ನಿವೇದಿತ ಗೌಡ ಈಗ ಕರ್ನಾಟಕದಾದ್ಯಂತ ಫೇಮಸ್ ಸೆಲೆಬ್ರಿಟಿ. ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಸೂಪರ್ ಎಂಟರ್ಟೈನ್ಮೆಂಟ್ ಕೊಡುವ ನಿವೇದಿತಾ ಗೌಡ ಅವರು ತಮ್ಮ ಪ್ರಬುದ್ಧತೆಯ ಮಾತುಗಳು ಹಾಗೂ ವಿಶೇಷವಾದ ಕನ್ನಡ ಭಾಷಾ ಬಳಕೆ ಮತ್ತು ಪೆದ್ದಾಟಗಳಿಂದ ಎಲ್ಲಾ ವಯೋಮಾನದವರಿಗೂ ಕೂಡ ಫೇವರೆಟ್. ಅವರ ಈ ನಡವಳಿಕೆಯಿಂದಲೇ ಸಾಕಷ್ಟು ಬಾರಿ ಟ್ರೋಲಿಗೆ ಒಳಗಾಗಿದ್ದಾರೆ ನಿವೇದಿತ ಗೌಡ ಅವರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಇವರು ಕಿರುತೆರೆಯಲ್ಲೂ ಕೂಡ ಅಷ್ಟೇ ಬಿಸಿಯಾಗಿದ್ದಾರೆ ಮತ್ತು ಇತ್ತೀಚೆಗೆ ಮಿಸಸ್ ಇಂಡಿಯಾ ಆಗುವ ಆಸೆ ಹೊತ್ತು ಅದರ ಸಲುವಾಗಿ ಕಷ್ಟಪಡುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಶೆಡ್ಯೂಲ್ ನ ನಡುವೆ ಸುವರ್ಣ ನ್ಯೂಸ್ ವರದಿಗಾರರು ಕೇಳಿದ ಹಲವು ಪ್ರಶ್ನೆಗಳಿಗೆ ಸಿಹಿಯಾದ ಮಾತುಗಳಲ್ಲಿ ಉತ್ತರವನ್ನು ಕೂಡ ಕೊಟ್ಟಿದ್ದಾರೆ. ಅಷ್ಟಕ್ಕೂ ಅವರಿಗೆ ಕೇಳಲಾದ ಪ್ರಶ್ನೆಗಳೇನು ಮತ್ತು ಅದಕ್ಕೆ ನಿವಿ ಕೊಟ್ಟ ಉತ್ತರವೇನು ಗೊತ್ತಾ?
ಮೊದಲಿಗೆ ವರದಿಗಾರರು ನಿವೇದಿತಾ ಗೌಡ ನಿಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ ಆ ಪ್ರಶ್ನೆಗಳನ್ನು ನಾನು ನಿಮಗೆ ಇಲ್ಲಿ ಕೇಳುತ್ತೇನೆ ಎಂದು ಸಂದರ್ಶನ ಶುರು ಮಾಡಿ ಮೊದಲಿಗೆ ನಿವೇದಿತ ಗೌಡ ಅವರನ್ನು ಅವರೇ ಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ ಯಾಕೆ ಎಂದು ಕೇಳಿದರು. ಅದಕ್ಕೆ ಉತ್ತರ ಕೊಟ್ಟ ನಿವೇದಿತ ಗೌಡ ಅವರು ಹೇಗಿದ್ದರೂ ಎಲ್ಲರೂ ಕೂಡ ನನ್ನನ್ನು ಟ್ರೋಲ್ ಮಾಡುತ್ತಾರೆ ಹೀಗಾಗಿ ನಾನು ಕೂಡ ನನ್ನನ್ನು ಟ್ರೋಲ್ ಮಾಡಿಕೊಂಡು ಬಿಟ್ಟರೆ ಬೇರೆಯವರು ಮಾಡದೇ ಇರಬಹುದು ಎಂದು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಜೊತೆಗೆ ಟ್ರೋಲ್ ಮಾಡುವವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ನಿವೇದಿತಾ ಗೌಡ ಕೊಟ್ಟ ಉತ್ತರ ತುಂಬಾ ಪ್ರಬುದ್ಧತೆಯಿಂದ ಕೂಡಿತ್ತು ಹಾಗೂ ಎಲ್ಲರೂ ಅವರ ಮಾತುಗಳನ್ನು ಮೆಚ್ಚುವಂತಿತ್ತು.

ಟ್ರೋಲ್ ಮಾಡುವುದು ಅವರವರ ಬುದ್ಧಿವಂತಿಕೆಗೆ ಬಿಟ್ಟಿದ್ದು. ಕೆಲವೊಮ್ಮೆ ನನಗೆ ಗೊತ್ತಿಲ್ಲದೆ ನನ್ನಿಂದ ಅಚಾತುರ್ರ್ಯಗಳು ನಡೆಯುತ್ತವೆ ಆಗ ಅವರು ಅದನ್ನು ಬಳಸಿಕೊಂಡು ಟ್ರೋಲ್ ಮಾಡಬಹುದು ಆದರೆ ಇದರಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವೇ ಇಲ್ಲ, ನನ್ನ ತಪ್ಪುಗಳು ಇದ್ದಾಗ ಖಂಡಿತವಾಗಿಯೂ ನಾನು ಅದನ್ನು ತಿದ್ದುಕೊಂಡು ಮುಂದೆ ಮರು ಕಳುಹಿಸಿದಂತೆ ಇರಲು ಪ್ರಯತ್ನಿಸುತ್ತೇನೆ. ಆದರೆ ನನ್ನ ತಪ್ಪಿಲ್ಲದೆ ನನ್ನನ್ನು ಟ್ರೋಲ್ ಮಾಡಿದಾಗ ಅದರ ಬಗ್ಗೆ ಬೇಸರ ಪಟ್ಟುಕೊಂಡು ಕುಗ್ಗಿ ಹೋಗೋವಷ್ಟು ವೀಕ್ ಮೈನ್ಡೆಡ್ ನಾನಲ್ಲ ಹಾಗೂ ಹೆಚ್ಚಿನ ಬಾರಿ ನಾನು ಇವುಗಳ ಕಡೆ ಗಮನವೇ ಕೊಡುವುದಿಲ್ಲ ನನ್ನ ಕೆಲಸಗಳನ್ನು ಮಾಡಿಕೊಂಡು ಮುಂದುವರಿಯುತ್ತಿರುತ್ತೇನೆ ಎಂದಿದ್ದಾರೆ. ಜೂನಿಯರ್ ಚಂದನ್ ಬಗ್ಗೆ ಎಲ್ಲರೂ ನಿಮ್ಮನ್ನು ಪ್ರಶ್ನೆ ಕೇಳುತ್ತಿರುತ್ತಾರೆ ಅದರಿಂದ ನಿಮಗೆ ಕಿರಿಕಿರಿ ಕೂಡ ಆಗಬಹುದು ಆದರೂ ಅವರುಗಳಿಗೆ ಏನು ಉತ್ತರ ಕೊಡುತ್ತೀರಾ ಎಂದು ಕೇಳಿದಾಗ ನಿವಿ ಹೀಗೆಂದರು.
ಜೀವನದಲ್ಲಿ ಸಾಧನೆ ಮಾಡೋದಕ್ಕೆ ಇನ್ನೂ ತುಂಬಾ ಇದೆ ನಂತರ ಆ ವಿಚಾರವನ್ನು ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಚಂದನ್ ಅವರು ನಿಮ್ಮ ಕೆಲಸಗಳಿಗೆ ಸಪೋರ್ಟ್ ಮಾಡುತ್ತಾರಾ ಎಂದು ಕೇಳಿದಾಗ ಆ ವಿಷಯದಲ್ಲಿ ನಾನು ತುಂಬಾ ಪುಣ್ಯ ಮಾಡಿದ್ದೇನೆ ಎಲ್ಲರೂ ನನ್ನ ಮತ್ತು ಚಂದನ್ ಕಾಂಬಿನೇಷನ್ ಬಗ್ಗೆ ಏನೇನೋ ಮಾತನಾಡುತ್ತಾರೆ ಆದರೆ ಚಂದನ್ ಅಂತ ಲೈಫ್ ಪಾರ್ಟ್ನರ್ ಸಿಕ್ಕಿರುವುದು ನನಗೆ ಅದೃಷ್ಟ. ನನಗಿಂತ ಹೆಚ್ಚಾಗಿ ನನ್ನ ವಿಷಯದಲ್ಲಿ ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಯಾವಾಗಲೂ ಏನಾದರೂ ಮಾಡುತ್ತಿರು ಎಂದು ನನ್ನನ್ನು ಮೋಟಿವೇಟ್ ಮಾಡುತ್ತಿರುತ್ತಾರೆ. ಇದರಿಂದಲೇ ನಾನು ಇಷ್ಟೆಲ್ಲ ಸಾಧಿಸುವುದಕ್ಕೆ ಸಾಧ್ಯವಾಗುತ್ತಿರುವುದು ಎಂದು ಇನ್ನೂ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ನಿವೇದಿತ ಗೌಡ. ನಿವೇದಿತಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.