Friday, June 9, 2023
HomeViral News2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ...

2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.

ನಿರಂಜನ್ ದೇಶಪಾಂಡೆ (Niranjan Deshpande) ಕಿರುತೆರೆ ಹಾಗೂ ಸಿನಿಮಾ ಲೋಕದ ಎಲ್ಲರಿಗೂ ಪರಿಚಿತರು. ರೇಡಿಯೋ ಜಾಕಿಯಾಗಿ (Radio jockey) ಕೂಡ ಕೆಲಸ ಮಾಡಿದ್ದ ಇವರು ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ನಿರಂಜನ್ ದೇಶಪಾಂಡೆ ಅವರು ಸದಾ ಲವಲವಿಕೆಯಿಂದ ನಗುನಗುತ್ತ ಎಲ್ಲರ ಗಮನ ಸೆಳೆಯುವಂತಹ ಹಸನ್ಮುಖಿ. ಆದರೆ ಇವರ ನಗು ಮುಖದ ಹಿಂದೆ ಇರುವ ನೋವಿನ ಕಥೆ ಎಷ್ಟೋ ಜನರಿಗೆ ಗೊತ್ತಿಲ್ಲ.

ಬಾಲ್ಯದಿಂದಲೂ ಕೂಡ ಅದೆಷ್ಟೋ ಸ್ಟ್ರಗಲ್ ಗಳನ್ನು ಕಂಡಿರುವ ಇವರು ಕೌಟುಂಬಿಕ ವಿಚಾರವಾಗಿ ಹಾಗೂ ಕೆರಿಯರ್ ವಿಚಾರವಾಗಿ ಕೂಡ ಸಮಸ್ಯೆಗಳನ್ನು ಎದುರಿಸಿದ್ದಾರೆ. ತುಂಬಾ ಭಾವನಾತ್ಮಕ ಜೀವಿ ಆಗಿರುವ ನಿರಂಜನ್ ದೇಶಪಾಂಡೆ ಅವರು ಕುಟುಂಬಸ್ಥರನ್ನು ಬಹಳ ಹಚ್ಚಿಕೊಂಡಿದ್ದಾರೆ. ಅವರೇ ಒಂದು ರಿಯಾಲಿಟಿ ಶೋ ಅಲ್ಲಿ ಹೇಳಿಕೊಂಡಂತೆ ಅವರ ತಂದೆ ತಾಯಿ ಇಬ್ಬರು ಕೂಡ ನಿರಂಜನ್ ದೇಶಪಾಂಡೆ ಅವರು ಚಿಕ್ಕವರಿದ್ದಾಗ ದೂರವಾಗಿ ಬಿಡುತ್ತಾರೆ.

ಬದುಕಿನಲ್ಲಿ ಎಲ್ಲಾ ಇದ್ದರೂ ಆ ನೋವು ಇವರನ್ನು ಕಾಡುತ್ತಿದ್ದ ಕಾರಣ ಮನೆ ಬಿಟ್ಟು ಆಚೆ ಬಂದ ಇವರು ಇವರದ್ದೇ ಆದ ಬದುಕನ್ನು ಹುಡುಕಿಕೊಳ್ಳುತ್ತಾರೆ. ಮತ್ತೆ ಹಲವು ವರ್ಷಗಳ ಬಳಿಕ ತಂದೆಯನ್ನು ಕೂಡ ಮರಳಿ ತಂದು ಎಲ್ಲರೂ ಸಂತೋಷದಿಂದ ಇರುವ ಪ್ರಯತ್ನ ಮಾಡುತ್ತಾರೆ. ನಿರಂಜನ್ ದೇಶಪಾಂಡೆ ಅವರಿಗೆ ನಳಿನಿ ದೇಶಪಾಂಡೆ (Nalini Deshpande) ಎನ್ನುವ ಸಹೋದರಿ ಕೂಡ ಇದ್ದಾರೆ.

ಆಕೆ ಕೂಡ ಪ್ರಸಿದ್ಧ ಸಂಗೀತಗಾರ್ತಿ ಸಂಗೀತ ಶಾಲೆ ನಡೆಸುವ ಇವರು ನಿರಂಜನ್ ದೇಶಪಾಂಡೆ ಅವರ ಪಾಲಿಗೆ ಎಲ್ಲರಿಗಿಂತ ಹೆಚ್ಚು ಅಕ್ಕನ ಮೇಲೆ ಅಪಾರ ಪ್ರೀತಿ ಉಳ್ಳ ನಿರಂಜನ್ ದೇಶಪಾಂಡೆ ಅವರು ಅಕ್ಕನಿಗೋಸ್ಕರ ಏನು ಬೇಕಾದರೂ ಮಾಡುವಷ್ಟು ಅಕ್ಕನನ್ನು ಪ್ರೀತಿಸುತ್ತಾರೆ. ಅಪ್ಪ ಅಮ್ಮ ಒಂದಾದರೂ ಕೆರೆಯರ್ ಕೂಡ ಒಂದು ಹಂತಕ್ಕೆ ಬಂತು ಪ್ರೀತಿಸಿದ ಹುಡುಗಿಯನ್ನು ಕೈಹಿಡಿದಿದ್ದೇನೆ. ಬದುಕಿನಲ್ಲಿ ಇನ್ನೇನು ಕೊರತೆ ಎನ್ನುವಷ್ಟರಲ್ಲಿ ಯಾರೂ ನಿರೀಕ್ಷಿಸತ ದು.ರ್ಘ.ಟ.ನೆ ಇವರ ಅಕ್ಕನ ಬಾಳಿನಲ್ಲಿ ನಡೆಯುತ್ತದೆ.

ನಳಿನಿ ದೇಶಪಾಂಡೆ ಅವರನ್ನು ಪ್ರೀತಿಸಿ ಮದುವೆ ಆಗುತ್ತೇನೆ ಎಂದು ಭರವಸೆ ಕೊಟ್ಟಿದ್ದ ವ್ಯಕ್ತಿ ಅವರ ಮನಸ್ಸನ್ನು ಒಡೆದು ಮೋಸ ಮಾಡಿ ಹೋಗಿರುತ್ತಾರೆ. ಇದರಿಂದ ನಳಿನ ಅವರು ಬಹಳ ಖಿನ್ನತೆಗೆ ಜಾರುತ್ತಾರೆ ಪ್ರಪಂಚದ ಎಲ್ಲಾ ಗಂಡಸರ ಮೇಲು ಕೂಡ ಅಸಯ್ಯ ಹುಟ್ಟುವಷ್ಟು ಅವರಿಗೆ ಬದುಕು ಬೇಸರ ಎನಿಸಿರುತ್ತದೆ. ಈ ನೋವಿನಿಂದ ಅವರನ್ನು ಆಚೆ ತರಲು ನಿರಂಜನ್ ಎಷ್ಟೇ ಪ್ರಯತ್ನಿಸಿದರು ಅವರಿಗೆ ಒಳ್ಳೆ ವ್ಯಕ್ತಿ ಜೊತೆ ಮದುವೆ ಮಾಡಲು ಎಷ್ಟೇ ಪ್ರಪೋಸಲ್ ತಂದರು ಯಾವುದಕ್ಕೂ ಅವರು ಒಪ್ಪಿರುವುದಿಲ್ಲ.

ಸಮಾಜವು ಕೂಡ ಅಕ್ಕನ ಮದುವೆ ವಿಚಾರವಾಗಿ ಇವರನ್ನು ಸದಾ ಚುಚ್ಚುತಿರುತ್ತದೆ. ಈ ವಿಷಯವನ್ನು ಕೂಡ ವಿಡಿಯೋ ಮಾಡಿ ಅವರು ಹಂಚಿಕೊಂಡಿದ್ದರು ಈ ರೀತಿ ಚುಚ್ಚುಮಾತು ಆಡುವವರಿಗೆ ಸ್ಪಷ್ಟನೆ ಕೊಟ್ಟು ತಿರುಗೇಟು ಸಹ ನೀಡಿದ್ದರೂ ಆದರೆ ಅಕ್ಕನ ಕಷ್ಟವನ್ನು ಕಣ್ಣಾರೆ ನೋಡಿಕೊಂಡು ಕೊರಗುತ್ತಿದ್ದರು. ಮದುವೆಯೇ ಬೇಡ ಎನ್ನುತ್ತಿದ್ದ ನಳಿನಿ ಅವರು ಒಮ್ಮೆ ಕಾರ್ಯಕ್ರಮ ಒಂದರಲ್ಲಿ ರಾಷ್ಟ್ರಮಟ್ಟದ ಈಜು ಪಟು (National Athlit) ಜಯಂತ್ (Jayanth) ಎನ್ನುವವರನ್ನು ನೋಡುತ್ತಾರೆ.

ಎರಡು ಕೈಗಳು ಇಲ್ಲದ ಹಾಗೂ ಹೊಟ್ಟೆ ಭಾಗ ಕೂಡ ಅರ್ಧ ಕಟ್ ಆಗಿರುವ ಇವರನ್ನೇ ಮದುವೆ ಆಗುತ್ತೇನೆ ಎಂದು ತಮ್ಮನಿಗೆ ತಿಳಿಸುತ್ತಾರೆ. ಮೊದಲಿಗೆ ಅಕ್ಕ ಅನುಕಂಪದಿಂದ ಈ ರೀತಿ ಹೇಳುತ್ತಿದ್ದಾರೆ ಮದುವೆಯಾದ ಮೇಲೆ ತೊಂದರೆ ಆಗುತ್ತದೆ ಎಂದು ಯೋಚಿಸುತ್ತಿದ್ದ ನಿರಂಜನ್ ಅವರಿಗೆ ನಳಿನಿ ಅವರು ತಮ್ಮನನ್ನು ಮದುವೆಗೆ ಒಪ್ಪಿಸಲು ಹೇಳಿದ್ದು ಒಂದೇ ಮಾತು.

ಕೈಕಾಲು ಬುದ್ಧಿಯೆಲ್ಲಾ ಚೆನ್ನಾಗಿದ್ದ ಒಬ್ಬ ವ್ಯಕ್ತಿ ನನಗೆ ಮೋಸ ಮಾಡಿದ ಆದರೆ ಈ ವ್ಯಕ್ತಿಯಲ್ಲಿ ನನಗೆ ಪ್ರಾಮಾಣಿಕ ಕಾಣುತ್ತಿದೆ ಎಂದು ಹೇಳಿದರಂತೆ. ಅಕ್ಕನ ಇಚ್ಛೆಯಂತೆ ಅವರ ಜೊತೆ ಮದುವೆ ಮಾಡುತ್ತಾರೆ ಆ ಸಮಯದಲ್ಲಿ ಕೂಡ ಸಮಾಜ ಇವರನ್ನು ಬಾಯಿಗೆ ಬಂದಂತೆ ಟೀಕಿಸಿರುತ್ತದೆ. ಆದರೆ ನಿರಂಜನ್ ದೇಶಪಾಂಡೆ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದರೆ ಅವರ ಅಕ್ಕ ಹಾಗೂ ಜಯಂತ್ ಅವರು ಎಷ್ಟು ಚೆನ್ನಾಗಿದ್ದಾರೆ ಎನ್ನುವುದು ತಿಳಿಯುತ್ತದೆ. ನಿರಂಜನ್ ಅಕ್ಕ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.