ಬೆಂಗಳೂರು ಸೆಂಟ್ರಲ್ ಲೋಕ ಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಕಣಕ್ಕೆ ಇಳಿದಿರುವ ಹಾಲಿ ಸಂಸದ ಪಿ. ಸಿ ಮೋಹನ್ ಅವರು ಬೆಂಗಳೂರು ಅಭಿವೃದ್ಧಿಗಾಗಿ ಕಳೆದ 15 ವರ್ಷಗಳಲ್ಲಿ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೇ. ಪಿ. ಸಿ ಮೋಹನ ಅವರು ಅತಿ ಹೆಚ್ಚು ಆದ್ಯತೆ ಕೊಟ್ಟಿರುವುವು ಮೂಲ ಸೌಕರ್ಯ ಅಭಿವೃದ್ದಿಗೆ. ಅಗತ್ಯ ಸೌಕರ್ಯಗಳನ್ನು ನೀಡಲು ಅವರು ದಣಿವರಿಯದೇ ದುಡಿದಿದ್ದಾರೆ.
ಬೆಂಗಳೂರು ಮಹಾನಗರದ ಸಂಚಾರದ ಜೀವನಾಡಿಯಾಗಿರುವ ಮೆಟ್ರೋ ರೈಲು ಯೋಜನೆಗಳಿಗೆ ಅವರು ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಐಟಿ ಉದ್ಯೋಗಿಗಳು ಸೇರಿದಂತೆ ಎಲ್ಲ ಸ್ತರದ ಜನರ ಪ್ರಯಾಣವನ್ನು ಅತ್ಯಂತ ಸರಳ ಹಾಗೂ ಸಲಭಗೊಳಿಸಿದ್ದಾರೆ.
ಸಬ್ ಅರ್ಬನ್ ರೈಲಿನಂತಹ ಯೋಜನೆಗಳನ್ನು ಪ್ರತಿಪಾದಿಸುವ ಮೂಲಕ ಬೆಂಗಳೂರಿನ ಹೊರ ವಲಯ ಹಾಗೂ ನಗರದ ಸುತ್ತಲಿನ ಪ್ರಯಾಣವನ್ನು ಹೆಚ್ಚು ಅಗ್ಗದಲ್ಲಿ ಸಿಗುವಂತೆ ಮಾಡಿದ್ದಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲದೇ ಬೆಂಗಳೂರು ನಗರದೊಳಗೆ ಸುಸಜ್ಜಿತ ರೈಲ್ವೆ ನಿಲ್ದಾಣಗಳು ಮತ್ತು ಅತ್ಯುತ್ತಮ ಗುಣಮಟ್ಟದ ಹೆದ್ದಾರಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಎಲೆಕ್ಟ್ರಿಕ್ ಬಸ್ಸುಗಳು ಬೆಂಗಳೂರಿಗೆ ಅನಿವಾರ್ಯವಾಗಿದ್ದವು. ಅವುಗಳನ್ನು ಜಾರಿಗೆ ತರುವಲ್ಲೂ ಪಿ. ಸಿ ಮೋಹನ್ ಅವರು ಶ್ರಮವೂ ದೊಡ್ಡದು. ಅಗತ್ಯವಿದ್ದಲ್ಲಿ ಸ್ಕೈವಾಕ್ಗಳು,, ದಟ್ಟಣೆಯನ್ನು ಕಡಿಮೆ ಮಾಡಲು ಫ್ಲೈಓರ್ಗಳ ನಿರ್ಮಾಣ ಮಾಡುವಲ್ಲಿ ನಾನು ಕೆಲಸ ಮಾಡಿದ್ದೇನೆ” ಎಂದು ಪಿಸಿ ಮೋಹನ್ ಅವರು ವಿಶ್ವಾಸದಿಂದ ಹೇಳಿದ್ದೇನೆ.