ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ ಮಹಿಳೆಯರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಗ್ಯಾರೆಂಟಿ ಯೋಚನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಕೂಡ ಇಲಾಖೆ ಜವಾಬ್ದಾರಿಯಾಗಿದೆ. ಇದರ ಜೊತೆಗೆ 2023-24ನೇ ಸಾಲಿನ ವಿವಿಧ ಯೋಜನೆಗಳನ್ನು ಘೋಷಿಸಿದ್ದು, ಅರ್ಹರು ಅರ್ಜಿ ಸಲ್ಲಿಸುವಂತೆ ಯೋಜನೆ ಬಗ್ಗೆ ವಿಸ್ತಾರವಾದ ವರದಿ ಒಳಗೊಂಡಿರುವ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿದೆ.
ಯಾವೆಲ್ಲ ಯೋಜನೆಗಳ ಸೌಲಭ್ಯಗಳಿವೆ? ಈ ಯೋಜನೆಗಳಿಂದ ಸಿಗುತ್ತಿರುವ ಅನುಕೂಲತೆಗಳೇನು? ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕೆ ಕೊನೆಯ ದಿನಾಂಕ ಎಂದು? ಎನ್ನುವುದರ ವಿವರ ಹೀಗಿದೆ ನೋಡಿ.
1. ಉದ್ಯೋಗಿನಿ ಯೋಜನೆ:-
ಕರ್ನಾಟಕ ರಾಜ್ಯದ 18 ರಿಂದ 55 ವರ್ಷದ ಒಳಗಿನ ವಯೋಮಾನದ ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಇಚ್ಚಿಸುವ ಮಹಿಳೆಯರು ಈ ಯೋಜನೆಯಡಿ ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮಗಳ ಮೂಲಕ ಸಹಾಯಧನ ಪಡೆಯಬಹುದು.
* ಆದಾಯದ ಮಿತಿ 2 ಲಕ್ಷದ ಒಳಗಿರುವ SC/ST ಫಲಾನುಭವಿಗಳಿಗೆ ಘಟಕ ವೆಚ್ಚ 1 ಲಕ್ಷದಿಂದ ಗರಿಷ್ಠ 3 ಲಕ್ಷದವರೆಗೆ ಸಾಲ ಲಭ್ಯವಿರುತ್ತದೆ. ಈ ಸಾಲಕ್ಕೆ ನಿಗಮದ ವತಿಯಿಂದ 50%ರಷ್ಟು ಸಹಾಯಧನ ಸಿಗಲಿದ್ದು, ಉದ್ಯೋಗಿನಿ ಯೋಜನೆಗೆ ನಿಗಮದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು.
* ಆದಾಯದ ಮಿತಿ 1.5 ಲಕ್ಷದ ಒಳಗಿರುವ ಸಾಮಾನ್ಯ ವರ್ಗದ ಮಹಿಳೆಯರಿಗೆ ಘಟಕ ವೆಚ್ಚ 3 ಲಕ್ಷದವರೆಗೂ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ, ಉದ್ಯೋಗಿನಿ ಯೋಜನೆ ಸಹಾಯಧನ ಕೋರಿ ನಿಗಮಕ್ಕೆ ಅರ್ಜಿ ಸಲ್ಲಿಸಿ 30%ರಷ್ಟು ಸಹಾಯಧನ ಪಡೆಯಬಹುದು.
2. ಚೇತನ ಯೋಜನೆ:-
18 ವರ್ಷ ಮೇಲ್ಪಟ್ಟ ರಾಜ್ಯದ ದಮನಿತ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಇಚ್ಚಿಸಿದರೆ ಚೇತನ ಯೋಜನೆಯಡಿ ರೂ.30,000 ಗಳ ಪ್ರೋತ್ಸಾಹ ಧನ ಸಿಗುತ್ತದೆ.
3. ಧನಶ್ರೀ ಯೋಜನೆ:-
ಕರ್ನಾಟಕ ರಾಜ್ಯದ 18 ವರ್ಷ ಮೇಲ್ಪಟ್ಟ 60 ವರ್ಷ ಒಳಗಿನ ವಯಸ್ಸಿನ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸಿದರೆ ಧನಶ್ರೀ ಯೋಜನೆ ಅಡಿ ರೂ. 30,000 ಗಳ ಪ್ರೋತ್ಸಾಹ ಧನ ಪಡೆಯಬಹುದು.
4. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:-
ಈ ಯೋಜನೆಯಡಿ 18 ವರ್ಷ ಮೇಲ್ಪಟ್ಟ ರಾಜ್ಯದ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000 ಗಳ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಸಲ್ಲಿಸಬಹುದು.
5. ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:-
1993-94 ಮತ್ತು 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಯೋಜನೆ ಜಾರಿ ಮಾಡಲಾಗಿದೆ. ಮಾಜಿ ದೇವದಾಸಿ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಇಚ್ಚಿಸಿದರೆ ರೂ.30,000 ಗಳ ವರೆಗೆ ನಿಗಮದಿಂದ ಪ್ರೋತ್ಸಾಹ ಧನ ಸಿಗುತ್ತದೆ.
ನಿಯಮ ಹಾಗೂ ನಿಬಂಧನೆಗಳು:-
* ಈ ಯೋಜನೆಯ ಸಹಾಯಧನ ಅಥವಾ ಪ್ರೋತ್ಸಾಹ ಧನ dbt ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತದೆ. ಆದ ಕಾರಣ ಅರ್ಜಿದಾರರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.
* ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ ಅನುದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟನಲ್ಲಿಯೇ ಅರ್ಜಿ ಸಲ್ಲಿಸಬೇಕು.
* ಸರ್ಕಾರದ ಕೋಟ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾನುಭವಿಗಳು ಮಾನ್ಯ ಸಚಿವರು / ಮಾನ್ಯ ಶಾಸಕರು / ಕರ್ನಾಟಕ ಸರ್ಕಾರದ ಮಾನ್ಯ ಅಧ್ಯಕ್ಷರು /ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:-
* ಈ ಮೇಲೆ ತಿಳಿಸಿದ ಯಾವುದೇ ಯೋಜನೆಗಾದರೂ ಆನ್ಲೈನ್ ನಲ್ಲಿಯೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
* ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ / ಗ್ರಾಮ ಒನ್ / ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ವೆಬ್ ಸೈಟ್ ವಿಳಾಸ:-
ಅರ್ಜಿ ಸಲ್ಲಿಸಲು:
https://sevasindhu.karnataka.gov.in
ಹೆಚ್ಚಿನ ಮಾಹಿತಿಗಾಗಿ:
https://kswdc.karnataka.gov.in
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 22.11.2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22.12.2023