ಕಳೆದೊಂದು ವಾರದಿಂದ ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರಗಳಲ್ಲಿ ಒಂದು ಮೈಸೂರು ಸ್ಯಾಂಡಲ್ ಸೋಪ್ ಗೆ ನಟಿ ತಮನ್ನಾ ರಾಯಭಾರಿ ಆಗಿರುವ ವಿಚಾರ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸೋಪ್ ಬಳಕೆದಾರದಿಂದ ಹಿಡಿದು ಸ್ಯಾಂಡಲ್ ವುಡ್ ಸ್ಟಾರ್ ಗಳವರೆಗೆ ಬಹುತೇಕ ಎಲ್ಲರೂ ಕೂಡ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿಯೇ ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಚರ್ಚೆಯಲ್ಲಿನ ಮುಖ್ಯ ಸಂಗತಿ ಏನೆಂದರೆ, ಕರ್ನಾಟಕದ ಮನೆ ಮನೆಗೆ ಪರಿಚಯವಿರುವ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಉತ್ಪನ್ನಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಇಲ್ಲಿನ ಗಂಧ ಗಾಳಿ ತಿಳಿಯದ ಬಹುಭಾಷ ನಟಿಯಾದ ಮಿಲ್ಕ್ ಬ್ಯೂಟಿ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ಮಾಡಿದೆ. ಈ ಮೂಲಕ ಕರ್ನಾಟಕದ ಉತ್ಪನ್ನವನ್ನು ವಿಶ್ವದ ಮಾರುಕಟ್ಟೆ ವ್ಯಾಪ್ತಿಗೆ ಹೆಚ್ಚಿಸುವ ಉದ್ದೇಶ ಎನ್ನುವ ಸಬೂಬು ನೀಡಿದೆ.
ಆದರೆ ಇಲ್ಲಿ ಇನ್ನೂ ಮುಖ್ಯವಾದ ಮತ್ತೊಂದು ಅಂಶವೇನೆಂದರೆ ಈ ಕಾರಣಕ್ಕಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟಿಗೆ ಪರೋಬರಿ 6.2 ಕೋಟಿ ಹಣವನ್ನು ಸಂಭಾವನೆಯಾಗಿ ನೀಡಲಾಗುತ್ತಿದೆ. ಇದೇ ವಿಚಾರ ಇಂದು ರಾಜ್ಯದಾದ್ಯಂತ ಚರ್ಚಾಸ್ಪದ ವಿಷಯವಾಗಿ ಬದಲಾಗಿದೆ. ಮೊದಲಿಗೆ ಕರ್ನಾಟಕ ಉತ್ಪನ್ನಕ್ಕೆ ನಮ್ಮ ಸ್ಯಾಂಡಲ್ ವುಡ್ ನಟಿಯರನ್ನು ಬಿಟ್ಟು ಪರಭಾಷೆ ನಟಿಯರನ್ನು ಆರಿಸಿಕೊಂಡಿರುವುದು ಅಲ್ಲದೆ,
ಈಗಾಗಲೇ ಭಾರತದಲ್ಲಿಯೇ ಅತಿ ದೊಡ್ಡ ಸೋಪ್ ಫ್ಯಾಕ್ಟರಿಗಳಲ್ಲಿ ಒಂದು ಎಂದು ಹೆಸರು ಮಾಡಿರುವ ಮತ್ತು ಉತ್ಪನ್ನದಲ್ಲಿರುವ ಗುಣಮಟ್ಟದ ಕಾರಣದಿಂದಾಗಿ ಈಗಾಗಲೇ ಚಿರಪಚಿತವಾಗಿರುವ ಈ ಹೆಮ್ಮೆಯ ಪ್ರಾಡಕ್ಟ್ ಜನರ ತೆರಿಗೆಯ ಕೋಟಿ ಹಣವನ್ನು ಕೇವಲ ಜಾಹೀರಾತಿನ ಅಭಿನಯಕ್ಕಾಗಿ ನಟಿ ಒಬ್ಬರ ಮೇಲೆ ಸುರಿಯುತ್ತಿರುವುದು ಜನಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕ ಸಮಾಧಾನಕ್ಕೆ ಕಾರಣವಾಗಿದೆ.
ಹೀಗಾಗಿ ಈ ಬಗ್ಗೆ ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ಆಗುತ್ತಿದ್ದು ಈ ಬಗ್ಗೆ ಚಂದನವಾದ ಅನೇಕ ತಾರೆಗಳು ಕೂಡ ತಮ್ಮ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಇಂತಹ ವಿಚಾರಗಳಲ್ಲಿ ಸ್ವಯಂ ಪ್ರೇರಿತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳೋದಕ್ಕೆ ಮೊದಲಿನಿಂದಲೂ ಆಸಕ್ತಿ ಹೊಂದಿರುವ ನಟಿ ರಮ್ಯಾ ಕೂಡ ಎಂದಿನಂತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಹೊಂದಿರಲ್ಲೂ ಈ ಬಾರಿ ತಮ್ಮದೇ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಬಹಿರಂಗವಾಗಿ ವಿರೋಧವನ್ನು ವ್ಯಕ್ತಪಡಿಸಿ ಸರ್ಕಾರ ನಡೆಯನ್ನು ಖಂಡಿಸಿದ್ದಾರೆ ಅಷ್ಟಕ್ಕೂ ನಟಿ ಪೋಸ್ಟ್ ನಲ್ಲಿ ಇರುವುದೇನು ಗೊತ್ತಾ?
ನಟಿ ರಮ್ಯಾ ಅವರು ತಮ್ಮ ಅಧಿಕೃತ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಕೌಂಟ್ ನಲ್ಲಿ ಉತ್ಪನ್ನ ಯಾವುದೇ ಇರಲಿ ಆ ಉತ್ಪನ್ನಗಳನ್ನು ಪ್ರಚಾರ ಮಾಡಲು ಈಗ ಹಲವು ದಾರಿಗಳಿವೆ, ಇದಕ್ಕೆ ಹಳೆಯ ಕಾಲದಲ್ಲಿ ಇದ್ದಂತೆ ಈಗ ಪ್ರಚಾರ ರಾಯಭಾರಿ ಬೇಕಿಲ್ಲ, ಇದರಿಂದ ತೆರಿಗೆ ಪಾವತಿ ಮಾಡುವ ಜನರ ಹಣವನ್ನು ವೇಸ್ಟ್ ಮಾಡಿದಂತೆ ಆಗುತ್ತೆ ಎಂದು ಹೇಳಿದ್ಧಾರೆ. ಈ ಮೂಲಕ ತೆರಿಗೆದಾರರ ದುಡ್ಡನ್ನು ಪ್ರಚಾರಕ್ಕೆ ರಾಯಭಾರಿಗೆ ಕೊಡುವುದು ತಪ್ಪು ಎಂದು ಕೂಡ ಹೇಳಿದ್ದಾರೆ.
ಕಾಲ ತುಂಬಾ ಬದಲಾಗಿದೆ, ಮೊದಲಾದರೆ ಸೆಲೆಬ್ರೇಟಿಗಳನ್ನು ನೋಡಿ ಅನೇಕರು ಕಣ್ಮುಚ್ಚಿ ಆ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಆದರೀಗ ಉತ್ತಮ ಗುಣಮಟ್ಟದಾದರೆ ಮಾತ್ರ ಜನ ಖರೀದಿಸುತ್ತಾರೆ. ಮೈಸೂರು ಸ್ಯಾಂಡಲ್ ಸೋಪ್‌ನ ಗುಣಮಟ್ಟ ಅತ್ಯುತ್ತಮವಾಗಿದೆ, ಮತ್ತು ಈಗಾಗಲೇ ನಮ್ಮ ಉತ್ಪನ್ನ ಹಿಸ್ಟರಿ ಯನ್ನೇ ಸೃಷ್ಟಿಸಿದೆ. ಘನತೆ ಮತ್ತು ಜನಪ್ರಿಯತೆ ಎರಡು ಕೂಡ ಮೈಸೂರು ಸ್ಯಾಂಡಲ್ ಸೋಪ್‌ಗೆ ಇದೆ. ಅಸಲಿಯಾಗಿ ಪ್ರತಿಯೊಬ್ಬ ಕನ್ನಡಿಗರು ಕೂಡ ಈ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿ ಎಂದು ಬರೆದುಕೊಂಡು ನಟಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.