Home Entertainment ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

0
ಅಪ್ಸರೆಯೇ ಧರೆಗಿಳಿದ ಹಾಗೇ ಕೆಂಪು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ಕಳೆದು ಹೋಗ್ತಿರಾ.

 

ನಿವೇದಿತಾ ಗೌಡ ಅವರು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳನೇ ಫೇಮಸ್ ಕನ್ನಡ ಕಿರುತೆರೆಯ ಬಹುತೇಕ ಎಲ್ಲಾ ಚಾನೆಲ್ ಅಲ್ಲೂ ಕೂಡ ನಿವೇದಿತಾ ಅವರು ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಸ್ಮ್ಯಾಶ್ ವಿಡಿಯೋ ಮಾಡುವ ಮೂಲಕ ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದ ಇವರು ಕಾಮನ್ ಪೀಪಲ್ ಕೋಟಾದಿಂದ ಬಿಗ್ ಬಾಸ್ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗುವ ಅದೃಷ್ಟ ಪಡೆದುಕೊಂಡರು.

ಸೀಸನ್ ಐದರಲ್ಲಿ ನೂರಕ್ಕೂ ಹೆಚ್ಚು ದಿನ ಮನೆಯಲ್ಲಿ ಇರುವ ಮೂಲಕ ತಾನೆಂತ ಗಟ್ಟಿಗಿತ್ತಿ ಎನ್ನುವುದನ್ನು ಪ್ರೂವ್ ಮಾಡಿದರು. ನೋಡುವುದಕ್ಕೆ ಬೇಬಿ ಡಾಲ್ ರೀತಿ ಲುಕ್ ಹಾಗೂ ಉದ್ದನೆಯ ಹೇರ್ ಹೊಂದಿರುವ ಇವರ ಬ್ಯೂಟಿಗೆ ಫಿದಾ ಆಗದವರೇ ಇಲ್ಲ. ಸೀಸನ್ 5 ರಲ್ಲಿ ಸಹ ಕಂಟೆಸ್ಟೆಂಟ್ ಮತ್ತು ವಿನ್ನರ್ ಕೂಡ ಆದ ಚಂದನ್ ಶೆಟ್ಟಿ ಅವರನ್ನು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇದಾದ ಬಳಿಕವೂ ಕೂಡ ಭರ್ಜರಿ ಕಾಮಿಡಿ, ಗಿಚ್ಚ ಗಿಲಿ ಗಿಲಿ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಬ್ಯುಸಿ ಆಗಿರುವ ಇವರು 2022ರ ಮಿಸ್ಸಸ್ ಇಂಡಿಯಾ ಅವಾರ್ಡ್ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇದಾದ ಬಳಿಕ ಇವರಿಗೆ ಹಲವು ಭಾಷೆಗಳಿಂದ ಸಿನಿಮಾ ಹೀರೋಯಿನ್ ಆಗಲು ಆಫರ್ಗಳು ಬರುತ್ತಿದೆಯಂತೆ.

ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿರುವ ಇವರು ಸಿನಿಮಾ ಕುರಿತ ತಯಾರಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲೂ ಕೂಡ ಆಗಾಗ ಕಾಣಿಸಿಕೊಳ್ಳುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ನಿವೇದಿತಾ ಗೌಡ ಅವರು ಹೊಂದಿದ್ದು ಅಲ್ಲೂ ಅನೇಕ ವಿಷಯಗಳ ಕುರಿತು ಮಾಹಿತಿ ನೀಡುತ್ತಿರುತ್ತಾರೆ.

ಪತಿ ಚಂದನ್ ಜೊತೆ ಅಥವಾ ಸಹ ಸ್ಪರ್ಧಿಗಳ ಜೊತೆ ಸೆಟ್ಗಳಲ್ಲಿ ರೀಲ್ಸ್ ಮಾಡಿ ಅವುಗಳನ್ನು ಶೇರ್ ಮಾಡುತ್ತಾರೆ. ಈಗಾಗಲೇ ಎಲ್ಲಾ ರೀತಿಯ ಟ್ರೆಂಡಿಂಗ್ ಹಾಡುಗಳಿಗೂ ಕೂಡ ಇವರು ರೀಲ್ಸ್ ಮಾಡಿದ್ದಾರೆ. ಈ ಬಾರಿ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಹೊಸದೊಂದು ವೀಡಿಯೋ ಅಪ್ಲೋಡ್ ಆಗಿದ್ದು ಅದು ದರ್ಶನ್ ಅವರ ಹಳೆಯ ಹಾಡಿನ ತುಣುಕಾಗಿದೆ. ದರ್ಶನ್ ಅವರ ಅಭಯ್ ಸಿನಿಮಾದ ಬಾನು ಕೆಂಪಾದಂತೆ ಈ ಹಾಡು ಹಲವರ ಫೇವರೆಟ್ ಹಾಡು.

ಅದರಲ್ಲೂ ಹುಡುಗಿಯರಿಗೆ ಈ ಹಾಡು ಬಹಳ ಇಷ್ಟ ಆಗುತ್ತದೆ ಡಾನ್ಸ್ ಮಾಡುವುದಕ್ಕೆ ಸ್ಟೆಪ್ ಹಾಕುವುದಕ್ಕೆ ಕೂಡ ಇದು ತುಂಬಾ ಈಝಿ ಆಗಿದೆ. ಯಾವುದೇ ಹುಡುಗಿ ಕೂಡ ಒಂದಲ್ಲ ಒಂದು ಸಮಯದಲ್ಲಿ ಆದರೂ ಈ ಹಾಡಿಗೆ ಹೆಜ್ಜೆ ಹಾಕಿರುತ್ತಾರೆ. ಇದೇ ಕೆಲಸವನ್ನು ನಿವೇದಿತ ಗೌಡ ಅವರು ಕೂಡ ಮಾಡಿದ್ದು ಬಾನು ಕೆಂಪಾದಂತೆ ಹಾಡಿಗೆ ಕೆಂಪು ಬಣ್ಣದ ಸೀರೆ ಉಟ್ಟು ರೀಲ್ಸ್ ಮಾಡಿದ್ದಾರೆ ಮೊದಲಿನಿಂದಲೂ ನಿವೇದಿತಾ ಗೌಡ ಅವರಿಗೆ ಸೀರೆ ಉಡುವುದು ಎಂದರೆ ಬಹಳ ಇಷ್ಟವಂತೆ.

ಮೊದಲೆಲ್ಲಾ ತಾಯಿಯ ಸೀರೆ ಉಟ್ಟು ವಿಡಿಯೋ ಮಾಡುತಿದ್ದ ಇವರು ಈಗ ಫೇಮಸ್ ಆದ ಬಳಿಕವೂ ಕೂಡ ಬೇರೆ ಬಟ್ಟೆಗಿಂತ ಸೀರಿಯಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಒಂಟಿಯಾಗಿ ಸೋಲೊ ಟ್ರಿಪ್ ಕೂಡ ಹೋಗಿದ್ದರು ಅಲ್ಲೂ ಫ್ಯಾಶನ್ ಉಡುಗೆ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡು ಅಪ್ಲೋಡ್ ಮಾಡಿದ್ದರು. ಆದರೆ ಎಂತಹದೆ ಫ್ಯಾಶನ್ ಬಟ್ಟೆ ಉಟ್ಟರು ಜನ ನಿವೇದಿತ ಗೌಡ ಅವರನ್ನು ಸೀರೆಯಲ್ಲಿಯೇ ಹೆಚ್ಚು ಸುಂದರವಾಗಿ ಕಾಣುತ್ತೀರ ಎಂದು ಹೇಳುತ್ತಾರೆ. ಈಗ ನಿವೇದಿತ ಗೌಡ ಅವರು ಮಾಡಿರುವ ಈ ರೀಲ್ಸ್ ವಿಡಿಯೋ ನೋಡಿ ನೀವು ನಿಮ್ಮ ಅಭಿಪ್ರಾಯ ತಿಳಿಸಿ.

LEAVE A REPLY

Please enter your comment!
Please enter your name here