ಬೆಂಗಳೂರಲ್ಲಿ ಕೇವಲ 14 ಲಕ್ಷಕ್ಕೆ ಸಿಗುತ್ತದೆ ಸ್ವಂತ ಮನೆ ಹೇಗೆ ಗೊತ್ತಾ.?

 

ಬೆಂಗಳೂರಿನಂತಹ ಮಹಾನಗರದ ಅಕ್ಕಪಕ್ಕ 14 ಲಕ್ಷಕ್ಕೆ ಮನೆ ಸಿಗುತ್ತದೆ ಎಂದರೆ ಅದು ಸಾಮಾನ್ಯವಾಗಿ ನಂಬಲು ಆಗದ ವಿಷಯ. ಅದರಲ್ಲೂ 2BHK ಮನೆ 14 ಲಕ್ಷಕ್ಕೆ ಸಿಗುತ್ತದೆ ಎಂದರೆ ಅದು ಇನ್ನೂ ಹೆಚ್ಚಿನ ಶಾ’ಕ್ ನೀಡುತ್ತದೆ. ಮನೆ ಎನ್ನುವುದು ಒಂದು ಮೂಲಭೂತ ಅವಶ್ಯಕತೆ. ಎಲ್ಲರ ಕನಸು ಕೂಡ ಪುಟ್ಟದಾದರೂ ಪರವಾಗಿಲ್ಲ ಒಂದು ಚೊಕ್ಕವಾದ ಗೂಡು ಕಟ್ಟಿಕೊಳ್ಳಬೇಕು ಎನ್ನುವುದು. ಇದಕ್ಕಾಗಿ ತಾನೆ ದುಡಿದ ಅಂಶದಲ್ಲಿ ಅತಿ ಹೆಚ್ಚು ಭಾಗವನ್ನು ಉಳಿತಾಯ ಮಾಡಿ ಇಡುವುದು. ಮನೆ ಅಕ್ಕಪಕ್ಕ ಸ್ವಲ್ಪ ಜಾಗ ಇದ್ದರೆ, ಸಣ್ಣದಾಗಿ ಗಾರ್ಡನ್ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಬಡವ, ಸಾಮಾನ್ಯ ಹಾಗೂ ಶ್ರೀಮಂತ ಎಲ್ಲರ ಮನದಲ್ಲಿ ಇರುವ ಆಸೆ ಕೂಡ.

ಸರ್ಕಾರ ಹಾಗೂ ಕೆಲವು ಸಂಸ್ಥೆಗಳು ಆಗಾಗ ಕೆಲವೊಂದು ಸ್ಕೀಮ್ ಗಳನ್ನು ಬಡವರಿಗೆ ಹಾಗೂ ಜನಸಾಮಾನ್ಯರಗಾಗಿ ನೀಡುತ್ತಿರುತ್ತದೆ. ಆದರೆ ಜನಸಾಮಾನ್ಯರು ಮತ್ತು ಬಡವರು ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳದೆ ಹೋದಲ್ಲಿ ಅಥವಾ ಇದರ ಬಗ್ಗೆ ಆಸಕ್ತಿ ತೋರದೆ ಹೋದಲ್ಲಿ ಅದು ಉಳ್ಳವರ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ಈ ರೀತಿ ಹೆಚ್ಚು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಹಾಗಾಗಿ ಮೊದಲಿಗೆ ಯಾವುದೇ ಯೋಜನೆ ಆದರೂ ಅದರ ಮಾಹಿತಿ ಎಲ್ಲರ ತನಕ ಹೋಗಿ ತಲುಪಬೇಕು ಆಗ ಮಾತ್ರ ಅದು ಅರ್ಹತೆ ಇದ್ದವರಿಗೆ ಅದು ಸಿಗುತ್ತದೆ.

ಇದರ ಉದಾಹರಣೆಯೊಂದಿಗೆ ಹೇಳುವುದಾದರೆ ಬೆಂಗಳೂರಿನಲ್ಲಿ 14 ಲಕ್ಷಕ್ಕೆ ಮನೆ ಸಿಗುವುದು ಖಂಡಿತ. ನಿಜ ಆದರೆ ಇದು ಎಲ್ಲರಿಗೂ ಅಲ್ಲ ಅದಕ್ಕಾಗಿ ಕೆಲವು ನಿಯಮಗಳಿವೆ ಜೊತೆಗೆ ಕೆಲವು ಅರ್ಹತೆಗಳು ಕೂಡ ಇರಬೇಕಾಗುತ್ತದೆ. ಕೆಲವೊಂದು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಮಾತ್ರ ನೀವು ಇದರ ಫಲಾನುಭವಿಗಳಾಗಬಹುದು. ಹಾಗಾಗಿ ಮೊದಲಿಗೆ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು.

ಬೆಂಗಳೂರಿನಲ್ಲಿ ಹಾಗೂ ಬೆಂಗಳೂರು ಅಕ್ಕ ಪಕ್ಕ ಮನೆ ಕೊಂಡುಕೊಳ್ಳಬೇಕು ಎಂದರೆ ಅದು ಬಡವನಿಗೆ ಸಾಮಾನ್ಯವಾಗಿ ಕೈಗೆಟ್ಟುಕುವ ವಿಷಯ ಅಲ್ಲ ಅದಕ್ಕಾಗಿ ಲಕ್ಷಗಟ್ಟಲೆ ಬೇಕು ಕೋಟಿಗಟ್ಟಲೆ ಬೇಕು ಇಂತಹ ಮಾತುಗಳನ್ನು ನಾವು ಸಾಕಷ್ಟು ಕೇಳಿ ಬಿಟ್ಟಿದ್ದೇವೆ. ಆದರೆ ಇಲ್ಲೊಮ್ಮೆ ನೋಡಿ ಬೆಂಗಳೂರಿನ ಸುತ್ತಮುತ್ತ ಇರುವ ಐದು ತಾಲೂಕುಗಳಲ್ಲಿ ವಾಸ ಆಗಿರುವವರಿಗೆ ಮನೆ ವಿಚಾರವಾಗಿ ಸಿಹಿ ಸುದ್ದಿ ಸಿಗಲಿದೆ.

ಅದೇನೆಂದರೆ ಕಡ್ಡಾಯವಾಗಿ ನೀವು ಬೆಂಗಳೂರಿನ ಸುತ್ತಮುತ್ತ ಇರುವ ತಾಲೂಕಿನಲ್ಲಿಯೇ ವಾಸವಿರಬೇಕು ನಿಮ್ಮ ಬಳಿ ವಾಸಕ್ಕೆ ಸ್ವಂತ ಮನೆ ಇರಬಾರದು ಈ ರೀತಿ ಇದ್ದರೆ ನಿಮಗೆ ಖಂಡಿತವಾಗಿಯೂ ಸರ್ಕಾರದ ಈ ಯೋಜನೆ ಮೂಲಕ 14 ಲಕ್ಷಕ್ಕೆ 2BHK ಮನೆ ಸಿಗಲಿದೆ. ಇದಕ್ಕಾಗಿ ನೀವು ಸಹ ಸ್ವಲ್ಪ ಹಣ ಖರ್ಚು ಮಾಡಬೇಕು. ಆದರೆ ಈ ಹಣವನ್ನು ಒಂದೇ ಬಾರಿಗೆ ಅಲ್ಲದೆ ಮೂರು ಕಂತುಗಳಲ್ಲಿ ಕಟ್ಟಬಹುದು ಎನ್ನುವುದು ಇನ್ನೂ ಸಮಾಧಾನಕರ ವಿಷಯ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ತಮ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಯಾರ್ಯಾರು ಸ್ವಂತ ಮನೆ ಹೊಂದಿಲ್ಲ ಅವರಿಗೆ ಅರ್ಜಿ ಹಾಕಲು ತಿಳಿಸಿದ್ದಾರೆ. ಈ ರೀತಿ ಅರ್ಜಿ ಹಾಕಿದವರಿಗೆ ಈ ಮೇಲ್ಕಂಡ ರೀತಿ 14 ಲಕ್ಷಕ್ಕೆ ಮೂರು ಕಂತುಗಳಲ್ಲಿ 2BHK ಮನೆ ಸಿಗಲಿದೆ. ಇನ್ನು ವಿವರವಾಗಿ ಈ ಯೋಜನೆ ಬಗ್ಗೆ ತಿಳಿದುಕೊಳ್ಳಲು ಮತ್ತು ಯೋಜನೆ ಕಂತುಗಳ ಹಣವನ್ನು ಯಾವಾಗ ಕಟ್ಟಬೇಕು ಜೊತೆಗೆ ಅಪ್ಲಿಕೇಶನ್ ಅನ್ನು ಯಾವ ರೀತಿ ಸಲ್ಲಿಸಬೇಕು ಇತ್ಯಾದಿ ಎಲ್ಲಾ ಮಾಹಿತಿಗಳಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment