ಪ್ರತಿಯೊಂದು ಮನೆಯಲ್ಲೂ ಕೂಡ ಅರಿಶಿಣ ಇದ್ದೇ ಇರುತ್ತದೆ. ಅರಿಶಿಣ ಇಲ್ಲದ ಅಡುಗೆ ಮನೆ ಇಲ್ಲ, ಒಟ್ಟಿನಲ್ಲಿ ಅರಿಶಿಣ ಬಳಸದ ಮನೆಗೆ ಇಲ್ಲ ಎನ್ನಬಹುದು. ಅರಿಶಿಣವನ್ನು ಅಡುಗೆಗೆ ಮಾತ್ರವಲ್ಲದೆ ಪೂಜೆ ಮಾಡುವಾಗ ಕೂಡ ಬಳಸುತ್ತೇವೆ. ಯಾವುದೇ ಶುಭ ಸಮಾರಂಭಗಳು ಅರಿಶಿನ ಕುಂಕುಮ ಮನೆಗೆ ತರದೆ ಆಗುವುದೇ ಇಲ್ಲ ಧಾರ್ಮಿಕವಾಗಿ ಅರಿಶಿಣಕ್ಕೆ ಬಹಳ ಮಹತ್ವದ ಸ್ಥಾನವಿದೆ.
ಅರಿಶಿಣವನ್ನು ಒಂದರ್ಥದಲ್ಲಿ ಬಂಗಾರಕ್ಕೆ ಕೂಡ ಹೋಲಿಕೆ ಮಾಡಲಾಗುತ್ತದೆ. ಒಂದು ಅರಿಶಿಣದ ಎಳೆಯನ್ನು ಕುತ್ತಿಗೆಗೆ ಕಟ್ಟಿದರೆ ಮಾಂಗಲ್ಯ ಕಟ್ಟಿದಷ್ಟೇ ಅದಕ್ಕೆ ಬೆಲೆ ಇದೆ. ಅಷ್ಟು ಪೂಜ್ಯನೀಯ ಸ್ಥಾನದಲ್ಲಿ ಈ ಅರಿಶಿಣವನ್ನು ನೋಡಲಾಗುತ್ತದೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಈ ಪದಾರ್ಥ ಹೆಣ್ಣಿನ ಸೌಂದರ್ಯ ಸಾಧನವೂ ಕೂಡ ಹೌದು.
ಆರೋಗ್ಯದ ವಿಚಾರದಲ್ಲಂತೂ ಅರಿಶಿಣದ ಉಪಕಾರ ಅಷ್ಟಿಷ್ಟಲ್ಲ. ಅರಿಶಿಣವನ್ನು ಆಂಟಿ ಬಯೋಟಿಕ್ ಕೂಡ. ಮಾಡುವ ಅಡುಗೆಗೆ ಚಿಟಿಕೆ ಅರಿಶಿಣ ಹಾಕಿದರೆ ಅದರ ರುಚಿ ಬಣ್ಣ ಎಲ್ಲವೂ ಬದಲಾಗುತ್ತದೆ ಮತ್ತು ಅಡುಗೆ ಶುದ್ಧವಾಗುತ್ತದೆ, ಅರಿಶಿಣದ ಬಳಕೆ ರೋಗನಿರೋಧಕ ಶಕ್ತಿಯು ಹೆಚ್ಚಿಸುತ್ತದೆ. ಬಿದ್ದು ಗಾಯವಾದಾಗ, ಕೈ ಕುಯ್ದುಕೊಂಡಾಗ ತಕ್ಷಣಕ್ಕೆ ಸಿಗುವುದೇ ಆರಿಶಿಣ, ಹರಿವ ರಕ್ತವನ್ನು ತಟಕ್ಕನೆ ನಿಲ್ಲಿಸುವ ಸಾಮರ್ಥ್ಯವನ್ನು ಅರಿಶಿಣ ಹೊಂದಿದೆ.
ಹಾಗಾಗಿ ಆಯುರ್ವೇದದಲ್ಲಿ ಇದಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಹಾಗೆಯೇ ವಾಸ್ತು ಶಾಸ್ತ್ರದಲ್ಲೂ ಕೂಡ ಇದಕ್ಕೆ ಪೂಜ್ಯನೀಯ ಸ್ಥಾನವಿದೆ. ಮನೆಯಲ್ಲಿ ಯಾವುದೇ ನಕಾರತ್ಮಕ ಶಕ್ತಿ ಇದ್ದರೂ ಕೂಡ ಮನೆ ಒರೆಸುವಾಗ ಚಿಟಿಕೆ ಅರಿಶಿಣ ಮತ್ತು ಉಪ್ಪು ಹಾಕಿ ಒರೆಸಿದರೆ ಯಾವ ದುಷ್ಟ ಶಕ್ತಿಯು ಕೂಡ ಮನೆ ಪ್ರವೇಶಿಸುವುದಿಲ್ಲ.
ಅಲ್ಲದೆ ಹೊಸಲಿಗೆ ಅರಿಶಿಣ ಹಚ್ಚಿ ಪೂಜಿಸುವುದರಿಂದ ತಾಯಿ ಮಹಾಲಕ್ಷ್ಮಿ ಪ್ರಸನ್ನರಾಗುತ್ತಾರೆ. ಹೀಗೆ ಅರಿಶಿನದ ಮಹತ್ವವನ್ನು ಹೇಳುತ್ತಾ ಹೋದರೆ ಅದು ತೀರದ ಪಟ್ಟಿ. ಅದರಲ್ಲಿ ಕೆಳ ಪ್ರಮುಖವಾದ ಮಾಹಿತಿಯನ್ನು ಎಲ್ಲರೂ ತಿಳಿದುಕೊಂಡಿರಬೇಕು ಅಂತವುಗಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಿದ್ದೇವೆ.
* ಅರಿಶಿಣವು ಗುರು ಗ್ರಹಕ್ಕೆ ಸಂಬಂಧಿಸಿದೆ, ಪೂಜೆಯ ಸಮಯದಲ್ಲಿ ಕೈ ಮಣಿಕಟ್ಟಿಗೆ ಅಥವಾ ಕುತ್ತಿಗೆಗೆ ಅರಿಶಿಣದ ಬೊಟ್ಟು ಇಡುವುದರಿಂದ ಗುರು ಗ್ರಹವು ಜಾತಕದಲ್ಲಿ ಬಲಗೊಳ್ಳುತ್ತದೆ. ವ್ಯಕ್ತಿಯು ಉನ್ನತ ಸ್ಥಾನದಲ್ಲಿರುತ್ತಾನೆ.
* ಅರಿಶಿನದ ದಾನ ಮಾಡುವುದು ಬಹಳ ಶ್ರೇಷ್ಠ ಅರಿಶಿಣ ದಾನ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗುತ್ತವೆ ಎನ್ನುವುದು ಹಿರಿಯರ ನಂಬಿಕೆ ಗುರು ಗ್ರಹದಲ್ಲಿ ದೋಷಗಳಿದ್ದಾಗಲೂ ಅರಿಶಿನದ ದಾನ ಮಾಡಲು ಹೇಳಲಾಗುತ್ತದೆ.
* ವಿವಾಹ ಸಂಬಂಧದಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ ಹಣೆಗೆ ಅರಿಶಿಣದ ತಿಲಕವನ್ನು ಇಡಬೇಕು ಇದು ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ
* ವಿವಾಹ ವಿಳಂಬ ಅಥವಾ ಕಂಕಣ ಭಾಗ್ಯ ಕೂಡಿ ಬರಲು ಏನೇ ಅಡೆ-ತಡೆಗಳಾಗುತ್ತಿದ್ದರು ಇದರ ಪರಿಹಾರಕ್ಕಾಗಿ ಗಣೇಶನ ದೇವಸ್ಥಾನದಲ್ಲಿ ಪ್ರತಿ ಗುರುವಾರ ಅರಿಶಿಣ ಅರ್ಪಿಸಬೇಕು ಶೀಘ್ರವಾಗಿ ಸಮಸ್ಯೆ ಪರಿಹಾರವಾಗುತ್ತದೆ.
* ಮನೆಯ ಮುಖ್ಯದ್ವಾರದಲ್ಲಿ ಅರಿಶಿಣದಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು. ಮನೆಯನ್ನು ಪ್ರವೇಶಿಸುವ ಜಾಗದಲ್ಲಿ, ಮನೆಯಲ್ಲಿ ಗೋಡೆಗಳ ಸುತ್ತ ಅರಿಶಿನದ ರೇಖೆಯನ್ನು ಹಾಕುವುದರಿಂದ ಯಾವುದೇ ನಕರಾತ್ಮಕ ಶಕ್ತಿ ಮನೆ ಒಳಗೆ ಪ್ರವೇಶಿಸುವುದಿಲ್ಲ.
* ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿಣ ಹಾಕಿ ನಂತರ ಸ್ನಾನ ಮಾಡಿದರೆ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ, ಬಹಳ ಹಗುರವಾದ ಅನುಭವವನ್ನು ಪಡೆಯುತ್ತೀರಿ ಮನಸ್ಸು ಪ್ರಶಾಂತವಾಗಿರುತ್ತದೆ.
* ಅರಿಶಿಣದ ಕೊಂಬಿಗೆ ಮೋಲಿ ದಾರವನ್ನು ಸುತ್ತಿ ರಾತ್ರಿ ಹೊತ್ತು ಮಲಗುವಾಗ ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಕೆಟ್ಟ ಕನಸುಗಳು ಬೀಳುವುದಿಲ್ಲ.
* ಸೂರ್ಯನಿಗೆ ಅರಿಶಿನ ಬೆರೆಸಿದ ನೀರನ್ನು ಅರ್ಘ್ಯ ನೀಡಿದರೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ಅರಿಶಿಣದ ಜಪಮಾಲೆಯೊಂದಿಗೆ ಯಾವುದೇ ಮಂತ್ರ ಜಪಿಸಿದರು ಅಚಲವಾದ ಬುದ್ಧಿಶಕ್ತಿ ಪಡೆಯಬಹುದು, ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ.
* ಹಣಕಾಸಿನ ಸಮಸ್ಯೆ ಎದುರಿಸುತ್ತಿರುವವರು ಅಥವಾ ಅನಾವಶ್ಯಕವಾಗಿ ಹಣ ಪೋಲಾಗುತ್ತಿದ್ದರೆ ಕೆಂಪು ಅಥವಾ ಹಳದಿ ವಸ್ತ್ರದಲ್ಲಿ ಅರಿಶಿಣದ ಕೊಂಬನ್ನು ಕಟ್ಟಿ ನೀವು ಹಣ ಇಡುವ ಡಬ್ಬದಲ್ಲಿ ಇಡಬೇಕು ಮತ್ತು ಆ ಡಬ್ಬವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಇದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ಉತ್ತಮವಾದ ಬದಲಾವಣೆಯಾಗುತ್ತದೆ.
* ಯಾವುದೇ ಕಾರಣಕ್ಕೂ ಅಡುಗೆಗೆ ಬಳಸುವ ಅರಿಶಿನವನ್ನು ಪೂಜೆಗೆ ಬಳಸಬಾರದು, ಪೂಜೆ ಹಾಗೂ ಅಡುಗೆಗೆ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು.