ನಿಶಾ ರವಿಕೃಷ್ಣನ್ ಎನ್ನುವ ಹೆಸರು ಹೇಳಿದರೆ ಸಾಕಷ್ಟು ಜನರಿಗೆ ಇವರು ಯಾರು ಎಂದು ತಿಳಿಯದೆ ಹೋಗಬಹುದು ಆದರೆ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ(Amulya) ಎಂದರೆ ಪಕ್ಕ ಇವರು ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಅಮೂಲ್ಯ ಎನ್ನುವ ಪಾತ್ರಕ್ಕೆ ನ್ಯಾಯ ದಕ್ಷಿಸಿಕೊಟ್ಟು ಆ ಪಾತ್ರದ ಮೂಲಕವೇ ಫೇಮಸ್ ಆಗಿರುವ ಇವರ ನಿಜವಾದ ಹೆಸರು ನಿಶಾ ರವಿಕೃಷ್ಣನ್. ಇವರು ಗಟ್ಟಿಮೇಳ ಧಾರಾವಾಹಿ ಶುರು ಆದ ದಿನದಿಂದಲೂ ಕೂಡ ನಾಯಕನಟಿಯಾಗಿ ಆ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ನಾಯಕನಟ ಆಗಿರುವ ವೇದಾಂತ್(Vedhanth) ಪಾತ್ರಕ್ಕೆ ಬೈಯುವ ಮೂಲಕವೇ ಇವರು ಫೇಮಸ್ ಆಗಿದ್ದಾರೆ. ಸದಾ ಟ್ರಡಿಷನಲ್ ಆಗಿ ಲಂಗ ಧಾವಣಿ ತೊಟ್ಟುಕೊಂಡು ಟಿವಿಎಸ್ ಗಾಡಿ ಅನ್ನು ಸ್ಟೈಲ್ ಆಗಿ ಓಡಿಸುತ್ತಾ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಇವರ ಈ ಸ್ಟೈಲಿಗೆ ಕರುನಾಡ ಜನ ಫಿದಾ ಆಗಿ ಹೋಗಿದ್ದಾರೆ.
ವೇದಾಂತ್ ಎನ್ನುವ ಪಾತ್ರವನ್ನು ಸದಾ ಗೋಳು ಹೊಯ್ದುಕೊಂಡು, ಇರಿಟೇ ಟ್ ಮಾಡುತ್ತಾ ವೇದಾಂತ್ ಅನ್ನು ಬಯ್ಯುವ ಇವರ ಸ್ಟೈಲ್ ಕೂಡ ಎಲ್ಲರಿಗೂ ಇಷ್ಟ ಆಗಿದೆ. ಎಲ್ಲರನ್ನೂ ಲುಕ್ ಕೊಟ್ಟೆ ಬೆ-ದ-ರಿ-ಸುವ ವೇದಾಂತ್ ಅನ್ನು ಶುಂಠಿ ಶಂಕರ ಎಂದು ಬೈಯುತ್ತಾ ಆತನನ್ನು ಧೈರ್ಯವಾಗಿ ಎದುರಿಸುವ ಅಮೂಲ್ಯ ರೌಡಿ ಬೇಬಿ ಎಂದೇ ಈ ಧಾರಾವಾಹಿಯಲ್ಲಿ ಫೇಮಸ್ ಆಗಿದ್ದಾರೆ. ಧಾರಾವಾಹಿ ಟೈಟಲ್ ಗಟ್ಟಿಮೇಳ ಆಗಿರುವುದರಿಂದ ಧಾರಾವಾಹಿಯಲ್ಲಿ ಅಮೂಲ್ಯ ಅಕ್ಕ ಹಾಗೂ ವೇದಾಂತ್ ತಮ್ಮನ ಮದುವೆ ಕೂಡ ಆಗಿದೆ.
ಈಗ ಅದೇ ಮನೆಗೆ ಅಮೂಲ್ಯ ಸಹ ವೇದಾಂತ ಕೈ ಹಿಡಿದು ಹೋಗಿದ್ದಾರೆ. ಸೊಸೆ ಆಗಿ ಮನೆ ಸೇರಿರುವ ಅಮೂಲ್ಯ ಅಲ್ಲಿರುವ ಸಾಕಷ್ಟು ಗೊಂದಲಗಳನ್ನು ಸರಿಮಾಡಿ ಅತ್ತೆ ಸುಹಾಸಿನಿಯ(Suhasini) ನಿಜ ರೂಪ ಬಯಲು ಮಾಡಿ, ವೇದಾಂತ್ ಅವರ ಅಮ್ಮ ವೈಜಯಂತಿ( Vaijayanthi)ಯಾರು ಎಂದು ಹುಡುಕುವ ಬಗ್ಗೆ ಪ್ಲಾನ್ ಅಲ್ಲಿದ್ದಾರೆ.
ನಿಶಾ ರವಿಕೃಷ್ಣನ್ ಅವರು ಅಭಿನಯದಲ್ಲಿ ಮಾತ್ರ ಅಲ್ಲದೆ ಹಾಡುಗಾರಿಕೆ ಮತ್ತು ನೃತ್ಯದಲ್ಲೂ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಅದರಲ್ಲಿ ಪರಿಣಿತಿ ಕೂಡ ಪಡೆದಿದ್ದಾರೆ. ಈಗಾಗಲೇ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಡ್ಯಾನ್ಸ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿರುವ ಇವರ ಹಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.
ಮತ್ತು ಯಾವುದೇ ಕಾರ್ಯಕ್ರಮಕ್ಕೆ ಬಂದಾಗಲೂ ಕೂಡ ನಿಶಾ ಅವರಿಂದ ಹಾಡು ಹೇಳಿಸದೆ ಆ ಕಾರ್ಯಕ್ರಮವನ್ನು ಮುಗಿಸುವುದೇ ಇಲ್ಲ. ಹೀಗಾಗಿ ಇವರ ವಾಯ್ಸ್ ಕೂಡ ಫೇಮಸ್ ಆಗಿದೆ. ಇತ್ತೀಚಿಗೆ ತಮಿಳು ಧಾರಾವಾಹಿ ಅಲ್ಲೂ ಕೂಡ ಅಭಿನಯಿಸುತ್ತಿರುವ ಅಮೂಲ್ಯ ಅಲಿಯಾಸ್ ನಿಶಾ ರವಿಕೃಷ್ಣನ್ ಅವರಿಗೆ ಬೆಳ್ಳಿತೆರೆಯಿಂದಲೂ ಅವಕಾಶಗಳು ಹರಿದು ಬರುತ್ತಲೇ ಇವೆ. ಇದಕ್ಕೀಗ ಒಂದು ಪ್ರಾಜೆಕ್ಟ್ ಒಪ್ಪಿಕೊಂಡು ಕಂಪ್ಲೀಟ್ 1 ಮಾಡಿ ಕೊಟ್ಟಿರುವ ಅಮೂಲ್ಯ ಅವರ ಸಿನಿಮಾ ಬಿಡುಗಡೆಗೆ ತಯಾರಾಗಿದೆ.
ಇದರ ನಡುವೆ ಸಂದರ್ಶನ ಒಂದಕ್ಕೆ ಭಾಗಿಯಾಗಿ ಆದ ಅಮೂಲ್ಯ ಅವರು ಸಧ್ಯಕ್ಕೆ ಈಗ ಕರ್ನಾಟಕದ ಎಲ್ಲಾ ಹುಡುಗರಿಗೂ ನೀವೇ ಕ್ರಶ್ ನಿಮಗೆ ಯಾರ ಮೇಲಾದರೂ ಕ್ರಶ್ ಆಗಿತ್ತಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಬಹಳ ನೇರವಾಗಿ ಉತ್ತರ ಕೊಟ್ಟಿರುವ ಅಮೂಲ್ಯ ಅವರು ನನಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್( Puneeth raj kumar)ಅವರ ಮೇಲೆ ಕ್ರಶ್ ಇತ್ತು. ನಾನು ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ ಅವರ ಜೊತೆ ಒಂದು ದಿನ ಆದರೂ ಸ್ಕ್ರೀನ್ ಶೇರ್ ಮಾಡಬೇಕು ಎನ್ನುವ ಆಸೆ ಇತ್ತು ಅಷ್ಟರಲ್ಲಿ ಹೀಗಾಗಿ ಹೋಯಿತು ಎಂದು ಅಪ್ಪು ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.