ತುಂಬಾ ದಿನಗಳು ಆದ ನಂತರ ಶಕ್ತಿ ಯೋಜನೆಯ ಅಡಿಯಲ್ಲಿ, ಅಂದರೆ ಯಾರೆಲ್ಲ ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿ ದ್ದಾರೋ ಇದರ ಒಂದು ಅಡಿಯಲ್ಲಿ ಸರ್ಕಾರ ಈಗ ಹೊಸ ಆದೇಶವನ್ನು ಹೊರಡಿಸಿದೆ. ಅಂದರೆ ಒಂದು ಸೂಚನೆಯನ್ನು ಹೊರಡಿಸಿದೆ ಎಂದು ಅರ್ಥ.
ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮುಂದಿನ ತಿಂಗಳು ಜೂನ್ 11 ನೇ ತಾರೀಕು ಬಂದಿತು ಎಂದರೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಪ್ರಾರಂಭವಾಗಿ ಒಂದು ವರ್ಷ ಎಂದರ್ಥ. ಇದರ ಜೊತೆ ಸರ್ಕಾರ ಮಹಿಳೆಯರಿಗೆ ಯಾವ ಸೂಚನೆಯನ್ನು ಹೊರಡಿಸಿದೆ ಹಾಗೂ KSRTC ಹಾಗೂ BMTC ಬಸ್ ಡ್ರೈವರ್ ಕಂಡಕ್ಟರ್ ಗಳಿಗೂ ಸಹ ಕೆಲವೊಂದಷ್ಟು ಮಾಹಿತಿಗಳನ್ನು ಹೊರಡಿಸಿದ್ದಾರೆ.
* ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಪ್ರಾರಂಭವಾದಾಗಿನಿಂದ ನಾವು ಬಸ್ ಗಳಲ್ಲಿ ಪಡೆಯುತ್ತಿರುವ ಟಿಕೆಟ್ ಮೇಲೆ ಉಚಿತ ಟಿಕೆಟ್ ಎನ್ನುವಂತಹ ಟಿಕೆಟ್ ಸಿಗುತ್ತಿತ್ತು. ಆದರೆ ಇನ್ನು ಮುಂದೆ ನಿಮಗೆ ಈ ರೀತಿಯಾದಂತಹ ಟಿಕೆಟ್ ಸಿಗುವುದಿಲ್ಲ ಬಿಳಿ ಬಣ್ಣದ ಟಿಕೆಟ್ ಬದಲು ಪಿಂಕ್ ಕಲರ್ ಟಿಕೆಟ್ ಸಿಗುತ್ತದೆ. ಯಾಕೆ ಈ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ ಎಂದು ನೋಡುವುದಾದರೆ.
ಈ ಸುದ್ದಿ ಓದಿ:- ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.!
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ನಾವು ಬಸ್ ಗಳಲ್ಲಿ ಟಿಕೆಟ್ ಪಡೆಯುವಂತಹ ಮಷಿನ್ ಅಂದರೆ ಇ ಟಿ ಎಂ ಮಷೀನ್ ಕೆಲವೊಮ್ಮೆ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಇದರಿಂದ ಮಹಿಳೆಯರಿಗೆ ಟಿಕೆಟ್ ಕೊಡುವುದಕ್ಕೆ ಹಿಂಸೆಯಾಗುತ್ತಿದೆ ಎನ್ನುವಂತಹ ಮಾಹಿತಿ ಕೇಳಿ ಬರುತ್ತಿದೆ.
ಆದ್ದರಿಂದ ಇದನ್ನು ಸರಿಪಡಿಸುವ ಉದ್ದೇಶದಿಂದ ಸರ್ಕಾರ ಮಹಿಳೆ ಯರಿಗೆ ಇ ಟಿ ಎಂ ಮಷೀನ್ ನಿಂದ ಬರುವಂತಹ ಬಿಳಿ ಬಣ್ಣದ ಟಿಕೆಟ್ ಬದಲು ಸರ್ಕಾರವೇ ಇಂತಿಷ್ಟು ಎನ್ನುವ ಹಾಗೆ ಬಂಡಲ್ ರೀತಿಯಲ್ಲಿ ಪಿಂಕು ಬಣ್ಣದ ಟಿಕೆಟ್ ಅನ್ನು ಕೊಟ್ಟಿರುತ್ತಾರೆ.
ಅದರಲ್ಲಿ ಯಾವುದೇ ರೀತಿಯಾದಂತಹ ನಿಮ್ಮ ಊರುಗಳ ವಿಳಾಸ ಹಣ ಇರುವುದಿಲ್ಲ ಬದಲಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎನ್ನುವಂತಹ ಮಾಹಿತಿ ಮಾತ್ರ ಇರುತ್ತದೆ. ಅದರ ಮೇಲೆ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರಿ ಎನ್ನುವುದನ್ನು ಕಂಡಕ್ಟರ್ ಆ ಒಂದು ಟಿಕೆಟ್ ಮೇಲೆ ಬರೆದು ಕೊಡಬೇಕು.
ಈ ಸುದ್ದಿ ಓದಿ:- ಸಂತಾನ ಕರುಣಿಸುವ ತಾಯಿ ಕೋಟ ಅಮೃತೇಶ್ವರಿ.! ಮಕ್ಕಳಿಲ್ಲದವರು ಒಮ್ಮೆ ಇಲ್ಲಿಗೆ ಬಂದರೆ ಸಂತಾನಫಲ ಸಿಗುತ್ತೆ.!
ಆದ್ದರಿಂದ ಇದನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಗಮನದಲ್ಲಿಟ್ಟುಕೊಂಡು ಅದನ್ನು ನೋಡಿಕೊಂಡು ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಟಿಕೆಟ್ ಕೊಡುವಂತಹ ಕಂಡಕ್ಟರ್ ಆಗಿರಲಿ ಅಥವಾ ಡ್ರೈವರ್ ಆಗಿರಲಿ ಟಿಕೆಟ್ ನಲ್ಲಿ ಏನಾದರೂ ವ್ಯತ್ಯಾಸ ಮಾಡಿದರೆ.
ಅವರು ಕೊಟ್ಟಿರುವಂತಹ ಟಿಕೆಟ್ ಸರಿಯಾದ ರೀತಿಯಲ್ಲಿ ಕೊಟ್ಟಿದ್ದೀನ ಇಲ್ಲವಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಲೆಕ್ಕವನ್ನು ಅವರು ಅವರ ಒಂದು ಇಲಾಖೆಗೆ ಸಲ್ಲಿಸಬೇಕು ಹಾಗೇನಾದರೂ ಅವರು ತಪ್ಪು ಮಾಹಿತಿಯನ್ನು ಸಲ್ಲಿಸಿದರೆ ಒಂದು ಟಿಕೆಟ್ ಗೆ 10 ರೂಪಾಯಿಯಂತೆ ದಂಡವನ್ನು ಕಟ್ಟಬೇಕಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಹೊರಡಿಸಿದ್ದಾರೆ.
ಆದ್ದರಿಂದ ಡ್ರೈವರ್ ಅಥವಾ ಕಂಡಕ್ಟರ್ ಇಂತಹ ಒಂದು ಸಂದರ್ಭದಲ್ಲಿ ಗಮನಹರಿಸಿ ಕೆಲಸವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಆದೇಶವನ್ನು ಪಾಲಿ ಸುವುದಕ್ಕೆ ನಮಗೆ ಕಷ್ಟವಾಗುತ್ತದೆ ಎನ್ನುವ ಉದ್ದೇಶದಿಂದ ಡ್ರೈವರ್ ಹಾಗೂ ಕಂಡಕ್ಟರ್ ಗಳು ಈ ಒಂದು ಆದೇಶವನ್ನು ಹಿಂಪಡೆಯಬೇಕು ಎನ್ನುವಂತಹ ಪ್ರತಿಭಟನೆಯನ್ನು ಸಹ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.