Sunday, June 4, 2023
HomeEntertainmentಚಿರು ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾ ರಾಜ್ ಏನದು ಗೊತ್ತ.? ಯಾವ ಹೆಣ್ಣಿಗೂ ಇಂಥ...

ಚಿರು ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾ ರಾಜ್ ಏನದು ಗೊತ್ತ.? ಯಾವ ಹೆಣ್ಣಿಗೂ ಇಂಥ ಸ್ಥಿತಿ ಬರದಿರಲಿ

ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಅಗಲಿ ಎರಡು ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಅವರ ನೆನಪಿನಿಂದ ಹೊರಬರಲು ಕರುನಾಡ ಜನತೆಗೆ ಸಾಧ್ಯವಾಗುತ್ತಿಲ್ಲ. ಚಿರಂಜೀವಿ ಸರ್ಜಾ ಅವರು 2009ರಲ್ಲಿ ತೆರೆಕಂಡ ವಾಯು ಪುತ್ರ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಆಟಗಾರ, ಗಂಡೆದೆ, ಚಂದ್ರಲೇಖ, ಶಿವಾರ್ಜುನ, ರಾಜಮಾರ್ಥಂಡ, ವರದನಾಯಕ, ಅಮ್ಮ ಐ ಲವ್ ಯು ಹೀಗೆ ಕನ್ನಡದಲ್ಲಿ ಸುಮಾರು 22ಕ್ಕೂ ಅಧಿಕ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ, ಇವರು ನಾಯಕ ನಟರಾಗಿ ಅಭಿನಯ ಮಾಡುವುದಕ್ಕಿಂತ ಮುಂಚೆ ಕಿಶೋರ್ ಸರ್ಜಾ ಹಾಗೂ ಅರ್ಜುನ್ ಸರ್ಜಾ ಅವರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು.

ಇನ್ನು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ನಾಯಕ ನಟನಾಗಿ ಅಭಿನಯ ಮಾಡುವ ಸಮಯದಲ್ಲಿ ಮೇಘನಾ ರಾಜ್ ಅವರ ಪರಿಚಯವಾಗುತ್ತದೆ ಒಂದೆರಡು ವರ್ಷ ಇವರಿಬ್ಬರೂ ಕೂಡ ಸ್ನೇಹಿತರಾಗಿರುತ್ತಾರೆ. ತದನಂತರ ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಸುಮಾರು ಹತ್ತು ವರ್ಷಗಳ ಕಾಲ ಇಬ್ಬರು ಕೂಡ ಪ್ರೀತಿಸುತ್ತಾರೆ ತದನಂತರ ಈ ವಿಚಾರವನ್ನು ಮನೆಯಲ್ಲಿ ತಿಳಿಸುತ್ತಾರೆ. ಮೊದಮೊದಲು ಇವರ ಪ್ರೀತಿಗೆ ವಿರೋಧವಿತ್ತು ಏಕೆಂದರೆ ಮೇಘನಾ ರಾಜ್ ಕೃಷಿಯನ್ ಕುಟುಂಬಕ್ಕೆ ಸೇರಿದವರು ಧ್ರುವ ಸರ್ಜಾ ಅವರು ಅಪ್ಪಟ ಹಿಂದೂ ಕುಟುಂಬಕ್ಕೆ ಸೇರಿದವರು.

ಆದರೂ ಕೂಡ ಮನೆಯವರನ್ನು ಒಪ್ಪಿಸಿ ಇಬ್ಬರೂ ಕೂಡ ಎರಡು ಧರ್ಮಕ್ಕೂ ಧಕ್ಕೆ ಬಾರದ ರೀತಿಯಲ್ಲಿ ಚರ್ಚಿನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಹಾಗೂ ಮಂಟಪದಲ್ಲಿ ತಾಳಿ ಕಟ್ಟುವ ಮೂಲಕ ಮದುವೆಯಾದರು ತದನಂತರ ಇವರ ಮದುವೆ ಎರಡೂ ಸಂಪ್ರದಾಯಕ್ಕೂ ಒಂದು ಮಾದರಿಯಾದಂತೆ ಕಾಣಿಸಿತು. ಮದುವೆಯಾದ ನಂತರ ಮೂರು ವರ್ಷಗಳ ಕಾಲ ಸುಖ ದಾಂಪತ್ಯ ಜೀವನ ನಡೆಸಿದರು. ಈ ಸಮಯದಲ್ಲಿ ಮೇಘನಾ ರಾಜ್ ಅವರು ಕೂಡ ಗರ್ಭಿಣಿಯಾಗಿದ್ದರು ಈ ಒಂದು ಸಂತಸ ವಿಚಾರವನ್ನು ಚಿರಂಜೀವಿ ಸರ್ಜಾ ಅವರು ಎಲ್ಲಿಗೆ ಹೇಳಿಕೊಂಡಿರಲಿಲ್ಲ. ಇದನ್ನು ಒಂದು ವಿಶೇಷ ಸಂಭ್ರಮದಂತೆ ಆಚರಿಸಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದರು.

ಆದರೆ ವಿಧಿ ಆಟವೇ ಬೇರೆ ಇತ್ತು ಹೌದು ಚಿರಂಜೀವಿ ಸರ್ಜಾ ಅವರು ಜೂನ್ 7ನೇ ತಾರೀಕು 2020 ನೇ ಇಸ್ವಿಯಲ್ಲಿ ಮಧ್ಯಾಹ್ನ ಸುಮಾರು 12:30 ಗಂಟೆಗೆ ನಮ್ಮೆಲ್ಲರನ್ನು ಬಿಟ್ಟು ವಿ.ಧಿ.ವಶರಾದರು. ಹೌದು ತೀ.ವ್ರ ಹೃ.ದ.ಯ.ಘ.ತದಿಂದ ಉಸಿರಾಟದ ಸಮಸ್ಯೆಯಿಂದ ಚಿರು ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದರು. ಈ ಸಮಯದಲ್ಲಿ ಮೇಘನಾ ರಾಜ್ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು ಈ ಒಂದು ಪರಿಸ್ಥಿತಿಯನ್ನು ಮೇಘನಾ ರಾಜ್ ಎದುರಿಸುವುದಕ್ಕೆ ಬಹಳ ಕಷ್ಟ ಪಟ್ಟರು. ಚಿರು ಅಗಲಿದ ಕೇವಲ ನಾಲ್ಕೇ ತಿಂಗಳಿಗೆ ರಾಯನ್ ಎಂಬ ಗಂಡು ಮಗ ಹುಟ್ಟಿದ.

ಈ ಮಗುವಿನ ಮುಖವನ್ನು ನೋಡಿಕೊಂಡು ಚಿರಂಜೀವಿ ಸರ್ಜಾ ಅವರ ನೆನಪಿನಲ್ಲಿ ಇದೀಗ ಮೇಘನಾ ರಾಜ್ ಅವರು ಜೀವನ ಸಾಗಿಸುತ್ತಿದ್ದಾರೆ ಇನ್ನು ಅಕ್ಟೋಬರ್ 17, 1984 ಚಿರು ಅವರ ಜನ್ಮದಿನ ಅಂದರೆ ಈ ದಿನ ಚಿರಂಜೀವಿ ಸರ್ಜಾ ಅವರ 38ನೇ ವರ್ಷದ ಹುಟ್ಟುಹಬ್ಬ. ಹಾಗಾಗಿ ಮೇಘನಾ ರಾಜ್ ಅವರು ತಮ್ಮ ಪತಿಯ ಹುಟ್ಟು ಹಬ್ಬದ ಸಲುವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿರು ಜೊತೆಗೆ ಮದುವೆಯಾದಂತಹ ಸುಂದರ ಭಾವಚಿತ್ರವನ್ನು ಹಾಕಿಕೊಂಡು ಅದರ ಅಡಿ ಬರಹದಲ್ಲಿ “ಜನ್ಮದಿನದ ಶುಭಾಶಯಗಳು ನನ್ನ ಸಂತೋಷ.! ಏನೇ ಆಗಲಿ, ಯಾರೇ ಆಗಲಿ, ಒಂದಲ್ಲ, ಎರಡಲ್ಲ, ನಾನು ಮುಗುಳ್ನಗಲು ಕಾರಣ ನಿನಗಾಗಿ” ನನ್ನ ಪ್ರೀತಿಯ ಪತಿ ಚಿರು. ಐ ಲವ್ ಯೂ ಎಂದು ಹಾಕಿಕೊಂಡಿದ್ದಾರೆ.

ಇದಿಷ್ಟು ಮಾತ್ರವಲ್ಲದೆ ತಮ್ಮ ಪತಿ ಹಾಗೂ ಮಗ ಸದಾ ಕಾಲ ನನ್ನ ಜೀವದ ಒಳಗೆ ಬೆರೆತು ಹೋಗಿದ್ದಾರೆ ಅವರನ್ನು ಯಾರಿಂದಲೂ ಕೂಡ ಬೇರ್ಪಡಿಸುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಕಳೆದ ತಿಂಗಳಷ್ಟೇ ತಮ್ಮ ಬಲಗೈನ ಮೇಲೆ ಚಿರು ರಾಯನ್ ಎಂಬ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಆದರೂ ಕೂಡ ಪತಿ ಮತ್ತು ಮಗನು ಒಟ್ಟಿಗೆ ಸಂತೋಷದಿಂದ ಕಾಲ ಕಳೆಯಬೇಕಾದಂತಹ ಮೇಘನಾ ರಾಜ್ ಅವರು ಚಿಕ್ಕ ವಯಸ್ಸಿಗೆ ಪತಿಯನ್ನು ಕಳೆದುಕೊಂಡು ಇದೀಗ ಏಕಾಂಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಎಷ್ಟು ಹಣವಿದ್ದರೇನು ಎಷ್ಟು ದೊಡ್ಡ ಸೆಲೆಬ್ರೆಟಿಯಾಗಿದ್ದರೆ ಏನು ಪತಿ ಇಲ್ಲದ ಮೇಲೆ ಅವೆಲ್ಲವೂ ಶೂನ್ಯ ಎಂಬುದು ಕೆಲವರ ಅಭಿಪ್ರಾಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.