತೆಗೆ ಮಜಾ ಟಾಕೀಸ್ ಅಂತಹ ಕಾರ್ಯಕ್ರಮದಲ್ಲಿ ಮುದ್ದಣನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಇತ್ತೀಚೆಗೆ ಅವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದಾಗ ನಿರೂಪಕರು ಅವರಿಗೆ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಎಂದಾದರೂ ಯಾವುದಾದರೂ ಸಿನಿಮಾ ಸೆಟ್ಟಿಗೆ ಹೋಗಿ ಯಾಕಾದರೂ ಬಂದೆನೋ ಎಂದು ಬೇಸರ ಅನುಭವಿಸಿದ್ದೀರಾ? ಆ ರೀತಿ ಎಲ್ಲಾದರೂ ಅವಮಾನ ಆಗಿದೆಯಾ ಎಂದು ಕೇಳಿದರು. ಅದಕ್ಕೆ ಮಂಡ್ಯ ರಮೇಶ್ ಅವರು ಎಂದು ಸಹ ಅಂತಹ ಘಟನೆ ನಡೆದೇ ಇಲ್ಲ, ನಾನು ಒಂದು ಸಿನಿಮಾ ಅಥವಾ ಪಾತ್ರ ಒಪ್ಪಿಕೊಂಡ ಮೇಲೆ ಆ ರೀತಿ ಅಂದುಕೊಳ್ಳುವುದು ಇಲ್ಲ.

ಆ ರೀತಿ ನನ್ನ ಜೊತೆ ಯಾರು ವರ್ತಿಸಿಯೂ ಇಲ್ಲ. ಆದರೆ ನಾನು ಹೆಚ್ಚಾಗಿ ಸಿನಿಮಾಗಳಲ್ಲಿ ತೃತೀಯಲಿಂಗಿ ಪಾತ್ರಗಳನ್ನು ಮಾಡುತ್ತಿದ್ದೆ, ನನ್ನ ಮಗಳು ಅದರಿಂದ ಬೇಜಾರು ಮಾಡಿಕೊಳ್ಳುತ್ತಿದ್ದಳು. ಒಂದು ಬಾರಿ ಎರಡು ಬಾರಿ ಸಾಕು ಅಪ್ಪ ಪದೇ ಪದೇ ಯಾಕೆ ಅದೇ ಪಾತ್ರ ಮಾಡುತ್ತೀರಿ ಎಂದು ಕೇಳುತ್ತಿದ್ದಳು. ನಾನು ಅದು ಕೂಡ ಒಂದು ಪಾತ್ರ ಅಲ್ವಾ ಕಂದ ಎಂದು ಹೇಳುತ್ತಿದ್ದೆ ಆದರೂ ಆ ಪಾತ್ರ ಆಯ್ತಲ್ಲ ಬೇರೆ ಪಾತ್ರ ಮಾಡಿ ಇಷ್ಟು ಸಾಕು ಮತ್ತೆ ಅದೇ ಪಾತ್ರದಲ್ಲಿ ಮಾಡಬೇಡಿ ಎಂದು ಹೇಳುತ್ತಿದ್ದಳು.

ಒಂದರ್ಥದಲ್ಲಿ ನಾನು ಆ ಸಮಯದಲ್ಲಿ ಅದೇ ರೀತಿ ಫೇಮಸ್ ಆಗಿಬಿಟ್ಟಿದ್ದೆ, ತ್ರೀ ಜೆಂಡರ್ ಪಾತ್ರಕ್ಕೆ ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ನಾನೇ. ಸ್ವತಃ ಅಂಬರೀಶ್ ಅವರೇ ನನ್ನನ್ನು ನೋಡಿದಾಗಲೆಲ್ಲ ಅದನ್ನೇ ಹೇಳಿ ನೆನೆಸಿಕೊಳ್ಳುತ್ತಿದ್ದರು ನೀನು ಹಾಗೂ ಸಾಧುಕೋಕಿಲ ಎಷ್ಟು ಚೆನ್ನಾಗಿ ಆಕ್ಟಿಂಗ್ ಮಾಡಿದ್ದೀರ ಎಂದು ಹೇಳಿಕೊಂಡು ನೆನೆಸಿಕೊಂಡು ನಗುತ್ತಿದ್ದರು. ಆದರೆ ನನ್ನ ಮಗಳಿಗೆ ಆ ಪಾತ್ರದ ಬಗ್ಗೆ ಬೇಸರ ಇತ್ತು, ಜನ ಎಲ್ಲ ನೋಡುತ್ತಾರೆ ಪದೇ ಪದೇ ಅದೇ ಪಾತ್ರ ಹೆಚ್ಚಾಗಿ ನಿಮಗೆ ಬರುತ್ತವೆ.

ಹಾಗಾಗಿ ಆ ಪಾತ್ರ ಇನ್ನೂ ಬೇಡ ಮಾಡಬೇಡಿ ಎಂದಳು, ಹಾಗಾಗಿ ಅವಳ ಮಾತಿಗಾಗಿ ನಾನು ಅಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಹೇಳುತ್ತಿದ್ದೆ. ಅಷ್ಟು ಬಿಟ್ಟರೆ ಬೇರೆ ಯಾವ ಪಾತ್ರವನ್ನು ಯಾವ ಸಿನಿಮಾವನ್ನು ಆಗುವುದಿಲ್ಲ ಎಂದು ಹೇಳಿಲ್ಲ ಎಂದು ನಿರೂಪಕರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜೊತೆಗೆ ಇದೆ ಇಂಟರ್ವ್ಯೂ ಅಲ್ಲಿ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದರ ಬಗ್ಗೆ ಜೊತೆಗೆ ಅವರಿಗೆ ಸಿಕ್ಕ ಅನೇಕ ಅವಾರ್ಡ್ ಗಳ ಬಗ್ಗೆ ಮತ್ತು ನಟನಾ ಬಗ್ಗೆ ಅವರಿಗಿರುವ ಮುಂದಿನ ಕನಸುಗಳ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅರ್ಥಪೂರ್ಣವಾದ ಸಂದರ್ಶನ ಇದಾಗಿದ್ದು ಅವರ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment