ಪ್ರತಿನಿತ್ಯ ಹಾಲನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಹಾಲು ಬಹಳ ಪೌಷ್ಟಿಕಾಂಶಯುಕ್ತ ಆಹಾರ ಆಗಿದೆ. ಪ್ರತಿ ದಿನ ರಾತ್ರಿ ಹಾಲು ಕೊಡುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುತ್ತದೆ, ಅಲ್ಲದೆ ರಾತ್ರಿ ಪೂರ್ತಿ ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೆ ಹಾಲಿನಲ್ಲಿರುವ ಒಂದು ಅಂಶ ಕಾರಣ ಆಗಿರುತ್ತದೆ. ಹಾಲನ್ನು ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ ಈ ಪ್ರಕೃತಿ ದತ್ತವಾಗಿ ಸಿಗುವ ಹಲವು ಆಹಾರಗಳಲ್ಲಿ ಹಾಲು ಕೂಡ ಒಂದು.
ಹಾಲನ್ನು ಹಲವು ಹೆಲ್ಪ್ ಪ್ರಾಡಕ್ಟ್ಗಳ ಜೊತೆ ಸೇರಿಸಿ ಕುಡಿಯುತ್ತಾರೆ ಅಥವಾ ಕಲ್ಲು ಸಕ್ಕರೆ ಜೊತೆ ಸೇರಿಸಿ ಕುಡಿಯುತ್ತಾರೆ ಇನ್ನಿತರ ಸಂದರ್ಭದಲ್ಲಿ ಕೆಲವು ಖಾದ್ಯಗಳನ್ನು ತಯಾರು ಮಾಡಲು ಸಹ ಹಾಲನ್ನು ಬಳಸುತ್ತಾರೆ. ಯಾವುದಾದರೂ ಒಂದು ರೂಪದಲ್ಲಿ ಹಾಲು ಮನುಷ್ಯನ ದೇಹ ಸೇರುತ್ತಿರಬೇಕು ಎನ್ನುವುದಷ್ಟೇ ಇದರ ಉದ್ದೇಶ.
ಆದರೆ ಹಳ್ಳಿಯಲ್ಲಿ ಇರುವವನು ನೇರವಾಗಿ ಹಸುವಿನ ಕರೆದ ಹಾಲನ್ನು ಕುಡಿಯಬಹುದು ಆದರೆ ಇದು ಪಟ್ಟಣ ಅಥವಾ ನಗರ ಪ್ರದೇಶದಲ್ಲಿ ಇರುವವರಿಗೆ ಸಾಧ್ಯವಿಲ್ಲವಲ್ಲ ಎಂದು ಅವರು ಸಹ ಕೊರಗುವ ಅಗತ್ಯ ಇಲ್ಲ. ಯಾಕೆಂದರೆ ಹಲವಾರು ಕಂಪನಿಯ ಹಾಲಿನ ಪ್ಯಾಕೆಟ್ಗಳು ದೊರೆಯುವುದರಿಂದ ಅವುಗಳನ್ನು ಖರೀದಿಸಿ ಅಷ್ಟೇ ಪೋಷಕಾಂಶಯುಕ್ತ ಆಹಾರವನ್ನು ಪಟ್ಟಣ ಪ್ರದೇಶ ಹಾಗೂ ನಗರ ಪ್ರದೇಶದ ಜನತೆಯು ಕೂಡ ಪಡೆಯಬಹುದಾಗಿದೆ.
ಇದರಲ್ಲಿ ಕರ್ನಾಟಕದ ಬ್ರಾಂಡ್ ಎಂದು ಹೆಸರುವಾಸಿ ಆಗಿರುವ ನಂದಿನಿ ಹಾಲಿನ ಬಗ್ಗೆ ಒಂದು ವಿಶೇಷವಾದ ಹೆಮ್ಮೆ ಇದೆ. ಯಾಕೆಂದರೆ ಇಂದು ಹೈನುಗಾರಿಕೆಯಲ್ಲಿ ನಂದಿನಿ ಮಾಡಿರುವ ಕ್ರಾಂತಿ ಅಂತಿಂಹದಲ್ಲ. ಇದರಿಂದ ಒಂದೆಡೆ ಒಂದು ಪ್ರದೇಶದ ಜನರಿಗೆ ಆರೋಗ್ಯವಾಗಿರುವ ಆಹಾರ ದೊರೆಯುತ್ತಿದ್ದರೆ ಮತ್ತೊಂದು ವರ್ಗಕ್ಕೆ ಇದು ಉದ್ಯಮವು ಆಗಿದೆ. ಜೊತೆಗೆ ರೈತರ ಪಾಲಿಗೆ ಜೀವನೋಪಾಯವು ಆಗಿದೆ. ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಕೂಡ ರೈತರ ತೊಡಗಿಸಿಕೊಳ್ಳುವುದಕ್ಕೆ ನಂದಿನಿ ಬ್ರಾಂಡ್ ವರದಾನವಾಗಿದೆ.
ನಂದಿನಿ ಹಾಲನ್ನು ಖರೀದಿಸಿ ಕುಡಿಯುವವರು ಸಾಕಷ್ಟು ಬಾರಿ ಒಂದು ಗೊಂದಲಕ್ಕೆ ಒಳಗಾಗಿರುತ್ತಾರೆ. ಅದೇನೆಂದರೆ ಹಾಲಿನ ಪ್ಯಾಕೆಟ್ ಅಲ್ಲಿ ಹಲವು ಬಣ್ಣಗಳಿರುವುದು, ಈ ಪ್ಯಾಕೆಟ್ ಬಣ್ಣದ ಕಾರಣದಿಂದ ಅದರ ಬೆಲೆಗಳನ್ನು ಕೂಡ ವ್ಯತ್ಯಾಸ ಆಗಿರುವುದನ್ನು ನಾವು ಗಮನಿಸಬಹುದಾಗಿದೆ. ಹಾಗಾದರೆ ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಇಷ್ಟು ವ್ಯತ್ಯಾಸ ಆಗಿರುವುದಕ್ಕೆ ಕಾರಣ ಏನಾದರೂ ಇದೆಯಾ ಎನ್ನುವ ಕೌತುಕ ಹುಟ್ಟದೇ ಇರಲಾರದು. ಅದಕ್ಕೆಲ್ಲ ಉತ್ತರ ಹೀಗಿದೆ.
ಯಾಕೆಂದರೆ ಕೆಲವೊಂದು ಗುಣಗಳಿಗೆ ಆಧಾರವಾಗಿ ಈ ರೀತಿ ಹಾಲುಗಳನ್ನು ಬಣ್ಣಬಣ್ಣದ ಪ್ಯಾಕೆಟ್ ಅಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಕೇಸರಿ ಬಣ್ಣದ ಹಾಲಿನ ಪ್ಯಾಕೆಟ್ ಶುದ್ಧ ಗಟ್ಟಿ ಹಾಲಾಗಿದ್ದು ಗಟ್ಟಿ ಕಾಫಿ ಟೀ ಕುಡಿಯುವುದು ಹಾಗೂ ಪಾಯಸ ಮುಂತಾದ ಆಹಾರ ತಯಾರಿಸುವವರು ಇದನ್ನು ಬಳಸಬಹುದಾಗಿದೆ. ನೀಲಿ ಬಣ್ಣದ ಪ್ಯಾಕೆಟ್ ಅಲ್ಲಿ ಸಂಪೂರ್ಣವಾಗಿ ಕೆನೆ ತೆರೆಯಲಾಗಿರುತ್ತದೆ ಇದರಿಂದ ಡಯಟ್ ಮಾಡುವವರು ಹಾಗೂ ಫ್ಯಾಟ್ ಬಗ್ಗೆ ಭಯ ಇರುವವರು ಇದನ್ನು ಉಪಯೋಗಿಸಬಹುದಾಗಿದೆ.
ಜೊತೆಗೆ ಹಸಿರು ಬಣ್ಣದ ಪ್ಯಾಕೆಟ್ ಅಲ್ಲಿ ಎಮ್ಮೆ ಹಾಲು ಮಿಶ್ರಿತ ಮಾಡಿರುವುದಿಲ್ಲ ಇದು ಸಂಪೂರ್ಣವಾಗಿ ಹಸುವಿನ ಹಾಲಿನಿಂದ ಕೂಡಿರುತ್ತದೆ. ಜೊತೆಗೆ ಗುಡ್ ಲೈಫ್ ಹಾಲನ್ನು ಬಿಸಿ ಮಾಡಿ ಕುಡಿಯುವ ಅನುಕೂಲತೆ ಇಲ್ಲದವರು ಬಳಸಬಹುದಾಗಿದೆ. ಇದನ್ನು 137 ಡಿಗ್ರಿ ಸೆಲ್ಸಿಯಸ್ ಅಲ್ಲಿ ನಾಲ್ಕು ನಿಮಿಷಗಳ ಕಾಲ ಕಾಯಿಸಿ ತಣ್ಣಗೆ ಮಾಡಿರುತ್ತಾರೆ. ಈ ರೀತಿ ಕಾರಣಗಳಿಗೆ ಅನುಗುಣವಾಗಿ ಪ್ಯಾಕ್ ಗಳ ಬಣ್ಣ ಬೇರೆ ಬೇರೆ ಆಗಿರುತ್ತದೆ.